HOME » NEWS » District » VIJAYAPURA POLICE AGAIN ARREST FOUR ACCUSED ON SAHUKAR BAIRAGONDA SHOOTOUT CASE MVSV HK

ವಿಜಯಪುರದಲ್ಲಿ ಫೈರಿಂಗ್ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ

ಈ ಆರೋಪಿಗಳು ದಾಳಿಗೆ ಬಳಸಿದ್ದ ಒಂದು ಮಚ್ಚು, ಎರಡು ಮೊಬೈಲ್, ಎರಡು ಬೈಕ್​​​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

news18-kannada
Updated:November 8, 2020, 5:32 PM IST
ವಿಜಯಪುರದಲ್ಲಿ ಫೈರಿಂಗ್ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ
ಪೊಲೀಸರು ಬಂಧಿಸಿರುವ ನಾಲ್ವರು ಆರೋಪಿಗಳು.
  • Share this:
ವಿಜಯಪುರ (ನವೆಂಬರ್​. 08): ವಿಜಯಪುರ ಜಿಲ್ಲೆಯ ಕನ್ನಾಳ ಕ್ರಾಸ್ ಬಳಿ ನವೆಂಬರ್​ 2 ರಂದು ಭೀಮಾ ತೀರದ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಮತ್ತೆ ನಾಲ್ಕು ಆರೋಪಿಗಳನ್ನು ಬಂಧಿಸಿದ್ದಾರೆ. ನ. 2ರಂದು ವಿಜಯಪುರ ಜಿಲ್ಲೆಯ ಕನ್ನಾಳ ಕ್ರಾಸ್ ಬಳಿ ಭೀಮಾ ತೀರದ ಕಾಂಗ್ರೆಸ್ ಮುಖಂಡ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಭಾರಿ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಮ್ಯಾನೇಜರ್ ಭೀಮರಾಯ ಕಂಚನಾಳ ಮತ್ತು ಸಾಹುಕಾರ ಕಾರು ಚಾಲಕ ಲಕ್ಷ್ಮಣ ದಿಂಡೂರೆ ಸಾವಿಗೀಡಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಹಾದೇವ ಸಾಹುಕಾರ ಭೈರಗೊಂಡ ಅವರನ್ನು ವಿಜಯಪುರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಊರಿಗೆ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ವಿಜಯಪುರ ಗ್ರಾಮೀಣ ಪೊಲೀಸರು ಬಂಧಿಸಿದ್ದು, ಈಗ ನಿನ್ನೆ ರಾತ್ರಿ ಮತ್ತೆ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ವಿಜಯಪುರ ಅನುಪಮ ಅಗ್ರವಾಲ ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ವಿಜಯಪುರ ನಗರದ ರಾಜರತ್ನ ಕಾಲೋನಿಯ 23 ವರ್ಷದ ಕಾಶೀನಾಥ ಭೀಮಪ್ಪ ತಾಳಿಕೋಟಿ, ಸಾರವಾಡ ಗ್ರಾಮದ 24 ವರ್ಷದ ಯುನುಸ್‌ಅಲಿ ಹುಸೇನಸಾಬ ಮುಜಾವರ, ವಿಜಯಪುರ ನಗರದ ಡೊಂಬಳ ಅಗಸಿಯ ಕುಂಬಾರ ಓಣಿಯ 27 ವರ್ಷದ ರಾಜು/ರಾಜ ಅಹ್ಮದ ರಜಾಕ ಸಾಬ ಗುನ್ನಾಪುರ ಮತ್ತು ಯೋಗಾಪುರ ಕಾಲೊನಿ ನಿವಾಸಿ 24 ವರ್ಷದ ಸಿದ್ದು ಶಹಾಪೇಟಿ ಸಿದ್ದು ಗುರುಪಾದಪ್ಪ ಮೂಡಂಗಿ / ಮೂಡಲಗಿಎಂದು ಗುರುತಿಸಲಾಗಿದೆ.

ಈ ಆರೋಪಿಗಳು ದಾಳಿಗೆ ಬಳಸಿದ್ದ ಒಂದು ಮಚ್ಚು, ಎರಡು ಮೊಬೈಲ್, ಎರಡು ಬೈಕ್​​​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಅಡಿಷನಲ್ ಎಸ್ಪಿ ಡಾ. ರಾಮ ಅರಸಿದ್ದಿ, ವಿಜಯಪುರ ಡಿವೈಎಸ್ಪಿ ಕೆ.ಸಿ.ಲಕ್ಷ್ಮೀನಾರಾಯಣ, ಸಿಪಿಐಗಳಾದ ಎಂ.ಕೆ. ಧಾಮಣ್ಣವರ, ರವೀಂದ್ರ ನಾಯ್ಕೋಡಿ, ಸಿ.ಬಿ ಬಾಗೇವಾಡಿ, ಸುರೇಶ ಬಂಡೆಗುಂಬಳ, ಸುನೀಲ್ ಆರ್. ಕಾಂಬಳೆ, ಬಸವರಾಜ ಮುಕರ್ತಿಹಾಳ, ಸೋಮಶೇಖರ ಜುಟ್ಟಲ್ ಹಾಗೂ ಪಿಎಸ್‌ಐ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದು, ಅವರ ಮಿಂಚಿನ ಕಾರ್ಯಚರಣೆಯನ್ನು ಪ್ರಶಂಸಿಸಲಾಗಿದೆ  ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ.

 ತಾಳಿಕೋಟೆಯಲ್ಲಿ ಹಗಲು ಮನೆಗಳ್ಳರ ಬಂಧನ

ಈ ಮಧ್ಯೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದ 5 ಹಗಲು ಮನೆಗಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರದ ಅಟೋ ಇಂದಿರಾ ನಗರ ನಿವಾಸಿ ಅಬೂಬಕರ ರಜಾಕಸಾಬ್ ಝಂಡೆ(23), ಬಾಗಾಯಿಗಲ್ಲಿಯ ಮಹ್ಮದ ಯುಸೂಫ್ ಅಯೂಬ್ ಕೋಟಿಹಾಳ(21) ಮತ್ತು ಝಂಡಾಕಟ್ಟಾ ಪ್ರದೇಶದ ಅರಕೇರಿ ಗಲ್ಲಿಯ ಸಮೀರ್ ಉರ್ಫ್ ಪಿ. ಕೆ. ನಭಿಲಾಲ ಇನಾಮದಾರ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒತ್ತಡವೇ ಕಾರಣ : ಸಿದ್ದರಾಮಯ್ಯಆರೋಪಿಗಳ ಬಳಿಯಿದ್ದ 9 ಸಾವಿರ ರೂ ಮೌಲ್ಯದ ಬಂಗಾರದ ಒಂದು ಉಂಗುರ, 25 ಸಾವಿರ ರೂ ಮೌಲ್ಯದ ಬಂಗಾರದ ಗಣಪತಿ ಚಿತ್ರ, 4 ಸಾವಿರ ರೂ ಮೌಲ್ಯದ ಬಂಗಾರದ ಲಕ್ಷ್ಮಿ ಚಿತ್ರವಿರುವ ನಾಣ್ಯ, ಒಂದು ವಾಚ್, 50 ಸಾವಿರ ಮೌಲ್ಯದ ಸೂತುಂಗುರ, ತಲಾ  75 ಸಾವಿರ ರೂ ಮೌಲ್ಯದ ಎರಡು ಬಂಗಾರದ ಚೈನ್, 1.75 ಲಕ್ಷ ಮೌಲ್ಯದ 35 ಗ್ರಾಂ ಚಿನ್ನದ ಬಳೆಗಳು ಸೇರಿ ಒಟ್ಟು 4,14,500 ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಬಸವನ ಬಾಗೇವಾಡಿ ಡಿವೈಎಸ್ಪಿ ಶಾಂತವೀರ ಈ., ಮುದ್ದೇಬಿಹಾಳ ಸಿಪಿಐ ಆನಂದ ವಾಘಮೋಡೆ, ತಾಳಿಕೋಟೆ ಪಿಎಸ್‌ಐಗಳಾದ ಶಿವಾಜಿ ಎಚ್. ಪವಾರ, ಗಂಗೂ ಜಿ. ಬಿರಾದಾರ, ಮತ್ತು ಸಿಬ್ಬಂದಿ ಪಾಲ್ಗೋಂಡಿದ್ದರು ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Published by: G Hareeshkumar
First published: November 8, 2020, 5:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories