ಸರಕಾರಿ ಆಸ್ಪತ್ರೆ ಶೌಚಾಲಯ ಸ್ವಚ್ಛತೆ ; ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಜಿ. ಪಂ. ಅಧ್ಯಕ್ಷೆ

ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜನ್ಮದಿನದಂದು ಈ ರೀತಿ ಸರಕಾರಿ ಆಸ್ಪತ್ರೆಯ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ವಿಜಯಪುರ ಜಿಲ್ಲಾ ಪಂಚಾಯತ್​ ಅಧ್ಯಕ್ಷೆಸುಜಾತಾ ಸೋಮನಾಥ ಕಳ್ಳಿಮನಿ ಮತ್ತೆ ಗಮನ ಸೆಳೆದಿದ್ದಾರೆ.

ಆಸ್ಪತ್ರೆಯ ಶೌಚಾಲಯ ಸ್ವಚ್ಛ ಮಾಡುತ್ತಿರುವ ಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ

ಆಸ್ಪತ್ರೆಯ ಶೌಚಾಲಯ ಸ್ವಚ್ಛ ಮಾಡುತ್ತಿರುವ ಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ

  • Share this:
ವಿಜಯಪುರ(ಅಕ್ಟೋಬರ್.​ 02): ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿ ಬೆಳ್ಳಂ ಬೆಳಿಗ್ಗೆ ಅದೇ ಆಸ್ಪತ್ರೆಯ ಶೌಚಾಲಯ ಸ್ವಚ್ಛತೆ ಮಾಡಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ವಿಜಯಪುರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ಅವರು ಆಚರಿಸಿ, ಗೌರವ ವಂದನೆ ಸಲ್ಲಿಸಿದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಧ್ಯಕ್ಷೆ ಕಳ್ಳಿಮನಿ ನಿನ್ನೆ ರಾತ್ರಿ ಗ್ರಾಮ ವಾಸ್ತವ್ಯ ಮಾಡಿದ್ದರು. ಅಲ್ಲದೇ, ಗ್ರಾಮಸ್ಥರ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಅಹವಾಲು ಆಲಿಸಿದ್ದರು. ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಿದರು. ಬೆಳ್ಳಂಬೆಳಿಗ್ಗೆ ನಿದ್ರೆಯಿಂದ ಎದ್ದ ಅವರು, ಕೈಯ್ಯಲ್ಲಿ ಪೊರಕೆ, ಬ್ರಷ್ ಹಿಡಿದುಕೊಂಡು ನೇರವಾಗಿ ಅದೇ ಸರಕಾರಿ ಆಸ್ಪತ್ರೆಯ ಶೌಚಾಲಯಲ್ಲಿ ತೆರಳಿದ್ದಾರೆ. ಅಲ್ಲದೇ, ಇಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಶುಚಿಗೊಳಿಸಿದ್ದಾರೆ. ಈ ಮೂಲಕ ಸ್ವಚ್ಛ ಭಾರತದ ಬಗ್ಗೆ ಬಹಳ ಹಿಂದೆಯೇ ಪ್ರತಿಪಾದಿಸಿದ್ದ ಮಹಾತ್ಮಾ ಗಾಂಧಿ ಅವರ ಕನಸಿಗೆ ಪೂರಕವಾಗಿ ಸೇವಾ ಕಾರ್ಯ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಮೂಲಕ ಬಾಪೂಜಿಗೆ ತಮ್ಮದೇ ಆದ ಶೈಲಿಯಲ್ಲಿ ವಿಶೇಷ ಗೌರವ ಸಲ್ಲಿಸಿದ್ದಾರೆ.

ಈ ಸಂದರ್ಭಠದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್​ ಅಧ್ಯಕ್ಕೆ ಸುಜಾತಾ ಸೋಮನಾಥ ಕಳ್ಳಿಮನಿ ಅವರಿಗೆ ಸದಸ್ಯರಾದ ಪ್ರೇಮಾಬಾಯಿ ಚವ್ಹಾಣ ಮತ್ತು ಪದ್ಮಾವತಿ ವಾಲೀಕಾರ ಕೂಡ ಜೊತೆಯಾಗಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲ.ಕಳೆದ ಬಾರಿ ಸೆಪ್ಟೆಂಬರ್​ 5 ರಂದು ವಿಜಯಪುರ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ ವಿಜಯಪುರ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಅಡವಿ ವಸ್ತಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಕುರಿಗಾರರ ದೊಡ್ಡಿಗೆ ತೆರಳಿ ಅಲ್ಲಿಯೇ ಟೆಂಟ್ ನಿರ್ಮಿಸಿ ವಾಸ್ತವ್ಯ ಮಾಡುವ ಮೂಲಕ ಅಲ್ಲಿನ ಕುರಿಗಾಹಿ ಮತ್ತು ಅವರ ಕುಟುಂಬಗಳ ಅಹವಾಲ ಸ್ವೀಕರಿಸಿದ್ದರು.

ಇದನ್ನೂ ಓದಿ : ಬೆಳಗಾವಿಯಲ್ಲಿ ಇಬ್ಬರು ಮಹಿಳೆಯರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು : 5 ಜನ ಆರೋಪಿಗಳ ಬಂಧನ..!

ಅಷ್ಟೇ ಅಲ್ಲ, ಆ ದಿನ ಬೆಳ್ಳಂ ಬೆಳಿಗ್ಗೆ ಟೆಂಟ್ ನಿಂದ ಹೊರ ಬಂದ ಬಳಿಕ, ಬಹಿರ್ದೆಸೆಗೆ ತೆರಳಿದ ಜನರನ್ನು ಹಾರ ಹಾಕಿ ಸನ್ಮಾನಿಸಿ ಶೌಚಾಲಯ ನಿರ್ಮಿಸಿಕೊಳ್ಳಿ. ಗ್ರಾಮ ನೈರ್ಮಲ್ಯಕ್ಕೆ ಸಹಕರಿಸಿ ಎಂದು ವಿನೂತನವಾಗಿ ಜಾಗೃತಿ ಮೂಡಿಸಿದ್ದರು. ಅಲ್ಲದೇ, ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುತ್ತಿರುವ ಸಹಾಯ ಮತ್ತು ನೆರವಿನ ಬಗ್ಗೆಯೂ ಮಾಹಿತಿ ಮೂಡಿಸಿದ್ದರು.

ಇಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜನ್ಮದಿನದಂದು ಈ ರೀತಿ ಸರಕಾರಿ ಆಸ್ಪತ್ರೆಯ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.
Published by:G Hareeshkumar
First published: