HOME » NEWS » District » VIJAYAPURA MAN SURVIVES WITH HELP OF MOBILE AFTER FLOWN AWAY IN RAIN FLOOD MVSV SNVS

ಕತ್ತಲ ರಾತ್ರಿಯಲ್ಲಿ ಹಳ್ಳದಲ್ಲಿ ಕೊಚ್ಚಿಹೋದವನಿಗೆ ಜೀವ ಉಳಿಸಿತ್ತು ಜಾಲಿ ಕಂಟಿಯ ಮುಳ್ಳು ಮತ್ತು ಮೊಬೈಲ್

ವಿಜಯಪುರದ ತಿಕೋಟಾದ ಅತಾಲಟ್ಟಿ ಬಳಿ ಕತ್ತಲ ರಾತ್ರಿಯಲ್ಲಿ ಜೋರಾಗಿ ಬರುತ್ತಿದ್ದ ಮಳೆಯಲ್ಲೂ ಬೈಕ್ ಓಡಿಸುತ್ತಿದ್ದ ವ್ಯಕ್ತಿ ತೊರವಿ ಹಳ್ಳದಲ್ಲಿ ಕೊಚ್ಚಿಹೋಗಿದ್ದಾನೆ. ಅದೃಷ್ಟಕ್ಕೆ ಮುಳ್ಳಿಗೆ ಸಿಲುಕುತ್ತಾನೆ. ನಂತರ ಮೊಬೈಲ್​ನಿಂದ ಮನೆಯವರಿಗೆ ಫೋನ್ ಮಾಡಿ ಜೀವ ಉಳಿಸಿಕೊಂಡಿದ್ಧಾನೆ.

news18-kannada
Updated:October 13, 2020, 7:12 AM IST
ಕತ್ತಲ ರಾತ್ರಿಯಲ್ಲಿ ಹಳ್ಳದಲ್ಲಿ ಕೊಚ್ಚಿಹೋದವನಿಗೆ ಜೀವ ಉಳಿಸಿತ್ತು ಜಾಲಿ ಕಂಟಿಯ ಮುಳ್ಳು ಮತ್ತು ಮೊಬೈಲ್
ವಿಜಯಪುರದಲ್ಲಿ ಜೀವ ಉಳಿಸಿಕೊಂಡ ಬಂದೇನವಾಜ ಮೊಕಾಶಿ
  • Share this:
ವಿಜಯಪುರ: ಆತನ ಅದೃಷ್ಟ ನೆಟ್ಟಗಿತ್ತು. ಜೊತೆಗೆ ಮೊಬೈಲ್ ಕೂಡ ಕೈ ಹಿಡಿಯಿತು. ಸಮಯಕ್ಕೆ ಸರಿಯಾಗಿ ಆಪದ್ಭಾಂಧವರಂತೆ ಬಂದ ರಕ್ಷಣಾ ಸಿಬ್ಬಂದಿ ಆತನನ್ನು ಸುರಕ್ಷಿತವಾಗಿ ಹೊರಗೆ ತೆಗೆದಿದ್ದಾರೆ. ಈ ಮೂಲಕ ಆ ಯುವಕ ಪುನರ್ಜನ್ಮ ಪಡೆದಂತಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ಧಾರಾಕಾರ ಮಳೆಯಾಗಿದೆ.  ಜಿಲ್ಲೆಯ ಬಹುತೇಕ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.  ಹೀಗಾಗಿ ಬಹುತೇಕ ಕಡೆಗಳಲ್ಲಿ ವರುಣಾಘಾತದ ದೃಶ್ಯಗಳು ಕಂಡು ಬರುತ್ತಿವೆ. ಮೊನ್ನೆ ಭಾನುವಾರ ರಾತ್ರಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರದ ಯುವಕ ಬಂದೇನವಾಜ ಮೊಕಾಶಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಅತಾಲಟ್ಟಿಗೆ ಹೋಗಿದ್ದ.  ರಾತ್ರಿ ಧಾರಾಕಾರ ಮಳೆಯಾಗಿದೆ.  ಮಳೆ ನಿಂತ ಮೇಲೆ ಅತಾಲಟ್ಟಿಯಿಂದ ತನ್ನೂರು ಅಡವಿ ಸಂಗಾಪುರಕ್ಕೆ ಮರಳಲು ನಿರ್ಧರಿಸಿದ್ದಾನೆ.  ಆದರೆ, ರಾತ್ರಿ ವೇಳೆ ಣದೂ ಕೂಡ ಮಳೆಯ ವಾತಾವರಣದಲ್ಲಿ ಶಾರ್ಟ್‌ ಕಟ್ ರಸ್ತೆಯ ಮೂಲಕ ಹೋಗಲು ತೀರ್ಮಾನಿಸಿದ್ದಾನೆ.

ಕಿಕ್ ಹೊಡೆದು ಬೈಕ್ ಹತ್ತಿದ್ದೇ ತಡ ಸಾರವಾಡ ಮಾರ್ಗವಾಗಿ ಅಡವಿ ಸಂಗಾಪುರಕ್ಕೆ ಹೋಗುವ ರಸ್ತೆಯಲ್ಲಿ ತೆರಳಿದ್ದಾನೆ. ಈ ಸಂದರ್ಭದಲ್ಲಿ ಮಾರ್ಗ ಮಧ್ಯೆ ಹಳ್ಳದಲ್ಲಿಯೇ ರಸ್ತೆ ಇರುವುದರಿಂದ ಮಳೆ ನೀರು ಜೋರಾಗಿ ಹರಿಯುತ್ತಿದೆ.  ಆದರೂ, ಹುಂಬ ಧೈರ್ಯ ಮಾಡಿ ಬೈಕ್ ಓಡಿಸಿದ್ದಾನೆ. ತೊರವಿ ಹಳ್ಳದಲ್ಲಿ ನೀರಿನ ಪ್ರವಾಹ ಹೆಚ್ಚಾಗಿ ಬೈಕ್ ಸಮೇತ ಕೊಚ್ಚಿ ಹೋಗಿದ್ದಾನೆ. ಆದರೂ, ಧೈರ್ಯಗುಂದಿಲ್ಲ.  ನಂತರ ಈತ ಮುಂದೆ ಹೋಗಿ ಹಳ್ಳದ ಮಧ್ಯೆ ಇರುವ ಜಾಲಿ ಕಂಟಿಯ ಮುಳ್ಳಿಗೆ ಸಿಲುಕಿದ್ದಾನೆ. ಆಗ ತನ್ನ ಬಳಿ ಇದ್ದ ಮೊಬೈಲ್ ಮೂಲಕ ತನ್ನ ಮನೆಯವರಿಗೆ ಫೋನ್ ಮೂಲಕ ತಾನು ಹಳ್ಳದಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ: ಸರ್ಕಾರ ನಿವೇಶನ ಹಂಚಿದರೂ ಮರ ತೆರವು ಮಾಡದ ಅರಣ್ಯ ಇಲಾಖೆ; ಸಂತ್ರಸ್ತರ ಪರದಾಟ

ಆತನ ಮನೆಯವರು ತತ್​ಕ್ಷಣವೇ ಅಗ್ನಿಶಾಮಕ ದಳದ ಕಚೇರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಹಗ್ಗದ ಸಹಾಯದಿಂದ ಆತನನ್ನು ರಕ್ಷಿಸಿ ಹೊರ ತಂದಿದ್ದಾರೆ. ಈ ಮೂಲಕ ಬಂದೇನವಾಜ ಮೊಕಾಶಿ ಜೀವ ಉಳಿಸಿದ್ದಾರೆ.

ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ ಅದೃಷ್ಯವಶಾತ್ ಬೈಕ್ ಸವಾರನ ಜೊತೆಗಿದ್ದ ಮೊಬೈಲ್, ಕೂಡಲೇ ಸ್ಪಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಬೈಕ್ ಸವಾರನ ಅದೃಷ್ಟ ಆತನ ಜೀವ ಉಳಿಸಲು ಸಹಕಾರಿಯಾಗಿದೆ.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: October 13, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories