ಬಸವನಾಡಿನ ಯುವಕನ ಕಿರುಚಿತ್ರಕ್ಕೆ ಸಿಕ್ತು ರಾಷ್ಟ್ರೀಯ ಮನ್ನಣೆ..!

ವಿಜಯಪುರ ನಗರದ ಎಚ್​ ಹೈಪರ್ ಮಾರ್ಟ್​ನಲ್ಲಿ ಈ ಕಿರುಚಿತ್ರ ಚಿತ್ರೀಕರಿಸಲಾಗಿದೆ.  ತಂದೆಯೊಂದಿಗೆ ಮಾರ್ಟ್​ಗೆ ಬಂದು ಬಾಲಕಿ ತಂದೆಯ ಜೊತೆ ಸಾಮಗ್ರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುತ್ತಾಳೆ.  ಆಗ, ಆಕೆಯ ತಂದೆ ಬ್ರ್ಯಾಂಡೆಡ್ ಕಂಪನಿಯ ಸಾಮಗ್ರಿ ಹುಡುಕುತ್ತಿರುತ್ತಾರೆ.  ಆಗ, ಅಂಗಡಿಯಲ್ಲಿದ್ದ ಸಹಾಯಕನನ್ನು ಕರೆಯುವ ಬಾಲಕಿಯ ತಂದೆ ಇಲ್ಲಿ ಕೇವಲ ಲೋಕಲ್ ಪ್ರಾಡಕ್ಟ್ ಗಳಿವೆ,  ಬ್ರ್ಯಾಂಡೆಡ್ ಸಾಮಗ್ರಿಗಳಿಲ್ಲ ಎನ್ನತ್ತಾರೆ.  ಆಗ, ಅಲ್ಲಿನ ಸಹಾಯಕ ಸ್ಥಳೀಯರ ಉತ್ತೇಜನಕ್ಕಾಗಿ ಇಲ್ಲಿ ಸ್ಥಳೀಯ ಸಾಮಗ್ರಿಗಳನ್ನು ಮಾರಾಟಕ್ಕೆ ಆದ್ಯತೆ ನೀಡಲಾಗಿದೆ ಎಂದು ಉತ್ತರಿಸುತ್ತಾರೆ.

ಸಮ್ಮಾನ್​ ಕಿರುಚಿತ್ರದ ಪೋಸ್ಟರ್​

ಸಮ್ಮಾನ್​ ಕಿರುಚಿತ್ರದ ಪೋಸ್ಟರ್​

  • Share this:
ವಿಜಯಪುರದ ಶಿವ ಸಿ. ಬಿರಾದಾರ ಹಾಗೂ ಅವರ ತಂಡದಿಂದ ನಿರ್ಮಿಸಲಾದ 'ಸಮ್ಮಾನ' ಕಿರುಚಿತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಸಿಕ್ಕಿದ್ದು, ರಾಜ್ಯದ ಹಿರಿಮೆಗೂ ಕಾರಣವಾಗಿದೆ.  'ಕೇಂದ್ರ ಪ್ರೆಸ್ ಇನಫಾರ್ಮೇಶನ್ ಬ್ಯೂರೋ', 'ಡಿಡಿ ನ್ಯೂಸ್ ಲೈವ್', 'ಆಲ್ ಇಂಡಿಯಾ ರೇಡಿಯೋ' ಮತ್ತು 'ಎನ್​ಎಫ್​ ಡಿ ಸಿ' ಸಹಯೋಗದಲ್ಲಿ ರಾಷ್ಟ್ರೀಯ ಕಿರುಚಿತ್ರ ಸ್ಪರ್ಧೆ- 2020 ಆಯೋಜಿಸಲಾಗಿತ್ತು.  ಆನಲೈನ್​ನಲ್ಲಿ ನಡೆದ ಈ ಕಿರುಚಿತ್ರ ಸ್ಪರ್ಧೆಯಲ್ಲಿ 3 ನಿಮಿಷಗಳ ಸಮ್ಮಾನ ಕಿರುಚಿತ್ರಕ್ಕೆ ಸ್ಪೆಷಲ್​ ಮೆಂಗ್ಷನ್​ ಸರ್ಟಿಫಿಕೆಟ್(4ನೇ ಸ್ಥಾನ) ಗೌರವ ಸಿಕ್ಕಿದೆ. ಈ ಕಿರುಚಿತ್ರದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಮಹತ್ವ ನೀಡಲಾಗಿದ್ದು, ಅದರ ಸುತ್ತಲೇ ಕಿರುಚಿತ್ರದ ಕಥೆ ಹೆಣೆಯಲಾಗಿದೆ. ಇದು ಪುಟ್ಟ ಹೈಪರ್​ ಮಾರ್ಟ್​ನಲ್ಲಿರುವ ಕಥೆಯಾಗಿದ್ದು, ಇಲ್ಲಿ ಸ್ಥಳೀಯ ಉತ್ಪನ್ನ, ಮಾರಾಟಗಾರು ಹಾಗೂ ಸ್ಥಳೀಯರ ಮಹತ್ವ ಸಾರುವ ವಿಷಯಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.  

ವಿಜಯಪುರ ನಗರದ ಎಚ್​ ಹೈಪರ್ ಮಾರ್ಟ್​ನಲ್ಲಿ ಈ ಕಿರುಚಿತ್ರ ಚಿತ್ರೀಕರಿಸಲಾಗಿದೆ.  ತಂದೆಯೊಂದಿಗೆ ಮಾರ್ಟ್​ಗೆ ಬಂದು ಬಾಲಕಿ ತಂದೆಯ ಜೊತೆ ಸಾಮಗ್ರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುತ್ತಾಳೆ.  ಆಗ, ಆಕೆಯ ತಂದೆ ಬ್ರ್ಯಾಂಡೆಡ್ ಕಂಪನಿಯ ಸಾಮಗ್ರಿ ಹುಡುಕುತ್ತಿರುತ್ತಾರೆ.  ಆಗ, ಅಂಗಡಿಯಲ್ಲಿದ್ದ ಸಹಾಯಕನನ್ನು ಕರೆಯುವ ಬಾಲಕಿಯ ತಂದೆ ಇಲ್ಲಿ ಕೇವಲ ಲೋಕಲ್ ಪ್ರಾಡಕ್ಟ್ ಗಳಿವೆ,  ಬ್ರ್ಯಾಂಡೆಡ್ ಸಾಮಗ್ರಿಗಳಿಲ್ಲ ಎನ್ನತ್ತಾರೆ.  ಆಗ, ಅಲ್ಲಿನ ಸಹಾಯಕ ಸ್ಥಳೀಯರ ಉತ್ತೇಜನಕ್ಕಾಗಿ ಇಲ್ಲಿ ಸ್ಥಳೀಯ ಸಾಮಗ್ರಿಗಳನ್ನು ಮಾರಾಟಕ್ಕೆ ಆದ್ಯತೆ ನೀಡಲಾಗಿದೆ ಎಂದು ಉತ್ತರಿಸುತ್ತಾರೆ.Vijayapura resident Shiva c Biradar, Samman Short Film, Sandalwood, 4th place in short film contest,
ಸಮ್ಮಾನ್​ ಕಿರುಚಿತ್ರದ ಪೋಸ್ಟರ್​


ಈ ಸಂದರ್ಭದಲ್ಲಿ ಬಿಲ್ ಪಾವತಿಸಲು ಕ್ಯಾಶ್ ಕೌಂಟರಿಗೆ ಬರುವ ಆ ಬಾಲಕಿಯ ತಂದೆ ಬಳಿ ಅವರ ಇ-ಮೇಲ್ ಐಡಿಯನ್ನು ಕ್ಯಾಶ್ ಕಲೆಕ್ಟರ್ ಯುವತಿ ಕೇಳುತ್ತಾಳೆ.  ಆಗ, ತಂದೆ ಹೇಳಿದ ಹೆಸರಿನ ಅಕ್ಷರಗಳು ಸರಿಇವೆಯೇ ಎಂದು ತಿಳಿಯಲು ಕ್ಯಾಶ್​ ಕೌಂಟರ್​ನಲ್ಲಿರುವ ಹುಡುಗಿ ಇಂಗ್ಲಿಷ್ ಪದಗಳು ಮತ್ತು ವಿದೇಶಗಳ ಹೆಸರನ್ನು ಹೇಳುತ್ತಾ ಹೋಗುತ್ತಾರೆ.  ಆಗ ಸಿಟ್ಟಾದ ಪುಟ್ಟ ಬಾಲಕಿ ಟೇಬಲ್ ಮೇಲೆ ಕೈಯಿಂದ ಜೋರಾಗಿ ಬಡಿದು ಬೇಡ ಎನುತ್ತಾಳೆ.  ಆಗ, ಅವಳನ್ನು ತಂದೆ ಗದರಿಸುತ್ತಾರೆ. ಆದರೂ ಮತ್ತೆ ಪುಟ್ಟ ಬಾಲಕಿ ಕ್ಯಾಶ್​ ಕೌಂಟರ್​ನಲ್ಲಿರುವ ಹುಡುಗಿಯನ್ನು ನಿಲ್ಲಿಸುವಂತೆ ಹೇಳಿ, ಎ ಯಿಂದ ಝಡ್​ವರೆಗೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಹೇಳುತ್ತಾಳೆ.

Vijayapura resident Shiva c Biradar, Samman Short Film, Sandalwood, 4th place in short film contest,
ಜಿಲ್ಲಾಧಿಕಾರಿ ಸುನೀಲ್​ ಕುಮಾರ್​ ಅವರೊಂದಿಗೆ ಸಮ್ಮಾನ್​ ಕಿರುಚಿತ್ರ ತಂಡ


ಆಗ, ಅಲ್ಲೇ ಇದ್ದು ಇದನ್ನೆಲ್ಲ ನೋಡುತ್ತಿದ್ದ ಬೇರೋಬ್ಬ ವ್ಯಕ್ತಿ, ತನ್ನ ಗೆಳೆಯನಿಗೆ ಸ್ವಲ್ಪ ಯೋಚಿಸುವಂತೆ ಹೇಳುತ್ತಾರೆ. ನೀನು ಚಿಕ್ಕವನಾಗಿದ್ದಾಗಿನಿಂದ ಈವರೆಗೆ ಕಟ್ಟಿದ ಮನೆಗಳನ್ನು ಯಾರು ಕಟ್ಟಿದ್ದಾರೆ.  ಸ್ಥಳೀಯರು ತಾನೆ.  ಹೀಗಾಗಿ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡು ಎಂದು ಹೇಳುತ್ತಾರೆ.

Vijayapura resident Shiva c Biradar, Samman Short Film, Sandalwood, 4th place in short film contest,
ಶಿವ ಸಿ ಬಿರಾದರ್​ ಅವರ ಕಿರುಚಿತ್ರಕ್ಕೆ ಸಿಕ್ಕ ಪ್ರಶಸ್ತಿ


ಇನ್ನು, ಶಾಪಿಂಗ್​ ಮಾಡಲು ಬಂದಾಗ ಆರಂಭದಲ್ಲಿ ಮಗಳು ಕೇಳುವ ಗೊಂಬೆ ಲೋಕಲ್​ ಎಂದು ಅದನ್ನು ಪಕ್ಕಕ್ಕೆ ಇಟ್ಟಿರುತ್ತಾರೆ. ಮಗಳು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಹೇಳಿದ ಕೂಡಲೇ, ತಂದೆಯೇ ಹೋಗಿ ಮಗಳಿಗೆ ಆ ಗೊಂಬೆ ತಂದು ಕೊಡುತ್ತಾರೆ. ಇದು ಈ ಕಿರುಚಿತ್ರದ ಸಾರಾಂಶ. ಈ ಮೂಲಕ ಪ್ರಧಾನಿಗಳ ಕಲ್ಪನೆ ಆತ್ಮ ನಿರ್ಭರ್ ಭಾರತದ ಕನಸಿಗೆ ಈ ಕಿರುಚಿತ್ರ ಪೂರಕವಾಗಿದೆ ಎಂದು ಪರಿಗಣಿಸಿದ್ದು, ಕೇಂದ್ರ ಸರ್ಕಾರ ಈ ಕಿರುಚಿತ್ರಕ್ಕೆ ಗೌರವ ನೀಡಿ ಪುರಸ್ಕರಿಸಿದೆ.
Published by:Anitha E
First published: