HOME » NEWS » District » WATERMELON FARMER IN CHITRADURGA SUFFERS LOSS DUE TO LOCKDOWN AND PRICE DROP VTC SKTV

Lockdown Effect: ಕಲ್ಲಂಗಡಿ ಬೆಳೆದಿದ್ದ ಚಿತ್ರದುರ್ಗದ ರೈತ ಕಂಗಾಲು, ಕೊಳ್ಳುವವರಿಲ್ಲ-ಬೆಲೆಯೂ ಪಾತಾಳಕ್ಕೆ

Lockdown Farmers Crisis: ತನ್ನ 4 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿರುವ ಶಿವಕುಮಾರ್ ಗೆ ಬೆಳೆ ಉತ್ತಮವಾಗಿ ಇಳುವರಿ ಬಂದಿದೆ. ಇನ್ನೇನು ಹದಕ್ಕೆ ಬಂದ ಕಲ್ಲಂಗಡಿಯನ್ನ ರಂಜಾನ್ ಹಬ್ಬದ ಸಂದರ್ಭದಲ್ಲಿ ಕಿತ್ತು ಮಾರಾಟ ಮಾಡಿದ್ರೆ ಉತ್ತಮ ಬೆಲೆಯೂ ಸಿಗುತ್ತದೆ ಅನ್ನೋ ಭರವಸೆಯಲ್ಲಿದ್ದರು. ಆದರೇ  ಈಗ ಹಣ್ಣುಗಳನ್ನ ಖರೀದಿ ಮಾಡೋಕೆ ವ್ಯಾಪಾರಿಗಳು ಬರುತ್ತಿಲ್ಲ, ಇತ್ತ ಅಷ್ಟನ್ನೂ ತಾನೇ ಮಾರಾಟ ಮಾಡಲು ಸಮಯ ಸಾಲದೆ ಕಂಗಾಲಾಗಿದ್ದಾನೆ.

news18-kannada
Updated:April 26, 2021, 10:08 AM IST
Lockdown Effect: ಕಲ್ಲಂಗಡಿ ಬೆಳೆದಿದ್ದ ಚಿತ್ರದುರ್ಗದ ರೈತ ಕಂಗಾಲು, ಕೊಳ್ಳುವವರಿಲ್ಲ-ಬೆಲೆಯೂ ಪಾತಾಳಕ್ಕೆ
ಕಲ್ಲಂಗಡಿ ಬೆಳೆ
  • Share this:
ಚಿತ್ರದುರ್ಗ : ರಂಜಾನ್ ಹಬ್ಬದ ಸೀಸನಲ್ಲಿ  ಉತ್ತಮ ಬೇಡಿಕೆ, ಹಾಗೂ ಬೆಲೆ ಸಿಗುತ್ತದೆ ಅಂತ ಈ ರೈತ ನಾಲ್ಕು ಎಕರೆ ಕಲ್ಲಂಗಡಿ‌ ಬೆಳೆದಿದ್ದ, ಆದರೇ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ತಂದ ಅಘೋಷಿತ ಲಾಕ್ ಡೌನ್ ಆ ರೈತನನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹೊಸಕೆರೆ ಗ್ರಾಮದ ರೈತ ಶಿವಕುಮಾರ ಬರದಲ್ಲೂ ಭರವಸೆಯಿಂದ ಕಲ್ಲಂಗಡಿ ಬೆಳೆದಿದ್ದಾನೆ.

ತನ್ನ 4 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿರುವ ಶಿವಕುಮಾರ್ ಗೆ ಬೆಳೆ ಉತ್ತಮವಾಗಿ ಇಳುವರಿ ಬಂದಿದೆ. ಇನ್ನೇನು ಹದಕ್ಕೆ ಬಂದ ಕಲ್ಲಂಗಡಿಯನ್ನ ರಂಜಾನ್ ಹಬ್ಬದ ಸಂದರ್ಭದಲ್ಲಿ ಕಿತ್ತು ಮಾರಾಟ ಮಾಡಿದ್ರೆ ಉತ್ತಮ ಬೆಲೆಯೂ ಸಿಗುತ್ತದೆ ಅನ್ನೋ ಭರವಸೆಯಲ್ಲಿದ್ದರು. ಆದರೇ  ಈಗ ಹಣ್ಣುಗಳನ್ನ ಖರೀದಿ ಮಾಡೋಕೆ ವ್ಯಾಪಾರಿಗಳು ಬರುತ್ತಿಲ್ಲ, ಇತ್ತ ಅಷ್ಟನ್ನೂ ತಾನೇ ಮಾರಾಟ ಮಾಡಲು ಸಮಯ ಸಾಲದೆ ಕಂಗಾಲಾಗಿದ್ದಾನೆ. ಅಲ್ಲದೇ ಕರ್ಫ್ಯೂ ಜಾರಿ ಇರುವ ಹಿನ್ನಲ್ಲೆ ಕಲ್ಲಂಗಡಿ ಖರೀದಿಗೆ ಬಾರದ ವ್ಯಾಪಾರಿಗಳು, 1 ಕೆಜಿಗೆ 15 ರೂಪಾಯಿ ಇದ್ದ ಕಲ್ಲಂಗಡಿ ಬೆಲೆಯನ್ನ ದಿಢೀರನೇ  5-7 ರೂ ಗೆ ಇಳಿಕೆ ಮಾಡಿದ್ದಾರೆ.

ರಾಜ್ಯದಲ್ಲಿಂದು ದಿಢೀರ್ ಕರ್ಫ್ಯೂದಿಂದ ಬೆಲೆ ಕುಸಿತ ಕಂಡು ಕಲ್ಲಂಗಡಿ ಬೆಳೆದ ರೈತ ಕಂಗಾಲಾಗಿದ್ದು, ಈ ಕುರಿತುಕೃಷಿ ಸಚಿವರು ಈ ವರೆಗೆ ರೈತರು ಬೆಳೆದ ಬೆಳೆಗಳ ಮಾರಾಟದ ಬಗ್ಗೆ ಮಾತಾಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇನ್ನೂ ನಾಲ್ಕೂ ಎಕರೆಯಲ್ಲಿ ಬೆಳೆದ ಹದಕ್ಕೆ ಬಂದಿರೋ ಹಣ್ಣು ಇನ್ನೇನು ಕೊಳೆತು ಹೋಗುವ ಹಂತ ತಲುಪಿದೆ, ಇದರಿಂದ ಸಂಕಷ್ಟಕ್ಕೆ ಸಿಲುಕಿದ ರೈತ ಕರ್ಫ್ಯೂ ಇರೋ ಕಾರಣಕ್ಕೆ ಕಡಿಮೆಗಾದರೂ ಕೊಡೋಣಾ ಎಂದರೇ ಆ ಬೆಲೆಗೂ ವ್ಯಾಪಾರಿಗಳು ಕೊಳ್ಳಲು ಬರುತ್ತಿಲ್ಲ.

ಈ ಬೆಳೆ ಬೆಳೆಯೋಕೆ ಮೂರು ಲಕ್ಷಕ್ಕು ಹೆಚ್ಚು ಹಣ ಖರ್ಚು ಮಾಡಿರೋ ರೈತ, ಕೊರೋನಾ ನಿಯಂತ್ರಿಸಲಾಗದೆ ಸರ್ಕಾರ ಜನರನ್ನ ಕಷ್ಟಕ್ಕೆ ಸಿಲುಕಿಸಿದೆ. ಕಳೆದ ವರ್ಷವೂ ಹೀಗೆ ಆಗಿತ್ತು, ಈ ವರ್ಷ ರಂಜಾನ್ ವೇಳೆಗೆ ಒಳ್ಳೆ ಬೆಲೆ ಸಿಗುವ ನಿರೀಕ್ಷೆ ಇತ್ತು, ಲಾಕ್ ಡೌನ್ ನಿಂದ ಬೆಲೆ ಕುಸಿದು ವ್ಯಾಪಾರಿಗಳೂ ಬರುತ್ತಿಲ್ಲ. ಸರ್ಕಾರ ಕೃಷಿ ಚಟುವಟಿಕೆಗೆ ಅವಕಾಶ ನೀಡಿದೆ ಅಂತಾರೆ, ಬೆಳಗ್ಗೆ ಹತ್ತುಗಂಟೆ ಒಳಗೆ ಬೆಳೆದ ಬೆಳೆಗಳನ್ನ ಮಾರಾಟ ಮಾಡಲು ಹೇಗೆ ಸಾಧ್ಯ, ಚುನಾವಣೆ ನಡೆಸಬೇಕಾದರೆ ಸರ್ಕಾರಕ್ಕೆ ಏನೂ ಆಗಲಿಲ್ಲವಾ ಎಂದು ಪ್ರಶ್ನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.
Youtube Video

ಅಲ್ಲದೇ  ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆ ಎಂದು ಮಾಧ್ಯಮದವರು ರೈತರಿಗೆ  ನೆರವಾಗಿ ಎಂದು ಮನವಿ ಮಾಡಿದ್ದಾನೆ. ಸದ್ಯ ಯಾವ ಮುನ್ಸೂಚನೆ ಇಲ್ಲದೆ ಅಘೋಷಿತ ಲಾಕ್ ಡೌನ್ ಹೇರಿರುವ ಸರ್ಕಾರ ರೈತರು ಬೆಳೆದ ಬೆಳೆಗಳನ್ನ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಸಂಕಷ್ಟದಲ್ಲಿರೋ ರೈತರನ್ನ ಪಾರು ಮಾಡಬೇಕಿದೆ.
Published by: Soumya KN
First published: April 26, 2021, 9:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories