Chikkodi: ಆಯತಪ್ಪಿ ಬಿದ್ದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ, ಆಸ್ಪತ್ರೆಗೆ ದಾಖಲು

ಘಟನೆ ನಡೆಯುತ್ತಿದ್ದಂತೆ ಅಲ್ಲೇ ಇದ್ದ ವೈದ್ಯರು ಶ್ರೀಗಳಿಗೆ ಪ್ರಾಥಮಿಕ ಚಿಕಿತ್ಸೆಯನ್ನ ನೀಡಿ ಬಳಿಕೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಮಠದ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.

ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ

ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ

  • Share this:
ಚಿಕ್ಕೋಡಿ (ಜ.11): ವಿಜಯಪುರ ಖ್ಯಾತ ಜ್ಞಾನ ಯೋಗಾಶ್ರಮದ ಶ್ರೀಗಳಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ(Siddeshwara Seer) ಅವರು ಬೆಳಗಾವಿ(Belagavi) ಜಿಲ್ಲೆಯ ಚಿಕ್ಕೋಡಿ(Chikkodi) ತಾಲೂಕಿನ  ಬಸವನಾಳಗಡ್ಡೆಯ ಮಗದುಮ್ ಅವರ ತೋಟದ ಮನೆಯ ಸ್ನಾನ ಗೃಹದಲ್ಲಿ(Bath room) ಸೋಮವಾರ ಸಂಜೆ ಆಯತಪ್ಪಿ ಬಿದ್ದು ಗಾಯಗೊಂಡಿರುವ(Injured) ಘಟನೆ ನಡೆದಿದೆ.

ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ನಿನ್ನ ಯಿಂದ ‘ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ’ ಯಿಂದ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಬೆಳಿಗ್ಗೆ ಪಾಲ್ಗೊಂಡಿದ್ದರು. ಮಧ್ಯಾಹ್ನ ಕಾಗವಾಡ ತಾಲ್ಲೂಕಿನ ಶೇಡಬಾಳ ಗ್ರಾಮದ ವಿದ್ಯಾನಂದ ಮುನಿರಾಜ ಕನ್ನಡ ‍ಪ್ರಾಥಮಿಕ ಶಾಲೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ವಿದ್ಯಾನಂದ ಮುನಿರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ, ಕೇರೂರದಲ್ಲಿ ತಿಂಗಳವರೆಗೆ ಹಮ್ಮಿಕೊಂಡಿದ್ದ ಪ್ರವಚನದ ಮುಖ್ಯ ವೇದಿಕೆಯನ್ನು ಸಹ ಪರಿಶೀಲಿಸಿದ್ದರು. ಬಳಿಕ ಸಂಜೆ ಹೊತ್ತಿಗೆ ತಮಗೆ ವಾಸ್ತವ್ಯ ಕಲ್ಪಿಸಿದ್ದ ತೋಟದ ಮನೆಗೆ ಮರಳಿದ್ದರು.

ಇದನ್ನೂ ಓದಿ: Bengaluru: ಬೆಂಗಳೂರಲ್ಲಿ ಪ್ರೆಷರ್ ಕುಕ್ಕರ್‌ನಲ್ಲಿ ಡ್ರಗ್ ತಯಾರಿಸುತ್ತಿದ್ದ ನೈಜೀರಿಯಾ ಪ್ರಜೆ ಬಂಧನ

ಸಂಜೆ ವಾಪಸ್ ಆದಂತಹ ವೇಳೆ ಸಂಜೆ ಸುಮಾರು 6 ಗಂಟೆ ಹೊತ್ತಿಗೆ ಶ್ರೀಗಳು  ಪ್ರೇಶಪ್ ಆಗಲು ಬಾತರೂಮ್ ಗೆ ತೆರಳಿದ್ದ ಸಮಯದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಇನ್ನು ಘಟನೆ ನಡೆಯುತ್ತಿದ್ದಂತೆ ಅಲ್ಲೆ ಇದ್ದ ವೈದ್ಯರು ಶ್ರೀಗಳಿಗೆ ಪ್ರಾಥಮಿಕ ಚಿಕಿತ್ಸೆಯನ್ನ ನೀಡಿ ಬಳಿಕೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಮಠದ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.
ಶ್ರೀಗಳಿಗೆ  ಬಲ ಭುಜ ಹಾಗೂ ತೊಡೆಯ ಮೇಲ್ಭಾಗದ ಮೂಳೆ ಮುರಿದೆದೆ ಎಂದು ಹೇಳಲಾಗುತ್ತಿತ್ತು ಶ್ರೀ ಗಳಿಗೆ ಪ್ಲಾಸ್ಟರ್ ಅಳವಡಿಸಿಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸು ಬಂದಿದೆ. ಇನ್ನು ಶ್ರೀಗಳ ಆರೋಗ್ಯಸ ಕುರಿತು ಹೆಲ್ತ್ ಬುಲೆಟಿನ್ ಕೂಡ ಇಂದು ಸಂಜೆ ಬರಲಿದೆ.

ಕಾರ್ಯಕ್ರಮ ರದ್ದು‌
ಇಂದಿನಿಂದ ಒಂದು ತಿಂಗಳವರೆಗೆ ಕೇರೂರ ಗ್ರಾಮದಲ್ಲಿ ಸಿದ್ದೇಶ್ವರ ಶ್ರೀಗಳ ಪ್ರವಚನ ಕಾರ್ಯಕ್ರಮ ನಡೆಯಬೇಕಾಗಿತ್ತು ನಿನ್ನೆಯಷ್ಟೆ ಬೆಳಿಗ್ಗೆ ಸ್ವತಃ ಶ್ರೀಗಳೆ ಕಾರ್ಯಕ್ರಮ ಉದ್ಘಾಟಸಿ ಒಂದು ದಿನ ಕಾರ್ಯಕ್ರಮವನ್ನೆ ನಡೆಸಿದ್ದರು ಆದರೆ ಶ್ರೀಗಳಿಗೆ ಗಾಯವಾದ ಹಿನ್ನಲೆ ಶ್ರೀಗಳ ಪ್ರವಚನ ಸಂಪೂರ್ಣ ಕಾರ್ಯಕ್ರಮವನ್ನ  ರದ್ದು ಮಾಡಲಾಗಿದೆ.

ಭಕ್ತರಲ್ಲಿ ಆತಂಕ
ದೇಶ ವಿದೇಶಗಳಲ್ಲಿ ತಮ್ಮದ ಆದ ಭಕ್ತ ಸಮೂಹ ಹೊಂದಿರುವ ಸಿದ್ದೇಶ್ವರ ಸ್ವಾಮೀಜಿ ನಡೆದಾಡುವ ದೇವರು ಎಂದೆ ಖ್ಯಾತಿ ಹೊಂದಿದ್ದಾರೆ. ಯಾವತ್ತು ಆಡಂಬರದ ಭಕ್ತಿಗೆ ವಿರೋಧ ಮಾಡಯತ್ತಲೆ ಸರಳ ಜೀವನ ನಡೆಸಿಕೊಂಡು ಬಂದಿರುವ ಸಿದ್ದೇಶ್ವರ ಶ್ರೀಗಳಿಗೆ ಕೋಟಿ ಕೋಟಿ ಭಕ್ತರ ಸಮೂಹ ಇದೆ. ಶ್ರೀಗಳು ಗಯಾ ಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಶ್ರೀಗಳು ಶೀಘ್ರ ಗುಣಮುಖ ರಾಗಿ ಬರಲಿ ಎಂದು ಭಕ್ತರು ಪ್ರಾರ್ಥನೆ ಮಾಡಿದ್ದಾರೆ.

ಇದನ್ನೂ ಓದಿ: Koragajjaನಿಗೆ ಅವಮಾನ ಪ್ರಕರಣ, ಇಬ್ಬರು ಆರೋಪಿಗಳ ಬಂಧನ- ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಒಟ್ಟಿನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶ್ರೀಗಳು ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶ್ರೀಗಳು ಆರಾಮವಾಗಿ ಇದ್ದಾರೆ. ಕೆಲ ದಿನಗಳ ಶ್ರೀಗಳಿಗೆ ಬೆಡ್ ರೆಸ್ಟ್ ಅವಶ್ಯಕತೆ ಇದೆ.  ಎಂದು ಹೇಳಲಾಗಿದೆ ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲಾ ಎಂದಿದ್ಧಾರೆ ವೈದ್ಯರು. ಶ್ರೀಗಳು ಬೇಗನೆ ಗುಣಮುಖ ರಾಗಿ ಬರಲಿ ಎಂಬುದು ನಮ್ಮ ಆಶಯ.
Published by:Latha CG
First published: