HOME » NEWS » District » WE CAN NOT UNDERSTAND ONLINE CLASS AGAIN TAKEN CLASS SAYS STUDENTS RHHSN SBR

ಆನ್ ಲೈನ್ ತರಗತಿ ತಿಳಿಯುತ್ತಿಲ್ಲ; ಮತ್ತೊಮ್ಮೆ ಪಾಠ ಮಾಡಿ ಎಂದು ಅಂಗಲಾಚುತ್ತಿರುವ ವಿದ್ಯಾರ್ಥಿಗಳು

ತರಗತಿಗಳಲ್ಲಿ ಪೂರ್ಣ ಪ್ರಮಾಣದ ತರಗತಿಗಳಿಲ್ಲ, ಶಿಕ್ಷಕರು ಉಪನ್ಯಾಸಕರು ಆಫ್​ ಲೈನ್ ಹಾಗು ಆನ್ ಲೈನ್ ತರಗತಿಗಳನ್ನು ನಡೆಸಬೇಕು. ಇವುಗಳಲ್ಲಿ ಮಧ್ಯೆ ಮತ್ತೆ ಪುನಃ ಅದೇ ಪಾಠವನ್ನು ಆಫ್​ ಲೈನ್ ನಲ್ಲಿ ಮಾಡಬೇಕಾಗಿದೆ. ಇದು ಶಿಕ್ಷಕರು ಹಾಗು ಉಪನ್ಯಾಸಕರಿಗೆ ತಲೆ ನೋವಾಗಿದೆ.

news18-kannada
Updated:January 10, 2021, 2:50 PM IST
ಆನ್ ಲೈನ್ ತರಗತಿ ತಿಳಿಯುತ್ತಿಲ್ಲ; ಮತ್ತೊಮ್ಮೆ ಪಾಠ ಮಾಡಿ ಎಂದು ಅಂಗಲಾಚುತ್ತಿರುವ ವಿದ್ಯಾರ್ಥಿಗಳು
ಪ್ರಾತಿನಿಧಿಕ ಚಿತ್ರ.
  • Share this:
ರಾಯಚೂರು: ಮೇ ಅಂತ್ಯದಲ್ಲಿ ದ್ವಿತೀಯ ಪಿಯುಸಿ, ಜೂನ್ ತಿಂಗಳಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸಲು ಸರ್ಕಾರ ಸಜ್ಜಾಗಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ಪಾಠಗಳು ಅರ್ಥವಾಗದೆ ಆತಂಕದಲ್ಲಿದ್ದಾರೆ. ತರಗತಿ ಪಾಠವೇನೋ ಸರಿ, ಆನ್ ಲೈನ್ ತರಗತಿಗಳು ನಮಗೆ ಅರ್ಥವಾಗಿಲ್ಲ. ಪುನಃ ಮೊದಲಿನಿಂದ ಹೇಳಿ ಅಂತಿದ್ದಾರೆ. ಆದರೆ ಇದು ಉಪನ್ಯಾಸಕರು ಶಿಕ್ಷಕರಿಗೆ ಸಾಧ್ಯವಾಗದ ಮಾತಾಗಿದೆ. ಆದರೂ ಸರಕಾರ ಸೂಚಿಸಿದಂತೆ ಪರೀಕ್ಷೆಗೆ ಸಿದ್ದವಾಗಲೇಬೇಕಿದೆ.

ಜನವರಿ ಒಂದರಿಂದ ದ್ವಿತೀಯ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ  ತರಗತಿಗಳನ್ನು ಆರಂಭಿಸಿರುವ ಸರ್ಕಾರ ಪರೀಕ್ಷೆಗಳ ಸಂಭಾವ್ಯತೆಯನ್ನೂ ಹೇಳಿದೆ. ಮೇ ಕೊನೆಯಲ್ಲಿ ಜೂನ್ ತಿಂಗಳಲ್ಲಿ  ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಗಳಿವೆ. ಆದರೆ, ಪಾಠದ ಕತೆಯೇನು ಅಂತ ವಿದ್ಯಾರ್ಥಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಅದರಲ್ಲೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಆನ್ ಲೈನ್ ಪಾಠ ನಮಗೆ ಸರಿಯಾಗಿ ಅರ್ಥವೇ ಆಗಿಲ್ಲ, ಪರೀಕ್ಷೆ ಹೇಗೆ ಬರೆಯೋದು? ಮೊದಲಿನಿಂದ ಪಾಠ ಮಾಡಿ ಅಂತಿದ್ದಾರೆ. ಶೇ.30 ರಷ್ಟು ಪಠ್ಯವನ್ನು ಕಡಿತಗೊಳಿಸಿ ಪರೀಕ್ಷೆ ನಡೆಸುವುದಾಗಿ ಸರ್ಕಾರ ಹೇಳಿದ್ದರೂ, ಕಡಿಮೆ ಸಮಯದಲ್ಲಿ ಎಲ್ಲಾ ಪಾಠಗಳು ಹೇಳುವುದು ಉಪನ್ಯಾಸಕರಿಗೆ ಸವಾಲಾಗಿದೆ. ಆದರೆ ವಿದ್ಯಾರ್ಥಿಗಳು ಮಾತ್ರ ಅರ್ಥವಾಗದ ಹಳೆಯ ಪಾಠ ಹೇಳಿಕೊಡಿ ಅಂತ ಉಪನ್ಯಾಸಕರ ದುಂಬಾಲು ಬೀಳುತ್ತಿದ್ದಾರೆ.

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ತಲುಪಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನೆಟ್ ವರ್ಕ ಸಮಸ್ಯೆ, ಶಿಕ್ಷಕರು ಹಾಗು ಉಪನ್ಯಾಸಕರೊಂದಿಗೆ ಸಂವಾದ ನಡೆಸಲು ಆಗಿಲ್ಲ. ಹೀಗಾಗಿ ಪುನಃ ಪಾಠ ಮಾಡಿ ಅಂತ ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ಈಗಾಗಲೇ ಶೇಕಡಾ 30 ರಷ್ಟು ಪಾಠಗಳನ್ನ ಕಡಿತ ಮಾಡಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನ ಆಧಾರವಾಗಿಟ್ಟುಕೊಂಡು ಮಕ್ಕಳಿಗೆ ಪರೀಕ್ಷೆಗೆ ತಯಾರಾಗಲು ಸಿದ್ಧಗೊಳಿಸುತ್ತಿದ್ದೇವೆ ಅನ್ನೋದು ಉಪನ್ಯಾಸಕರ ಮಾತು. ಆನ್ ಲೈನ್‌ನಲ್ಲಿ ಉತ್ತಮ ಉಪನ್ಯಾಸಕರಿಂದಲೇ ಪಾಠ ಹೇಳಿಸಲಾಗಿದೆ. ಈಗ ಪುನಃ ಮೊದಲಿನಿಂದ ಎಲ್ಲಾ ವಿಷಯಗಳ ಪಾಠ ಮಾಡಲು ಸಮಯದ ಕೊರತೆಯಿದೆ. ವಿದ್ಯಾರ್ಥಿಗಳು ಯಾವುದೇ ಸಮಸ್ಯೆಗಳನ್ನ ಕೇಳಿದರು ಉಪನ್ಯಾಸಕರು ಹೇಳಿಕೊಡುತ್ತಾರೆ. ಆದ್ರೆ ಮೊದಲಿನಿಂದ ಪಾಠ ಮಾಡುವುದು ಕಷ್ಟ ಅಂತ ರಾಯಚೂರು ಡಿಡಿಪಿಯು ಸದಾಶಿವಪ್ಪ ಹೇಳಿದ್ದಾರೆ.

ಇದನ್ನು ಓದಿ: Siddaramaiah: ಬಿಜೆಪಿಯ ದರಿದ್ರ ಸರ್ಕಾರದ ಜನ ವಿರೋಧಿ ಕಾಯ್ದೆಗಳ ವಿರುದ್ಧ ಬೀದಿಗಿಳಿದು ಹೋರಾಟ; ಸಿದ್ದರಾಮಯ್ಯ ಕಿಡಿ

ಇನ್ನೂ ವಸತಿ ನಿಲಯಗಳು ಆರಂಭವಾಗದ ಹಿನ್ನಲೆ ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿಲ್ಲ. ಇದುವರೆಗೆ ಜಿಲ್ಲೆಯಲ್ಲಿ ಶೇಕಡಾ 40 ರಷ್ಟು‌ ಮಾತ್ರ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುತ್ತಿದ್ದಾರೆ.
Youtube Video

ತರಗತಿಗಳಲ್ಲಿ ಪೂರ್ಣ ಪ್ರಮಾಣದ ತರಗತಿಗಳಿಲ್ಲ, ಶಿಕ್ಷಕರು ಉಪನ್ಯಾಸಕರು ಆಫ್​ ಲೈನ್ ಹಾಗು ಆನ್ ಲೈನ್ ತರಗತಿಗಳನ್ನು ನಡೆಸಬೇಕು. ಇವುಗಳಲ್ಲಿ ಮಧ್ಯೆ ಮತ್ತೆ ಪುನಃ ಅದೇ ಪಾಠವನ್ನು ಆಫ್​ ಲೈನ್ ನಲ್ಲಿ ಮಾಡಬೇಕಾಗಿದೆ. ಇದು ಶಿಕ್ಷಕರು ಹಾಗು ಉಪನ್ಯಾಸಕರಿಗೆ ತಲೆ ನೋವಾಗಿದೆ.
Published by: HR Ramesh
First published: January 10, 2021, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories