ಕ್ರಿಕೆಟ್ ಸ್ಟಾರ್​​​ಗಳ ಸವಾಲು ಸ್ವೀಕರಿಸಿ ಭೇಷ್ ಎನಿಸಿಕೊಂಡ ವಿಜಯಪುರದ ಬಾಲಕನ ವಿಡಿಯೋ ಈಗ ವೈರಲ್

ವಿಜಯಪುರ ಬಾಲಕ ವಿಷ್ಣುವರ್ಧನ್ ಪುಕಾಳೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್ ಎಡ್ಜ್ ನಿಂದ 180 ಬಾರಿ ಎಡೆಬಿಡದೆ ಚೆಂಡು ಪುಟಿಸಿ ಗಮನ ಸೆಳೆದಿದ್ದಾನೆ

news18-kannada
Updated:May 31, 2020, 11:33 AM IST
ಕ್ರಿಕೆಟ್ ಸ್ಟಾರ್​​​ಗಳ ಸವಾಲು ಸ್ವೀಕರಿಸಿ ಭೇಷ್ ಎನಿಸಿಕೊಂಡ ವಿಜಯಪುರದ ಬಾಲಕನ ವಿಡಿಯೋ ಈಗ ವೈರಲ್
ಮಾಜಿ ಕ್ರಿಕೆಟಿಗ ಸಚಿನ್​​ ಹಾಗೂ ಬಾಲಕ ವಿಷ್ಣುವರ್ಧನ್
  • Share this:
ವಿಜಯಪುರ(ಮೇ.31): ಬ್ರಿಟಿಷರ ಕೊಡುಗೆಯಾದ ಕ್ರಿಕೆಟ್ ಭಾರತದಲ್ಲಂತೂ ಈಗ ಅತೀ ಹೆಚ್ಚು ಜನರು ಇಷ್ಟಪಡುವ ಕ್ರೀಡೆಯಾಗಿದೆ. ಈ ಕ್ರಿಕೆಟ್ ಜಗತ್ತಿನಲ್ಲಿ ಒಂದಿಲ್ಲೊಂದು ದಾಖಲೆಗಳು ಮುರಿಯುತ್ತಲೇ ಇರುತ್ತವೆ. ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಕ್ರಿಕೆಟ್ ಆಟಕ್ಕೆ ಅವಕಾಶವಿಲ್ಲ. ಆದರೆ, ಹಳೆಯ ಪಂದ್ಯಗಳನ್ನು ಕ್ರೀಡಾ ಚಾನೆಲ್ ಗಳಲ್ಲಿ ನೋಡಬಹುದಾಗಿದೆ. ಹೀಗೆ ಲಾಕ್ ಡೌನ್ ಸಂದರ್ಭದಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಮ್ಮ ಬ್ಯಾಟಿನ ಎಡ್ಜ್ ಮೂಲಕ ಚೆಂಡನ್ನು ಬಾರಿಸಿ ಗಮನ ಸೆಳೆದಿದ್ದರು. ಅಷ್ಟೇ ಅಲ್ಲ, ಇದನ್ನು ಮಾಡಿ ತೋರಿಸುವಂತೆ ತನ್ನ ಸಹ ಕ್ರಿಕೇಟಿಗರಿಗೆ ಸವಾಲು ಹಾಕಿತ್ತು. ಈ ಯುವರಾಜ್​ ಸಿಂಗ್, ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಗೆ ಹಾಕಿದ್ದ ಸವಾಲನ್ನು ಬಸವನಾಡಿನ ಪೋರನೊಬ್ಬ ಸ್ವೀಕರಿಸಿ ಗಮನ ಸೆಳೆದಿದ್ದಾನೆ.

ಬಸವನಾಡು ವಿಜಯಪುರದಲ್ಲಿ 5ನೇ ತರಗತಿ ಓದುತ್ತಿರುವ 10 ವರ್ಷದ ಬಾಲಕ ವಿಷ್ಣುವರ್ಧನ್ ಈ ಸಾಧನೆ ಮಾಡಿ ಭೇಷ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ಕೊರೋನಾ ಎಮರ್ಜೆನ್ಸಿ ಮತ್ತು ಭಾರತ ಲಾಕಡೌನ್ ಸಂದರ್ಭದಲ್ಲಿ ಯುವರಾಜ್ ಸಿಂಗ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತನ್ನಂತೆ ಬ್ಯಾಟ್ ಎಡ್ಜ್​​ನಿಂದ ದ 25 ಬಾರಿ ಬಾಲ್ ಪುಟಿಸುವಂತೆ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ಹರಭಜನ್ ಸಿಂಗ್ ಅವರಿಗೆ ಸವಾಲು ಹಾಕಿದ್ದರು.

ಅದಕ್ಕೆ ಪ್ರತಿಯಾಗಿ ಕ್ರಿಕೆಟ್ ಲೋಕದ ದೇವರು ಸಚಿನ ತೆಂಡೂಲ್ಕರ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್ ಎಡ್ಜ್​ನಿಂದ ಚೆಂಡು ಪುಟಿಸಿದ್ದರು. ಅಲ್ಲದೇ, ಈ ಮೂಲಕ ಯುವರಾಜ್ ಸಿಂಗ್ ಗೆ ತೆಂಡೂಲ್ಕರ್ ಮರು ಚಾಲೆಂಜ್ ಹಾಕಿದ್ದರು. ಇದನ್ನು ನೋಡಿದ ವಿಜಯಪುರ ಬಾಲಕ ವಿಷ್ಣುವರ್ಧನ್ ಪುಕಾಳೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್ ಎಡ್ಜ್ ನಿಂದ 180 ಬಾರಿ ಎಡೆಬಿಡದೆ ಚೆಂಡು ಪುಟಿಸಿ ಗಮನ ಸೆಳೆದಿದ್ದಾನೆ. ಈ ಮೂಲಕ ಬಸವನಾಡಿನ ಬಾಲಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಿಶಿಷ್ಠ ಸಾಧನೆ ಮಾಡಿದ್ದಾನೆ.

ಇದನ್ನೂ ಓದಿ : ಕ್ಷುಲ್ಲಕ ಕಾರಣಕ್ಕೆ ಬೆಂಗಳೂರಲ್ಲಿ ನಡೆಯಿತು ಯುವಕನ ಬರ್ಬರ ಹತ್ಯೆ!

ಯುವರಾಜ್ ಸಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಮಧ್ಯೆ ನಡೆದ ಚಾಲೆಂಜ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಚಿನ್ ತೆಂಡೂಲ್ಕರ್ ಹಾಕಿದ್ದ ಸವಾಲನ್ನು ಸ್ವೀಕರಿಸಿದ ಬಾಲಕ ವಿಷ್ಣುವರ್ಧನ್ ಪುಕಾಳೆ ಈಗ ಅದನ್ನು ಸಾಧಿಸಿ ತೋರಿಸಿದ್ದು, ಇದೀಗ ಕ್ರಿಕೆಟ್ ತಾರೆಯರೊಂದಿಗೆ ಈತನ ವಿಡಿಯೋ ಕೂಡ ವೈರಲ್ ಆಗುತ್ತಿದೆ.  ಈ ಬಾಲಕನ ಕ್ರೀಡಾಸ್ಪೂರ್ತಿಗೊಂದು ಹ್ಯಾಟ್ಸ್​ಆಪ್​ ಹೇಳಲೇಬೇಕು.

ಈ ಬಾಲಕನ ಸಾಧನೆಯ ಬಗ್ಗೆ ಅವರ ಕ್ರಿಕೆಟ್ ಕೋಚ್ ಸಲಿಂ ತಾಜಿಮ್ ತರಕ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಈ ಬಾಲಕ ಮುಂದೊಂದು ದಿನ ಮತ್ತಷ್ಟು ಉತ್ತಮ ಸಾಧನೆ ಮಾಡಲಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
First published: May 31, 2020, 9:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading