Govind Karjol: ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ನಾಲ್ಕು ದಿನ ಕಾಯಿರಿ: ಡಿಸಿಎಂ ಗೋವಿಂದ ಕಾರಜೋಳ

ಶಿವಾಜಿಯ ಮುತ್ತಾತ ಮೂಲ ಕನ್ನಡವರೇ ಆಗಿದ್ದಾರೆ. ಕರ್ನಾಟಕದಿಂದ ವಲಸೆ ಹೋಗಿದ್ದರು. ಅವರ ಬಳಿಕ ಅವರ ಮೂರನೇ ತಲೆಮಾರಿನವರೇ ಛತ್ರಪತಿ ಶಿವಾಜಿಯಾಗಿದ್ದಾರೆ. ನಾವೆಲ್ಲರೂ ಸಹೋದರರಂತೆ ಬಾಳಬೇಕಿದೆ ಎಂದರು.

ಡಿಸಿಎಂ ಗೋವಿಂದ ಕಾರಜೋಳ

ಡಿಸಿಎಂ ಗೋವಿಂದ ಕಾರಜೋಳ

  • Share this:
ವಿಜಯಪುರ(ನವೆಂಬರ್​. 23): ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ನಾಲ್ಕು ದಿ ಕಾಯಿರಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳದಲ್ಲಿ ಕೆರೆಗೆ ಬಾಗೀನ ಅರ್ಪಣೆ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ಕಾರ್ಯಕ್ರಮಕ್ಕೆ ಆಗಮಿಸಿ ಅವರು ಮಾತನಾಡಿದರು. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ತಿಳಿಯಲು ಇನ್ನೂ ನಾಲ್ಕು ದಿನ ಕಾಯಿರಿ.  ಎಲ್ಲವೂ ಸರಿಯಾಗಿದೆ ಎಂದು ಹೇಳುವ ಮೂಲಕ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ವಿರೋಧ ವ್ಯಕ್ತಪವಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಿಗಮ ಸ್ಥಾಪನೆ ಹಿಂಪಡೆಯುವ ವಿಚಾರ ಸರಕಾರದ ಮುಂದಿಲ್ಲ. ವಿರೋಧ ಮಾಡುವುದು ಸರಿಯಲ್ಲ. ಕರ್ನಾಟಕದ ಇತಿಹಾಸ ತಿಳಿದುಕೊಂಡು ವಿರೋಧ ಮಾಡಬೇಕು ಎಂದು ತಿಳಿಸಿದರು.

ಮರಾಠರು ಕರ್ನಾಟಕದವರಾಗಿದ್ದು, ಕನ್ನಡದ ಭಾಗವಾಗಿದ್ದಾರೆ. ಮರಾಠರು ನಮ್ಮ ಅಣ್ಣತಮ್ಮಂದಿರೇ ಆಗಿದ್ದಾರೆ. ವಿರೋಧಿಸಿ ಬಂದ್ ಮಾಡಬಾರದು ಎಂದು ವಿನಂತಿ ಮಾಡಿದ ಅವರು, ದಯವಿಟ್ಟು ಬಂದ್ ಕರೆ ಹಿಂಪಡೆಯಬೇಕು ಎಂದು ಬಂದ್ ಕರೆ ನೀಡಿರುವ ಸಂಘಟನೆಗಳಿಗೆ ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

ಶಿವಾಜಿಯ ಮುತ್ತಾತ ಬೆಳ್ಳಿಯಪ್ಪ ಮೂಲ ಕನ್ನಡವರೇ ಆಗಿದ್ದಾರೆ. ಕರ್ನಾಟಕದಿಂದ ವಲಸೆ ಹೋಗಿದ್ದರು. ಅವರ ಬಳಿಕ ಅವರ ಮೂರನೇ ತಲೆಮಾರಿನವರೇ ಛತ್ರಪತಿ ಶಿವಾಜಿಯಾಗಿದ್ದಾರೆ. ನಾವೆಲ್ಲರೂ ಸಹೋದರರಂತೆ ಬಾಳಬೇಕಿದೆ ಎಂದರು.

ಇದನ್ನೂ ಓದಿ : ಪ್ರವಾಹ ಇಳಿಮುಖವಾಗಿ ತಿಂಗಳಾಯ್ತು ; ಸಂತ್ರಸ್ತರಿಗೆ ಪರಿಹಾರ ಮಾತ್ರ ಗಗನಕುಸುಮ

ಮಾಜಿ ಸಚಿವ ರೋಷನ್ ಬೇಗ್ ಬಂಧನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಐಎಂಎ ಹಗರಣದ ವಿಚಾರ ಕಾನೂನಿನಂತೆ ನಡೆಯುತ್ತಿದೆ. ಆ ವಿಚಾರಕ್ಕೆ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.

ಕಾರಜೋಳ ಬಳಿ ಇರುವ ಬಸವೇಶ್ವರ ಸಕ್ಕರೆ ಕಾರ್ಖಾನೆಯಿಂದ ಹೊರಸೂಸುವ ಧೂಳು ರೈತರ ಬೆಳೆಗಳನ್ನು ಹಾಳು ಮಾಡುತ್ತಿದೆ. ಈ ಕುರಿತು ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಗೋವಿಂದ ಕಾರಜೋಳ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಕುರಿತು ದೂರು ನೀಡಲಾಗಿದೆ. ಅಲ್ಲದೇ, ಕೆಲವರು ರೈತರಿಗೆ ಈಗಾಗಲೇ ಪರಿಹಾರ ಕೊಡಿಸಿದ್ದೇನೆ. ನನ್ನ ಹೊಲಕ್ಕೂ ಕಾರ್ಖಾನೆಯ ಮಾಲಿನ್ಯ ನೀರು ಬಂದು ಹೊಲ ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲು ಮಾಡಿ ಕೈಗಾರಿಕೆಗೆ ಅಡ್ಡಿಪಡಿಸುವ ಬದಲು ಆ ಹೊಲವನ್ನು ಖರೀದಿ ಮಾಡುವಂತೆ ಕಾರ್ಖಾನೆಯವರಿಗೆ ಕೇಳಿದ್ದೇನೆ ಎಂದು ಅವರು ತಿಳಿಸಿದರು.
Published by:G Hareeshkumar
First published: