HOME » NEWS » District » VIOLATION OF THE SEAL DOWN RULE IN KARWAR PEOPLES HK

ಕಾರವಾರದಲ್ಲಿ ಸೀಲ್ ಡೌನ್ ನಿಯಮ ಉಲ್ಲಂಘನೆ : ಸುರಕ್ಷತೆ ಬಯಸುವ ಜನರಲ್ಲಿ ಹೆಚ್ಚಿದ ಆತಂಕ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡರು ಜನರಲ್ಲಿ ಭಯ ಮಾತ್ರ ಇಲ್ಲದಂತಾಗಿದೆ.

news18-kannada
Updated:July 3, 2020, 8:51 PM IST
ಕಾರವಾರದಲ್ಲಿ ಸೀಲ್ ಡೌನ್ ನಿಯಮ ಉಲ್ಲಂಘನೆ : ಸುರಕ್ಷತೆ ಬಯಸುವ ಜನರಲ್ಲಿ ಹೆಚ್ಚಿದ ಆತಂಕ
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಜು.03): ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿ ವಿವಿಧ ಕಡೆ ಸೀಲ್ ಡೌನ್ ಆದ ಏರಿಯಾದಲ್ಲಿ ಜನರು ಸೀಲ್ ಡೌನ್ ನಿಯಮ ‌ಉಲ್ಲಂಘಿಸಿ ಮಾರುಕಟ್ಟೆಯಲ್ಲಿ ಮುಕ್ತವಾಗಿ ಓಡಾಟ ನಡೆಸಿ ಆತಂಕ ಸೃಷ್ಟಿಸುತ್ತಿದ್ದಾರೆ. ಇಲ್ಲಿ ಸೀಲ್ ಡೌನ್ ಕೇವಲ ‌ಹೆಸರಿಗೆ ಮಾತ್ರ ಮಾಡಲಾಗಿದೆ ಎನ್ನುವುದು ಸುರಕ್ಷತೆ ಬಯಸುವ ಜನರ ಆರೋಪವಾಗಿದೆ. 

ಸೀಲ್ ಡೌನ್ ಆದ ಏರಿಯಾದ ಜನರು ಒಳಗಡೆಯಿಂದ ಹೊರಗೆ ಬರುವುದನ್ನ ನಿಷೇಧವಾಗಿರುತ್ತದೆ. ಆದರೆ, ಸೀಲ್ ಡೌನ್ ಮಾಡಿದ ಏರಿಯಾದದಲ್ಲಿ ಒಂದು ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆ ಮಾಡಿದಿರುವುದರಿಂದ ಮುಕ್ತವಾಗಿ ಜನರು ಮಾರುಕಟ್ಟೆಯಲ್ಲಿ ಓಡಾಟ ನಡೆಸಿ ನಿಯಮ ಗಾಳಿಗೆ ತೂರುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗುತ್ತಿದೆ ಈ ಹಿನ್ನಲೆಯಲ್ಲಿ ಜಿಲ್ಲೆಯ ಒಂದಿಷ್ಟು ಜನ ಕಂಗಾಲಾಗಿದ್ರೆ, ಒಂದಿಷ್ಟು ಜನ ಕೊರೋನಾ ಭಯವಿಲ್ಲದೆ ರಾಜಾರೋಷವಾಗಿ ಸಾಮಾಜಿಕ ಅಂತರ ವಿಲ್ಲದೆ ಓಡಾಟ ನಡೆಸುತ್ತಿದ್ದಾರೆ.

ಈಗ ಕಾರವಾರ ನಗರದಲ್ಲೆ ಇಬ್ಬರಿಗೆ ಕೊರೋನಾ ಸೋಂಕು ದೃಢವಾಗಿದ್ದು ಸೋಂಕಿತರು ಇರುವ ಏರಿಯಾವನ್ನ ಸೀಲ್ ಡೌನ್ ಮಾಡಲಾಗಿದೆ. ಆದರೆ, ಇದು ಕೇವಲ ಹೆಸರಿಗೆ ಮಾತ್ರ ಮಾಡಲಾಗಿದ್ದು ಸೀಲ್ ಡೌನ್ ಏರಿಯಾದವರು ರಾಜಾರೋಷವಾಗಿ ನಗರದ ಸುತ್ತ ಸುತ್ತಾಟ ನಡೆಸಿ ಮಾರುಕಟ್ಟೆಯಲ್ಲಿ ವಸ್ತು ಖರೀದಿಗೆ ಆಗಮಿಸುತ್ತಿದ್ದಾರೆ. ಇದರಿಂದ ಸುರಕ್ಷತೆ ಬಯಸುವ ಜನ ಭಯದಿಂದ ಇದ್ದಾರೆ.

ಸೀಲ್ ಡೌನ್ ಏರಿಯಾದಿಂದ ಹೆಚ್ಚಾಗಿ 70ರ ಆಸುಪಾಸಿನವರೆ ಸೀಲ್ ಡೌನ್ ಬ್ಯಾರಿಕೇಡ್ ದಾಟಿ ಬರುತ್ತಿದ್ದಾರೆ. ಇದನ್ನ ತಡೆಯಲು ಇಲ್ಲಿ ಪೊಲೀಸ್​ ಸಿಬ್ಬಂದಿಯನ್ನ ನಿಯೋಜನೆ ಮಾಡಬೇಕಿತ್ತು. ಆದರೆ, ಪೊಲೀಸ್ ಇಲಾಖೆ ಕೇವಲ ಬ್ಯಾರಿಕೇಡ್ ಹಾಕಿ ಕೈ ತೊಳೆದುಕೊಂಡಿದೆ.

ದಿನ ನಿತ್ಯವೂ ಇಲ್ಲಿನ ಜನ ಮಾರುಕಟ್ಟೆಯಲ್ಲಿ ಓಡಾಟ ನಡೆಸುತ್ತಿದ್ದಾರೆ. ಹಾಗಾದ್ರೆ ಸೀಲ್ ಡೌನ್ ಮಾಡಿದ್ದು ಏಕೆ ಎಂಬ ಪ್ರಶ್ನೆ ಇನ್ನುಳಿದ ಜನರದ್ದಾಗಿದೆ. ಇದರಿಂದ ಸೋಂಕು ಹರಡುವ ಭಯದಲ್ಲಿ ಇಲ್ಲಿನ ಜನರಿದ್ದಾರೆ.

ಇನ್ನೂ ಜಿಲ್ಲಾಡಳಿತ ಸೀಲ್ ಡೌನ್ ಏರಿಯಾದ ಜನ ಹೇಗಿರಬೇಕು ಜತಗೆ ಅವರು ಮನೆ ಬಿಟ್ಟು ಹೊರ ಬರಬಾರದು ಅಗತ್ಯ ವಸ್ತುಗಳ ಪೂರೈಕೆ ಸ್ಥಳೀಯ ಆಡಳಿತದಿಂದ ನಡೆಯುತ್ತೆ ಎನ್ನುವ ಬಗ್ಗೆ ಹೇಳತ್ತೆ. ಆದರೆ, ಇಲ್ಲಿ ಅವು ಯಾವುದು ನಡೆಯುತ್ತಿಲ್ಲ. ಕೇವಲ ಹೇಳಿಕೆಯಲ್ಲಿ ಮಾತ್ರ ಇದೆ. ಇಲ್ಲಿನ ಜನ ರಾಜಾರೋಷವಾಗಿ ಮಾರುಕಟ್ಟೆ ಸುತ್ತಾಟ ನಡೆಸಿದರು ಕೇಳುವವರಿಲ್ಲ.ಕಾರವಾರ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಭಯವಿಲ್ಲ, ಜಿಲ್ಲೆಯ ನಗರದ ಸ್ಥಿತಿ ಸಹಜವಾಗಿಯೇ ಇದೆ, ಮೀನು ಮಾರುಕಟ್ಟೆಯಲ್ಲಿ ಯಾವುದೇ ಸಾಮಾಜಿಕ ಅಂತರ ಇರುವುದಿಲ್ಲ, ಇದರ ಜತಗೆ ವಯಸ್ಸಾದವರೇ ಮೀನು ಖರೀದಿಗೆ ಆಗಮಿಸುತ್ತಾರೆ. ಹಾಗು ಮೀನು ಮಾರಾಟ ಮಾಡುವವರು ಕೂಡಾ ವಯಸ್ಸಾದ ಮಹಿಳೆಯರೇ ಆಗಿದ್ದಾರೆ, ನಗರದಲ್ಲಿ ಶೇ 50ರಷ್ಟು 70ರ ಆಸುಪಾಸಿನ ಜನ ಓಡಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೋವಿಡ್ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ; ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್

ಇಲ್ಲಿ ಕೊರೋನಾ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡರು ಜನರಲ್ಲಿ ಭಯ ಮಾತ್ರ ಇಲ್ಲದಂತಾಗಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ದ ಪ್ರಕರಣ ದಾಖಲಿಸುತ್ತೇವೆ ಹೇಳುವ ಜಿಲ್ಲಾಡಳಿತ ಇವನ್ನೆಲ್ಲ ನೋಡುತ್ತಲೇ ಇದೆ ಹೊರತು ಕ್ರಮಕ್ಕೆ ಮುಂದಾಗಿಲ್ಲ.

ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಷ್ಟೆ ಅಲ್ಲ ಎಲ್ಲೆಲ್ಲಿ ಸೀಲ್ ಡೌನ್ ಆಗಿದೆಯೋ ಅಲ್ಲೆಲ್ಲ ಇಂತದ್ದೆ ಅದ್ವಾನಗಳು ನಡೆಯುತ್ತಿದೆ ಎನ್ನುವ ಬಗ್ಗೆ ಸುರಕ್ಷತೆ ಬಯಸುವ ಜನರ ಗೋಳು. ಇದಕ್ಕೆ ಕೂಡಲೇ ಜಿಲ್ಲಾಡಳಿತ ಕಡಿವಾಣ ಹಾಕಬೇಕಾಗಿದೆ.
Published by: G Hareeshkumar
First published: July 3, 2020, 8:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories