ಒಂದೇ ತಿಂಗಳಲ್ಲಿ ವಿಜಯಪುರದ ಜಲನಗರ ಪೊಲೀಸ್ ಠಾಣೆ 2ನೇ ಬಾರಿ ಸೀಲ್​ಡೌನ್; ಇಬ್ಬರೂ ಪಿಎಸ್ಐ ಕ್ವಾರಂಟೈನ್

ಸೋಂಕಿತ ಆರೋಪಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಇಬ್ಬರು ಪಿಎಸ್​ಐ  ಮತ್ತು ಇತರ ನಾಲ್ಕು ಜನ ಪೊಲೀಸರನ್ನು ಈಗ ಕ್ವಾರಂಟೈನ್ ಮಾಡಲಾಗಿದೆ. ಇದರಿಂದಾಗಿ ಒಂದೇ ತಿಂಗಳಲ್ಲಿ ಪೊಲೀಸ್ ಠಾಣೆಯೊಂದು ಎರಡನೇ ಬಾರಿ ಸೀಲ್​ಡೌನ್ ಆಗಿದ್ದು, ಈ ಠಾಣೆಯ ಪಕ್ಕದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನದ ಕಟ್ಟಡದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ.

news18-kannada
Updated:July 4, 2020, 2:54 PM IST
ಒಂದೇ ತಿಂಗಳಲ್ಲಿ ವಿಜಯಪುರದ ಜಲನಗರ ಪೊಲೀಸ್ ಠಾಣೆ 2ನೇ ಬಾರಿ ಸೀಲ್​ಡೌನ್; ಇಬ್ಬರೂ ಪಿಎಸ್ಐ ಕ್ವಾರಂಟೈನ್
ಒಂದೇ ತಿಂಗಳಲ್ಲಿ 2ನೇ ಬಾರಿಗೆ ಸೀಲ್​ಡೌನ್​ ಆದ ವಿಜಯಪುರದ ಜಲನಗರ ಪೊಲೀಸ್ ಠಾಣೆ.
  • Share this:
ವಿಜಯಪುರ (ಜು. 04); ವಿಜಯಪುರದ ಜಲನಗರದ ಈ ಪೊಲೀಸ್ ಠಾಣೆಯ ಸಮಯ ಈಗ ಸರಿಯಿಲ್ಲ ಅನಿಸುತ್ತಿದೆ. ಕೇವಲ ಒಂದೇ ತಿಂಗಳಲ್ಲಿ ಈ ಪೊಲೀಸ್ ಠಾಣೆ ಎರಡನೇ ಬಾರಿಗೆ ಸೀಲ್​ಡೌನ್ ಆಗಿದೆ.

ಕಳೆದ ಜೂ. 13 ರಂದು ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯ ಕಾನ್​ ಸ್ಟೇಬಲ್ ಒಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಂದು ಇಡೀ ಪೊಲೀಸ್ ಠಾಣೆಯನ್ನು ಡಿಸ್‌ ಇನ್​ಫೆಕ್ಷನ್ ಮಾಡಿ ಸೀಲ್​ಡೌನ್ ಮಾಡಲಾಗಿತ್ತು.  ಅಲ್ಲದೇ, ಅಂದು ಆ ಕಾನ್​ಸ್ಟೇಬಲ್​ ಜೊತೆಗೆ ಸಂಪರ್ಕಕ್ಕೆ ಬಂದಿದ್ದ 5 ಜನ ಪೊಲೀಸರನ್ನು ಕ್ವಾರಂಟೈನ್ ಮಾಡಲಾಗಿತ್ತು.

ಈ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಕಾನ್​ಸ್ಟೇಬಲ್ ವಿಜಯಪುರ ನಗರದಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗಿದ್ದ ಕಂಟೈನ್ಮೆಂಟ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಅವರಿಗೆ ಆ ಪ್ರದೇಶದಲ್ಲೇ ಸೋಂಕು ತಗುಲಿರುವುದನ್ನು ವಿಜಯಪುರ ಜಿಲ್ಲಾಡಳಿತ ದೃಢಪಡಿಸಿತ್ತು. ಈ ಘಟನೆ ನಡೆದು ಇನ್ನೂ ಒಂದು ತಿಂಗಳಾಗಿಲ್ಲ. ಈಗ ಮತ್ತೊಮ್ಮೆ ಜಲನಗರ ಪೊಲೀಸ್ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ. ಇದಕ್ಕೆ ಕಾರಣ ಕೊಲೆ ಪ್ರಕರಣ.

ಜೂ. 20ರಂದು ಯುವಕನೊಬ್ಬನ ಕೊಲೆ ನಡೆದಿತ್ತು. ಈ ಕೊಲೆಯ ಸಂಬಂಧ ಇಬ್ಬರು ಆರೋಪಿಗಳನ್ನು ಜೂ. 22 ರಂದು ಪೊಲೀಸರು ಬಂಧಿಸಿದ್ದರು. ಆದರೆ, ಮೂರನೇ ಆರೋಪಿಗಾಗಿ ಶೋಧ ನಡೆಸಿದ್ದರು. ಪೊಲೀಸರ ಹುಡುಕಾಟದಿಂದ ಬೆದರಿದ ಯುವಕ ತಾನೇ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಇದಾದ ಬಳಿಕ ಪೊಲೀಸರು ಜೂ. 25 ರಂದು ಮೂರನೇ ಆರೋಪಿಯನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದರು.
ಅಂದು ಈ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಜೂ. 25 ರಂದು ಈತನ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಈಗ ಈ ಆರೋಪಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಈತನನ್ನು ಈಗ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೊತೆಗೆ ಜಲನಗರ ಪೊಲೀಸ್ ಠಾಣೆಯನ್ನು ಡಿಸ್ ಇನ್​ಫೆಕ್ಷನ್ ಮಾಡಿ ಸೀಲ್ ಡೌನ್ ಮಾಡಲಾಗಿದೆ.

ಸೋಂಕಿತ ಆರೋಪಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ ಇಬ್ಬರು ಪಿಎಸ್​ಐ  ಮತ್ತು ಇತರ ನಾಲ್ಕು ಜನ ಪೊಲೀಸರನ್ನು ಈಗ ಕ್ವಾರಂಟೈನ್ ಮಾಡಲಾಗಿದೆ. ಇದರಿಂದಾಗಿ ಒಂದೇ ತಿಂಗಳಲ್ಲಿ ಪೊಲೀಸ್ ಠಾಣೆಯೊಂದು ಎರಡನೇ ಬಾರಿ ಸೀಲ್​ಡೌನ್ ಆಗಿದ್ದು, ಈ ಠಾಣೆಯ ಪಕ್ಕದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನದ ಕಟ್ಟಡದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ.

ಇದನ್ನು ಓದಿ: ರಾಜ್ಯದಲ್ಲಿ SSLC ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆ; ಪಾಲಕರಲ್ಲಿ ಹೆಚ್ಚಿದ ಆತಂಕ

ಆರೋಪಿಗಳಲ್ಲಿಯೂ ಸೋಂಕು ಪತ್ತೆಯಾಗುತ್ತಿರುವ ಕಾರಣ ವಿಜಯಪುರ ಜಿಲ್ಲಾ ಪೊಲೀಸರು ಆರೋಪಿಗಳನ್ನು ಈಗ ಪೊಲೀಸ್ ಠಾಣೆಯ ಬದಲು ಬೇರೋಂದು ಸ್ಥಳದಲ್ಲಿ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೇ, ಸಾಕಷ್ಟು ಮುನ್ನೆಚ್ಚರಿಕೆ ವಹಿಸುವಂತೆಯೂ ಎಸ್ಪಿ ಅನುಪಮ ಅಗ್ರವಾಹ ವಿಜಯಪುರ ಜಿಲ್ಲೆಯ ಎಲ್ಲ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
Published by: HR Ramesh
First published: July 4, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading