ವಿಜಯಪುರ ಶ್ರೀ ಸಿದ್ದೇಶ್ವರ ಬ್ಯಾಂಕ್ ಚುನಾವಣೆ: ಹಳೆಯ ಪ್ಯಾನೆಲ್ ಕೈಹಿಡಿದ ಮತದಾರರು

ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಪರಿಶಿಷ್ಠ ಪಂಗಡ ಮತಕ್ಷೇತ್ರ ಹೊರತುಪಡಿಸಿದರೆ ಹಳೆಯ ಪ್ಯಾನೆಲ್​ನ ಎಲ್ಲ 18 ಅಭ್ಯರ್ಥಿಗಳು ಗೆಲವು ಸಾಧಿಸುವ ಮೂಲಕ ಮತ್ತೆ ಹಳೆಯ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಂತಾಗಿದೆ.

ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್

ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್

  • Share this:
ವಿಜಯಪುರ(ನ. 09): ವಿಜಯಪುರದ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಹಳೆಯ ಪೆನೆಲ್​ಗೆ ಮತದಾರರು ಜೈಕಾರ ಹೇಳಿದ್ದಾರೆ. ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 18 ಸ್ಥಾನಗಳಲ್ಲಿ ಹಳೆಯ ಪೆನೆಲ್ ಅಭ್ಯರ್ಥಿಗಳು ಜಯಗಳಿಸಿದ್ದು, ಒಂದು ಸ್ಥಾನದಲ್ಲಿ ಯುವಕರೊಬ್ಬರು ಭಾರಿ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.

ನಿನ್ನೆ ನಡೆದ ಚುನಾವಣೆಯಲ್ಲಿ ಒಟ್ಟು 6347 ಮತದಾರರಲ್ಲಿ 5148 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಈ ಚುನಾವಣೆಯಲ್ಲಿ ಶೇ. 81 ರಷ್ಟು ಮತದಾನವಾಗಿತ್ತು. ಸಾಮಾನ್ಯ ಮತಕ್ಷೇತ್ರದ 13 ಸ್ಥಾನಗಳಿಗೆ ನಡೆದ ಚುನಾವಣೆಗೆ ಒಟ್ಟು 22 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಚುನಾವಣೆಯಲ್ಲಿ ಅತೀ ಹೆಚ್ಚು ಮತ ಗಳಿಸಿದ 13 ಜನರು ಆಯ್ಕೆಯಾದರು.

ಸಾಮಾನ್ಯ ಮತಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿಗಳು ಮತ್ತು ಅವರ ಪಡೆದ ಮತಗಳ ವಿವರ ಇಂತಿದೆ:

1) ಪಾಟೀಲ ಶ್ರೀಹರ್ಷ(ಹರೀಶಗೌಡ) ಶಿವಶರಣ- 3078
2) ಗಚ್ಚಿನಮಠ ಗುರುಪಾದಯ್ಯ(ಗುರು) ಶ್ರೀಶೈಲ- 2997
3) ಅವರಂಗಾಬಾದ ವಿಜಯಕುಮಾರ ರೇವಣಸಿದ್ದಪ್ಪ- 2843
4) ಗಚ್ಚಿನಕಟ್ಟಿ ಸುರೇಶ ಗುರಲಿಂಗಪ್ಪ- 2806
5) ಪಾಟೀಲ ವಿಶ್ವನಾಥ ಶಿವನಗೌಡ(ಮಸಬಿನಾಳ)- 2801
6) ಪಟ್ಟಣಶೆಟ್ಟಿ ಈರಣ್ಣ ಮಲ್ಲಪ್ಪ- 2667
7) ಪಾಟೀಲ ರಾಜೇಂದ್ರ ಮಲಕನಗೌಡ(ಉಪ್ಪಲದಿನ್ನಿ)- 2547
8) ಪಾಟೀಲ ಡಾ. ವಿಜಯಕುಮಾರ ನಾನಾಸಾಹೇಬ(ಮುಳವಾಡ)- 2536
9) ಬಿದನೂರ ರಮೇಶ ಹಣಮಂತ- 2491
10) ಬಿಜ್ಜರಗಿ ರವಿಂದ್ರ ಶಂಕರ- 2452
11) ಶಾಂತಪ್ಪ ಸದಾಶಿವಪ್ಪ ಜತ್ತಿ- 2199
12) ಇಜೇರಿ ವಿಜಯಕುಮಾರ ದುಂಡಪ್ಪ- 2246
13) ಕರ್ಪೂರಮಠ ವೈಜನಾಥ ದುಂಡಯ್ಯ- 2241

ಈ ಮತಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಅಭ್ಯರ್ಥಿಗಳು ಪಡೆದ ಮತಗಳು ಇಂತಿವೆ:
1) ಕತ್ತಿ ರಾಜಶೇಖರ ಸಾತಪ್ಪ-1710
2) ಬಿರಾದಾರ ಮಡಿವಾಳಪ್ಪ ಶಿವಪ್ಪಗೌಡ-1628
3) ತಾಳಿಕೋಟಿ ರಮೇಶ ಅಯ್ಯಪ್ಪ- 1616
4) ಕಡೆಚೂರ ಪ್ರಕಾಶ ಸಿದ್ದಪ್ಪ- 1329
5) ವಿವೇಕಾನಂದ ಗುರುಲಿಂಗಪ್ಪ ಕೋರಿ- 1003
6) ಬೈರವಾಡಗಿ ಸುನಿಲಕುಮಾರ ಚಂದ್ರಶೇಖರ- 699
7) ಸಾವಳಗಿ ಮಲ್ಲಿಕಾರ್ದಜುನ ಸಿದ್ರಾಮಪ್ಪ- 660
8) ಹೇರಲಗಿ ವೀರಭದ್ರಪ್ಪಾ ರಾಚಪ್ಪ- 614
9) ಸಾಣಿಕನವರ ದೇವರತನ ದುಂಡಪ್ಪ- 543

ಇದನ್ನೂ ಓದಿ: ಮೈಸೂರು: ಬಿಲ್ಲಹಳ್ಳಿ ಗ್ರಾಮಕ್ಕೆ ನುಗ್ಗಿ ಗುಂಡು ಹಾರಿಸಿದ ಕಿಡಿಗೇಡಿಗಳು; 7 ಮಂದಿ ಪೊಲೀಸ್ ವಶಕ್ಕೆ

ಮಹಿಳಾ ಮೀಸಲು ಕ್ಷೇತ್ರದ 2 ಸ್ಥಾನಗಳಿಗೆ ನಡೆದ ಚುನಾವಣೆಗೆ ಮೂರು ಜನ ಸ್ಪರ್ಧಿಸಿದ್ದರು.  ಈ ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳು:
1) ಭೋಗಶೆಟ್ಟಿ ಸೌಭಾಗ್ಯ ಸೋಮನಾಥ- 3306 (ಗೆಲುವು)
2) ಗೊಬ್ಬೂರ ಬೋರಮ್ಮ ಬಾಬು- 2745 (ಗೆಲುವು)
3) ಸಂಬಣ್ಣಿ ರಜನಿ ಚಿದಾನಂದ- 1917

ಹಿಂದುಳಿದ ವರ್ಗ ಅ ಮತಕ್ಷೇತ್ರದ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು.
1) ಗಂಗನಳ್ಳಿ ಗುರುರಾಜ ಸಿದ್ದಪ್ಪ- 3089 (ಗೆಲುವು)
2) ಗುರುಸಿಂಗ ಸಂಗನಸಿಂಗ ಹಜೇರಿ ಉರ್ಫ್ ತೊನಶ್ಯಾಳ- 1179

ಹಿಂದುಳಿದ ವರ್ಗ ಬ ಮತಕ್ಸೇತ್ರದ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು.
1) ಬಗಲಿ ಪ್ರಕಾಶ ಶಿವಪ್ಪ- 2525 (ಗೆಲುವು)
2) ಗೆಜ್ಜಿ ಶಿವಾನಂದ ರುದ್ರಪ್ಪ- 1875

ಪರಿಶಿಷ್ಠ ಜಾತಿ ಮತಕ್ಷೇತ್ರದ ಒಂದು ಸ್ಥಾನಕ್ಕೆ ಆರು ಜನ ಅಭ್ಯರ್ಥಿಗಳು ಕಣದಲ್ಲಿದ್ದರು.
1) ಭೋವಿ ಸಾಯಬಣ್ಣ ಸಿದ್ದಪ್ಪ- 1949 (ಗೆಲುವು)
2) ಹೊಸಪೇಟೆ ರಾಮು ಹುಲ್ಲೆಪ್ಪ- 736
3) ಚವ್ಹಾಣ ಲಾಲು ಪುನ್ನು- 426
4) ವೀರಕರ ಶ್ರೀಮಂತ ಚಂದ್ರಮನೋಹರ- 333
5) ಸಂತೋಷಕುಮಾರ ತುಳಜಾರಾಮ ಹಿರೇರೂಗಿ- 303
6) ಭಜಂತ್ರಿ ಹಣಮಂತ ಯಲ್ಲಪ್ಪ- 293

ಪರಿಶಿಷ್ಠ ಪಂಗಡ ಮತಕ್ಸೇತ್ರದ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರು:
1) ನಾಯ್ಕೋಡಿ ಅಮೋಘಸಿದ್ಧ ಮಳಸಿದ್ಧ- 2240 (ಗೆಲುವು)
2) ಹಾರುಗೇರಿ ಸದಾಶಿವ ಪೀರಪ್ಪ- 1926.

ಪರಿಶಿಷ್ಠ ಪಂಗಡ ಮತಕ್ಷೇತ್ರ ಹೊರತುಪಡಿಸಿದರೆ ಹಳೆಯ ಪ್ಯಾನೆಲ್​ನ ಎಲ್ಲ 18 ಅಭ್ಯರ್ಥಿಗಳು ಗೆಲವು ಸಾಧಿಸುವ ಮೂಲಕ ಮತ್ತೆ ಹಳೆಯ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಂತಾಗಿದೆ. ಚುನಾವಣೆ ಮುಗಿಯುತ್ತಿದ್ದಂತೆ ಈಗ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಹಳೆಯ ಪ್ಯಾನೆಲ್​ನವರೇ ಬಹುಮತ ಹೊಂದಿರುವುದರಿಂದ ಈವರೆಗೆ ಅವಕಾಶ ಸಿಗದವರಿಗೆ ಈ ಬಾರಿ ಚಾನ್ಸ್ ಸಿಗುವ ಸಾಧ್ಯತೆ ಇದೆ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: