ಕೊರೋನಾ ಕರಿನೆರಳಿನಲ್ಲಿ ಕೊಪ್ಪಳದ ಗ್ರಾಮಗಳು; ಸೋಂಕಿನಿಂದ ಹಳ್ಳಿಗಳಲ್ಲಿ ಸಾಲು ಸಾಲು ಸಾವು!

ಸೋಂಕು ಬೇಗನೆ ಗೊತ್ತಾದಷ್ಟು  ಒಳ್ಳೆಯದು ಎನ್ನುತ್ತಾರೆ ವೈದ್ಯರು. ಆದರೆ ಹಳ್ಳಿಯಲ್ಲಿ ಮಾತ್ರ ಈ ಬಗ್ಗೆ ಜಾಗೃತಿಯೇ ಇಲ್ಲ.  ರೋಗಿ ನಿತ್ರಾಣ ಸ್ಥಿತಿಗೆ ಬಂದ ಮೇಲೆಯೇ  ಚಿಕಿತ್ಸೆಗೆ ಮುಂದಾಗುತ್ತಾರೆ.

ಗ್ರಾಮಸ್ಥರು

ಗ್ರಾಮಸ್ಥರು

  • Share this:
ಕೊಪ್ಪಳ: ಮಹಾಮಾರಿ ಕೊರೋನಾ ಈಗ ನಗರ ಪ್ರದೇಶಗಿಂತ ಅಧಿಕವಾಗಿ ಗ್ರಾಮೀಣ ಭಾಗದಲ್ಲಿ ಹರಡಿದೆ. ವಲಸೆ ಹೋಗಿ ಬಂದವರಿಂದಲೇ ಅಧಿಕ ಸೋಂಕು ಹರಡಿದ್ದು, ವಲಸಿಗರು ವಾಪಸ್ಸು ಬಂದಾಗ ಅವರ ಮೇಲೆ ನಿಗಾ ವಹಿಸದೆ ಇರುವುದಕ್ಕೆ ಈಗ ಜಿಲ್ಲೆಯ ಜನತೆ ಸೋಂಕಿನಿಂದ ಬಳಲುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 720 ಕಂದಾಯ ಗ್ರಾಮಗಳ ಪೈಕಿ 577 ಗ್ರಾಮಗಳಲ್ಲಿ ಈಗಾಗಲೇ ಸೋಂಕು ಕಾಣಿಸಿಕೊಂಡಿದೆ. ಈಗ  ಹಳ್ಳಿಗಳಲ್ಲಿ  ಕೊರೋನಾ ರಣಕೇಕೆ ಹಾಕುತ್ತಿದೆ. ಇದು ವಾಸ್ತವಿಕ ಲೆಕ್ಕಾಚಾರ ಅಲ್ಲ,  ಕೊರೋನಾ ಟೆಸ್ಟ್‌ಗೆ ಬಂದವರ ಲೆಕ್ಕಾಚಾರದ ಆಧಾರದ ಮೇಲೆ ಆಗಿರುವ ಲೆಕ್ಕಾಚಾರ. ಹಳ್ಳಿಯಲ್ಲಿ ಟೆಸ್ಟ್ ಮಾಡಿಸಿಕೊಂಡವರಿಗಿಂತ ಮಾಡಿಸಿಕೊಳ್ಳದವರೇ ಹೆಚ್ಚು. ಇದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. 

ಹಳ್ಳಿಗಳನ್ನು ಒಂದು ಸಾರಿ ಸುತ್ತಾಡಿದರೇ ಸಾಕು ಬಹುತೇಕರ ಮನೆಯಲ್ಲಿ ನೆಗಡಿ, ಕೆಮ್ಮು,  ಜ್ವರದಿಂದ ಬಳಲುತ್ತಿದ್ದಾರೆ. ಇವರ್ಯಾರು ಟೆಸ್ಟ್ ಮಾಡಿಸಿಕೊಳ್ಳಲು ಬರುವುದೇ ಇಲ್ಲ. ಇವರಲ್ಲಿ ಇನ್ನು ಕೊರೋನಾ  ಬಗ್ಗೆ  ಆತಂಕ ಇದೆ.  ತೀವ್ರತರಹದ  ತೊಂದರೆಯಾದಾಗಲೇ ಇವರು ಆಸ್ಪತ್ರೆಯ ಮುಖ ನೋಡುವುದು. ಬಹುತೇಕ ಕೇಸ್‌ಗಳ  ಆಸ್ಪತ್ರೆಗೆ ಬಂದಾಗ ಕೋವಿಡ್ ಟೆಸ್ಟ್ ಆಗಿರುವುದೇ ಇಲ್ಲ. ಆಗ ಟೆಸ್ಟ್ ಮಾಡಿದಾಗ ಪಾಸಿಟಿವ್ ಬರುತ್ತದೆ ಮತ್ತು ಆತನ  ಆರೋಗ್ಯ ಸ್ಥಿತಿ ಗಂಭೀರವಾಗಿರುತ್ತದೆ. ಕೆಲ ಸಮಯದ ಬಳಿಕ ಆಸ್ಪತ್ರೆಯ ಎದುರೇ ಆತ ಪ್ರಾಣ ತೆತ್ತುತ್ತಾನೆ.

ಹೀಗಾಗಿ ಸರ್ಕಾರ  ಹಾಗೂ ಜಿಲ್ಲಾಡಳಿತ ಪದೇ ಪದೇ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳುತ್ತದೆ. ಲಕ್ಷಣಗಳು ಗೋಚರವಾಗುತ್ತಿದ್ದಂತೆ  ಕೂಡಲೇ  ಟೆಸ್ಟ್ ಮಾಡಿಸಿಕೊಂಡರೇ  ಚಿಕಿತ್ಸೆಯನ್ನು ನೀಡುವುದು ಸುಲಭವಾಗುತ್ತದೆ.  ಸೋಂಕು ಬೇಗನೆ ಗೊತ್ತಾದಷ್ಟು  ಒಳ್ಳೆಯದು ಎನ್ನುತ್ತಾರೆ ವೈದ್ಯರು. ಆದರೆ ಹಳ್ಳಿಯಲ್ಲಿ ಮಾತ್ರ ಈ ಬಗ್ಗೆ ಜಾಗೃತಿಯೇ ಇಲ್ಲ.  ರೋಗಿ ನಿತ್ರಾಣ ಸ್ಥಿತಿಗೆ ಬಂದ ಮೇಲೆಯೇ  ಚಿಕಿತ್ಸೆಗೆ ಮುಂದಾಗುತ್ತಾರೆ.

ಆಗ ಕೋವಿಡ್ ಟೆಸ್ಟ್ ಮಾಡಿಸಲು ಮುಂದಾಗುತ್ತಾರೆ. ಇದು  ಕೈಮೀರಿ ಹೋಗಿರುವ ಸಂದ‘ರ್ ಎಂದು ವೈದ್ಯರು ವಿಶ್ಲೇಷಣೆ ಮಾಡುತ್ತಾರೆ. ನಗರ ಪ್ರದೇಶದಲ್ಲಿ  ಈಗಾಗಲೇ ಜಾಗೃತಿ ಬಂದಿದ್ದು,  ಗ್ರಾಮೀಣ ಪ್ರದೇಶದಲ್ಲಿ  ಈ ಬಗ್ಗೆ ಇನ್ನು ಜಾಗೃತಿ ಇಲ್ಲ. ಇನ್ನು  ಗ್ರಾಮೀಣ ಪ್ರದೇಶದ ಜನರು ಟೆಸ್ಟ್  ಎಲ್ಲಿ ಮಾಡಿಸಿಕೊಳ್ಳಬೇಕು ಎನ್ನುವುದು ಸಮಸ್ಯೆ ಇದೆ. ಕೇವಲ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾತ್ರ ಟೆಸ್ಟ್ ಮಾಡಿಸಲಾಗುತ್ತಿದೆ. ಅಲ್ಲಿಗೆ ಹೋಗಿ ಬರುವುದಕ್ಕೆ ವಾಹನಗಳು ಇಲ್ಲ.  ಹೀಗಾಗಿ ಸೋಂಕಿನ ಲಕ್ಷಣ ಇದ್ದವರು ಟೆಸ್ಟ್ ಮಾಡಿಸಿಕೊಳ್ಳುತ್ತಿಲ್ಲ.

ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿಯೇ  177 ಜನರು ಸಾವನ್ನಪ್ಪಿತ್ತಾರೆ.  ಸಾವನ್ನಪ್ಪಿದ ಅಷ್ಟು ಪ್ರಕರಣಗಳ ಪೈಕಿ  ಶೇಕಡಾ 60-70  ರಷ್ಟು ಗ್ರಾಮೀಣ ಪ್ರದೇಶದವರೇ ಆಗಿರುತ್ತಾರೆ. ಈಗ ಹಳ್ಳಿಯಲ್ಲಿ ಹೈ ಅಲರ್ಟ್ ಇದೆ. ಆರೋಗ್ಯ ಇಲಾಖೆ ಈಗ ಸಮರೋಪಾದಿಯಲ್ಲಿ ಕೆಲಸ ಮಾಡಲು ಮುಂದಾಗಿದೆ.ಹಳ್ಳಿಯಲ್ಲಿ ಪಾಸಿಟಿವ್ ಬಂದವರನ್ನು ಪತ್ತೆ ಮಾಡಿ,  ಕ್ವಾರಂಟೈನ್ ಸೆಂಟರ್‌ಗೆ ಕಳುಹಿಸುತ್ತಿದ್ದಾರೆ. ಆದರೆ, ಈಗಾಗಲೇ ವ್ಯಾಪಕವಾಗಿ ಹಬ್ಬಿದ ಮೇಲೆ ಈಗ  ಕ್ವಾರಂಟೈನ್ ಮಾಡುತ್ತಿದ್ದಾರೆ. ಇದನ್ನು ಮೊದಲೇ ಮಾಡಿದ್ದರೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊರೋನಾ ಹರಡುತ್ತಲೇ ಇರಲಿಲ್ಲ.

ಈಗ ಹೋಬಳಿವಾರು  ಶಾಲೆಗಳನ್ನೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿ ಮಾಡಿದ್ದಾರೆ.ಒಟ್ಟು  720 ಕಂದಾಯ ಗ್ರಾಮಗಳಲ್ಲಿ ,  577 ಗ್ರಾಮಗಳಲ್ಲಿ ಸೋಂಕು ಕಾಣಿಸಿಕೊಂಡಿದೆ, ಇದರಿಂದ ಗ್ರಾಮೀಣ ಭಾಗದಲ್ಲಿ ಶೇ .75  ರಷ್ಟು ಸೋಂಕು ಕಂಡು ಬಂದಿದೆ. ಇನ್ನೂ ತಾಲೂಕುವಾರು ನೋಡುವುದಾದರೆ ಗಂಗಾವತಿ ತಾಲೂಕಿನಲ್ಲಿ ಒಟ್ಟು ಗ್ರಾಮಗಳು 167 ಹಳ್ಳಿಗಳಲ್ಲಿ ಸೋಂಕಿರುವ ಗ್ರಾಮಗಳು 141,, ಕೊಪ್ಪಳ ತಾಲೂಕಿನಲ್ಲಿ ಒಟ್ಟು ಗ್ರಾಮಗಳು  146, ಅದರಲ್ಲಿ ಸೋಂಕಿರುವ ಗ್ರಾಮಗಳು  137, ಯಲಬುರ್ಗಾ ದಲ್ಲಿ ಒಟ್ಟು ಗ್ರಾಮಗಳು 144  ಹಳ್ಳಿಗಳಲ್ಲಿ ಸೋಂಕಿರುವ ಗ್ರಾಮಗಳು 133, ಕುಷ್ಟಗಿ ತಾಲೂಕಿನಲ್ಲಿ ಒಟ್ಟು ಗ್ರಾಮಗಳು 176 ಹಳ್ಳಿಗಳಲ್ಲಿ ಸೋಂಕಿರುವ ಗ್ರಾಮಗಳು 166 ಸೋಂಕಿದೆ.

ಗುಣಲಕ್ಷಣ ಇರುವವರು ತಡಮಾಡದೆ ಚಿಕಿತ್ಸೆ ಟೆಸ್ಟ್ ಮಾಡಿಸಿಕೊಳ್ಳಬೇಕು. ಇದರಿಂದ ಚಿಕಿತ್ಸೆ ನೀಡಲು  ಅನುಕೂಲವಾಗುತ್ತದೆ. ಲಕ್ಷಣ ಇದ್ದರೂ ಟೆಸ್ಟ್ ಮಾಡಿಸಿಕೊಳ್ಳದಿದ್ದರೇ ಸಮಸ್ಯೆಯಾಗುತ್ತದೆ. ಕೊನೆ ಕ್ಷಣದಲ್ಲಿ ಬಂದರೇ ಚಿಕಿತ್ಸೆಗೆ ಅನಾನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕೀಶೋರ್ ಸುರಳ್ಕರ್ ತಿಳಿಸಿದ್ದಾರೆ.
Published by:Kavya V
First published: