50 ವರ್ಷಗಳಿಂದ ವಾಸವಿರುವ ಮನೆಗಳನ್ನು ಖಾಲಿ ಮಾಡುವಂತೆ ತಾಲೂಕಾಡಳಿತದಿಂದ ಆದೇಶ: ಗ್ರಾಮಸ್ಥರಿಂದ ಪ್ರತಿಭಟನೆ

50 ವರ್ಷಗಳ ಕಾಲ ಈ ಗ್ರಾಮಸ್ಥರಿಗೆ ಸರಕಾರ ಎಲ್ಲ ಸೌಲಭ್ಯಗಳನ್ನ ಕೊಟ್ಟು ಈಗ ಏಕಾಏಕಿ ಮನೆಗಳನ್ನು‌ ಖಾಲಿ ಮಾಡಿಸಲು ಮುಂದಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರ ತಕ್ಷಣವೇ ಮಧ್ಯಪ್ರವೇಶಿಸಿ 2000 ಕುಟುಂಬಗಳು ಬೀದಿ ಪಾಲಾಗದಂತೆ  ನೋಡಿಕೊಳ್ಳಲಿ ಎನ್ನುವುದೇ ಜನರ ಆಗ್ರಹವಾಗಿದೆ.‌

ಮನೆ ಖಾಲಿ ಮಾಡಿಸದಂತೆ ಬೆಳಗಾವಿ‌ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮಸ್ಥರ ಪ್ರತಿಭಟನೆ.

ಮನೆ ಖಾಲಿ ಮಾಡಿಸದಂತೆ ಬೆಳಗಾವಿ‌ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮಸ್ಥರ ಪ್ರತಿಭಟನೆ.

  • Share this:
ಚಿಕ್ಕೋಡಿ; ಒಂದು ಕಡೆ ಆ ಗ್ರಾಮಸ್ಥರಿಗೆ ಸರಕಾರನೇ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ. ಅಲ್ಲದೇ ಸರಕಾರದ ಯೋಜನೆಯಡಿ  ಆಶ್ರಯ ಮನೆಗಳನ್ನು ನಿರ್ಮಿಸಿ‌ಕೊಟ್ಟಿದೆ. ಆದರೆ ಈಗ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಸರಕಾರದ ತೀರ್ಮಾನದಿಂದ ಇಡೀ ಪಟ್ಟಣದ ಜನರೇ ಬೀದಿಗೆ ಬರುವ ಸ್ಥಿತಿ ಬಂದಿದೆ.

ಕಳೆದ 50 ವರ್ಷಗಳಿಂದ ನೆಮ್ಮದಿಯಿಂದ ಇದ್ದ ಬೆಳಗಾವಿ‌ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಗ್ರಾಮಸ್ಥರ ಜನರ ಪರಿಸ್ಥಿತಿ ಈಗ ಸರಕಾರದ ಒಂದು ನಿರ್ಧಾರದಿಂದ ಬೀದಿಗೆ ಬಂದು ನಿಲ್ಲುವ ಸ್ಥಿತಿ ಬಂದೊದಗಿದೆ. ಹೌದು ಕಳೆದ 50 ವರ್ಷಗಳಿಂದ ಕಂಕನವಾಡಿ ಗ್ರಾಮದ ಗೈರಾಣು ಜಮೀನಿನಲ್ಲಿ ವಾಸವಿದ್ದ 2000  ಕುಟುಂಬಗಳಿಗೆ ಸರಕಾರನೇ ಮೂಲಭೂತ ಸೌಕರ್ಯಗಳನ್ನು ನೀಡಿ ಆಶ್ರಯ‌ ಯೋಜನೆಯಲ್ಲೂ ಮನೆ ನಿರ್ಮಿಸಿ‌ ಕೊಟ್ಟಿದೆ. ಆದರೆ ಈಗ ಏಕಾಏಕಿ ಈಗ ಗೈರಾಣು ಜಮೀನಿನನ್ನು ಖಾಲಿ ಮಾಡುವಂತೆ ಆದೇಶ ಹೊರಡಿಸಿದೆ. ‌ಇದರಿಂದ ಮನೆಗಳನ್ನು ಖಾಲಿ‌ ಮಾಡುವಂತೆ ರಾಯಬಾಗ ತಾಲೂಕಾಡಳಿತ ಸೂಚನೆ ನೀಡಿರುವ ಕಾರಣ ಈಗ ಕಂಕನವಾಡಿ ಪಟ್ಟಣದ ಶೇ.75ರಷ್ಟು ಕುಟುಂಬಗಳು ಬೀದಿಗೆ ಬರುವ ಸ್ಥಿತಿಯಲ್ಲಿದೆ.

ರಾಯಬಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಅವರೇ ಈಗ ಸರಕಾರಕ್ಕೆ ಚುಕ್ಕಿ ಗುರುತಿನ ಪ್ರಶ್ನೆಯಲ್ಲಿ ಕೇಳಿದ ಕಾರಣ ಸರಕಾರ ಈಗ ಗೈರಾಣ ಜಮೀನನ್ನು ಖಾಲಿ ಮಾಡಿಸಲು ಮುಂದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೇ ಸರಕಾರದ ನೀತಿಯನ್ನು ಖಂಡಿಸಿ ಈಡಿ ಪಟ್ಟಣವನ್ನೇ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ಸರಕಾರ ತಕ್ಷಣವೇ ಅಕ್ರಮ ಸಕ್ರಮದಡಿ ಗೈರಾಣ ಜಮೀನನಲ್ಲೇ ನಮಗೆ ವಾಸವಿರಲು ಅವಕಾಶ ಮಾಡಿಕೊಡುವಂತೆ ವಿಧಾನ‌ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಅವರಿಗೆ ಮನವಿ ಸಲ್ಲಿಸಿ ಸರಕಾರವನ್ನು ಆಗ್ರಹಿಸಿದ್ದಾರೆ‌.

ಇದನ್ನು ಓದಿ; ಬೆಂಗಳೂರಿಗೆ ಹೊರ ಜಿಲ್ಲೆಯವರ ಪ್ರವೇಶ ನಿಷೇಧ?; ತಜ್ಞರ ಸಲಹೆ ಪಾಲಿಸ್ತಾರಾ ಯಡಿಯೂರಪ್ಪ?

ಒಟ್ಟಿನಲ್ಲಿ 50 ವರ್ಷಗಳ ಕಾಲ ಈ ಗ್ರಾಮಸ್ಥರಿಗೆ ಸರಕಾರ ಎಲ್ಲ ಸೌಲಭ್ಯಗಳನ್ನ ಕೊಟ್ಟು ಈಗ ಏಕಾಏಕಿ ಮನೆಗಳನ್ನು‌ ಖಾಲಿ ಮಾಡಿಸಲು ಮುಂದಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರ ತಕ್ಷಣವೇ ಮಧ್ಯಪ್ರವೇಶಿಸಿ 2000 ಕುಟುಂಬಗಳು ಬೀದಿ ಪಾಲಾಗದಂತೆ  ನೋಡಿಕೊಳ್ಳಲಿ ಎನ್ನುವುದೇ ಜನರ ಆಗ್ರಹವಾಗಿದೆ.‌
First published: