ದುರುಗ ಮುರಗಿಯವರ ಪ್ರತಿಭಟನೆ; ಶೂ ಕಳಚಿ ಗೌರವದಿಂದ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ

ತಮಗೆ ಎಸ್​ಟಿ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸಿಧೊಳ್ಳು ಸಮುದಾಯದವರಿಗೆ ಅಪರ ಜಿಲ್ಲಾಧಿಕಾರಿ ಗೌರವ ಸಲ್ಲಿಸಿ ಬಳಿಕ ಮನವಿ ಸ್ವೀಕರಿಸಿದ ಘಟನೆ ನಡೆದಿದೆ.

news18-kannada
Updated:September 25, 2020, 10:51 AM IST
ದುರುಗ ಮುರಗಿಯವರ ಪ್ರತಿಭಟನೆ; ಶೂ ಕಳಚಿ ಗೌರವದಿಂದ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ದುರುಗ ಮುರಗಿ ಸಮುದಾಯದವರ ಪ್ರತಿಭಟನೆ
  • Share this:
ವಿಜಯಪುರ: ಸಾಮಾನ್ಯವಾಗಿ ಪ್ರತಿಭಟನೆ ಎಂದರೆ ಸಾಕು ಅಪರ ಜಿಲ್ಲಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಗಳಿಂದ ಹೊರ ಬಂದು ಮನವಿ ಪತ್ರ ಸ್ವೀಕರಿಸುವುದು ಮಾಮೂಲು. ಆದರೆ, ಬಸವ ನಾಡಿನಲ್ಲಿ ನಿನ್ನೆ ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಅವರು ಪ್ರತಿಭಟನೆಗೆ ಬಂದವರ ಮತ್ತು ಅವರು ತಮ್ಮ ಜೊತೆ ತಂದಿದ್ದ ವಸ್ತುಗಳಿಗೆ ಧಾರ್ಮಿಕವಾಗಿ ಗೌರವ ನೀಡುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಷ್ಟೇ ಅಲ್ಲ, ಧಾರ್ಮಿಕ ಭಾವನೆಗಳ ಬಗ್ಗೆ ತಮಗಿರುವ ಶ್ರದ್ಧೆಯನ್ನು ತೋರಿಸಿದ್ದಾರೆ.

ಈ ಘಟನೆ ನಡೆದಿದ್ದು ವಿಜಯಪುರ ನಗರದಲ್ಲಿ.  ರೈತರ ಜಮೀನಿನ ಹಾದಿ ಸಮಸ್ಯೆ ಬಗೆಹರಿಸುವಂತೆ ಮತ್ತು ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಮತ್ತು ಸಿಧೊಳ್ಳು ಅಂದರೆ ದುರುಗ ಮುರುಗ ಸಮಾಜದವರು ಜಂಟಿಯಾಗಿ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದರು. ವಿಜಯಪುರ ನಗರದಲ್ಲಿರುವ ಅಂಬೇಡ್ಕರ ಸರ್ಕಲ್ ಬಳಿ ಸೇರಿದ ಅಖಂಡ ಕರ್ನಾಟಕ ರೈತರ ಸಂಘದ ಕಾರ್ಯಕರ್ತರು ಸಂಘದ ಮುಖಂಡ ಅರವಿಂದ ಕೃಷ್ಣಾಜಿ ಕುಲಕರ್ಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಇವರ ಜೊತೆಗೂಡಿದ್ದ ದುರುಗ ಮುರುಗ ಸಮುದಾಯದ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

Duruga Muragi community members
ದುರುಗ ಮುರಗಿ ಸಮಾಜದವರು ಮೈಗೆ ಚಾಟಿ ಬೀಸಿಕೊಂಡು ಪ್ರತಿಭಟನೆ


ಇದನ್ನೂ ಓದಿ: ನೂತನ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹುಬ್ಬಳ್ಳಿಯಲ್ಲಿ ರೈತರ ಪ್ರತಿಭಟನೆ

ದುರುಗ ಮುರುಗ ಸಮುದಾಯದ ಪುರುಷರು ವಂಶ ಪಾರಂಪರ್ಯವಾಗಿ ಬಂದಿರುವ ಪುಟ್ಟ ಗುಡಿಯನ್ನು ರಸ್ತೆಯ ಮೇಲಿಟ್ಟು ತಮ್ಮ ಮೈಮೇಲೆ ಚಾಟಿ ಏಟು ಬಾರಿಸಿಕೊಳ್ಳುವ ಮೂಲಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದುರುಗ ಮುರುಗ ಸಮಾಜದ ರಾಮವ್ವ ಸಿಂಧೋಳ್ಳು, ಯಲ್ಲವ್ವ ಸಿಂಧೋಳ್ಳು ಮತ್ತು ಯಲ್ಲಪ್ಪ ಸಿಂಧೋಳ್ಳು, ತಮ್ಮ ಮಕ್ಕಳು ಶಾಲೆಗೆ ದಾಖಲಾತಿ ಪಡೆಯಬೇಕೆಂದರೆ ಜಾತಿ ಪ್ರಮಾಣ ಪತ್ರ ಕೇಳುತ್ತಾರೆ. ಆದರೆ, ತಮ್ಮನ್ನು ಎಸ್.ಟಿ. ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು. ಅಲ್ಲದೇ, ಕೂಡಲೇ ಈ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Vijayapura ADC Dr. Audram
ಅಪರ ಜಿಲ್ಲಾಧಿಕಾರಿಯವರು ಶೂ ಕಳಚಿ ಸಿಧೊಳ್ಳು ಸಮುದಾಯದವರಿಗೆ ಗೌರವ ತೋರುವ ಮುನ್ನ.
ಅಲ್ಲದೇ, ಅಂಬೇಡ್ಕರ ಸರ್ಕಲ್​ನಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಅಲ್ಲಿಯೂ ಧರಣಿ ಕುಳಿತರು. ಈ ಸಂರ್ಭದಲ್ಲಿ ತಮ್ಮ ಕಚೇರಿಯಿಂದ ಪ್ರತಿಭಟನಾಕಾರರ ಬಳಿಗೆ ಮನವಿ ಪತ್ರ ಸ್ವೀಕರಿಸಲು ವಿಜಯಪುರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಆಗಮಿಸಿದರು. ಅಲ್ಲದೇ, ಪ್ರತಿಭಟನೆಗೆ ಕುಳಿತವರ ಬಳಿಗೆ ತೆರಳಿದರು. ಅಲ್ಲಿ ಕುಳಿತಿದ್ದ ಜನರ ಮಧ್ಯೆ ಇಟ್ಟಿದ್ದ ಕಟ್ಟಿಗೆಯಿಂದ ತಯಾರಿಸಿದ ಪುಟ್ಟ ದೇವರ ಗುಡಿ ಮತ್ತು ಮೂರ್ತಿಯನ್ನು ಗಮನಿಸಿದರು. ಧಾರ್ಮಿಕ ಭಾವನೆಯ ಅರಿವಾಗಿ ಪ್ರತಿಭಟನಾಕಾರರು ಕುಳಿತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ತಮ್ಮ ಕಾಲಲ್ಲಿದ್ದ ಶೂಗಳನ್ನು ಕಳಚಿದರು.ಇದನ್ನೂ ಓದಿ: Yadagiri: ಮಗು ಕಣ್ತೆರೆಯುವ ಮೊದಲೇ ಪೊದೆಯಲ್ಲಿ ಬಿಸಾಡಿದ ತಾಯಿ; ಯಾದಗಿರಿಯಲ್ಲಿ ಅಮಾನುಷ ಘಟನೆ

Duruga Muragi community members protest in Vijayapura
ದುರುಗ ಮುರಗಿ ಸಮಾಜದವರೊಂದಿಗೆ ಮಾತನಾಡುತ್ತಿರುವ ವಿಜಯಪುರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್


ನಂತರ ಪ್ರತಿಭಟನಾಕಾರರ ಬಳಿಗೆ ತೆರಳಿ ಸಮಯಚಿತ್ತದಿಂದ ಅವರ ಸಮಸ್ಯೆಗಳನ್ನು ಆಲಿಸಿದರು.  ಅಲ್ಲದೇ, ಮನವಿ ಪತ್ರವನ್ನು ಸ್ವೀಕರಿಸಿದರು. ನಂತರ ಅಲ್ಲಿಂದ ಮತ್ತೆ ತಮ್ಮ ಕಚೇರಿ ಕಡೆಗೆ ಬಂದು ಶೂಗಳನ್ನುೂ ಹಾಕಿಕೊಂಡು ಕರ್ತವ್ಯಕ್ಕೆ ತೆರಳಿದರು. ಈ ಮೂಲಕ ವಿಜಯಪುರ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ, ಸಮುದಾಯಗಳನ್ನು ಆರಾಧಿಸುವ ಮತ್ತು ಪೂಜಿಸುವ ಪ್ರೀತಯ ದೇವರ ಧಾರ್ಮಿಕ ಭಾವನೆಗಳಿಗೆ ತಮ್ಮ ಗೌರವವನ್ನು ಸಲ್ಲಿಸಿದರು.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: September 25, 2020, 10:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading