• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Umesh Katti| ಬಾಗಲಕೋಟೆಗೆ ನಾಮಕಾವಸ್ತೆ ಉಸ್ತುವಾರಿ ವಹಿಸಿಕೊಂಡರಾ ಸಚಿವ ಉಮೇಶ್ ಕತ್ತಿ...?

Umesh Katti| ಬಾಗಲಕೋಟೆಗೆ ನಾಮಕಾವಸ್ತೆ ಉಸ್ತುವಾರಿ ವಹಿಸಿಕೊಂಡರಾ ಸಚಿವ ಉಮೇಶ್ ಕತ್ತಿ...?

ಉಮೇಶ್​ ಕತ್ತಿ.

ಉಮೇಶ್​ ಕತ್ತಿ.

ಬಾಗಲಕೋಟೆ ಜಿಲ್ಲೆಯವರೇ ಆಗಿರುವ ಗೋವಿಂದ ಕಾರಜೋಳ,  ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ವಾರದಲ್ಲಿ ಒಮ್ಮೆಯಾದರೂ ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ತಮ್ಮ ಸ್ವಂತ ಕ್ಷೇತ್ರ, ಮುಧೋಳ ಮತಕ್ಷೇತ್ರಕ್ಕೆ ಭೇಟ್ಟಿ ನೀಡಿ, ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದರು.

ಮುಂದೆ ಓದಿ ...
  • Share this:

ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಕ್ಕೆ ಬಂದ ಮೇಲೆ ಆಡಳಿತದಲ್ಲಿ ಏನಾದರೂ ಹೊಸತನ ತರಬೇಕು ಎನ್ನುವ ಪ್ರಯತ್ನ ಕಂಡುಬರು ತ್ತಿದೆ. ಆದ್ರೆ, ಬೊಮ್ಮಾಯಿ ಸಂಪುಟದ ಕೆಲ ಸಚಿವರು ಮಾತ್ರ ಉಸ್ತುವಾರಿ ಹೊಂದಿರುವ ಜಿಲ್ಲೆಗಳಲ್ಲಿ ನಾಮಕಾವಸ್ತೆ ಎನ್ನುವಂತೆ ಆಗಿದೆ.  ಹೌದು, ಸಚಿವ ಉಮೇಶ ಕತ್ತಿ ಬಾಗಲಕೋಟೆ ಜಿಲ್ಲೆಗೆ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿರು ವುದು  ನಾಮಕಾವಸ್ತೆ ಎಂಬಂತಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಮುಖ್ಯಮಂತ್ರಿ ‌ಬಸವರಾಜ್ ಬೊಮ್ಮಯಿ ಸಚಿವರುಗಳಿಗೆ ಬಯಸಿದ ಜಿಲ್ಲೆಗಳ  ನೀಡದ ಹಿನ್ನಲೆ ಉಸ್ತುವಾರಿಗಳು  ನಾಮಕೆವಾಸ್ತೆ ಎಂಬಂತೆ ಕಾರ್ಯನಿ ರ್ವಹಿಸುತ್ತಿದ್ದಾರೆ. ಬಾಗಲಕೋಟೆ ‌ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅವರ ಜಿಲ್ಲಾ ಪ್ರವಾಸ  ಕೊರೊನಾ, ಪ್ರವಾಹ ಹಾಗೂ ಇತರ ಸಭೆಗಳು ಮಾತ್ರ ಸೀಮಿತವಾಗಿದೆ.  ಜಿಲ್ಲೆಯ ಅಭಿವೃದ್ಧಿ ಪೂರಕವಾಗಿ ಏನಾದರೂ ಹೊಸತನದ  ಯೋಜನೆಗಳ ರೂಪಿಸಸುವ ಚಿಂತನೆಗಳಲ್ಲಿ ಎಳ್ಳಷ್ಟು ಆಸಕ್ತಿ ಕಂಡುಬರುತ್ತಿಲ್ಲ. 


ಬೆಲ್ಲದ ಬಾಗೇವಾಡಿ ಯಿಂದ ಜಿಲ್ಲಾಡಳಿತ ಭವನಕ್ಕೆ ಬರುವುದು. ಸಭೆ ನಡೆಸುವುದು.  ಐ ಬಿ ಯಲ್ಲಿ‌ ಊಟ ಮಾಡುವುದು ಮರಳಿ ಬೆಲ್ಲದ ಬಾಗೇವಾಡಿಗೆ ಹೋಗುವುದು, ಇದನ್ನು ಬಿಟ್ಟು ಅಗಸ್ಟ್ 15 ರಂದು ಧ್ವಜಾರೋಹಣ ಮಾಡಿ ಹೋದ ಸಚಿವರು ಮತ್ತೆ ಈಕಡೆಗೆ ಏನಾಗುತ್ತಿದೆ ಎಂದು ಇಣುಕಿ ಸಹ ನೋಡಿಲ್ಲ.


ಬಾಗಲಕೋಟೆ ಜಿಲ್ಲೆಯವರೇ ಆಗಿರುವ ಗೋವಿಂದ ಕಾರಜೋಳ,  ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ವಾರದಲ್ಲಿ ಒಮ್ಮೆಯಾದರೂ ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ತಮ್ಮ ಸ್ವಂತ ಕ್ಷೇತ್ರ, ಮುಧೋಳ ಮತಕ್ಷೇತ್ರಕ್ಕೆ ಭೇಟ್ಟಿ ನೀಡಿ, ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ಸಭೆ, ಇತರ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ತಮ್ಮ ಕ್ಷೇತ್ರಕ್ಕೆ ಆಗಾಗ ಬರುತ್ತಿರುವುದರಿಂದ ಜಿಲ್ಲೆಯ ಬಗ್ಗೆ ಗಮನ ಹರಿಸುತ್ತಿದ್ದರು. ಗೋವಿಂದ ಕಾರಜೋಳ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಡುವಂತೆ  ಮುಖ್ಯಮಂತ್ರಿ ಗಳ ಗಮನಕ್ಕೆ ತಂದಿದ್ದರೂ, ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಗೋವಿಂದ ಕಾರಜೋಳ‌ ಸಮರ್ಥ ನಿಭಾಯಿಸುತ್ತಾರೆ ಎಂದು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನವರು ಬೆಳಗಾವಿ ಉಸ್ತುವಾರಿ ನೀಡಿದ್ದರು. ಸದ್ಯದ ಸರ್ಕಾರದಲ್ಲಿ ಅದನ್ನೆ ಮುಂದುವರೆಸಿದ್ದಾರೆ.


ಇದನ್ನೂ ಓದಿ: Mysore Gang rape issue: ಆರೋಪಿಗಳ ವಿರುದ್ಧ ಕಠಿಣ ಕ್ರಮ: ಸಿಎಂ ಬೊಮ್ಮಾಯಿ ಸೂಚನೆ


ಇನ್ನು  ಸಚಿವ ಮುರಗೇಶ ನಿರಾಣಿ ಸಹ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ವಹಿಸಿಕೊ ಳ್ಳಲು ತೆರೆಯ ಮರೆಯಲ್ಲಿ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ ಸ್ಥಳೀಯ ರಾಜಕಾರಣ ದಿಂದಾಗಿ ಅವರಿಗೆ ಬೇರೆ ಜಿಲ್ಲೆ ವಹಿಸಲಾಗಿದೆ. ಮುರಗೇಶ ನಿರಾಣಿ ಅವರು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದರೆ, ಅವರ ಆಡಳಿತ ಮಂಡಳಿ ಸಕ್ಕರೆ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಬೀಳಗಿ ಮತಕ್ಷೇತ್ರದಲ್ಲಿ ರಾಜಕಾರಣ ಮಾಡಲು ಅನುಕೂಲವಾಗಲಿದೆ ಎಂಬ ಉದ್ದೇಶ ದಿಂದ ನಿರಾಣಿ ಅವರು ಸಹ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಮೇಲೆ ಕಣ್ಣು ಇಟ್ಟಿದ್ದರು. ಆದರೆ ದೂರದ ಕಲಬುರ್ಗಿ ಜಿಲ್ಲೆಯ ಉಸ್ತುವಾರಿ ಮಾಡಲಾಗಿದೆ.


ತವರು ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಿದ್ದಲ್ಲಿ, ತಮ್ಮ ಮತಕ್ಷೇತ್ರಕ್ಕೆ ಆಗಮಿಸಿದ ಸಮಯದಲ್ಲಿ ಜಿಲ್ಲೆಯ ಬಗ್ಗೆ ಗಮನ ಹರಿಸುತ್ತಾರೆ. ಆದರೆ ಬೇರೆ ಜಿಲ್ಲೆ ಯವರಿಗೆ ಉಸ್ತುವಾರಿ ನೀಡಿದ್ಸಲ್ಲಿ ನಾಮಕೆವಾಸ್ತೆ ಆಗುವುದು ಹೆಚ್ಚಾಗಿ ಕಂಡು ಬರುತ್ತದೆ. ಈ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಅವರು, ಬಾಗಲಕೋಟೆ ಜಿಲ್ಲೆಗೆ ತಿಂಗಳಿಗೆ ಒಂದು ಭಾರಿ ಬಂದು  ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಮಾಧ್ಯಮಗಳಿಗೆ ವಿವಾದತ್ಮಕ ಹೇಳಿಕೆ ಇಲ್ಲವೇ, ಮುಂದೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿ ಹೋಗುತ್ತಾರೆ. ಆದರೆ ಈ ಜಿಲ್ಲೆಯ ಜಲ್ವಂತ ಸಮಸ್ಯೆ, ರೈತರ, ನೇಕಾರರ ಹಾಗೂ ಕೃಷ್ಣ ಮೇಲ್ದಂಡೆ ಯೋಜನೆ ಸಮಸ್ಯೆ ಏನಾದರೂ ಮಾಡಬೇಕು ಎಂಬ ಹಂಬಲ ಇಲ್ಲದೆ,ಕೇವಲ ನಾಮಕೆವಾಸ್ತೆ ಎಂದು ಉಸ್ತುವಾರಿ ಸಚಿವರಾಗಿದ್ದು ಮಾತ್ರ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ.


(ವರದಿ: ಮಂಜುನಾಥ್ ತಳವಾರ್)

Published by:MAshok Kumar
First published: