HOME » NEWS » District » VILLAGERS OF CHITRADURGA DISTRICT HAVE BLOCKED THE ENTRANCE OF THE VILLAGE TO AVOID MOVEMENT OF PEOPLE FOR THE FEAR OF CORONA VTC SKTV

Coronavirus: ಕೊರೊನಾ ಬರದಂತೆ ತಡೆಯಲು ಊರ ಬಾಗಿಲು ಬಂದ್; ಈ ಊರೊಳಗೆ ಯಾರೂ ಬರುವಂತಿಲ್ಲ, ಯಾರೂ ಹೊರಗೆ ಹೋಗುವಂತಿಲ್ಲ

ಈ ಗ್ರಾಮ ಕೊರೋನಾ ಕಾಯಿಲೆಗೆ ಬೆಚ್ಚಿದ್ದು, ಯುವಕರೆಲ್ಲಾ ಸೇರಿ ಗ್ರಾಮದ ಎಕೆ ಕಾಲೋನಿ ಪ್ರವೇಶ ರಸ್ತೆಯನ್ನೇ ಬಂದ್ ಮಾಡಿದ್ದು ರಸ್ತೆ ಅಕ್ಕ ಪಕ್ಕದಲ್ಲಿ ಗೂಟ ನೆಟ್ಟು, ಹಗ್ಗ ಕಟ್ಟಿ, ಕಲ್ಲು, ಪೈಪ್ ಅಡ್ಡ ಇಟ್ಟಿದ್ದಾರೆ. ಇನ್ನೂ ಗ್ರಾಮಕ್ಕೆ ಬೇರೆ ಊರಿನ ಯಾರೂ ಬರುವುದು ಬೇಡ ಅಂತ ತೀರ್ಮಾನಿಸಿದ್ದಾರೆ.

news18-kannada
Updated:May 3, 2021, 11:40 AM IST
Coronavirus: ಕೊರೊನಾ ಬರದಂತೆ ತಡೆಯಲು ಊರ ಬಾಗಿಲು ಬಂದ್; ಈ ಊರೊಳಗೆ ಯಾರೂ ಬರುವಂತಿಲ್ಲ, ಯಾರೂ ಹೊರಗೆ ಹೋಗುವಂತಿಲ್ಲ
ಊರಿನ ದ್ವಾರ ಮುಚ್ಚಿ ಕಾವಲು ಕಾಯುತ್ತಿರುವ ಹಳ್ಳಿಗರು
  • Share this:
ಚಿತ್ರದುರ್ಗ: ಕೊರೋನಾ ಸೋಂಕಿನ ರೌದ್ರಾವತಾರಕ್ಕೆ  ಹೆದರಿದ ಗ್ರಾಮದ ಜನರು ಅನ್ಯ ಗ್ರಾಮ ನಗರಗಳಿಂದ ಬಂದವರು  ಗ್ರಾಮಕ್ಕೆ ಬರದಂತೆ ಪ್ರವೇಶ ದ್ವಾರವನ್ನು ಬಂದ್ ಮಾಡಿ ನಿರ್ಬಂಧ ಹೇರಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.  ಕಳೆದ ವರ್ಷ ಅದ್ಯಾವ ಮಾಯದಲ್ಲಿ ಕೊರೋನಾ ಸೋಂಕು ಈ ದೇಶಕ್ಕೆ ಕಾಲಿಟ್ಡಿತೋ ಯಾರಿಗೂ ಗೊತ್ತಿಲ್ಲ. ಆದರೇ ಕೊರೋನಾ ಸೋಂಕಿನ ತೀವ್ರತೆ ಅದೆಂಥವರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ. ಕಳೆದ ಭಾರಿ ಪ್ರಾರಂಭದಲ್ಲಿ ಕೊರೋನಾ ಸೃಷ್ಠಿಸಿದ ಭೀತಿಗೆ ಪ್ರತೀ ಹಳ್ಳಿ ಹಳ್ಳಿಗಳ ಜನರು ಬೇರೆ ಊರಿನ ಜನರು, ಅಪರಿಚಿತರು ಬರಲೇ ಬಾರದು, ಅವರಿಂದ ನಮಗೆ ಆ ಮಹಾ ಮಾರಿ ಕೊರೋನಾ ರೋಗ ಬರುವುದೂ ಬೇಡ ಅಂತ ಆಯಾ ಗ್ರಾಮಗಳಿಗೆ ಪ್ರವೇಶ ಪಡೆಯುತ್ತಿದ್ದ ರಸ್ತೆಗಳಲ್ಲಿ ಹಳ್ಳ, ಗುಂಡಿ ತೋಡುವುದು, ಬೇಲಿ ಹಾಕುವುದು, ಸೇರಿದಂತೆ ಅನೇಕ ಪ್ರಯೋಗಗಳನ್ನ ಸ್ವಯಂ ಕಾವಲು ಕಾಯೋ ಮೂಲಕ ರಕ್ಷಣೆಗೆ ಮುಂದಾಗಿದ್ರು.

ಅಷ್ಟೆ ಅಲ್ಲದೇ ಯಾವುದಾದರೂ ಒಂದು ಗ್ರಾಮದಲ್ಲಿ ಯಾರಿಗಾದ್ರು ಕೊರೋನಾ ಸೋಂಕು ತಗುಲಿದೆ ಅಂತ ಗೊತ್ತಾದ್ರೆ ಸಾಕು ಆ ಕಡೆ ಮುಖ ಮಾಡಿ ಕೂಡಾ ನೋಡುತ್ತಿರಲಿಲ್ಲ. ಆದರೆ ಕಾಲ ಕ್ರಮೇಣ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಕಡಿಮೆ ಆಗುತ್ತಿದ್ದಂತೆ ಜನರಲ್ಲಿದ್ದ ಭಯ ಕಡಿಮೆ ಆಗಿ ಹಾಕಿದ್ದ ಬೇಲಿ, ತೆಗೆದಿದ್ದ ಹಳ್ಳ, ಗುಂಡಿಗಳನ್ನ ಮುಚ್ಚಿದ್ರು.  ಅದರಂತೆ ಜನರಿಗಿದ್ದ ಭಯವೂ ಮರೆಯಾಗಿತ್ತು.  ಆದರೆ ಕೊರೋನಾ ಸೋಂಕು ರೂಪಾಂತರಗೊಂಡು ಎರಡನೇ ಅಲೆ ಮೂಲಕ ಸೃಷ್ಠಿಸಿರೋ ಭೀಕರತೆಗೆ ಪ್ರತಿಯೊಬ್ಬರೂ ನಲುಗಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಗ್ರಾಮೀಣ ಪ್ರದೇಶಗಳ ಜನರಿಗೂ ಸೋಂಕು ತಗುಲುವ ಪ್ರಮಾಣ ಹೆಚ್ಚುತ್ತಿರುವುದನ್ನ ನೋಡಿರೋ ಗ್ರಾಮಸ್ಥರು ಮತ್ತೆ ಆದೇ ಪರಿಪಾಠಕ್ಕೆ ವಾಪಾಸ್ ಆಗಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಾಪರಹಳ್ಳಿ ಗ್ರಾಮ. ಈ ಗ್ರಾಮ ಕೊರೋನಾ ಕಾಯಿಲೆಗೆ ಬೆಚ್ಚಿದ್ದು, ಯುವಕರೆಲ್ಲಾ ಸೇರಿ ಗ್ರಾಮದ ಎಕೆ ಕಾಲೋನಿ ಪ್ರವೇಶ ರಸ್ತೆಯನ್ನೇ ಬಂದ್ ಮಾಡಿದ್ದು ರಸ್ತೆ ಅಕ್ಕ ಪಕ್ಕದಲ್ಲಿ ಗೂಟ ನೆಟ್ಟು, ಹಗ್ಗ ಕಟ್ಟಿ, ಕಲ್ಲು, ಪೈಪ್ ಅಡ್ಡ ಇಟ್ಟಿದ್ದಾರೆ. ಇನ್ನೂ ಗ್ರಾಮಕ್ಕೆ ಬೇರೆ ಊರಿನ ಯಾರೂ ಬರುವುದು ಬೇಡ ಅಂತ ತೀರ್ಮಾನಿಸಿದ್ದಾರೆ. ಅಷ್ಟೆ ಅಲ್ಲದೇ ಆ ಗ್ರಾಮದ ಜನರು ಎಲ್ಲಿಗಾದ್ರು ಹೋಗೋದಾದ್ರೆ ಕೊರೋನಾ ಮಾರ್ಗಸೂಚಿ ಅನ್ವಯ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಯಾಕಂದ್ರೆ ಸದ್ಯ ಊರಲ್ಲಿ ಜನರು ಆರೋಗ್ಯವಾಗಿ ಇದ್ದಾರೆ, ಬೇರೆ ಯಾವುದೇ ವ್ಯಕ್ತಿ, ಬಂದು ಮಹಾ ಮಾರಿ ಸೋಂಕು ನಮ್ಮೂರಿಗೂ ವಕ್ಕರಿಸಿ ಜನರು ಅನಾರೋಗ್ಯಕ್ಕೆ ತುತ್ತಾಗುವುದು ಬೇಡ ಅನ್ನೋದು ಮುಖ್ಯ ಉದ್ದೇಶ. ಆದರೇ ಜನರು ಹೇಗೆ ನಡೆದುಕೊಂಡು ಹೋಗುತ್ತಾರೆ ಅನ್ನೋದೆ ಪ್ರಶ್ನೆಯಾಗಿದೆ.
Published by: Soumya KN
First published: May 3, 2021, 11:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories