news18-kannada Updated:October 14, 2020, 9:09 AM IST
ಅಶ್ವಿನಿ ದೊಡ್ಡಲಿಂಗನವರ
ಗದಗ(ಅಕ್ಟೋಬರ್. 14): ಜಿಲ್ಲೆಯ ನರಗುಂದ ತಾಲೂಕಿನ ಕುರಗೋವಿನಕೊಪ್ಪ ಗ್ರಾಮದ ಅಶ್ವಿನಿ ದೊಡ್ಡಲಿಂಗನವರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ಕುರಗೋವಿನಕೊಪ್ಪ ಗ್ರಾಮದ ಹೆಮ್ಮೆಯ ಮಗಳು ಅಶ್ವಿನಿಯಾಗಿದ್ದಾಳೆ. ಈಕೆ ಈಗ ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ. ಹಳ್ಳಿ ಹುಡುಗಿಯ ಲೈಪ್ ಸ್ಟೋರಿ ಸದ್ಯ ಇಡೀ ವಿಶ್ವದಲ್ಲೇ ಸಂಚಲನ ಮೂಡಿಸಿದೆ. ನಿತ್ಯ ಲಕ್ಷಾಂತರ ಜನರು ಹಳ್ಳಿ ಹುಡುಗಿ ವಿಡಿಯೋ ನೋಡುತ್ತಿದ್ದಾರೆ. ಅಂದಹಾಗೇ ಈ ವಿಡಿಯೋ 360 ಡಿಗ್ರಿ ಕೋನದಲ್ಲಿ ಕಿರು ಚಿತ್ರವನ್ನು ಮಾಡಿದ್ದಾಳೆ. ಒಂದು ಪುಟ್ಟ ಹಳ್ಳಿಯಲ್ಲಿ ಹುಟ್ಟಿದರು ಏನು ಬೇಕಾದರು ಸಾಧಿಸಬಹುದು ಎಂದು ತೋರಿಸಿಕೊಟ್ಟು, ಇಡೀ ಜಗತ್ತೇ ತನ್ನ ಹಳ್ಳಿಯತ್ತ ನೋಡುವಂತೆ ಮಾಡಿದ್ದಾಳೆ. ಕಡು ಬಡತನದ ರೈತಾಪಿ ಕುಟುಂಬದಲ್ಲಿ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಅಶ್ವಿನಿ ದೊಡ್ಡಲಿಂಗನವರನಲ್ಲಿ ಪ್ರಾಥಮಿಕ, ಹೈಸ್ಕೂಲ್ ಓದಿದ್ದು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ್ದಾಳೆ.
ಪಿಯುಸಿ, ಬಿಎ ಪದವಿ ಓದಿದ್ದು ನರಗುಂದ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ. ಇಂಗ್ಲಿಷ್ ಅಂದ್ರೆ ಅಷ್ಟಕಷ್ಟೇ. ಭಾಷಣ, ವೇದಿಕೆ ಅಂದ್ರೆ ಭಯ. ಮಾರುದ್ದ ಓಡಿ ಹೋಗುತ್ತಿದ್ದಳು. ಆದರೆ, ಈಗ ಅಶ್ವಿನಿ ತನ್ನ ಲೈಫ್ ಸ್ಟೋರಿ ಮಾಡುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ.
ಅಮೇರಿಕಾದ ಲೆನೋವಾ ಕಂಪನಿ ಆಯೋಜಿಸಿ ನ್ಯೂ ರಿಯಾಲಿಟಿಸ್ ಲೈಫ್ ಸ್ಟೋರಿಗೆ ಆಯ್ಕೆಯಾದ ಹತ್ತು ದೇಶಗಳಲ್ಲಿ ಭಾರತದ ಏಕೈಕ ಯುವತಿ ಅಶ್ವಿನಿ. ತನ್ನ ಲೈಫ್ ಸ್ಟೋರಿಯಲ್ಲಿ ಹಳ್ಳಿ ವಾತಾವರಣದಲ್ಲಿ ಯುವತಿಯರ ಶಿಕ್ಷಣ, ಭವಿಷ್ಯ ಹೇಗೆ ಕಮರಿ ಹೋಗುತ್ತೆ, ತಾನು ಬಡತನ ಬೆಂಕಿಯಲ್ಲಿ ಹೇಗೆ ಅರಳಿ ಹೂವಾದೆ ಅಂತ ಬಿಂಬಿಸಿದ್ದಾಳೆ.
ಇನ್ನೂ ಮಾತನಾಡುವುದಕ್ಕೂ ಭಯ ಪಡುವ ಅಶ್ವಿನಿ ಬೆಳೆಯಲು ಕಾರಣ ಕೌಶಲ್ಯ ಅಭಿವೃದ್ಧಿ ತರಬೇತಿ
, ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ನಲ್ಲಿ ಎರಡು ತಿಂಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಮುಗಿಸಿದ್ದಾಳೆ. ಅಲ್ಲೂ ಕೂಡ ಅಶ್ವಿನಿ ಹಗಲು ರಾತ್ರಿ ಕಷ್ಟ ಪಟ್ಟು ಓದಿದ್ದಾಳೆ. ಬಳಿಕ 2018 ರಲ್ಲಿ ಕ್ಯಾಂಪಸ್ ಸಂದರ್ಶನದಲ್ಲಿ ಮೇಘ ಶಾಲಾ ಸಂಸ್ಥೆಗೆ ಆಯ್ಕೆಯಾಗಿದ್ದಾಳೆ.
ಇದನ್ನೂ ಓದಿ :
ಸಿಎಂ ತವರು ಶಿವಮೊಗ್ಗ ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳು ; ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಶಾಲೆಗಳಿಗೆ ಹೋಗಿ ಟೆಕ್ನಾಲಜಿ ಬಳಸಿಕೊಂಡು ಮಕ್ಕಳಿಗೆ ಹೇಗೆ ಪಾಠ ಮಾಡಬೇಕು ಅಂತ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾಳೆ. ಅಲ್ಲಿ ಇರುವಾಗಲೇ ಲೆನೋವಾ ಕಂಪನಿ ಆಯ್ಕೆಯಾಗಿದ್ದಾಳೆ. ಲಾಕ್ ಡೌನ್ ನಡುವೆ ಮನೆಯಲ್ಲಿದ್ದಾಗ ಲೆನೋವಾ ಕಂಪನಿ ಸಹಾಯ ಪಡೆದು ಒಬ್ಬಳೆ ಲೈಪ್ ಸ್ಟೋರಿ ಮಾಡಿದ್ದು, ಅದು ಈಗ ಇಡೀ ವಿಶ್ವದ ಗಮನವನ್ನು ಸೆಳೆದಿದೆ.
https://www.youtube.com/watch?v=3pOGXNkcXqI&feature=youtu.beಅಶ್ವಿನಿ ಲೈಪ್ ಸ್ಟೋರಿ ನಿತ್ಯ ಕೋಟ್ಯಾಂತರ ಜನರು ವೀಕ್ಷಣೆ ಮಾಡುತ್ತಿದ್ದಾರೆ. ಕುಗ್ರಾಮದಲ್ಲಿ ಬೆಳೆದ ಹುಡುಗಿ ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ. ಈವಳ ಈ ಸಾಧನೆಗೆ ಇಡೀ ಗ್ರಾಮ ಸೇರಿದಂತೆ ಗದಗ ಜಿಲ್ಲೆಯ ಜನರು ಹರ್ಷ ವ್ಯಕ್ತಪಡೆಸಿದ್ದಾರೆ.
Published by:
G Hareeshkumar
First published:
October 14, 2020, 7:16 AM IST