• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Corona Vaccine| ಲಸಿಕೆಗಾಗಿ ಹುಬ್ಬಳ್ಳಿಯಲ್ಲಿ ತಪ್ಪದ ಗೋಳಾಟ; ಕಾಂಗ್ರೆಸ್ ನಾಯಕರಿಂದ ರೂಲ್ಸ್ ಬ್ರೇಕ್

Corona Vaccine| ಲಸಿಕೆಗಾಗಿ ಹುಬ್ಬಳ್ಳಿಯಲ್ಲಿ ತಪ್ಪದ ಗೋಳಾಟ; ಕಾಂಗ್ರೆಸ್ ನಾಯಕರಿಂದ ರೂಲ್ಸ್ ಬ್ರೇಕ್

ಲಸಿಕೆಗಾಗಿ ಸಾಲುಗಟ್ಟಿರುವ ಜನ.

ಲಸಿಕೆಗಾಗಿ ಸಾಲುಗಟ್ಟಿರುವ ಜನ.

ಹುಬ್ಬಳ್ಳಿಯಲ್ಲಿ ಕೋವಿಡ್ ವ್ಯಾಕ್ಸಿನ್ ಗಾಗಿ ನೂಕುನುಗ್ಗಲು ಏರ್ಪಟ್ಟಿದೆ. ಬೆಳಿಗ್ಗೆಯಿಂದಲೇ ವ್ಯಾಕ್ಸಿನ್ ಗಾಗಿ ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇವತ್ತು ಭಾನುವಾರ ಆಗಿರೋದ್ರಿಂದ ಜನದಟ್ಟಣೆ ಹೆಚ್ಚಳವಾಗಿದೆ.

  • Share this:

ಹುಬ್ಬಳ್ಳಿ; ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಗಾಗಿ ಜನರ ಪರದಾಟ ಮುಂದುವರೆ ದಿದೆ. ಭಾನುವಾರವಾಗಿದ್ದರಿಂದ ಹುಬ್ಬಳ್ಳಿಯ ಕಿಮ್ಸ್ ಗೆ ಜನಸಾಗರ ಹರಿದು ಬಂದಿತ್ತು. ಸಾಮಾಜಿಕ ಅಂತರ ಮರೆತು ಜನ ವ್ಯಾಕ್ಸಿನ್ ಗಾಗಿ ಮುಗಿಬಿದಿದ್ದರು. ಮತ್ತೊಂದೆಡೆ ಜನರಿಗೆ ಬುದ್ಧಿವಾದ ಹೇಳಬೇಕಾದ ಕಾಂಗ್ರೆಸ್ ನಾಯಕರೇ ಕೊರೋನಾ ರೂಲ್ಸ್ ಬ್ರೇಕ್ ಮಾಡಿ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಕೋವಿಡ್ ವ್ಯಾಕ್ಸಿನ್ ಗಾಗಿ ನೂಕುನುಗ್ಗಲು ಏರ್ಪಟ್ಟಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ನೂಕುನುಗ್ಗಲು ನಡೆದಿದೆ. ಬೆಳಿಗ್ಗೆಯಿಂದಲೇ ವ್ಯಾಕ್ಸಿನ್ ಗಾಗಿ ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇವತ್ತು ಭಾನುವಾರ ಆಗಿರೋದ್ರಿಂದ ಜನದಟ್ಟಣೆ ಹೆಚ್ಚಳವಾಗಿದೆ. ಸಾವಿರಾರು ಜನ ಸಾಲುಗಟ್ಟಿ ನಿಂತಿದ್ದಾರೆ. ಮೊದಲ ವ್ಯಾಕ್ಸಿನ್ ಮತ್ತು ಎರಡನೇ ವ್ಯಾಕ್ಸಿನ್ ಹಾಕಿಸಿಕೊಳ್ಳುವವರಿಗೆ ಪ್ರತ್ಯೇಕ ಲೈನ್ ಮಾಡಲಾಗಿತ್ತು.


ಆದರೆ ಜನ ಮಾತ್ರ ಸಾಮಾಜಿಕ ಅಂತರ ಕಾಪಾಡದೆ ನಿಂತಿದ್ದಾರೆ. ವ್ಯಾಕ್ಸಿನ್ ಸೀಮಿತ ಸ್ಟಾಕ್ ಇರೋದ್ರಿಂದ ನಿತ್ಯ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೀಮಿತ ಕೇಂದ್ರಗಳಲ್ಲಿ ಮಾತ್ರ ಲಸಿಕೆ ಸಿಗುತ್ತಿದೆ. ಇದರಿಂದಾಗಿ ರಶ್ ಹೆಚ್ಚಾಗಿದೆ. ಎಲ್ಲ ಕಡೆ ಲಸಿಕೆ ಕೊಡುವ ವ್ಯವಸ್ಥೆ ಮಾಡಲಿ. ಅನಗತ್ಯ ರಶ್ ತಪ್ಪಿಸುವಂತೆ ಜನರು ಆಗ್ರಹಿಸಿದ್ದಾರೆ.


ಮಾಲ್ ತೆರೆಯಲು ಭರದ ಸಿದ್ಧತೆ;


ನಾಳೆಯಿಂದ ಮಾಲ್ ಗಳು ಒಪೆನ್ ಮಾಡಲು ಅವಕಾಶ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಹುಬ್ಬಳ್ಳಿಯ 3 ಮಾಲ್ ಗಳಲ್ಲಿ ಮಾಲ್ ಗಳ ಓಪೆನ್ ಗೆ ಸಿದ್ಧತೆ ಕೈಗೊಳ್ಳಲಾಗಿದೆ. ನಾಳೆಯಿಂದ ಬಹುತೇಕ ಮಾಲ್ ಗಳು ಆರಂಭವಾಗಲಿವೆ. ಕಳೆದ ಎರಡು ತಿಂಗಳಿನಿಂದ ಬಂದ್ ಆಗಿದ್ದ ಪ್ರಮುಖ ಮಾಲ್ ಗಳು, ಇದೀಗ ರಾಜ್ಯಾದ್ಯಂತ ಕೋವಿಡ್ ಹರಡುವಿಕೆಯಲ್ಲಿ ಇಳಿಮುಖ ಹಿನ್ನೆಲೆ, ಹುಬ್ಬಳ್ಳಿಯಲ್ಲಿಯೂ ನಾಳೆಯಿಂದ  ಮಾಲ್ ಗಳ ಚಟುವಟಿಕೆಗಳು ಬಿರುಸುಗೊಳ್ಳಲಿವೆ.


ಕಾಂಗ್ರೆಸ್ ನಾಯಕರಿಂದ ಕೊರೋನಾ ರೂಲ್ಸ್ ಬ್ರೇಕ್;


ಕಾಂಗ್ರೆಸ್ ಮುಖಂಡರಿಂದ ಕೊರೋನಾ ರೂಲ್ಸ್ ಬ್ರೇಕ್ ಆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ವಾರಾಂತ್ಯದ ಲಾಕ್ ಡೌನ್ ಇದ್ದರೂ ಸಭೆ ನಡೆಲಾಗಿದೆ. ಕಾನೂನಿಗೆ ಡೋಂಟ್ ಕೇರ್ ಅನ್ನೋ ರೀತಿಯಲ್ಲಿ ನಾಯಕರು ವರ್ತಿಸಿದ್ದಾರೆ. ಮಾಜಿ ಸಚಿವ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯಿತು. ಬೆಲೆ ಏರಿಕೆ ವಿರುದ್ಧ ಕೈಗೊಳ್ಳಬೇಕಿರುವ ಸೈಕಲ್ ಜಾಥಾ ಹೋರಾಟದ ಕುರಿತು ಸಭೆ ಆಯೋಜಿಸಲಾಗಿತ್ತು.


ಇದನ್ನೂ ಓದಿ: ಯುಪಿ ಚುನಾವಣೆ 2022| 300ಕ್ಕೂ ಅಧಿಕ ಸ್ಥಾನ ಗಳಿಸುವ ಓವೈಸಿ ಸವಾಲನ್ನು ಸ್ವೀಕರಿಸಿದ್ದೇನೆ; ಯೋಗಿ ಆದಿತ್ಯನಾಥ್


ಕೊರೋನಾ ತಡೆಗಟ್ಟಲು ರಾಜ್ಯ ಸರ್ಕಾರದಿಂದ ವಾರಾಂತ್ಯದ ಲಾಕ್ ಡೌನ್ ಜಾರಿಗೊಳಿಸಿರುವಾಗ, ಜಾಗೃತಿ ಮೂಡಿಸಬೇಕಿದ್ದ ಜನಪ್ರತಿನಿಧಿಗಳೆಂದಲೇ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಸಾಮಾಜಿಕ ಅಂತರ ಮರೆತು ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಲವರು ಮಾಸ್ಕ್ ಅನ್ನೂ ಧರಿಸದೆ ಸಭೆಯಲ್ಲಿ ಭಾಗಿಯಾಗಿದ್ದರು.


ಇದನ್ನೂ ಓದಿ: Online Education| ಕೊಪ್ಪಳದ ಬಡ ಮಕ್ಕಳ ಪಾಲಿಗೆ ಗಗನ ಕುಸುವಮವಾದ ಆನ್​ಲೈನ್ ಶಿಕ್ಷಣ


ಶಾಸಕಿ ಕುಸುಮಾ ಶಿವಳ್ಳಿ, ಮಾಜಿ ಸಂಸದ ಐ.ಜಿ.ಸನದಿ' ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಸಂತೋಷ್ ಲಾಡ್ ಮತ್ತಿತರರು ಭಾಗಿಯಾಗಿದ್ದರು. ವಾರಾಂತ್ಯದ ಲಾಕ್​ಡೌನ್ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಮಾತ್ರ ಅವಕಾಶ ಕೊಡಲಾಗಿದೆ. ಆದರೆ ವ್ಯವಹಾರದ ಸಮಯದ ಹೊರತಾಗಿಯೂ ಸಭೆ ನಡೆಸಿ, ಸಾಮಾಜಿಕ ಅಂತರ ಮರೆತ ಕಾಂಗ್ರೆಸ್ ಮುಖಂಡರು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

First published: