ಹಾಸನ: ಗ್ರಾಮಗಳೆಂದರೆ ಅಲ್ಲಿ ರಸ್ತೆ, ಚರಂಡಿ ಮೂಲಭೂತ ಸೌಕರ್ಯಗಳ ಕೊರತೆಯಿರುವುದು ಸರ್ವೆ ಸಾಮಾನ್ಯ. ಇದಕ್ಕೆ ತದ್ವಿರುದ್ದವಾಗಿದೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಅಡಗೂರು ಗ್ರಾಮ. ಪಟ್ಟಣ ಪ್ರದೇಶದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಗ್ರಾಮ ಸೇರಿದಂತೆ ಅಕ್ಕಪಕದ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ನಾಲೆ ಹಾದು ಹೋಗಿದೆ. ಜಿಲ್ಲೆಯ ಜೀವನದಿ ಹೇಮಾವತಿ ನದಿಯಿಂದ ನಾಲೆ ಮೂಲಕ ನೀರು ತುಂಬಿಸಲಾಗುತ್ತಿದೆ. ಇದರಿಂದಾಗಿ ಗ್ರಾಮದ ಕೆರೆಯಲ್ಲಿ ಸದಾಕಾಲ ನೀರು ಇರುತ್ತದೆ. ಆದರೆ ಈ ನಾಲೆಯೇ ಗಾಮಕ್ಕೆ ಕಂಟಕವಾಗಿದೆ. ಚನ್ನರಾಯಪಟ್ಟಣದಿಂದ ಯುಡಿಜಿ,ಕೊಳಚೆ ನೀರು, ತ್ಯಾಜ್ಯ ನಾಲೆಯ ಮೂಲಕ ಈ ಗ್ರಾಮದ ಕೆರೆ ಸೇರುತ್ತಿದ್ದು ಕೆರೆಯ ನೀರು ಸಂಪೂರ್ಣ ಕಲುಷಿತವಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ, ದನಕರುಗಳು ನೀರನ್ನು ಸಹ ಕುಡಿಯದಷ್ಟು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಉತ್ಪಾದನಾ ಕಾರ್ಖಾನೆಯಾಗಿದೆ. ಸುಮಾರು ನೂರು ಎಕರೆ ಪ್ರದೇಶದಲ್ಲಿರುವ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಗಿಡಗೆಂಟೆಗಳು ಬೆಳಿದಿವೆ. ಕೊಳಚೆ ನೀರಿನಿಂದ ನೀರು ಕಪ್ಪು ಬಣ್ಣವಾಗಿದ್ದು, ಕಲುಷಿತ ನೀರಿನಿಂದ ಸೊಳ್ಳೆಗಳು ವಿಪರೀತವಾಗಿವೆ.
ಅದು ಯಾವಮಟ್ಟಿಗೆ ಎಂದರೆ ಸೊಳ್ಳೆ ಪರದೆಗಳಿಲ್ಲದೆ ಮನೆಯಲ್ಲಿ ಇರಲು, ಮಲಗಲು ಸಾಧ್ಯವೇ ಇಲ್ಲದಂತಾಗಿದೆ. ಸೊಳ್ಳೆಗಳು ಜಾನುವಾರುಗಳ ರಕ್ತ ಹೀರುತ್ತಿವೆ. ನೆಂಟರು ಬಂದು ಮನೆಯಲ್ಲಿ ಉಳಿದುಕೊಂಡಿದ್ದು, ಸೊಳ್ಳೆಗಳ ಕಾಟದಿಂದ ಮದ್ಯರಾತ್ರಿಯೇ ಎದ್ದು ಹೋಗಿರುವ ಉಧಾಹರಣೆಗಳಿವೆ. ಸೊಳ್ಳೆಗಳ ಕಾಟದಿಂದ ಇಡೀ ಗ್ರಾಮದ ಜನರು ಹೈರಾಣಾಗಿ ಹೋಗಿದ್ದಾರೆ. ಹಗಲು ರಾತ್ರಿ ಎನ್ನುವಂತಿಲ್ಲ ಮನುಷ್ಯರು, ಜಾನುವಾರುಗಳೆನ್ನದೆ ರಕ್ತ ಹೀರುತ್ತವೆ.
ಪ್ರತಿ ಮನೆಯಲ್ಲೂ ಸೊಳ್ಳೆ ಪರದೆ, ಮಸ್ಕಿಟೋ ಕಾಯಿಲ್ ಇವೆ. ಕೊಟ್ಟೆಗಳಿಗಳಲ್ಲಿ ದನಕರುಗಳಿಗೆ ಸೊಳ್ಳೆ ಕಚ್ಚದಂತೆ ಸೊಳ್ಳೆಪರದೆ ಹಾಗೂ ಮಸ್ಕಿಟೋ ಕಾಯಿಲ್ ಹಾಕುತ್ತಿದ್ದಾರೆ. ಸೊಳ್ಳೆಗಳ ಸಮಸ್ಯೆಯಿಂದ ರೋಸಿ ಹೋಗಿರುವ ಗ್ರಾಮಸ್ಥರು ಸಾಕಷ್ಟು ಭಾರಿ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಯಾರೂ ಕೂಡ ಇತ್ತ ಗಮಹರಿಸಿ ಸಮಸ್ಯೆ ಬಗೆಹರಿಸಿಲ್ಲ. ದುರಂತವೆಂದರೆ ಶ್ರವಣಬೆಳಗೊಳದ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರ ಹುಟ್ಟೂರು ಕಾಳೇನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ಅಡಗೂರು ಗ್ರಾಮವಿದ್ದು ಅವರ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: Weight Loss: ಒಂದೇ ಸಲ 10 ಕೆಜಿ ತೂಕ ಇಳಿಸೋದು ಓಕೆನಾ? ಇದ್ರಿಂದ ಸೈಡ್ ಎಫೆಕ್ಟ್ ಏನಾದ್ರೂ ಇದ್ಯಾ?
ಸೊಳ್ಳೆಗಳ ಕಾಟ ತಪ್ಪಿಸಿ ಎಂದು ಮನವಿ ಪತ್ರದೊಂದಿಗೆ ಇಂದಿಗೂ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಅಲೆಯುತ್ತಿದ್ದಾರೆ. ಸೊಳ್ಳೆಪರದೆ ಕೊಳ್ಳಲು ಸಾಧ್ಯವಿಲ್ಲದ ಬಡಕುಟುಂಬಗಳು, ಸೊಳ್ಳೆಬತ್ತೆ ಹಚ್ಚಿ ಮಲಗುತ್ತಿದ್ದು ಅದರ ಹೊಗೆ ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದೆಷ್ಟೋ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ ಎಂದು ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ. ಆದರೆ ಸೊಳ್ಳೆಗಳ ಕಾಟ ತಾಳಲಾದರೆ ಸೊಳ್ಳೆಗಳಿಂದ ನಮ್ಮನ್ನು ಹಾಗೂ ಜಾನುವಾರುಗಳನ್ನು ರಕ್ಷಿಸಿ ಎಂದು ಅಡಗೂರು ಗ್ರಾಮಸ್ಥರು ಮನವಿ ಮಾಡುತ್ತಿದ್ದು, ಇನ್ನಾದರೂ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಸೊಳ್ಳೆಗಳ ಕಾಟಕ್ಕೆ ಮುಕ್ತಿನೀಡಬೇಕಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
(ಶಶಿಧರ್ ಬಿ ಸಿ, ಹಾಸನ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ