ಜೀವದ ಹಂಗು ತೊರೆದು ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಐವರನ್ನು ರಕ್ಷಿಸಿದ ಗ್ರಾಮಸ್ಥರು

ವಾಹನದಲ್ಲಿದ್ದ ಐವರನ್ನು ಹಗ್ಗದ ಸಹಾಯದಿಂದ ರಕ್ಷಿಸಿ ಹೊರ ಕರೆತಂದಿದ್ದಾರೆ. ಸ್ಥಳೀಯರ ಸಾಹಸದಿಂದ ಐವರು ಬದುಕುಳಿದಿದ್ದಾರೆ. ಐವರನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಡದಾಳ ಗ್ರಾಮಸ್ಥರ ಸಾಹಸಕ್ಕೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ. 

ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ವಾಹನವನ್ನು ತಡೆದು, ಕಾರಿನೊಳಗಿದ್ದ ಐವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ ಗ್ರಾಮಸ್ಥರು.

ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ವಾಹನವನ್ನು ತಡೆದು, ಕಾರಿನೊಳಗಿದ್ದ ಐವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದ ಗ್ರಾಮಸ್ಥರು.

  • Share this:
ಕಲಬುರ್ಗಿ; ಕಲಬುರ್ಗಿ ಜಿಲ್ಲೆಯಲ್ಲಿ ಈ ವರ್ಷ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದೆ. ಪಕ್ಕದ ಜಿಲ್ಲೆಗಳಲ್ಲಿಯೂ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹಳ್ಳ-ಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಹೀಗೆ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನು ವಾಹನದ ಮೂಲಕ ದಾಟಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಐವರನ್ನು ಗ್ರಾಮಸ್ಥರು ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಡದಾಳ ಹಳ್ಳ ಉಕ್ಕಿ ಹರಿಯುತ್ತಿದೆ. ಆದರೂ ವಾಹನವೊಂದರ ಮೂಲಕ ಹಳ್ಳ ದಾಟಲು ಯತ್ನಿಸಿದಾಗ ವಾಹನ ಸಮೇತ ಐವರು ವ್ಯಕ್ತಿಗಳು ಹಳ್ಳದ ಮಧ್ಯದಲ್ಲಿ ಸಿಲುಕಿದ್ದಾರೆ. ಇದನ್ನು ಗಮನಿಸಿದ ಬಡದಾಳ ಗ್ರಾಮಸ್ಥರು ವಾಹನದಲ್ಲಿ ಕೊಚ್ಚಿ ಹೋಗುತ್ತಿದ್ದ ಐದು ಜನರನ್ನು ರಕ್ಷಿಸಿದ್ದಾರೆ. ಬಡದಾಳ ಹಳ್ಳದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಸ್ಥಳೀಯರು ಬಂದು ವಾಹನವನ್ನು ಹಗ್ಗದಿಂದ ಮರಕ್ಕೆ ಕಟ್ಟಿ ಕೊಚ್ಚಿ ಹೋಗದಂತೆ ತಡೆದಿದ್ದಾರೆ. ನಂತರ ವಾಹನದಲ್ಲಿದ್ದ ಐವರನ್ನು ಹಗ್ಗದ ಸಹಾಯದಿಂದ ರಕ್ಷಿಸಿ ಹೊರ ಕರೆತಂದಿದ್ದಾರೆ. ಸ್ಥಳೀಯರ ಸಾಹಸದಿಂದ ಐವರು ಬದುಕುಳಿದಿದ್ದಾರೆ. ಐವರನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಡದಾಳ ಗ್ರಾಮಸ್ಥರ ಸಾಹಸಕ್ಕೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

ಅಪಾರ ಪ್ರಮಾಣದ ಹಾನಿ

ಮತ್ತೊಂದೆಡೆ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಸರಾಸರಿಗಿಂತ ಹೆಚ್ಚು ಮಳೆಯಾಗಿರುವುದರಿಂದ ಬಿತ್ತನೆ ಪ್ರಮಾಣವೂ ಹೆಚ್ಚಾಗಿತ್ತು. ಇದೀಗ ಸುರಿದ ಭಾರಿ ಮಳೆಯಿಂದಾಗಿ ಚಿಂಚೋಳಿ ಮತ್ತಿತರ ಕಡೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಮಳೆ ನೀರಿನಲ್ಲಿ ಬೆಳೆ ಜಲಾವೃತಗೊಂಡಿದ್ದು, ಪೈರು ಮೊಳಕೆಯ ಹಂತದಲ್ಲಿಯೇ  ಹಾನಿಗೆ ಈಡಾಗಿದೆ.

ಇದನ್ನು ಓದಿ: ರಾವಣ ವಿಶ್ವದ ಮೊದಲ ವಿಮಾನಯಾನಿ?; ಶ್ರೀಲಂಕಾ ಸಂಶೋಧನೆಗೆ ಸಲ್ಲಿಕೆಯಾಯ್ತು 100ಕ್ಕೂ ಹೆಚ್ಚು ದಾಖಲೆಗಳು

ತೊಗರಿ, ಹೆಸರು, ಉದ್ದು ಬಿತ್ತನೆ ಮಾಡಿದ ಹೊಲಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ಬಿತ್ತನೆಗೆಂದು ಮಾಡಿದ ಖರ್ಚು ವೃಥಾ ಪೋಲಾದಂತಾಗಿದೆ. ಕೂಡಲೇ ಹಾನಿಯ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ. ಕೂಡಲೇ ಕೃಷಿ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೆ ಆರಂಭಿಸಬೇಕೆಂದೂ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
Published by:HR Ramesh
First published: