HOME » NEWS » District » VILLAGERS BUILD GRAM PANCHAYAT BUILDING IN THE LAND OF POLICE DEPARTMENT IN DHARAWAD LG

ಪೊಲೀಸ್ ಇಲಾಖೆಗೆ ಸೇರಿದ ಜಾಗ ಅತಿಕ್ರಮಿಸಿ ಗ್ರಾ.ಪಂ.ಕಟ್ಟಡ ನಿರ್ಮಿಸಿರುವ ಮುಗದ ಗ್ರಾಮಸ್ಥರು

ಸದ್ಯ ಈಗಿನ ಎಸ್ಪಿ ವರ್ತಿಕಾ ಕಟಿಯಾರ್ ಈ ಜಾಗ ಹುಡುಕಿಕೊಂಡು ಹೋದ ಬಳಿಕ ಸ್ಥಳೀಯರು ಜಾಗ ಬಿಟ್ಟು ಕೊಡಲು ಮುಂದಾಗಿದ್ದಾರೆ. ಆದರೆ ನಮ್ಮೂರಿನ ಠಾಣೆ ಇಲ್ಲಿಂದ ಹೋಗಿದೆ. ನಾವು ಎಲ್ಲವನ್ನೂ ಕೊಡಲು ಸಿದ್ದ ಇದ್ದೇವೆ. ಆದರೆ‌ ನಮ್ಮೂರಿನ ಠಾಣೆ ನಮಗೆ ವಾಪಸ್ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.

news18-kannada
Updated:June 28, 2020, 4:00 PM IST
ಪೊಲೀಸ್ ಇಲಾಖೆಗೆ ಸೇರಿದ ಜಾಗ ಅತಿಕ್ರಮಿಸಿ ಗ್ರಾ.ಪಂ.ಕಟ್ಟಡ ನಿರ್ಮಿಸಿರುವ ಮುಗದ ಗ್ರಾಮಸ್ಥರು
ಪ್ರಾತಿನಿಧಿಕ ಚಿತ್ರ
  • Share this:
ಧಾರವಾಡ(ಜೂ.28): ಸಾಮಾನ್ಯವಾಗಿ ಸರ್ಕಾರಿ‌ ಜಾಗಗಳು ಅತಿಕ್ರಮಣವಾದರೆ ಅದನ್ನು ತೆರವುಗೊಳಿಸಲು ಕಂದಾಯ ಇಲಾಖೆ ಪೊಲೀಸರ ಸಹಾಯವನ್ನ ಪಡೆಯುತ್ತದೆ. ಆದರೆ ಧಾರವಾಡಲ್ಲಿ ಈಗ ಪೊಲೀಸ್ ಇಲಾಖೆಯ ಜಾಗವೇ ಅತಿಕ್ರಮಣವಾಗಿ ಸರ್ಕಾರಿ ಕಟ್ಟಡಗಳು ನಿರ್ಮಾಣವಾಗಿವೆ. ಈ ಕಟ್ಟಡಗಳು ನಿರ್ಮಾಣಗೊಂಡು ದಶಕಗಳೇ‌ ಕಳೆದು ಹೋಗಿದ್ದು, ಈಗ ಕಂದಾಯ ಇಲಾಖೆಯ ಸಹಾಯದೊಂದಿಗೆ ಆ ಜಾಗ ಉಳಿಸಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.

ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿರೋ ಈ ಒಂದು ಎಕರೆ ಜಾಗೆ ಪೊಲೀಸ್ ಇಲಾಖೆಗೆ ಸೇರಿದ ಜಾಗ. ನಾಲ್ಕು ದಶಕಗಳ ಹಿಂದೆ ಇಲ್ಲೊಂದು ಪೊಲೀಸ್ ಠಾಣೆ ಅಲ್ಲದೇ ಒಂದು ಪಿಎಸ್‌ಐ ಮತ್ತು 12 ಜನ ಕಾನ್ಸ್​​ಟೇಬಲ್‌ಗಳ ಕ್ವಾರ್ಟರ್ಸ್ ಇದ್ದವು. ಈಗಲೂ ಇವೆ. ಆದ್ರೆ ಆ ಕ್ವಾರ್ಟರ್ಸ್‌ನಲ್ಲಿರೋದು ಮಾತ್ರ ಪೊಲೀಸರಲ್ಲ, ಬದಲಿಗೆ ಮುಗದ ಗ್ರಾಮದ ಕೆಲ ಜನ.

ಇಲ್ಲಿನ ಠಾಣೆ ಪಕ್ಕದ ಅಳ್ನಾವರ ಪಟ್ಟಣಕ್ಕೆ ಹೋದ ಬಳಿಕ ಇಲಾಖೆ ಇದನ್ನು ಮರತೇ ಬಿಟ್ಟಿತ್ತು. ಮುಗದ ಗ್ರಾಮದ ಈ ಜಾಗದಲ್ಲಿ ಬ್ರಿಟಿಷ್ ಕಾಲದಿಂದಲೂ ಪೊಲೀಸ್ ಠಾಣೆ ಇತ್ತು. ಆದ್ರೆ ಪಕ್ಕದಲ್ಲಿ ಇರೋ ಅಳ್ನಾವರದಲ್ಲಿ ನಡೆದ ಒಂದು ಘಟನೆಯ ಕಾರಣಕ್ಕೆ 1972 ರಲ್ಲಿ ಇಲ್ಲಿಂದ ಸಂಪೂರ್ಣ ಠಾಣೆ ಅಳ್ನಾವರಕ್ಕೆ ಸ್ಥಳಾಂತರವಾಯಿತು. ಇಲಾಖೆಯೂ ಆ ಬಳಿಕ‌ ಇದನ್ನು ಮರತೇ ಹೋಗಿತ್ತು.

ದಿನಕಳೆದಂತೆ ಇಲ್ಲಿ ಗ್ರಾಮ ಪಂಚಾಯ್ತಿ‌ ಕಟ್ಟಡ ಸಹ ಕಟ್ಟಿಬಿಟ್ಟಿದ್ದಾರೆ. ಅದರ ಪಕ್ಕದಲ್ಲೇ ಅಂಗನವಾಡಿ ಕೇಂದ್ರವೂ ಆಗಿ ಬಿಟ್ಟಿದೆ. ಇನ್ನು ಕಾನ್ಸಟೇಬಲ್​​ಗಳಿಗಾಗಿ ಇದ್ದ 12 ಕ್ವಾರ್ಟರ್ಸ್‌ಗಳಲ್ಲಿ ಊರಿನ ಜನ ತಮ್ಮ ಮನೆ ಮಾಡಿಕೊಂಡು ಬಿಟ್ಟಿದ್ದಾರೆ.‌

ಸದ್ಯ ಈಗಿನ ಎಸ್ಪಿ ವರ್ತಿಕಾ ಕಟಿಯಾರ್ ಈ ಜಾಗ ಹುಡುಕಿಕೊಂಡು ಹೋದ ಬಳಿಕ ಸ್ಥಳೀಯರು ಜಾಗ ಬಿಟ್ಟು ಕೊಡಲು ಮುಂದಾಗಿದ್ದಾರೆ. ಆದರೆ ನಮ್ಮೂರಿನ ಠಾಣೆ ಇಲ್ಲಿಂದ ಹೋಗಿದೆ. ನಾವು ಎಲ್ಲವನ್ನೂ ಕೊಡಲು ಸಿದ್ದ ಇದ್ದೇವೆ. ಆದರೆ‌ ನಮ್ಮೂರಿನ ಠಾಣೆ ನಮಗೆ ವಾಪಸ್ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ.
Youtube Video

ಒಟ್ಟಾರೆಯಾಗಿ ಠಾಣೆ ಹೋದ ಬಳಿಕ ಆ ಜಾಗವನ್ನೂ ಮರೆತಿದ್ದ ಪೊಲೀಸ್ ಇಲಾಖೆ, ಸುದೀರ್ಘ ಅವಧಿಯ ಬಳಿಕ ಅದನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿದೆ., ಇಲ್ಲಿರುವ‌ ಜನರಿಗೆ ಕೊರೋನಾದಂತಹ ಸಮಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಮಾನವೀಯ ಜವಾಬ್ದಾರಿಯನ್ನೂ ನಿಭಾಯಿಸಬೇಕಿದೆ.
First published: June 28, 2020, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories