• Home
  • »
  • News
  • »
  • district
  • »
  • ಇಂದ್ರ, ಚಂದ್ರ ಅಂತ ಹೇಳಿ ಮತದಾರರನ್ನು ನಂಬಿಸಿ ಮೋಸ ಮಾಡಿದೆ ಅಂತ ಅರಿವಾಗಿದೆ: MLA Goolihatti Shekar

ಇಂದ್ರ, ಚಂದ್ರ ಅಂತ ಹೇಳಿ ಮತದಾರರನ್ನು ನಂಬಿಸಿ ಮೋಸ ಮಾಡಿದೆ ಅಂತ ಅರಿವಾಗಿದೆ: MLA Goolihatti Shekar

ಗೂಳಿಹಟ್ಟಿ ಶೇಖರ್

ಗೂಳಿಹಟ್ಟಿ ಶೇಖರ್

ಗಣಿಧಣಿ ಜನಾರ್ದನ ರೆಡ್ಡಿ(Janardhan Reddy)ಗಿಂತ ಹೆಚ್ಚು ಟ್ಯಾಕ್ಸ್ ಕಟ್ತಾರೆ ಅಂತ ಸುಳ್ಳು ಹೇಳಿದ್ದಕ್ಕೆ ರಘು ಆಚಾರ್ ಗೆ ಕಾಂಗ್ರೆಸ್ ಗಾಳ ಹಾಕಿತ್ತು ಆದ್ರೆ ರಘು ಆಚಾರ್ ಗೆ ವೈಯುಕ್ತಿಕ ಆಸ್ತಿ ಉಳಿಸಿಕೊಳ್ಳಲು  MLC ಎಂಬ ಅಧಿಕಾರ ಬೇಕಾಗಿತ್ತು ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ.

ಮುಂದೆ ಓದಿ ...
  • Share this:

ಕಳೆದ ಬಾರಿ ಚಿತ್ರದುರ್ಗಕ್ಕೆ (Chitradurga) ರಘು ಆಚಾರನ್ನ(MLC Raghu Achar) ಪಕ್ಷೇತರ ಅಭ್ಯರ್ಥಿ (Independent Candidate) ಮಾಡಿ ತಪ್ಪು ಮಾಡಿದೆ. ಕಳೆದ ಬಾರಿ ಚುನಾವಣೆಯಲ್ಲಿ (Election) ಮಾಡಿದ ತಪ್ಪಿನ ಅರಿವಾಗಿದೆ‌. ವಿಸಿಟಿಂಗ್ ‌ಕಾರ್ಡ್ ಗಾಗಿ ಕೆಲವರು ಚುನಾವಣೆಗೆ ಬರ್ತಾರೆ. ಹೆಲಿಕಾಪ್ಟರ್ ನಲ್ಲಿ ದುರ್ಗಕ್ಕೆ ಬಂದವರನ್ನು ಗೆಲ್ಲಿಸಿ ತಪ್ಪು ಮಾಡಿದ್ದೇವೆ ಹಾಲಿ MLC ರಘು ಆಚಾರ್ ವಿರುದ್ಧ ಶಾಸಕ ಗೂಳಿಹಟ್ಟಿ ಶೇಖರ್ (MLA Goolihatti Shekar) ಅಸಮಾಧಾನ ಹೊರ ಹಾಕಿದ್ದಾರೆ.  ನಮ್ಮ ತಪ್ಪಿನ ಅರಿವಾಗಿದೆ, ಗೆದ್ದವರು ಮತದಾರರ (voters)‌ ಕಷ್ಟ ಸುಖಃ ಆಲಿಸಿಲ್ಲ‌. ಇಂದ್ರ,ಚಂದ್ರ ಅಂತ ಹೇಳಿ ಮತದಾರರನ್ನು ನಂಬಿಸಿ ಮೋಸ ಮಾಡಿದೆ ಅಂತ ಅರಿವಾಗಿದೆ ಎಂದು ಬೇಸರ ಹೊರ ಹಾಕಿದರು.


ಗಣಿಧಣಿ ಜನಾರ್ದನ ರೆಡ್ಡಿ(Janardhan Reddy)ಗಿಂತ ಹೆಚ್ಚು ಟ್ಯಾಕ್ಸ್ ಕಟ್ತಾರೆ ಅಂತ ಸುಳ್ಳು ಹೇಳಿದ್ದಕ್ಕೆ ರಘು ಆಚಾರ್ ಗೆ ಕಾಂಗ್ರೆಸ್ ಗಾಳ ಹಾಕಿತ್ತು ಆದ್ರೆ ರಘು ಆಚಾರ್ ಗೆ ವೈಯುಕ್ತಿಕ ಆಸ್ತಿ ಉಳಿಸಿಕೊಳ್ಳಲು  MLC ಎಂಬ ಅಧಿಕಾರ ಬೇಕಾಗಿತ್ತು ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ.


ಬಿಜೆಪಿ ಅಭ್ಯರ್ಥಿ ನವೀನ್ ಅವರನ್ನು ಗೆಲ್ಲಿಸುತ್ತೇವೆ


ಈ ಬಾರಿ ವಲಸಿಗರಿಗೆ ಮಣೆ ಹಾಕಲ್ಲ, ಈಗ ಜ್ಞಾನೋದಯ ಆಗಿದೆ. ಎಂತಹ ದೊಡ್ದ ರಿಯಲ್ ಎಸ್ಟೇಟ್ ಉದ್ಯಮಿಯಾಗಲಿ ವಲಸಿಗರನ್ನು ಗೆಲ್ಲಿಸಲ್ಲ.  ಚಿತ್ರದುರ್ಗ ಎಂಎಲ್ ಸಿ ಕ್ಷೇತ್ರದ ಸ್ಥಳೀಯ ಬಿಜೆಪಿ ಅಭ್ಯರ್ಥಿ ನವೀನ್ ಗೆಲ್ಲಿಸುತ್ತೇವೆ ಎಂದು ಹೇಳಿದರು. ಕಳೆದ ಬಾರಿ ಚಿತ್ರದುರ್ಗ ಜಿಲ್ಲೆಗೆ ರಘು ಆಚಾರ್ ಅವರನ್ನು ಗೂಳಿಹಟ್ಟಿ ಶೇಖರ್ ಅವರೇ ಪರಿಚಯಿಸಿದ್ದರು. ಇತ್ತ ಕಾಂಗ್ರೆಸ್ ನಿಂದ  ಬಿ.ಸೋಮಶೇಖರ್ ಅವರಿಗೆ ಕಾಂಗ್ರೆಸ್ ಪರಿಷತ್ ಚುನಾವಣೆಯ ಟಿಕೆಟ್ ನೀಡಿದೆ.


ಇದನ್ಣೂ ಓದಿ:  ಯಾರಾದ್ರೂ ಊಟ ಹಾಕ್ತಾರೆ ಅಂದ್ರೆ ಬೇಡ ಅನ್ನೋಕೆ ಆಗುತ್ತಾ? ಮೈತ್ರಿಯ ಸುಳಿವು ನೀಡಿದ್ರಾ MP Renukacharya?


ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ರಾಜಕೀಯ ಅಂಗಳ ಸಖತ್ ಆಕ್ಟಿವ್ ಆಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳು ಆಪ್ತರು ಮತ್ತು ಕುಟುಂಬ ಸದಸ್ಯರ ಜೊತೆ ಟೆಂಪನ್ ರನ್ ಮಾಡುತ್ತಿದ್ದಾರೆ.


ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಕೇಳಿದ ಬಿ.ಎಸ್.ಯಡಿಯೂರಪ್ಪ


ಜೆಡಿಎಸ್ ಅಭ್ಯರ್ಥಿ ಹಾಕದ ಸ್ಥಳದಲ್ಲಿ ನಮಗೆ ಬೆಂಬಲ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ನಮಗೆ ಬೆಂಬಲ ಸೂಚಿಸಬೇಕು ಎಂದು ಎಂದು ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇನ್ನು 20 ಕ್ಷೇತ್ರಗಳ ಪೈಕಿ 17 ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸಲಿದ್ದೇವೆ. ಕಾರಣಾಂತರಗಳಿಂದ 3 ಕ್ಷೇತ್ರದಲ್ಲಿ ಗೆಲುವು ಕಷ್ಟಕರ ಆಗಲಿದೆ. ಕಾಂಗ್ರೆಸ್ ಸ್ನೇಹಿತರು ಜಾತಿ, ‌ಹಣ, ತೋಳಬಲದಿಂದ ಅಧಿಕಾರ ಬರಲು ಪ್ರಯತ್ನ ಮಾಡುತ್ತಿದೆ ಎಂದು ಬಿ ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು.


ಹೆಚ್ಚು ವಿಧಾನ ಪರಿಷತ್ ಕ್ಷೇತ್ರ ಗೆಲ್ಲುತ್ತೇವೆ


ಇಂದು ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಮ್ಮ ಸಾಮರ್ಥ್ಯಕ್ಕನುಸಾರ ಏಳು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಎಲ್ಲೆಲ್ಲಿ ಗೆಲುವಿಗೆ ಅವಕಾಶವಿದೆಯೂ ಅಲ್ಲಿ ಸ್ಪರ್ಧೆ ಮಾಡಲಾಗಿದೆ. ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರು ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ಮಾಡ್ತಾರೆ. ನನ್ನ ಗುರಿ ಇರೋದು ಮುಂದಿನ ವಿಧಾನಸಭಾ ಚುನಾವಣೆ ಮೇಲೆ. 123 ಕ್ಷೇತ್ರಗಳನ್ನ ಗೆದ್ದು ಅಧಿಕಾರ ಹಿಡಿಯಬೇಕಿದೆ‌.  ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ವಿಧಾನ ಪರಿಷತ್ ಕ್ಷೇತ್ರ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಇದನ್ನೂ ಓದಿ:  ನನಗೆ ಗಾಡ್ ಫಾದರ್ ಇಲ್ಲ; ನನ್ನ ಬಳಸಿಕೊಂಡು ಬೇರೆಯವರು ಮಂತ್ರಿಗಳಾದರು: ಗೂಳಿಹಟ್ಟಿ ಶೇಖರ್


ಜೆಡಿಎಸ್ ಅಭ್ಯರ್ಥಿಗಳು


1. ಮಂಡ್ಯ: ಅಪ್ಪಾಜಿಗೌಡ


2. ತುಮಕೂರು: ಅನಿಲ್ ಕುಮಾರ್


3. ಮೈಸೂರು: ಸಿ.ಎನ್.ಮಂಜೇಗೌಡ


4. ಕೋಲಾರ: ವಕ್ಕಲೇರಿ ರಾಮು


5. ಬೆಂಗಳೂರು ಗ್ರಾಮಾಂತರ: ಹೆಚ್.ಎಂ.ರಮೇಶ್ ಗೌಡ


6. ಕೊಡಗು: ಹೆಚ್.ಯು.ಇಸಾಕ್ ಖಾನ್


7. ಹಾಸನ: ಸೂರಜ್ ರೇವಣ್ಣ


ಡಿಸೆಂಬರ್ 14ಕ್ಕೆ ಮತ ಎಣಿಕೆ


2022ರ ಜನವರಿ 5ರಂದು 25 ಪರಿಷತ್​ ಸದಸ್ಯರ (MLC’s)ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Election) ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು.

Published by:Mahmadrafik K
First published: