ವಿಜಯಪುರ ಜಿ.ಪಂ. ಸಭೆಯಲ್ಲಿ ಕೊರೋನಾ ನಿಯಮ ಗಾಳಿಗೆ ತೂರಿದ ಜನಪ್ರತಿನಿಧಿಗಳು

ಅವರೆಲ್ಲ ಜನಪ್ರತಿನಿಧಿಗಳು. ಕೊರೊನಾ ಸಂದರ್ಭದಲ್ಲಿ ಸಾಮಾನ್ಯ ಜನರಿಗೂ ಮಾದರಿಯಾಗಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವವರು. ಆದರೆ, ಅವರಲ್ಲಿ ಬಹುತೇಕರು ಅದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತಿತ್ತು ಅವರ ವರ್ತನೆ. ಇದು ವಿಜಯಪುರ ಜಿ.ಪಂ. ಸಭೆಯ ದೃಶ್ಯ.

ವಿಜಯಪುರ ಜಿ.ಪಂ. ಸಭೆಯ ಒಂದು ದೃಶ್ಯ

ವಿಜಯಪುರ ಜಿ.ಪಂ. ಸಭೆಯ ಒಂದು ದೃಶ್ಯ

  • Share this:
ವಿಜಯಪುರ: ರಾಜ್ಯಾದ್ಯಂತ ಕೊರೊನಾ ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ.  ಜನ ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ಮತ್ತು ಸಾಮಾಜಿಕ ಅಂತರ ಕಾಪಾಡದ ಹಿನ್ನೆಲೆಯಲ್ಲಿ ಸರಕಾರ ಮಾಸ್ಕ್ ಧರಿಸದವರಿಗೆ ದಂಡದ ಮೊತ್ತವನ್ನು ಹೆಚ್ಚಿಸಿದೆ.  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಲಾ ರೂ. 1000 ಮತ್ತು ಗ್ರಾಮೀಣ ಭಾಗದಲ್ಲಿ ತಲಾ ರೂ 500 ದಂಡ ನಿಗದಿ ಮಾಡಿದೆ. ಆದರೆ, ಇದು ವಿಜಯಪುರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಂಬಂಧವಿಲ್ಲದಂತಿತ್ತು.

ಕೊರೊನಾ ತಡೆಯಲು ಸರಕಾರ ಹರಸಾಹಸ ಪಡುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ಕಾನೂನು ತಮಗೆ ಅನ್ವಯಿಸುವುದಿಲ್ಲ ಎಂದು ವರ್ತಿಸಿದ ಘಟನೆ ವಿಜಯಪುರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು. ಮಾಸ್ಕ್ ಹಾಕದವರಿಗೆ ಸರಕಾರ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ತಲಾ ರೂ. 1000 ಮತ್ತು ಗ್ರಾಮೀಣ ಭಾಗಗಳಲ್ಲಿ ರೂ. 500 ದಂಡ ನಿಗದಿ ಮಾಡಿದೆ.  ಆದರೆ, ವಿಜಯಪುರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಧರಿಸಿದ ಮಾಸ್ಕ್ ಮಾತ್ರ ಕಾಟಾಚಾರಕ್ಕೆ ಹಾಕಿದಂತಿತ್ತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಸೋಮನಾಳ ಕಳ್ಳಿಮನಿ, ಉಪಾಧ್ಯಕ್ಷ ಪ್ರಭುಗೌಡ ಚನ್ನಪ್ಪ ದೇಸಾಯಿ, ಯೋಜನಾಧಿಕಾರಿಗಳು ಸೇರಿದಂತೆ ಹಲವು ಜನ ಜಿ. ಪಂ. ಸದಸ್ಯರು ಮೂಗು, ಬಾಯಿಯ ಮೇಲೆ ಮಾಸ್ಕ್ ಧರಿಸದೆ, ಬಾಯಿಯ ಕೆಳಗಡೆ ಮಾಸ್ಕ್ ಹಾಕಿಕೊಂಡು ನಿರ್ಲಕ್ಷ್ಯ ತೋರಿದರು.

ಇದನ್ನೂ ಓದಿ: ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದನ್ನ ಸಿದ್ದರಾಮಯ್ಯ ಬಿಡಲಿ: ಹೆಚ್.ಕೆ.ಕುಮಾರಸ್ವಾಮಿ

ಅದರಲ್ಲೂ ಕೆಲವು ಪ್ರಜ್ಞಾವಂತ ಸದಸ್ಯರು ಮಾತ್ರ ಸಭೆಯಲ್ಲಿ ಸಂಪೂರ್ಣವಾಗಿ ಮಾಸ್ಕ್ ಹಾಕಿಕೊಂಡು ಜಾಗೃತಿ ತೋರಿದರು. ಉಳಿದವರು ಕೇವಲ ನಾಮಕಾವಾಸ್ತೆ ಕಾನೂನು ಪಾಲನೆ ಎಂಬಂತೆ ವರ್ತಿಸಿದ್ದು ಕಂಡು ಬಂತು. ಜನರಿಗೆ ಬುದ್ಧಿ ಹೇಳಬೇಕಾದ ಜನಪ್ರತಿನಿಧಿಗಳಿಂದಲೇ ಕೊರೊನಾ ನಿಯಮ ಉಲ್ಲಂಘನೆಯಾಗಿದ್ದು ಮಾತ್ರ ವಿಪರ್ಯಾಸವಾಗಿತ್ತು.

ಈ ಮಧ್ಯೆ ಸಭೆಯಲ್ಲಿ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಹೋಂ ಐಸೋಲೇಶನ್ ನಲ್ಲಿದ್ದಾರೆ.  ಈ ಹಿನ್ನೆಲೆಯಲ್ಲಿ ಅವರು ಸಭೆಗೆ ಗೈರಾಗಿದ್ದು, ಅವರ ಬದಲಾಗಿ ಜಿ. ಪಂ. ಯೋಜನಾಧಿಕಾರಿ ಸಭೆಗೆ ಹಾಜರಾಗಿದ್ದರು.  ಇದನ್ನು ಪ್ರಶ್ನಿಸಿದ ಸದಸ್ಯರು, ಜಿಲ್ಲಾಧಿಕಾರಿಗಳನ್ನಾದರೂ ಸಭೆಗೆ ಕರೆಯಬೇಕಿತ್ತು.  ಈಗ ನಾವು ಪ್ರಸ್ತಾಪಿಸುವ ವಿಷಯಗಳನ್ನು ಸರಕಾರದ ಗಮನಕ್ಕೆ ತರುವವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.  ಅಲ್ಲದೇ, ಜಿ. ಪಂ. ಮುಖ್ಯ ಕಾರ್ಯ ನಿರ್ಹವಣಾಧಿಕಾರಿ ಸಭೆಗೆ ಬರುವಿದಿಲ್ಲ ಎಂಬುದು ಮೊದಲೆ ಗೊತ್ತಿತ್ತು.  ಅದರೆ, ಜಿಲ್ಲಾಧಿಕಾರಿಗಳನ್ನಾದರೂ ಸಭೆಗೆ ಕರೆಯಿಸುವಂತೆ ಮನವಿ ಮಾಡಿದ್ದರೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸ್ಪಂದಿಸಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಪಕ್ಷಾತೀಕವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೊಡಗಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆಂದು ಭೂಮಿ ಪಡೆದು ಕಬಳಿಕೆಗೆ ಮುಂದಾದ ಲಯನ್ಸ್​ ಕ್ಲಬ್​!

ಈ ಸಭೆಯಲ್ಲಿ ನಾನಾ ಯೋಜನೆಗಳ ಅನುದಾನಕ್ಕೆ ಎಲ್ಲ ಸದಸ್ಯರು ಅನುಮೋದನೆ ನೀಡಿದರು.  ಅಲ್ಲದೇ, ವಿಜಯಪುರ ಜಿಲ್ಲೆಯಲ್ಲಿ ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್ಟಿಗೆಸೇರಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದರರು.  ಅಲ್ಲದೇ, ಈ ಕುರಿತು ಠರಾವನ್ನೂ ಕೂಡ ಸೂಚಿಸಿದರು.

ಜಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಆರಂಭಕ್ಕೂ ಮುನ್ನ ಕೇಂದ್ರ ಸಚಿವ ದಿ. ಸುರೇಶ ಅಂಗಡಿ, ರಾಜ್ಯ ಸಭೆ ಬಿಜೆಪಿ ಸದಸ್ಯ ಅಶೋಕ ಗಸ್ತಿ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.

ವರದಿ: ಮಹೇಶ ವಿ. ಶಟಗಾರ

ಇದನ್ನೂ ಓದಿ: ಸಿಬಿಐ ದಾಳಿಗೆ ಹೆದರೋ ಮಗ ನಾನಲ್ಲ, ಉಪ ಚುನಾವಣೆಯಲ್ಲಿ ಉತ್ತರಿಸಿ – ಡಿಕೆ ಶಿವಕುಮಾರ್
Published by:Vijayasarthy SN
First published: