ರಾಜಸ್ಥಾನದ ರಾಜಕೀಯ ಬೆಳವಣಿಗೆ ಮಾದರಿಗೆ ನಾವೇ ಕಾರಣ, ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ; ಎಚ್.ವಿಶ್ವನಾಥ್

ಸಿದ್ದರಾಮಯ್ಯನವರೇ ಇದು ಲೆಕ್ಕ ಕೇಳುವ ಸಮಯವಲ್ಲ, ಹಾಸಿಗೆ ಇಲ್ಲ, ದಿಂಬಿಲ್ಲ ಎಂದು ಹೇಳೋದು ಬಿಟ್ಟು, ನೀವೇ ಒಂದು ಕಾಂಗ್ರೆಸ್ ಕೋವಿಡ್ ಆಸ್ಪತ್ರೆ ಆರಂಭಿಸಿ. ಈ ಮೂಲಕ ಜನರ ನೆರವಿಗೆ ಬನ್ನಿ. ಆಡಳಿತ ಪಕ್ಷ, ವಿರೋಧ ಪಕ್ಷ ಎರಡು ಸೇರಿ ಪರಿಸ್ಥಿತಿ ನಿಭಾಯಿಸಬೇಕಿದೆ. ನೀವೂ ಜವಾಬ್ದಾರಿಯಿಂದ ವರ್ತಿಸುವುದು ಕಲಿಯಿರಿ. ಲೆಕ್ಕ ಕೇಳುವುದು ತಪ್ಪಲ್ಲ. ಆದರೆ ಈಗ ಅದು ಸಮಯವಲ್ಲ. ಅದಕ್ಕಾಗಿ ಸಾರ್ವಜನಿಕ ಲೆಕ್ಕ ಸಮಿತಿ ಇದೆ. ಎಲ್ಲ ಲೆಕ್ಕ ಅಲ್ಲೆ ಇರುತ್ತೆ ಅಂತ  ಹೆಚ್.ವಿಶ್ವನಾಥ್ ಅವರು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

news18-kannada
Updated:July 17, 2020, 6:45 PM IST
ರಾಜಸ್ಥಾನದ ರಾಜಕೀಯ ಬೆಳವಣಿಗೆ ಮಾದರಿಗೆ ನಾವೇ ಕಾರಣ, ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ; ಎಚ್.ವಿಶ್ವನಾಥ್
ಹೆಚ್​. ವಿಶ್ವನಾಥ್​
  • Share this:
ಮೈಸೂರು: ರಾಜಸ್ಥಾನದ ಇಂದಿನ ರಾಜಕೀಯ ಬೆಳವಣಿಗೆ ಮಾದರಿಗೆ ನಾವೇ ಕಾರಣ. ನಾವು ಹುಟ್ಟು ಹಾಕಿದ ಸಂಸ್ಕೃತಿಯಿಂದ ಇಷ್ಟೆಲ್ಲ ಬೆಳವಣಿಗೆ ಆಗುತ್ತಿದೆ. ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದು ಎಚ್.ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್ ಅವರು, ಆಡಳಿತ ಪಕ್ಷದ ವಿರುದ್ದ ಸೆಡ್ಡು ಹೊಡೆದಿದ್ದು ಮೊದಲು ಕರ್ನಾಟಕದಲ್ಲೇ. ಸಂವಿಧಾನದಲ್ಲಿ ಇಂತಹ ಸ್ವಾತಂತ್ರ್ಯದ ಮಾದರಿ ಹೋರಾಟ ನಡೆಯಬೇಕು. ಇವು ಸಂವಿಧಾನದಲ್ಲಿ ಪರಂಪರೆಯನ್ನು ಹುಟ್ಟುಹಾಕಬೇಕು. ಇದರಿಂದ ಜನತಂತ್ರ ವ್ಯವಸ್ಥೆಗೆ ಒಂದು ಬೆಲೆ ಬರುತ್ತದೆ. ಒಬ್ಬ ಜನಪ್ರತಿನಿಧಿಯನ್ನು ಅಷ್ಟು ಸುಲಭವಾಗಿ ಕಡೆಗಣಿಸಬಾರದು. ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷದಿಂದ ಆಡಳಿತ ಪಕ್ಷಕ್ಕೆ ಯಾರು ಹೋಗುತ್ತಿಲ್ಲ. ಬದಲಿಗೆ ಆಡಳಿತ ಪಕ್ಷದಿಂದಲೇ ವಿರೋಧ ಪಕ್ಷದ ಕಡೆಗೆ ಹೋಗುತ್ತಿದ್ದಾರೆ. ರಾಜಸ್ಥಾನದ ರಾಜಕೀಯ ಬೆಳವಣಿಗೆ ಬಗ್ಗೆ ದೇಶದ್ಯಾಂತ ಚರ್ಚೆ ಆಗಬೇಕು. ಸಂವಿಧಾನಕ್ಕೆ ಗೌರವ ನೀಡುವವರು ಈ ಬಗ್ಗೆ ಮನಬಿಚ್ಚಿ ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.

ಪಕ್ಷಾಂತರ ಪಾಪವಲ್ಲ, ಅದು ಶಿಕ್ಷೆ ನೀಡುವಂತಹ ಅಪರಾಧವು ಅಲ್ಲ. ಸಿದ್ದರಾಮಯ್ಯ ನಾಲ್ಕೈದು ಬಾರಿ ಪಕ್ಷಾಂತರ ಮಾಡಿದ್ದಾರೆ. ರಮೇಶ್ ಕುಮಾರ್ 10 ಬಾರಿ ಪಕ್ಷಾಂತರ ಮಾಡಿದ್ದಾರೆ. ಕುಮಾರಸ್ವಾಮಿ ಪಕ್ಷವನ್ನೇ ಪಕ್ಷಾಂತರ ಮಾಡಿದ್ದಾರೆ. ಇಂತಹವರೆಲ್ಲ ನಮ್ಮನ್ನು ಪಕ್ಷಾಂತರಿಗಳು ಎಂದು ಕರೆದರು. ಜೆಡಿಎಸ್ -ಕಾಂಗ್ರೆಸ್​ನಲ್ಲಿ ಇರೋದು ರಾಜಪ್ರಭುತ್ವ. ಅಪ್ಪನೇ ರಾಷ್ಟ್ರಾಧ್ಯಕ್ಷ, ಮಗನೇ ರಾಜ್ಯಾಧ್ಯಕ್ಷ. ಎರಡು ಪಕ್ಷದ ರಾಜಪ್ರಭುತ್ವದ ವಿರುದ್ದವೇ ನಾವು ಸಿಡಿದ್ದೇದಿದ್ದು. ಈಗ ಅದು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮುಂದುವರೆದಿದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಆಡಳಿತ ಪಕ್ಷದ ಸಿಎಂಗಳು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ. ಈ ಬಗ್ಗೆ ದೇಶಾದ್ಯಂತ ಚರ್ಚೆ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್​ನಲ್ಲಿ ಯುವ ನಾಯಕತ್ವವನ್ನು ದಮನ ಮಾಡಲಾಗುತ್ತಿದೆ. ರಾಹುಲ್​ ಗಾಂಧಿ ಅವರಿಂದ ವಯಸ್ಸಿನ ಯುವಕರನ್ನ ತುಳಿಯುವ ಕೆಲಸ ಆಗ್ತಿದೆ. ಮಧ್ಯಪ್ರದೇಶದಲ್ಲಿ ಸಿಂಧ್ಯಾ, ರಾಜಸ್ಥಾನದಲ್ಲಿ ಸಚಿನ್ ಪೈಲೆಟ್ ಈ ಇಬ್ಬರು ಯುವಕರು ಜಾತ್ಯತೀತ ಮನಸ್ಥಿತಿ ಉಳ್ಳವರು. ಕಾಂಗ್ರೆಸ್​ಗಾಗಿ ದುಡಿದವರು. ಈ ಯುವಕರನ್ನು ತುಳಿಯುವ ಕೆಲಸ ಕಾಂಗ್ರೆಸ್​ನಲ್ಲಿ ನಡೆದಿದೆ. ಅದಕ್ಕೆ ಅವರು ಸಿಡಿದೆದ್ದಿದ್ದಾರೆ. ಇಂತಹ ಪರಿಸ್ಥಿತಿಯಿಂದ ಕಾಂಗ್ರೆಸ್ ದೇಶದಲ್ಲಿ ಕ್ಷೀಣಿಸುತ್ತಿದೆ ಎಂದು ವಿಶ್ಲೇಷಿಸಿದರು.

ಇದನ್ನು ಓದಿ: ದೇಶದಲ್ಲಿ ಮಿತಿಮೀರುತ್ತಿದೆ ಕೊರೋನಾ; ಸೆಪ್ಟೆಂಬರ್ ವೇಳೆಗೆ 35 ಲಕ್ಷ ಪ್ರಕರಣ; ಐಐಎಸ್​ಸಿ ವರದಿ

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ದವು ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯನವರೇ ಇದು ಲೆಕ್ಕ ಕೇಳುವ ಸಮಯವಲ್ಲ, ಲೆಕ್ಕ ಎಲ್ಲೂ ಹೋಗೋದಿಲ್ಲ. ಈಗ ಜನರ ರಕ್ಷಣೆ ಸರ್ಕಾರ ಆದ್ಯತೆ ನೀಡಬೇಕು. ಸಿದ್ದರಾಮಯ್ಯಗೆ ಸಹಕಾರ ಕೇಳೋದು ಮಾತ್ರ  ಗೊತ್ತು. ಕೊಡೋದು ಗೊತ್ತಿಲ್ಲ. ಅವರು ಸಿಎಂ ಆಗಿದ್ದವರು. ಆಗ ಎಲ್ಲರ ಸಹಕಾರ ಪಡೆದರು. ಆದರೆ ವಿರೋಧ ಪಕ್ಷವಾಗಿ ಆಡಳಿತ ಪಕ್ಷಕ್ಕೆ ಸಹಕಾರ ನೀಡ್ತಿಲ್ಲ. ಹಾಸಿಗೆ ಇಲ್ಲ, ದಿಂಬಿಲ್ಲ ಎಂದು ಹೇಳೋದು ಬಿಟ್ಟು, ನೀವೇ ಒಂದು ಕಾಂಗ್ರೆಸ್ ಕೋವಿಡ್ ಆಸ್ಪತ್ರೆ ಆರಂಭಿಸಿ. ಈ ಮೂಲಕ ಜನರ ನೆರವಿಗೆ ಬನ್ನಿ. ಆಡಳಿತ ಪಕ್ಷ, ವಿರೋಧ ಪಕ್ಷ ಎರಡು ಸೇರಿ ಪರಿಸ್ಥಿತಿ ನಿಭಾಯಿಸಬೇಕಿದೆ. ನೀವೂ ಜವಾಬ್ದಾರಿಯಿಂದ ವರ್ತಿಸುವುದು ಕಲಿಯಿರಿ. ಲೆಕ್ಕ ಕೇಳುವುದು ತಪ್ಪಲ್ಲ. ಆದರೆ ಈಗ ಅದು ಸಮಯವಲ್ಲ. ಅದಕ್ಕಾಗಿ ಸಾರ್ವಜನಿಕ ಲೆಕ್ಕ ಸಮಿತಿ ಇದೆ. ಎಲ್ಲ ಲೆಕ್ಕ ಅಲ್ಲೆ ಇರುತ್ತೆ ಅಂತ  ಹೆಚ್.ವಿಶ್ವನಾಥ್ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
Published by: HR Ramesh
First published: July 17, 2020, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading