ಮೆಕ್ಕೆಜೋಳ ಬೆಳೆದ ರೈತನ ಕಣ್ಣಲ್ಲಿ ನೀರು ; ಗದ್ದೆಯಲ್ಲೆ ಮೊಳಕೆ ಒಡೆದ ತೆನೆ

ಅತಿಯಾದ ಮಳೆ ಸುರಿಯುತ್ತಿರುವ ಹಿನ್ನಲೆ ಬೆಳೆದ ಬೆಳೆ ಕಟಾವು ಮಾಡದ ಹಿನ್ನೆಲೆ ಮೆಕ್ಕೆ ಜೋಳ ಮಳೆ ನೀರಿನಲ್ಲಿ ನೆನೆದು ತೆನೆಗಳು ಈಗ ಮೊಳಕೆ ಒಡೆಯಲು ಆರಂಭವಾಗಿದೆ.

ಮೆಕ್ಕೆಜೋಳ

ಮೆಕ್ಕೆಜೋಳ

  • Share this:
ಚಿಕ್ಕೋಡಿ(ಅಕ್ಟೋಬರ್​. 22): ಬೆಳಗಾವಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರೈತರು ಕಂಗೆಟ್ಟು ಹೋಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ಜಿಲ್ಲೆಯ ರೈತರದ್ದಾಗಿದೆ. ಕಳೆದ ಒಂದು ತಿಂಗಳಿನಿಂದಲು ಜಿಲ್ಲೆಯಲ್ಲೆ ಧಾರಾಕಾರವಾಗಿ ಅಕಾಲಿಕ ಮಳೆ ಸುರಿಯಿತ್ತಿದೆ ಪರಿಣಾಮ ಗದ್ದೆಯಲ್ಲಿ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಚೆನ್ನಾಗಿ ಬಂದ ಫಸಲುಗಳು ಸಹ ಗದ್ದೆಯಲ್ಲೆ ಮತ್ತೆ ಮೊಳಕೆ ಒಡೆಯುವ ಸ್ಥಿತಿಗೆ ತಲುಪಿವೆ. ಮಳೆಗಾಲದ ಆರಂಭದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮೊದಲು ಸೋಯಾಬೀನ್ ಬಿತ್ತನೆ ಮಾಡಲಾಗಿತ್ತು. ಆಗಷ್ಟೇ ಮಳೆಗಾಲ ಆರಂಭವಾಗಿದ್ದರಿಂದ ರೈತರು ಭರದಿಂದ ನಾಟಿಯನ್ನ ಮಾಡಿದರು. ಆದರೆ, ಸಕಾಲಕ್ಕೆ ಮಳೆ ಮಾತ್ರ ಸುರಿಯಲಿಲ್ಲಾ. ಇದರಿಂದಾಗಿಯೆ ಗದ್ದೆಯಲ್ಲೆ ಬೀಜಗಳನ್ನು ಮೊಳಕೆ ಬಾರದೆ ಒಣಗಿ ಹೋದವು. ಇನ್ನು ಕೆಲವು ಪ್ರದೇಶಗಳಲ್ಲಿ ಮಳೆ ಬಂದರು ಸಹ ಕಳಪೆ ಬಿತ್ತನೆ ಬೀಜಗಳನ್ನ ಇಲಾಖೆ ವಿತರಣೆ ಮಾಡಿದ್ದರಿಂದ ಅಲ್ಲಿಯೂ ಸಹ ರೈತರು ಸಂಕಷ್ಟ ಅನುಭವಿಸಬೇಕಾಯಿತು. 

ಮತ್ತೆ ಸರಕಾರ ಹಾಗೂ ಕೃಷಿ ಇಲಾಖೆ ಸೋಯಾಬೀನ್ ಬಿಟ್ಟು ಮೆಕ್ಕೆ ಜೋಳ ಬೆಳೆಯುವಂತೆ ಸಲಹೆ ನೀಡಿದ ಬೆನ್ನಲೆ ಬಹುತೇಕ ರೈತರು ಮಕ್ಕೆ ಜೋಳವನ್ನ ಬಿತ್ತನೆ ಮಾಡಿದರು. ಒಳ್ಳೆ ಮಳೆ ಯಾಗಿದ್ದರಿಂದ ಚೆನ್ನಾಗಿ ಫಸಲು ಕೂಡ ಬಂದಿತ್ತು. ಇನ್ನೆನು ಬೆಳೆ ಕಟಾವು ಮಾಡಬೇಕು ಅನ್ನುವಷ್ಠರಲ್ಲಿ ಸಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದ ಅಕಾಲಿಕ ಮಳೆ ಸುರಿದ ಪರಿಣಾಮ ಸಾವಿರಾರು ಹೆಕ್ಟೇರ್ ಪ್ರದೇಶ ಕೃಷಿ ಭೂಮಿಗಳು ಕರೆಯಂತಾಗಿವೆ. ಅಲ್ಲದೆ ಬೆಳೆದ ಬೆಳೆಗಳು ಸಹ ಕೈಗೆ ಸಿಗದ ಪರಿಸ್ಥಿತಿ ಈಗ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಅತಿಯಾದ ಮಳೆ ಸುರಿಯುತ್ತಿರುವ ಹಿನ್ನಲೆ ಬೆಳೆದ ಬೆಳೆ ಕಟಾವು ಮಾಡದ ಹಿನ್ನೆಲೆ ಮೆಕ್ಕೆ ಜೋಳ ಮಳೆ ನೀರಿನಲ್ಲಿ ನೆನೆದು ತೆನೆಗಳು ಈಗ ಮೊಳಕೆ ಒಡೆಯಲು ಆರಂಭವಾಗಿದೆ. ಇನ್ನು ಕೆಲವು ರೈತರು ತನೆಗಳನ್ನ ಬಿಸಿಲಿಗೆ ಒಣಗಿಸಿ ರಾಶಿ ಮಾಡಬೇಕು ಅನ್ನುವಷ್ಟರಲ್ಲಿ ಅಕಾಲಿಕ ಮಳೆಯಿಂದಾಗಿ ತೆನೆಗಳು ನೆನೆದು ಅಲ್ಲಿಯು ಮೊಳಕೆ ಬಂದು ಸಂಪೂರ್ಣ ಬೆಳೆ ಹಾಣಿಯಾಗಿದೆ. ಬೆಳಗಾವಿ‌ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ  ಲಗಮ್ಮಣ್ಣಾ ಒಡಗೋಲೆ ಎಂಬ ರೈತ ಹತ್ತು ಎಕರೆ ಭೂಮಿಯಲ್ಲಿ ಗೋವಿನ ಜೋಳ ಕಟಾವು ಮಾಡಿ ಇನ್ನೇನು ಎರಡು ದಿನ ತೆನೆಗಳನ್ನು ಒಣಗಿಸಿ  ರಾಶಿ ಮಾಡಬೇಕು ಎಂದುಕೊಂಡಿದ್ದ  ರೈತ ಲಗಮ್ಮಣ್ಣಾ. ಆದರೆ, ಅನ್ನದಾತನ ಬಾಳಲ್ಲಿ ಎಡಬಿಡದೆ ಸುರಿದ ಕುಂಭ ದ್ರೋಣ ಮಳೆಯಿಂದ ರೈತ ಅಕ್ಷರಶಃ ಬೀದಿಗೆ ಬಂದತ್ತಾಗಿದೆ.

ಇನ್ನೇನು ಎರಡು ಮೂರು ದಿನ ಕಳೆದಿದ್ದರೆ ಬೆಳೆದ ಬೆಳೆ ರಾಶಿ‌ ಮಾಡಿ ಮನೆಯಲ್ಲಿ ಇಡಬಹುದಿತ್ತು. ಆದರೆ, ಈ ಕುಂಭದ್ರೋಣ ಮಳೆಯಿಂದ ಬೆಳೆದ ಗೋವಿನ ಜೋಳದಲ್ಲಿ ಮಳೆ ನೀರಿನಿಂದ ಮೊಳಕೆಗಳು ಬರುತ್ತಿದ್ದು ಇವು ಯಾವುದಕ್ಕೂ ಉಪಯೋಗ ಬಾರದ ಸ್ಥಿತಿಯಲ್ಲಿವೆ‌. ಸುಮಾರು ಐದರಿಂದ ಆರು ಲಕ್ಷ ರೂಪಾಯಿಗಳಷ್ಟು ರೈತನಿಗೆ ನಷ್ಟವಾಗಿದೆ.

ಇದನ್ನೂ ಓದಿ : ನಮಗೇನು ತಿನ್ನುವುದಕ್ಕೆ ಅನ್ನ ಸಿಗುತ್ತಿದೆ.. ಜಾನುವಾರುಗಳ ಗತಿಯೇನು - ಭೀಮೆ ಸಂತ್ರಸ್ತರ ಗೋಳು

ಸೂಮಾರು ಐದು ಎಕರೆ ಭೂಮಿಯಲ್ಲಿ ಬೆಳದ ನಿಂತ ಗೋವಿನ ಜೋಳದ ಪೈರಿನಲ್ಲಿಯೇ ಮೊಳಕೆ ಒಡೆದು ಸಸಿ ಬೆಳೆಯುತ್ತಿವೆ. ಹೀಗಾಗಿ ಅನ್ನದಾತ ಬೆಳೆದ ಗೋವಿನ ಜೋಳವು ಇತ್ತ ದನಕರಗಳಿಗೂ ತಿನ್ನಲೂ ಬಾರದೆ ಮಾರುಕಟ್ಟೆಯಲ್ಲಿ ಮಾರಲು ಬಾರದೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಇದರಿಂದ ಅನ್ನದಾತ  ಮತ್ತಷ್ಟು ಕುಗ್ಗುವ ಪರಿಸ್ಥಿತಿಯಾಗಿದೆ ಈ ಕುಂಭದ್ರೋಣ ಮಳೆಯು ರೈತರ ಬಾಳಲ್ಲಿ ಅವಾಂತರ ಸೃಷ್ಟಿಸಿದೆ.

ಅಲಖನೂರ ಗ್ರಾಮದ ರೈತ ಲಗಮ್ಮಣ್ಣಾ ಒಡಗೋಲೆ ಸಾಲಸೂಲ ಮಾಡಿ ಹತ್ತು ಎಕರೆ ಭೂಮಿಯಲ್ಲಿ ಗೋವಿನ ಜೋಳ ಬಿತ್ತನೆ, ಔಷಧ ಸಿಂಪಡಣೆ, ಗೋವಿನ‌ ಜೋಳ ಕಟಾವು ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ನೀರುಪಾಲಾಗಿವೆ. ಇದರಿಂದ ರೈತ ಕಂಗಾಲಾಗಿದ್ದು, ಸರ್ಕಾರ ನಮಗೆ ಏನಾದರೂ ಸಹಾಯ ಹಸ್ತ ಚಾಚಬೇಕೆಂದು ಆಗ್ರಹಿಸಿದ್ದಾನೆ.
Published by:G Hareeshkumar
First published: