ಮೀಸಲಾತಿ ಕೇಳುವವರಿಗೆ ನಾಚಿಗೆ ಆಗಬೇಕು, 10 ಕೋಟಿಯ ಹೆಲಿಕಾಪ್ಟರ್ ಖರೀದಿಸುವವರಿಗೆ ಮೀಸಲಾತಿ ಕೊಡಬೇಕಾ?: ಸಂಸದ ಶ್ರೀನಿವಾಸ್‌ಪ್ರಸಾದ್ ಪ್ರಶ್ನೆ

ಶ್ರೀನಿವಾಸ್‌ ಪ್ರಸಾದ್‌ ಮೀಸಲಾತಿ ವಿಚಾರವಾಗಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿರೋದು ಬಿಜೆಪಿಗೆ ಬಿಸಿತುಪ್ಪವಾಗಿದ್ದರೂ ಸಹ, ಮೀಸಲಾತಿಯನ್ನು ವಿರೋಧಿಸುತ್ತಿರುವ ಶ್ರೀನಿವಾಸ್‌ಪ್ರಸಾದ್ ನಡೆಯನ್ನು ಹಲವು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.

ಶ್ರೀನಿವಾಸ್ ಪ್ರಸಾದ್

ಶ್ರೀನಿವಾಸ್ ಪ್ರಸಾದ್

  • Share this:
ಮೈಸೂರು: ಮೀಸಲಾತಿ ಕೇಳಿದವರ ವಿರುದ್ದ ಸಿಡಿದೆದ್ದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್, ಮೀಸಲಾತಿ ಕೇಳಲು ನಿಮಗೆ ನಾಚಿಕೆಯಾಗೋಲ್ವಾ ಎಂದು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಕುರುಬರು, ಪಂಚಮಸಾಲಿ ಸಮಯದಾಯದ ಹೋರಾಟಗಾರರ ವಿರುದ್ಧ ಹರಿಹಾಯ್ದರು. 10 ಕೋಟಿ ಕೊಟ್ಟು ಹೆಲಿಕಾಪ್ಟರ್ ತಗೊಳೋರು ಮೀಸಲಾತಿ ಕೇಳ್ತೀರಾ?. ಈ ರಾಜ್ಯಕ್ಕೆ ಸಿಎಂ ಆಗಿರುವ ಕುರುಬ ಜನಾಂಗಕ್ಕೆ ಮೀಸಲಾತಿ ಕೊಡಬೇಕಾ. ಮೈಮೇಲೆ ಬಟ್ಟೆ ಇಲ್ಲದವರು ಕೇಳಲಿ, ಆನೆ ಮೇಯಿಸಿಕೊಂಡು ಕಾಡಲ್ಲಿ ಇರೋರು ಕೇಳಿದ್ರೆ ಅದನ್ನ ಒಪ್ಪೋಣ. ಅದು ಬಿಟ್ಟು ದೊಡ್ಡ ದೊಡ್ಡ ಉದ್ಯಮಿಗಳು, ಉಪಮುಖ್ಯಮಂತ್ರಿಗಳಾಗಿದ್ದವರು, ರಿಯಲ್ ಎಸ್ಟೇಟ್ ಮಾಡುವವರಿಗೆ ಮೀಸಲಾತಿ ಕೊಡಬೇಡಾ. ಆ ಎಂಟಿಬಿ ನಾಗರಾಜ 10 ಕೋಟಿ ಕೊಟ್ಟು ಹೆಲಿಕಾಪ್ಟರ್ ತಗೋಳೋಕೆ ಆಗುತ್ತೆ, ಇಂತವರೆಲ್ಲ ಮೀಸಲಾತಿ ಕೇಳ್ತಾರಾ ಅಂತ ಅಸಮಾಧಾನ ಹೊರಹಾಕಿದರು. 

ಅದ್ಯಾರೋ 2A ಗೆ ಸೇರಿಸಿ ಅಂತಾ ಬೇರೆ ಪ್ರತಿಭಟನೆ ಮಾಡ್ತಿದ್ದಾರೆ. ಕುಳಿತಿರುವ ಜಾಗದಲ್ಲಿ 2Aಗೆ ಸೇರಿಸಲು ಆಗುತ್ತಾ. ಇವೆಲ್ಲದರ ಬಗ್ಗೆ ಸರ್ಕಾರ ಸ್ಪಷ್ಟವಾದ ಹೇಳಿಕೆ ಕೊಡಬೇಕು, ಸಿಎಂ ಹಾಗೂ ಕಾನೂನು ಸಚಿವರು ಇದನ್ನು ಸ್ಪಷ್ಟಪಡಿಸಬೇಕು. ಒಂದೇ ಹೇಳಿಕೆಯಲ್ಲಿ ಎಲ್ಲವನ್ನು ಮುಗಿಸಬೇಕು‌. ನಮ್ಮ ಇತಿ ಮಿತಿ ಏನಿದೆ ಅಂತ ಹೇಳಿಕೆ ಕೊಟ್ಟ ಮುಗಿಸಬೇಕು.  ನಾನು ಈ ವಿಚಾರವಾಗಿ ಸೂಕ್ಮವಾಗಿ ಹೇಳಿಕೆ ಕೊಡ್ತಿದ್ದೀನಿ. ಯಾರನ್ನು 2A ಸೇರಿಸುತ್ತಿದ್ದೀರಾ ಹಾಗಾದರೆ 2A ನಲ್ಲಿ ಇರೋರು ಎಲ್ಲಿಗೆ ಹೋಗಬೇಕು. ಶೇ. 50 ಗಿಂತ ಜಾಸ್ತಿ ಮೀಸಲಾತಿ ಇರಬಾರದು ಅಂತ ಸುಪ್ರೀಂಕೋರ್ಟ್ ಹೇಳಿದೆ. ಇನ್ನು ಮೀಸಲಾತಿ ಕೇಳಿದರೆ ಉಳಿದವರಿಗೆ ಏನ್ ಮಾಡೋದು. ಇದನ್ನ ಮುಂದುವರೆಸಬಾರದು. ಎಲ್ಲದಕ್ಕೂ ಸ್ಪಷ್ಟನೆ ನೀಡಿ ಇಲ್ಲಿಗೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿ: ಯಾಸ್ಕಿ ಭೇಟಿಯಾಗಿ ವಿವರಣೆ ನೀಡಿದ ತನ್ವೀರ್ ಸೇಠ್; ಮೈತ್ರಿಗೆ ಸೂಚನೆ ನೀಡಿದ್ದೆ ಸಿದ್ದರಾಮಯ್ಯ ಎಂದ ಮಾಜಿ ಸಚಿವ

ಇನ್ನು ಮುಂದುವರೆದು ಯಾರ್ರೀ ಅದು ಈಶ್ವರಪ್ಪ, ವಿಶ್ವನಾಥ್. ಯಾವುದೋ ವೇದಿಕೆ ಮೇಲೆ ನಿಂತ್ಕೊಂಡು ಜನ ಸೇರಿಸಿ ಮೀಸಲಾತಿ ಕೇಳೋಕೆ ಆಗುತ್ತಾ. ಆ ವಿಶ್ವನಾಥ್ ದೇಶಕ್ಕೆಲ್ಲ ಮಾತನಾಡ್ತಾನೆ. ಅವನಿಗೆ ಗೊತ್ತಾಗಲ್ವಾ ಇದು. ಬೀದಿಯಲ್ಲಿ ನಿಂತು ಮೀಸಲಾತಿ ಮಾತನಾಡೋದಲ್ಲ ಅಂತ ಸ್ವಪಕ್ಷೀಯರ ವಿರುದ್ದವೇ ಸಂಸದ ಶ್ರೀನಿವಾಸ್ ಪ್ರಸಾದ್ ಗುಡುಗಿದರು. ಮೀಸಲಾತಿ ಬಗ್ಗೆ ನಾನು ಮಾತನಾಡುವಾಗ ಸರಿಯಾಗಿ ಉತ್ತರ ಕೊಡಬೇಕು ಸುದೀರ್ಘವಾಗಿ ರಾಜಕಾರಣ ಮಾಡಿರುವವನು ನಾನು. ಮೀಸಲಾತಿ ಪ್ರಶ್ನೆ ಕೇಂದ್ರದ ಮುಂದೆ ಇರುತ್ತೆ. ಎಸ್‌ಟಿಗೆ ಕೊಡಬೇಕೋ? ಬೇಡ್ವೋ? ಅನ್ನೋದನ್ನು ಕೇಂದ್ರ ತೀರ್ಮಾನ ಮಾಡುತ್ತೆ.‌ ರಾಜ್ಯ ಸರ್ಕಾರ ಶಿಫಾರಸ್ಸು ಮಾತ್ರ ಮಾಡಬೇಕು. ತಜ್ಞರ ಸಮಿತಿ ನೇಮಕ ಮಾಡಬೇಕು. ಇದನ್ನ ಮಾಡಿದವರು ಹಾವನೂರು ಒಬ್ಬರೇ. ನಾಯಕ ಸಮಾಜಕ್ಕೆ ಎಸ್.ಟಿ.ಸೇರಿಸಲು ಕಾನೂನು ರೀತಿಯಲ್ಲಿ ಹೋರಾಟ ಮಾಡಿದರು. ಆದರೆ ಇವರುಗಳು ಮಾಡುತ್ತಿರುವುದು ಸರಿಯಲ್ಲ ಅಂತ ಸ್ವಪಕ್ಷದ ನಾಯಕರ ವಿರುದ್ದವೇ ಆಕ್ರೋಶ ಹೊರ ಹಾಕಿದರು.

ಶ್ರೀನಿವಾಸ್‌ ಪ್ರಸಾದ್‌ ಮೀಸಲಾತಿ ವಿಚಾರವಾಗಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿರೋದು ಬಿಜೆಪಿಗೆ ಬಿಸಿತುಪ್ಪವಾಗಿದ್ದರೂ ಸಹ, ಮೀಸಲಾತಿಯನ್ನು ವಿರೋಧಿಸುತ್ತಿರುವ ಶ್ರೀನಿವಾಸ್‌ಪ್ರಸಾದ್ ನಡೆಯನ್ನು ಹಲವು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.
Published by:HR Ramesh
First published: