ಜಿ.ಟಿ. ದೇವೇಗೌಡರಿಗೆ ಜೆಡಿಎಸ್‌ ಬಾಗಿಲು ಬಂದ್‌, ಇಂತಹ ಸ್ಲೋ ಪಾಯ್ಸನ್​ಗಳ ಅಗತ್ಯ ನಮಗಿಲ್ಲ; ಕುಮಾರಸ್ವಾಮಿ ಕಿಡಿ

ಮೈಮುಲ್ ಚುನಾವಣೆಯಲ್ಲಿ ಜೆಡಿಎಸ್‌ ಶಾಸಕ ಜಿಟಿಡಿ ಬಣದ ವಿರುದ್ದವೇ ಸ್ಪರ್ಧೆಗೆ ಇಳಿದಿರುವ ಹೆಚ್‌.ಡಿ. ಕುಮಾರಸ್ವಾಮಿ ಇಂದು ಜಿಟಿಡಿಗೆ ಸಂಪೂರ್ಣವಾಗಿ ಜೆಡಿಎಸ್ ಬಾಗಿಲು ಮುಚ್ಚಿದೆ ಎಂಬ ಸಂದೇಶ ರವಾನೆ ಮಾಡಿದರು.

ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ.

ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ.

  • Share this:
ಮೈಸೂರು (ಮಾರ್ಚ್​ 14); ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡರಿಗೆ ಜೆಡಿಎಸ್ ಪಕ್ಷದ ಬಾಗಿಲು ಸಂಪೂರ್ಣವಾಗಿ ಮುಚ್ಚಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿಂದು ಮಾತನಾಡಿದ ಅವರು, "ನನ್ನ ರಾಜಕೀಯ ಜೀವನದಲ್ಲಿ ಬಹಳ ಅನುಭವ ಆಗಿದೆ ಜಿ.ಟಿ.‌ ದೇವೇಗೌಡರನ್ನು ವಾಪಾಸ್ ಜೆಡಿಎಸ್ ಗೆ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ.  ಅವರಾಗೆ ಅವರು ನಮ್ಮಿಂದ ದೂರ ಹೋಗಿದ್ದಾರೆ. ಸಾ‌.ರಾ‌. ಮಹೇಶ್ ಕಾರಣಕ್ಕೆ ದೂರ ಹೋಗ್ತಿದ್ದಿನಿ ಅಂತಾ ಹೇಳಿದ್ದಾರೆ. ಸಾ.ರಾ.ಮಹೇಶ್ ಅವರಿಗೆ ಅಂತದ್ದು ಏನ್ ಮಾಡಿದ್ದಾರೋ? ನನಗೆ ಗೊತ್ತಿಲ್ಲ. ಆದ್ರೆ ಸಾ.ರಾ. ಮಹೇಶ್ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಲು ನಾನೇನೂ ಕೋಲೆ ಬಸವನಾ? ಜಿಟಿಡಿ ಮತ್ತೆ ಜೆಡಿಎಸ್ ಗೆ ಬರ್ತಿನಿ ಅಂದ್ರೂ ನಾವು ಸೆರೆಸಿಕೊಳ್ಳಲ್ಲ" ಎಂದು ಖಡಕ್ ಸಂದೇಶ ರವಾನೆ ಮಾಡಿದ್ದಾರೆ. 

ಮೈಮುಲ್ ಚುನಾವಣೆಯಲ್ಲಿ ಜೆಡಿಎಸ್‌ ಶಾಸಕ ಜಿಟಿಡಿ ಬಣದ ವಿರುದ್ದವೇ ಸ್ಪರ್ಧೆಗೆ ಇಳಿದಿರುವ ಹೆಚ್‌.ಡಿ. ಕುಮಾರಸ್ವಾಮಿ ಇಂದು ಜಿಟಿಡಿಗೆ ಸಂಪೂರ್ಣವಾಗಿ ಜೆಡಿಎಸ್ ಬಾಗಿಲು ಮುಚ್ಚಿದೆ ಎಂಬ ಸಂದೇಶ ರವಾನೆ ಮಾಡಿದರು. ಜಿಟಿಡಿ ಬಗ್ಗೆ ಹೆಚ್‌‌.ಡಿ.ದೇವೇಗೌಡರಿಗೆ ಸ್ವಲ್ಪ ಸಾಫ್ಟ್ ಕಾರ್ನರ್ ಇತ್ತು. ಈಗ ಅವರಿಗೂ ಇರುವ ಸತ್ಯ ಹೇಳಿ ಕನ್ವಿಸ್ ಮಾಡ್ತಿನಿ. ಇಂಥವರ ಸಹವಾಸ ಬಿಡಬೇಕು. ಇಲ್ಲದೆ ಇದ್ದರೆ ಸ್ಲೋ ಪಾಯಿಸನ್ ಆಗಿ ಪಕ್ಷ ಹಾಳು ಮಾಡುತ್ತಾರೆ" ಎಂದು ಹೇಳಿ ಕನ್ವಿಸ್ ಮಾಡ್ತಿನಿ ಎಂದು ತಿಳಿಸಿದರು. ಅಲ್ಲದೆ, ನಾನು ಈ ಪಕ್ಷದಲ್ಲಿ ಸಕ್ರಿಯಾನಾಗಿ ಕೆಲಸ ಮಾಡುವ ದಿನದವರೆಗೂ ಜಿಟಿಡಿಯನ್ನು ಜೆಡಿಎಸ್ ಗೆ ಮತ್ತೆ ಸೇರಿಸುವ ಪ್ರಶ್ನೆ ಇಲ್ಲ. ಇದೇ ಫೈನಲ್ ನಿರ್ಧಾರ ಎಂದು ಘೋಷಿಸಿದರು.

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಜಿಟಿಡಿಗೆ ಆರ್ಥಿಕ ನಿರ್ವಹಣೆ ಕೊಡಲಿಲ್ಲ ಅಂತಾ ಅವರು ಚುನಾವಣೆಯಲ್ಲಿ ಆಸಕ್ತಿ ತೋರಲಿಲ್ಲ. ಇಲ್ಲದೆ ಇದ್ದರೆ ಅವತ್ತೆ ಆ ಚುನಾವಣೆಯನ್ನು 10 ಸಾವಿರ ಮತಗಳಿಂದ ಗೆಲ್ತಿದ್ದೇವು ಅಂತ ಹಳೆ ಚುನಾವಣೆಯ ಹೊಸ ಬಾಂಬ್‌ವೊಂದನ್ನು ಹೆಚ್​ಡಿಕೆ ಸಿಡಿಸಿದರು.

ಇದನ್ನೂ ಓದಿ: Mamata Banerjee: ನಾನು ಎಂದಿಗೂ ತಲೆಬಾಗುವುದಿಲ್ಲ; ವೀಲ್​ ಚೇರ್​ನಲ್ಲೇ ಚುನಾವಣೆ ರ‍್ಯಾಲಿ ನಡೆಸಿದ ಮಮತಾ ಬ್ಯಾನರ್ಜಿ

ಮೈಸೂರು ಹಾಲು ಒಕ್ಕೂಟ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರ ನಾನು ಮತಯಾಚನೆ ಮಾಡ್ತಿದ್ದೇನೆ. ಆದ್ರೆ ಇದು ಪಕ್ಷದ ಅಥವ ಯಾರದ್ದೋ ವರ್ಚಸ್ಸಿಗೆ ವಿರುದ್ದವೋ ಮಾಡ್ತಿರೋ ಪ್ರಚಾರ ಅಲ್ಲ. ಈ ಚುನಾವಣೆಯಲ್ಲಿ ಹಿಂದೆ ನಡೆಯುತ್ತಿದ್ದ ಅಕ್ರಮಗಳನ್ನ ಸರಿಪಡಿಸಲು ನಾನು ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಭಾಗಿಯಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ ಹೆಚ್‌ಡಿಕೆ, ಜಿಟಿಡಿ ವಿರುದ್ಧ ವಾಗ್ದಾಳಿ ಮಾತ್ರ ನಿಲ್ಲಿಸಲಿಲ್ಲ,

ಕೆಲವರು ದುರಹಂಕರದಲ್ಲಿ ಮಾತಾಡುತ್ತಿದ್ದಾರೆ ನಮ್ಮ ಪಕ್ಷದಿಂದ ಬೆಳೆದವರೆ ನಮ್ಮ ಪಕ್ಷ ಮುಗಿಸಲು ಹೊರಟಿದ್ದಾರೆ. ನನಗೆ ಸಹಕಾರ ಕ್ಷೇತ್ರದ ಎಬಿಸಿಡಿಯೂ ಗೊತ್ತಿಲ್ಲ, ಆದರೂ, ಕಾರ್ಯಕರ್ತರಿಗೆ ಶಕ್ತಿ ತುಂಬಲು ಸ್ಪರ್ಧೆಗೆ ಇಳಿದಿದ್ದೇವೆ, ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ ತರುವುದಕ್ಕಾಗಿ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗುತ್ತಿದೆ, ಇದನ್ನ ಬೇರೆಯವರು ಪ್ರತಿಷ್ಠೆಯಾಗಿ ತೆಗೆದುಕೊಂಡರೆ ನಾನೇನು ಮಾಡೋಕೆ ಆಗೋಲ್ಲ ಎಂದು ಮಾಜಿ‌ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
Published by:MAshok Kumar
First published: