ನಾವು ಕನ್ನಡಿಗರೇ, ನಮ್ಮನ್ನು ಬದುಕಲು ಬಿಡಿ: ಮರಾಠ ಸಮುದಾಯ ಮುಖಂಡರ ಮನವಿ

ಮರಾಠ ಸಮುದಾಯವನ್ನು ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಶಂಕರಪ್ಪ ಅವರು ನೀಡಿರುವ ವರದಿಯಂತೆ 3ಬಿ ಯಿಂದ 2ಎಗೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು ಎಂದು ಅವರು ಮನವಿ ಮಾಡಿದರು.

news18-kannada
Updated:November 21, 2020, 8:27 PM IST
ನಾವು ಕನ್ನಡಿಗರೇ, ನಮ್ಮನ್ನು ಬದುಕಲು ಬಿಡಿ: ಮರಾಠ ಸಮುದಾಯ ಮುಖಂಡರ ಮನವಿ
ಸುದ್ದಿಗೋಷ್ಠಿ ನಡೆಸಿದ ರಾಮನಗರ ಜಿಲ್ಲಾ ಕ್ಷತ್ರಿಯ ಸೇವಾ ಟ್ರಸ್ಟ್ ಮತ್ತು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್  ಪದಾಧಿಕಾರಿಗಳು.
  • Share this:
ರಾಮನಗರ: ಸಂವಿಧಾನಾತ್ಮಕವಾಗಿ ಮರಾಠ ಸಮುದಾಯಕ್ಕೆ ಸಲ್ಲಬೇಕಾದ ಸವಲತ್ತನ್ನು ರಾಜ್ಯ ಸರ್ಕಾರ ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರದ ರೂಪದಲ್ಲಿ ನೀಡಿದೆ. ಆದರೆ, ಗಡಿ ವಿವಾದ ಮುಂದಿಟ್ಟುಕೊಂಡು ಪ್ರಾಧಿಕಾರ ರಚನೆಗೆ ವಿರೋಧ ವ್ಯಕ್ತಪಡಿಸುವುದು ಬೇಡ ಎಂದು ಜಿಲ್ಲಾ ಕ್ಷತ್ರಿಯ ಸೇವಾ ಟ್ರಸ್ಟ್ ಮತ್ತು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್  ಪದಾಧಿಕಾರಿಗಳು ಕನ್ನಡ ಪರ ಸಂಘಟನೆಗಳಲ್ಲಿ ಮನವಿ ಮಾಡಿದರು.

ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ಒಂದು ಭಾಷೆಯ ಪ್ರಾಧಿಕಾರ ಅಲ್ಲ. ಕನ್ನಡ ನೆಲದಲ್ಲಿ ಜೀವನ ಸಾಗಿಸುತ್ತಿರುವ ಕರ್ನಾಟಕದ ಮರಾಠ ಸಮುದಾಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ದಿಗಾಗಿ ರಾಜ್ಯ ಸರ್ಕಾರ ಪ್ರಾಧಿಕಾರ ರಚಿಸುತ್ತಿದೆ. ಇದನ್ನು ಕನ್ನಡಪರ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಮರಾಠ ಸಮುದಾಯ ಕನ್ನಡ ಮಣ್ಣಿನಲ್ಲೇ ಹುಟ್ಟಿ, ಇಲ್ಲೇ ಮಣ್ಣಾಗುವ, ಕನ್ನಡ ನಾಡು, ನುಡಿಯನ್ನು ಜೀವನವಾಗಿರಿಸಿಕೊಂಡಿರುವ, ಕನ್ನಡ ಭಾಷೆಯಲ್ಲೇ ಶಿಕ್ಷಣವನ್ನು ಪಡೆದು ಜೀವನ ಸಾಗಿಸುತ್ತಿರುವ ಸಮುದಾಯ. ವ್ಯವಹಾರ, ಸಂವಹನವೂ ಕನ್ನಡವೇ, ಕನ್ನಡ ಮಾಧ್ಯಮದಲ್ಲೇ ಈ ಸಮುದಾಯದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಸಮುದಾಯದ ಪೈಕಿ ಅನೇಕರಿಗೆ ಮರಾಠಿ ಭಾಷೆಯೇ ಗೊತ್ತಿಲ್ಲ. ಸಮುದಾಯದಲ್ಲಿ ಆರ್ಥಿಕ ಸ್ಥಿತಿವಂತರೇನಿಲ್ಲ. ಶೇ. 99 ಮಂದಿ ಆರ್ಥಿಕವಾಗಿ ಬಡವರೇ ಇದ್ದಾರೆ. ಹೀಗಾಗಿ ಸಮುದಾಯದ ಅಭಿವೃದ್ದಿಗಾಗಿ ಪ್ರಾಧಿಕಾರದ ಅವಶ್ಯಕತೆ ಇತ್ತು ಎಂದು ಹೇಳಿದರು.

ಇದನ್ನು ಓದಿ: ಯಡಿಯೂರಪ್ಪ ರಾಜೀನಾಮೆ ಕೊಡಲಿ, ನಾವು ಕರ್ನಾಟಕ ಬಂದ್ ಮಾಡ್ತೇವೆ, ಯತ್ನಾಳ್ ಒಬ್ಬ ಹುಚ್ಚ: ವಾಟಾಳ್ ನಾಗರಾಜ್

ಇನ್ನು ಮರಾಠ ಸಮುದಾಯವನ್ನು ಮೀಸಲಾತಿಗಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಶಂಕರಪ್ಪ ಅವರು ನೀಡಿರುವ ವರದಿಯಂತೆ 3ಬಿ ಯಿಂದ 2ಎಗೆ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶ್ರೀನಿವಾಸ್ ರಾವ್, ಸೋಮಶೇಖರ್ ರಾವ್, ಕವಿತಾ ರಾವ್ ಸೇರಿದಂತೆ ಹಲವರು ಇದ್ದರು.ವರದಿ : ಎ.ಟಿ.ವೆಂಕಟೇಶ್
Published by: HR Ramesh
First published: November 21, 2020, 8:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading