Tamil Cinema ಶೂಟಿಂಗ್ ವೇಳೆ ಎಡವಟ್ಟು; ಮೇಲುಕೋಟೆ ಚಲುವನಾರಾಯಣಸ್ವಾಮಿ ಅಭಿಷೇಕದ ತೀರ್ಥ ಕಲುಷಿತ

ತಂಗಿ ಕೊಳದ ನೀರು ಸ್ವಾಮಿಯ ಪವಿತ್ರ ತೀರ್ಥಕ್ಕೆ ಹಾಗೂ ಸಾರ್ವಜನಿಕರಿಗೆ ಕುಡಿಯಲು ಬಳಕೆಯಾಗುತ್ತದೆ. ಆದ್ರೆ ಈಗ ಮೇಲುಕೋಟೆ ಪವಿತ್ರ ತೀರ್ಥ ತಂಗಿಯ ಕೊಳದ ನೀರು ಸಗಣಿ ಬಣ್ಣಕ್ಕೆ ಬದಲಾಗಿ ಕಲುಷಿತವಾಗಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ.

ಮೇಲುಕೋಟೆ ತಂಗಿ ಕೊಳ

ಮೇಲುಕೋಟೆ ತಂಗಿ ಕೊಳ

  • Share this:
    ಮಂಡ್ಯ: ಜಿಲ್ಲೆಯ ಮೇಲುಕೋಟೆ(Melukote) ಕ್ಷೇತ್ರದ ಪವಿತ್ರ ತೀರ್ಥಗಳೆಂದ ಪ್ರಖ್ಯಾತವಾಗಿರುವ ಅಕ್ಕ ತಂಗಿ ಕೊಳಗಳ ಪೈಕಿ ಚಲುವನಾರಾಯಣಸ್ವಾಮಿ ದೇವರ (Chaluvaraya swamy Temple) ಅಭಿಷೇಕಕ್ಕೆ ಬಳಸುತ್ತಿದ್ದ. ತಂಗಿಯ ಕೊಳದ (Tangi kola) ಪವಿತ್ರ ತೀರ್ಥ ಕಲುಷಿತಗೊಂಡಿದೆ. ತಮಿಳು ಚಲನಚಿತ್ರ  (Tamil Cinema ) ತಂಡ ಕಳೆದ 30 ದಿನಗಳ ಹಿಂದೆ ಕೊಳದಲ್ಲಿರುವ ನೀರಿಗೆ ಬಣ್ಣ ಹಾಗೂ ಹೂ ಹಾಕಿ ಚಿತ್ರೀಕರಣ ಮಾಡಿತ್ತು. ಇದಾದ ಮರು ದಿನದಿಂದಲೇ ತಂಗಿಯ ಕೊಳ ಕಲುಷಿತವಾಗಿ ಸಗಣಿ ಬಣ್ಣಕ್ಕೆ (Color of Water) ತಿರುಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ನೀರು ಬದಲಾಗಿದೆ ಎಂದು ಚಿತ್ರೀಕರಣದ (Shooting) ವೇಳೆ ಬಣ್ಣ ಬಳಸಿದ ಫೋಟೋ, ಲಭ್ಯವಾಗಿಲ್ಲವಾದರೂ ತನಿಖೆಯಿಂದ ನಿಜಾಂಶ ಹೊರಬರಬೇಕಿದೆ. ಆದರೆ, ಪವಿತ್ರವಾದ ತೀರ್ಥವಂತೂ ಕಲುಷಿತವಾಗಿರುವುದು ಸ್ಪಷ್ಟವಾಗಿದೆ. ಒಂದು ತಿಂಗಳು ಕಳೆದು ಹಲವು  ಬಾರಿ ಮಳೆ(Rain) ಬಂದರು  ನೀರು ಹಿಂದಿನಂತೆ ತಿಳಿಯಾಗದೆ ಗಡುಸಾದ ಬಣ್ಣದಲ್ಲೇ ಇದೆ.

    ಕೊಳದ ನೀರಿ ಬಣ್ಣ ಬದಲಾಗಿದೆ 

    ಸಂರಕ್ಷಿತ  ಪವಿತ್ರ ತೀರ್ಥವೂ ಆದ ಅಕ್ಕ ತಂಗಿ ಕೊಳ ಭವ್ಯ ಸ್ಮಾರಕವಾಗಿದೆ. ಭಕ್ತರು ನೀರಿನಲ್ಲಿ ಕಾಲಿಡಲೂ ಅವಕಾಶವಿಲ್ಲ. ಅತ್ಯಂತ ಸೋಪಾನಗಳೊಂದಿಗೆ ನಿರ್ಮಾಣವಾಗಿರುವ ಕೊಳಗಳ ಸುಂದರ ಸೋಪಾನಗಳ ಅಕ್ಕಪಕ್ಕದಲ್ಲಿ ಮುಂಭಾಗ ಆಂಜನೇಯನ ಗುಡಿ ಹಿಂಭಾಗ ಕುಲಶೇಖರಾಳ್ವಾರ್ ಸನ್ನಿಧಿ ಇದೆ.  ಮೇಲುಕೋಟೆಯ ಪ್ರವಾಸಿ ತಾಣವಾದ ಅತ್ಯಾಕರ್ಷಕವಾದ ಈ ಸ್ಥಳ ಚಲನಚಿತ್ರ ಚಿತ್ರೀಕರಣ ಹಾಗೂ ಫೋಟೋಗ್ರಫಿಗೆ ಅಚ್ಚುಮೆಚ್ಚಿನ ಸ್ಥಳವಾಗಿದೆ. ತಂಗಿ ಕೊಳದ ನೀರು ಸ್ವಾಮಿಯ ಪವಿತ್ರ ತೀರ್ಥಕ್ಕೆ ಹಾಗೂ ಸಾರ್ವಜನಿಕರಿಗೆ ಕುಡಿಯಲು ಬಳಕೆಯಾಗುತ್ತದೆ. ಆದ್ರೆ ಈಗ ಮೇಲುಕೋಟೆ ಪವಿತ್ರ ತೀರ್ಥ ತಂಗಿಯ ಕೊಳದ ನೀರು ಸಗಣಿ ಬಣ್ಣಕ್ಕೆ ಬದಲಾಗಿ ಕಲುಷಿತವಾಗಿರುವುದು ಸ್ಥಳೀಯರಲ್ಲಿ ಬೇಸರ ತರಿಸಿದೆ.

    ತಂಗಿ ಕೊಳದ ನೀರಿಗೆ ವಿಶೇಷ ಸ್ಥಾನವಿದೆ 

    ಇನ್ನು ಹಿಂದಿನಿಂದಲೂ ತಂಗಿ ಕೊಳದ ನೀರು ಸ್ಪಟಿಕದಂತೆ ತಿಳಿಯಾಗಿದ್ದು, ಅಕ್ಕನ ಕೊಳದ ನೀರು ಗಡುಸಾಗಿದೆ ಎಂಬ ಪ್ರತೀತಿ ಜನ ಜನಿತವಾಗಿದೆ. ಅಕ್ಕನ ಕೊಳಕ್ಕೆ ಬರುವ ಮಳೆ ನೀರು ವಿಶೇಷವಾಗಿ ಮಾಡಿದ ರಂಧ್ರದ ಮೂಲಕ ಶುದ್ದೀಕರಣವಾಗಿ ತಂಗಿ ಕೊಳ ಸೇರುವ ವ್ಯವಸ್ಥೆ ಇದೆ. ಹೀಗಾಗಿ ತಂಗಿಯ ಕೊಳದ ತೀರ್ಥವನ್ನು ಚಲುವನಾರಾಯಣ ಸ್ವಾಮಿಯ ಅಭಿಷೇಕ ತೀರ್ಥಗಳಿಗೆ ಬಳಸಲಾಗುತ್ತಿದೆ. ಅತ್ಯಂತ ಭಕ್ತಿಭಾವದಿಂದ ಅಕ್ಕ ತಂಗಿ ಕೊಳಗಳ ನೀರನು ಸಂರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಮಳೆ ನೀರು ಬಂದಾಗ ತಂಗಿಯ ಕೊಳದ ನೀರು ಮತ್ತಷ್ಟು ತಿಳಿಯಾಗಿ ನಳನಳಿಸುತ್ತದೆ.

    ಇದನ್ನೂ ಓದಿ: Puneeth Rajkumar ನಿವಾಸಕ್ಕೆ CM ಭೇಟಿ: ತಿಥಿ ಸೇರಿದಂತೆ ಮುಂದಿನ ಕಾರ್ಯಗಳ ಬಗ್ಗೆ ಕುಟುಂಬದೊಂದಿಗೆ ಚರ್ಚೆ

    ಸೂಕ್ರ ಕ್ರಮಕ್ಕೆ ಸ್ಥಳೀಯರ ಒತ್ತಾಯ

    ಆದ್ರೆ ಇಂತಹ ಮಹತ್ವದ ಪವಿತ್ರ ತೀರ್ಥವನ್ನು ಚಲನಚಿತ್ರ ತಂಡ ಬಣ್ಣ ಹಾಕಿ ಕಲುಷಿತ ಮಾಡಿ ಹೋಗಿದೆ ಎಂಬುದು ನಾಗರಿಕರ ಆರೋಪ. 10 ದಿನದಲ್ಲಿ ಹಲವು ಬಾರಿ ಮಳೆ ಬಂದಿದ್ದರು. ತಂಗಿಯ ಕೊಳದ ನೀರು ಕಲುಷಿತವಾಗಿಯೇ ಉಳಿದಿದೆ. ಇನ್ನು ಮೇಲುಕೋಟೆ ಪವಿತ್ರ ಕಲ್ಯಾಣಿ ಮತ್ತು ಅಕ್ಕ ತಂಗಿ ಕೊಳಗಳು ಸಂರಕ್ಷಿತ ಸ್ಮಾರಕಗಳು, ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಚಿತ್ರೀಕರಣ ಮಾಡಲಾಗ್ತಿದೆ. ತಂಗಿಯ ಕೊಳದ ತೀರ್ಥದ ಪಾವಿತ್ರ್ಯತೆಗೆ ಧಕ್ಕೆ ತಂದು, ನೀರನ್ನು ಕಲುಷಿತಗೊಳಿಸಲಾಗಿದೆ. ಹೀಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಅಂತ  ಸಾರ್ವಜನಿಕರು ಒತ್ತಾಯಿಸಿದ್ದಾರೆ. ಚಲುವನಾರಾಯಣ ಸ್ವಾಮಿ ಭಕ್ತರ ಧಾರ್ಮಿಕ ನಂಬಿಕೆಯೂ ಇದರಿಂದ ಧಕ್ಕೆಯಾಗಿದೆ. ಸೂಕ್ತ ತನಿಖೆ ನಡೆಯಬೇಕೆಂದ ಕೂಗು ಕೇಳಿ ಬಂದಿದೆ.

    (ವರದಿ - ಸುನೀಲ್ ಗೌಡ )
    Published by:Kavya V
    First published: