Viral Video - ನಾಯಿ ಬೊಗಳಿದಕ್ಕೆ ಗೇಟ್ ತೆರೆದು ಬಂದ ಗಜರಾಜ; ಕಾಲ್ಕಿತ್ತ ನಾಯಿಗಳು

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಉದ್ದೇವಾರ ಗ್ರಾಮದ ಸಮೀಪ ಅಂಬಿಕಾ ಎಸ್ಟೇಟ್ನಲ್ಲಿ ಜೂನ್ 24ರಂದು ಬೆಳಗಿನ ಜಾವ ಆನೆ ಬಂದು ಹೋಗಿದ್ದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

Youtube Video
  • Share this:
ಹಾಸನ: ನಾಯಿ ಬೊಗಳುವುದನ್ನು ಕೇಳಿ ಆನೆಯೊಂದು ರಾತ್ರಿ ವೇಳೆ ಮನೆಯ ಗೇಟ್ ತೆಗೆದು ಒಳಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಕಲೇಶಪುರ ತಾಲೂಕಿನ ಉದ್ದೇವಾರ ಗ್ರಾಮದ ಸಮೀಪ ಅಂಬಿಕಾ ಎಸ್ಟೇಟ್ ಬಳಿ ಆನೆ ಬಂದಿದೆ. ಈ ವೇಳೆ ಅಲ್ಲೇ ಇದ್ದ ಮನೆಯೊಂದರ ಗೇಟ್ ಒಳಗಿದ್ದ ನಾಯಿಗಳು ಆನೆಯನ್ನು ಕಂಡು ಜೋರಾಗಿ ಬೊಗಳಿವೆ. ಈ ಸದ್ದು ಕೇಳೆ ಆನೆ ಗೇಟ್ ತೆರೆದು ಮನೆಯ ಕಾಂಪೌಂಡ್ ಒಳಗೆ ಬಂದಿದೆ. ಆನೆ ಕಾಂಪೌಂಡ್ ಒಳಗೆ ಬರುತ್ತಿದ್ದಂತೆ ನಾಯಿಗಳು ಅಲ್ಲಿಂದ ಜಾಗ ಖಾಲಿ ಮಾಡಿದವು. ನಂತರ ಆನೆ ತನ್ನ ಪಾಡಿಗೆ ತಾನು ವಾಪಸ್ ತೆರಳಿದೆ.

ಇದನ್ನೂ ಓದಿ: ‘ದಯವಿಟ್ಟು ಮನೆ ಬಳಿ ಬರಬೇಡಿ, ಫೋನಲ್ಲೇ ಸಮಸ್ಯೆ ಹೇಳಿ’ – ಜನರಿಗೆ ಕಾರ್ಪೊರೇಟರ್​ಗಳ ಮನವಿ

ಜೂನ್ 24ರಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಈ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ಈ ಭಾಗದಲ್ಲಿ ಆನೆ ಹಾವಳಿ ಅತಿಯಾಗಿದ್ದು ಬೆಳೆಯನ್ನು ನಾಶ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.



ವರದಿ: ಡಿಎಂಜಿ ಹಳ್ಳಿ ಅಶೋಕ್
First published: