ಪರೀಕ್ಷೆಗೆ ಒಂದು ದಿನ ಮುಂಚೆ ಎಂಕಾಮ್ ವಿದ್ಯಾರ್ಥಿನಿ ಆತ್ಮಹತ್ಯೆ; ವಿಜಯಪುರ ಮಹಿಳಾ ವಿವಿಯಲ್ಲಿ ದುರಂತ

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತಿಮ ವರ್ಷದ ಎಂಕಾಂ ವಿದ್ಯಾರ್ಥಿನಿ ಐಶ್ವರ್ಯ ಎಂಬುವವರು ಪರೀಕ್ಷೆಗೆ ಒಂದು ದಿನ ಮುನ್ನ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

news18-kannada
Updated:September 21, 2020, 8:40 AM IST
ಪರೀಕ್ಷೆಗೆ ಒಂದು ದಿನ ಮುಂಚೆ ಎಂಕಾಮ್ ವಿದ್ಯಾರ್ಥಿನಿ ಆತ್ಮಹತ್ಯೆ; ವಿಜಯಪುರ ಮಹಿಳಾ ವಿವಿಯಲ್ಲಿ ದುರಂತ
ಆತ್ಮಹತ್ಯೆ
  • Share this:
ವಿಜಯಪುರ(ಸೆ. 21): ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆ ಯುವತಿ ಇಂದು ಅಂತಿಮ ಪರೀಕ್ಷೆ ಬರೆದು ತನ್ನೂರು ಸೇರಬೇಕಿತ್ತು.  ಮಗಳು ಬರುತ್ತಾಳೆಂದು ಬಡ ಪೋಷಕರು ಸಂತಸದಿಂದ ಕಾಯ್ದಿದ್ದರು.  ಆದರೆ, ಆಗಿದ್ದೇ ಬೇರೆ. ಮೊನ್ನೆಯಷ್ಟೇ ಸರಳವಾಗಿ ಮತ್ತು ಶಿಸ್ತುಬದ್ಧವಾಗಿ 11ನೇ ಘಟಿಕೋತ್ಸವ ಮುಗಿಸಿದ್ದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಿನ್ನೆ ದುರಂತ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಮೂಂದೂಡಲ್ಪಟ್ಟು ಈಗ ನಡೆಸಲಾಗುತ್ತಿರುವ ಸ್ನಾತಕೋತ್ತರ ಅಂತಿಮ ವರ್ಷದ ಪರೀಕ್ಷೆ ಬರೆಯಲು ಬಂದಿದ್ದ ಯುವತಿಯೊಬ್ಬಳು ಕೈಗೊಂಡ ದುಡುಕಿನ ನಿರ್ಧಾರ ಈಗ ಆಕೆಯ ಪೋಷಕರಷ್ಟೇ ಅಲ್ಲ, ಇಡೀ ವಿಶ್ವವಿದ್ಯಾಲಯದಲ್ಲಿ ಸೂತಕದ ಛಾಯೆ ಆವರಿಸಲು ಕಾರಣವಾಗಿದೆ. ಎಂಕಾಂ ಅಂತಿಮ ವರ್ಷದ ಕೊನೆಯ ಪರೀಕ್ಷೆ ಬರೆಯಬೇಕಿದ್ದ ಈ ವಿದ್ಯಾರ್ಥಿನಿ ಮಹಿಳಾ ವಿಶ್ವವಿದ್ಯಾಲಯದ ಹಾಸ್ಟೆಲ್​ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಐಶ್ವರ್ಯ ಶಂಕರ ನಾಟಿಕಾರ(23) ಎಂಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದರು. ಕಲಬುರಗಿ ಮೂಲದ ಶಂಕರ ನಾಟಿಕಾರ ಮತ್ತು ವಿಶಾಲಾಕ್ಷಿ ನಾಟಿಕಾರ ದಂಪತಿ ರಸ್ತೆ ಪಕ್ಕದಲ್ಲಿ ಚಹಾದಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಮಗಳನ್ನು ಚನ್ನಾಗಿ ಓದಿಸಿ ಮಗಳ ಮೂಲಕ ತಮ್ಮ ಕನಸು ಈಡೇರಿಸುವ ಆಸೆ ಹೊಂದಿದ್ದರು. ಆದರೆ ಆಗಿದ್ದೇ ಬೇರೆ.  ಐಶ್ವರ್ಯ ಶಂಕರ ನಾಟೀಕಾರ ತಾನು ತಂಗಿದ್ದ ಹಾಸ್ಟೇಲಿನ ಕೋಣೆಯಲ್ಲಿಯೇ ಮಂಚಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: Karnataka Rain: ಮಳೆಯ ಆರ್ಭಟಕ್ಕೆ ನಲುಗಿದ ರಾಯಚೂರು; ಕೊಚ್ಚಿ ಹೋದ ಸೇತುವೆ, ಕುಸಿದ 500ಕ್ಕೂ ಹೆಚ್ಚು ಮನೆಗಳು

ಕಲಬುರಗಿ ಮೂಲದ ಯುವತಿ ಲಾಕ್​ಡೌನ್ ಬಳಿಕ ಎಂ.ಕಾಂ. ಅಂತಿಮ ವರ್ಷದ ಪರೀಕ್ಷೆ ಬರೆಯಲು ಆಗಮಿಸಿದ್ದಳು. ಕೊರೋನಾ ಹಿನ್ನೆಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯದಲ್ಲಿರುವ ಹಾಸ್ಟೇಲಿನಲ್ಲಿ ಒಂದು ರೂಂ ನಲ್ಲಿ ಓರ್ವ ವಿದ್ಯಾರ್ಥಿನಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.  ಇಂದು ಕೊನೆಯ ಪರೀಕ್ಷೆ ಬರೆದು ವಿದ್ಯಾರ್ಥಿನಿ ಕಲಬುರಗಿಗೆ ಮರಳಬೇಕಿತ್ತು. ಆದರೆ, ಹಾಸ್ಟೇಲ್​ನಲ್ಲಿರುವ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ನಿನ್ನೆ ಮಧ್ಯಾಹ್ನ ಬೆಳಕಿಗೆ ಬಂದಿದೆ. ಯುವತಿಯ ಪೋಷಕರು ಮಧ್ಯಾಹ್ನ ಮಗಳಿಗೆ ಕರೆ ಮಾಡಿದ್ದರು. ಆದರೆ, ಆಕೆ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಐಶ್ವರ್ಯ ಶಂಕರ ನಾಟಿಕಾರ ಪೋಷಕರು ಮಗಳ ಸ್ನೇಹಿತೆಗೆ ಫೋನ್ ಮಾಡಿದ್ದಾರೆ. ಆ ಯುವತಿ ಬೇರೆ ಕಡೆ ಹೋಗಿದ್ದಳು. ಆದರೆ, ಆಕೆ ತನ್ನ ಮತ್ತೋಬ್ಬ ಸ್ನೇಹಿತೆಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದಾಳೆ. ಈ ಯುವತಿ ಬಂದು ನೋಡುವಷ್ಟರಲ್ಲಿ ಯುವತಿ ಮಂಚಕ್ಕೆ ಕೆಳಗೆ ಬಿದ್ದಿರುವುದು ಕಂಡು ಬಂದಿದೆ. ಆಗ ಉಳಿದವರು ಕೋಣೆಯ ಬಾಗಿಲು ಮುರಿದು ನೋಡಿದಾಗ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಓಂಕಾರ ಕಾಕಡೆ ನ್ಯೂಸ್ 18 ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಿರಾ ವಿಧಾನಸಭಾ ಉಪಚುನಾವಣೆ: ಬಿಜೆಪಿಗೆ ಪವರ್ ಸ್ಟ್ರೋಕ್ ಕೊಟ್ಟ ಕಾಂಗ್ರೆಸ್ ಕಟ್ಟಾಳುಗಳು

ಯುವತಿ ಐಶ್ವರ್ಯ ಶಂಕರ ನಾಟಿಕಾರಗೆ ಇತ್ತೀಚೆಗಷ್ಟೇ ಮದುವೆಯ ನಿಶ್ಚಿತಾರ್ಥವಾಗಿತ್ತು. ನಾಳೆ ಅಂತಿಮ ಪರೀಕ್ಷೆ ಇರುವಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ. ಓಂಕಾರ ಕಾಡಡೆ ಮತ್ತು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಈ ಮಧ್ಯೆ, ಸುದ್ದಿ ತಿಳಿದು ಸ್ಖಳಕ್ಕೆ ಆಗಮಿಸಿರುವ ವಿಜಯಪುರ ಗ್ರಾಮೀಣ ಪೊಲೀಸರು ಪರೀಶೀಲನೆ ನಡೆಸಿದ್ದಾರೆ. ಕಲಬುರಗಿಯಿಂದ ಸಂಜೆ ವಿಜಯಪುರಕ್ಕೆ ಬಂದ ಯುವತಿಯ ಪೋಷಕರು ಯುವತಿಯ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: September 21, 2020, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading