• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣ; ಶಂಕೆಯ ಮೇಲೆ ಫುಡ್ ಡೆಲಿವರಿ ಬಾಯ್ ಬಂಧನ

ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣ; ಶಂಕೆಯ ಮೇಲೆ ಫುಡ್ ಡೆಲಿವರಿ ಬಾಯ್ ಬಂಧನ

ಮಂಗಳೂರಿನಲ್ಲಿ ಗೋಡೆಯ ಮೇಲೆ ಬರೆಯಲಾಗಿದ್ದ ಪೋಸ್ಟ್.

ಮಂಗಳೂರಿನಲ್ಲಿ ಗೋಡೆಯ ಮೇಲೆ ಬರೆಯಲಾಗಿದ್ದ ಪೋಸ್ಟ್.

ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ ಯುವಕ ಈ ರೀತಿ ಬರೆದಿದ್ದಾರೂ ಯಾಕೆ. ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈತನಿಗೆ ಏನಾದರೂ ಲಿಂಕ್ ಇದೆಯಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಒಟ್ಟಿನಲ್ಲಿ ಈ ರೀತಿಯ ದೇಶದ್ರೋಹಿ ಕೃತ್ಯ ನಡೆಸುವವರು ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ಮಾಡಬೇಕು ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

ಮುಂದೆ ಓದಿ ...
  • Share this:

ಮಂಗಳೂರು; ಮಂಗಳೂರಿನಲ್ಲಿ ಲಷ್ಕರ್ ಎ- ತೊಯ್ಬಾ ಉಗ್ರ ಸಂಘಟನೆ ಪರ ಗೋಡೆ ಬರಹ ಪ್ರಕರಣ ಸಂಬಂಧ ಓರ್ವ ಶಂಕಿತನನ್ನು ಖಾಕಿ ಪಡೆ ವಶಕ್ಕೆ ಪಡೆದಿದೆ. ಫುಡ್ ಡೆಲಿವರಿ ಮಾಡಿಕೊಂಡಿದ್ದ ಬಂಧಿತ ಯುವಕನ ಉಗ್ರ ಪರವಾದ ಆಸಕ್ತಿಯ ಬಗ್ಗೆ ಪೊಲೀಸ್ ತನಿಖೆ ಶುರುವಾಗಿದೆ.


ವಾರಗಳ ಹಿಂದೆ ಮಂಗಳೂರಿನಲ್ಲಿ ಉಗ್ರರ ಪರವಾದ ಗೋಡೆ ಬರಹ ಬರೆದ ಶಂಕಿತ ಆರೋಪಿಯನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ನಿವಾಸಿ ಮಹಮ್ಮದ್ ನಝೀರ್ ಎಂಬ ಮಾಹಿತಿ ಲಭ್ಯವಾಗಿದೆ. ಈತ ಮಂಗಳೂರಿನಲ್ಲಿ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.


ನವೆಂಬರ್ 27ರ ಮುಂಜಾನೆ ಈ ಕೃತ್ಯ ಬೆಳಕಿಗೆ ಬಂದಿತ್ತು. ತಡರಾತ್ರಿ ಕೃತ್ಯ ನಡೆಸಿರುವ ಸಂಶಯ ಪೊಲೀಸರಿಗೆ ಮೂಡಿತ್ತು. ಹೀಗಾಗಿ ಕದ್ರಿ ಭಾಗದ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿನ ಟವರ್ ಲೊಕೇಶನ್ ಆಧಾರದಲ್ಲಿ ಸಂಶಯದ ಮೇಲೆ ನಝೀರ್ ವಿಚಾರಣೆ ನಡೆಸಿದಾಗ ಈತನೆ ಕೃತ್ಯ ನಡೆಸಿರುವ ಮಾಹಿತಿ ಗೊತ್ತಾಗಿದೆ.


ಇದನ್ನು ಓದಿ: 2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಇನ್ನೂ ಸಿಗದ ಪರಿಹಾರ; ದನದ ಕೊಟ್ಟಿಗೆಯಲ್ಲಿ ಸಂತ್ರಸ್ತರ ವಾಸ


ಲಷ್ಕರ್ ಎ-ತೊಯ್ಬಾ ಜಿಂದಾಬಾದ್ ಎಂದು ಹ್ಯಾಷ್ ಟ್ಯಾಗ್ ಹಾಕಿ ಎಚ್ಚರಿಕೆಯ ಸಂದೇಶ ಬರೆದ ಘಟನೆಯ, ಎರಡು ದಿನದ ಬಳಿಕ ಇದೇ ರೀತಿಯ ಬರಹ ಕೋರ್ಟ್ ರಸ್ತೆಯ ಹಳೆ ಪೊಲೀಸ್ ಔಟ್‌ಪೋಸ್ಟ್ ನ ಗೋಡೆ ಮೇಲೂ ಕಂಡು ಬಂದಿತ್ತು. ಹೀಗಾಗಿ ಆ ಕೃತ್ಯವನ್ನು ಸಹ ಈತನೇ ಮಾಡಿದ್ದಾನಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಂತಾರಾಷ್ಟ್ರೀಯ ಮಟ್ಟದ ಉಗ್ರವಾದ ಮಾಡುವವರ ಮಾದರಿ ಇದೇ ಆಗಿದೆ. ಉಗ್ರರು ತಮ್ಮ ಕೃತ್ಯ ಮಾಡುವ ಮೊದಲು ಈ ರೀತಿ ಬರೆಯುತ್ತಾರೆ. ಇದೇ ರೀತಿಯ ಸಣ್ಣ ಪ್ರಯತ್ನ ಮಂಗಳೂರಿನಲ್ಲಿ ನಡೆದಿದೆ ಎಂದು ಹೇಳಿದ್ದಾರೆ.


ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ ಯುವಕ ಈ ರೀತಿ ಬರೆದಿದ್ದಾರೂ ಯಾಕೆ. ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈತನಿಗೆ ಏನಾದರೂ ಲಿಂಕ್ ಇದೆಯಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಒಟ್ಟಿನಲ್ಲಿ ಈ ರೀತಿಯ ದೇಶದ್ರೋಹಿ ಕೃತ್ಯ ನಡೆಸುವವರು ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ಮಾಡಬೇಕು ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.

Published by:HR Ramesh
First published: