• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಲೆ ಬೆದರಿಕೆ; ನಾವು ಬೆದರಲ್ಲ ಎಂದ ಪ್ರಿಯಾಂಕ್ ಖರ್ಗೆ

ಸಂಸದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಲೆ ಬೆದರಿಕೆ; ನಾವು ಬೆದರಲ್ಲ ಎಂದ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ.

ಪ್ರಿಯಾಂಕ್ ಖರ್ಗೆ.

ಈ ಹಿಂದೆಯೇ ಕೆಲ ಬಾರಿ ಖರ್ಗೆ ಅವರಿಗೆ ಜೀವ ಬೆದರಿಕೆಯ ಕರೆಗಳು ಬಂದಿದ್ದವು. ಇದೀಗ ರಾಜ್ಯಸಭೆ ಸದಸ್ಯರಾದ ನಂತರ ಮತ್ತೆ ಬೆದರಿಕೆ ಕರೆಗಳು ಆರಂಭಗೊಂಡಿದ್ದು, ಅವರ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

  • Share this:

ಕಲಬುರ್ಗಿ; ಕೇಂದ್ರದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆ ಬಂದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಖರ್ಗೆ ಅವರಿಗೆ ಆಗಾಗ ಬೆದರಿಕೆ ಕರೆಗಳು ಬರುತ್ತಿರೋದು ಅವರ ಅಭಿಮಾನಿಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ಬೆದರಿಕೆ ಕರೆಗೆ ಹಲವು ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಶಾಸಕ ಬಿ.ಆರ್.ಪಾಟೀಲ ಮತ್ತಿತರರು ಬೆದರಿಕೆ ಕರೆಗೆ ಹೆದರೋಲ್ಲ ಎಂದು ಎಚ್ಚರಿಸಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಧ್ಯ ಪ್ರದೇಶದಿಂದ ಕೊಲೆ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ದೆಹಲಿಯಲ್ಲಿ ದೂರನ್ನು ನೀಡಲಾಗಿದೆ. ದೂರು ಆಧರಿಸಿ ಈಗಾಗಲೇ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಗಿದೆ.


ಈ ಹಿಂದೆಯೇ ಕೆಲ ಬಾರಿ ಖರ್ಗೆ ಅವರಿಗೆ ಜೀವ ಬೆದರಿಕೆಯ ಕರೆಗಳು ಬಂದಿದ್ದವು. ಇದೀಗ ರಾಜ್ಯಸಭೆ ಸದಸ್ಯರಾದ ನಂತರ ಮತ್ತೆ ಬೆದರಿಕೆ ಕರೆಗಳು ಆರಂಭಗೊಂಡಿದ್ದು, ಅವರ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಲ್ಲಿಕಾರ್ಜುನ ಖರ್ಗೆ ಪುತ್ರ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡೋ ಮೂಲಕ ಬೆದರಿಕೆ ಕರೆ ಮಾಡಿದವರಿಗೆ ಟಾಂಗ್ ನೀಡಿದ್ದಾರೆ. "ನನ್ನ ತಂದೆ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದಾಗಿನಿಂದಲೂ ಅವರಿಗೆ ಮೂರು ಬಾರಿ ಬೆದರಿಕೆ ಕರೆಗಳು ಬಂದಿವೆ. ನನಗೆ ಎರಡು ಬಾರಿ ಬೆದರಿಕೆ ಕರೆ ಬಂದಿವೆ. ನಾವು ಸತ್ಯ ಹೇಳುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಾವು ಬುದ್ದ ಬಸವ ಹಾಗೂ ಅಂಬೇಡ್ಕರರ ತತ್ವ ಸಿದ್ದಾಂತವನ್ನು ಬಲವಾಗಿ ನಂಬಿದ್ದೇವೆ" ಎಂದಿದ್ದಾರೆ.


ನಾವು ಯಾವಾಗಲೂ ಸಂವಿಧಾನದ ಪರವಾಗಿದ್ದೇವೆ. ಯಾರಿಂದಲೂ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ನಮ್ಮ ಸಿದ್ಧಾಂತಗಳು ಮೌಲ್ಯಗಳನ್ನು ತಿಳಿಸುತ್ತವೆ. ಬೆದರಿಕೆ ಕರೆಗಳು ನಮ್ಮ ವಿಚಾರಗಳ ಮೌಲ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂದು ಟ್ವೀಟ್ ಮೂಲಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆಗೆ ಕರೆ; 19 ದಿನಗಳಲ್ಲಿ 600 ಕೋಟಿ ಹಣ ಸಂಗ್ರಹ!


ಇದೇ ವೇಳೆ ಮಾಜಿ ಶಾಸಕ ಬಿ.ಆರ್.ಪಾಟೀಲ ಸಹ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿರೋದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ, ಇಲ್ಲವೊ ಗೊತ್ತಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಯಾರು ಮಾತನಾಡ್ತಾರೋ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿರೋದು ವಿಪರ್ಯಾಸ ಎಂದರು. ಮೋದಿ ವಿರುದ್ಧ ಮಾತನಾಡಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಲೆ ಬೆದರಿಕೆ ಬರುತ್ತಿವೆ.


ಕೊಲೆ ಬೆದರಿಕೆ ಬರ್ತಿರೋದು ಇದು ಮೂರನೆಯ ಸಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಂದೋಲನಗಳು, ಟೀಕೆಗಳು ಸಾಮಾನ್ಯ. ಹಾಗೆಂದು ಟೀಕಿಸುವವರಿಗೆಲ್ಲಾ ಕೊಲೆ ಬೆದರಿಕೆ ಹಾಕುವುದು ಸರಿಯಲ್ಲ. ಕೊಲೆ ಬೆದರಿಕೆ ಹಾಕುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಬೆದರಿಕೆ ಕರೆಗಳಿಗೆ ಕಡಿವಾಣ ಹಾಕಬೇಕು. ಮುಂದಿನ ದಿನಗಳಲ್ಲಿ ಜನರೇ ಪ್ರಧಾನಿ ಮೋದಿ ಅವರಿಗೆ ತಕ್ಕ ಪಾಠ ಕಲಿಸ್ತಾರೆ ಎಂದು ಪಾಟೀಲ ಎಚ್ಚರಿಸಿದ್ದಾರೆ.


(ವರದಿ – ಶಿವರಾಮ ಅಸುಂಡಿ)

Published by:MAshok Kumar
First published: