HOME » NEWS » District » VATAL NAGARAJ URGES GOVT TO STOP ALL ILLEGAL STONE MINING ACROSS STATE ATVR SNVS

ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗಳು ಮುಚ್ಚಬೇಕು: ವಾಟಾಳ್ ನಾಗರಾಜ್ ಆಗ್ರಹ

ಶಿವಮೊಗ್ಗದಲ್ಲಿ ಸಂಭವಿಸಿದ ದುರಂತ ಬಹಳ ದೊಡ್ಡದು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಕ್ರಮವಾಗಿ ನಡೆಯುತ್ತಿರುವ ಎಲ್ಲಾ ಗಣಿಗಾರಿಕೆಗಳನ್ನ ಕೂಡಲೇ ಮುಚ್ಚಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

news18-kannada
Updated:January 25, 2021, 7:46 AM IST
ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗಳು ಮುಚ್ಚಬೇಕು: ವಾಟಾಳ್ ನಾಗರಾಜ್ ಆಗ್ರಹ
ವಾಟಾಳ್ ನಾಗರಾಜ್
  • Share this:
ರಾಮನಗರ: ಗಣಿಗಾರಿಕೆಯನ್ನ ಅಕ್ರಮವಿದ್ದರೆ ಸಕ್ರಮ ಮಾಡಿಕೊಳ್ಳಿ ಎಂಬ ಸಿಎಂ ಹೇಳಿಕೆ ವಿಚಾರಕ್ಕೆ ರಾಮನಗರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು. ನಗರದ ಐಜೂರು ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಯಡಿಯೂರಪ್ಪನವರಿಗೆ ಬುದ್ಧಿಕೆಟ್ಟಿದೆ. ಅವರ ಸರ್ಕಾರ ಬಂದಿರೋದೆ ಅಕ್ರಮ ಗಣಿಗಾರಿಕೆಯಿಂದ ಎಂದು ಕಿಡಿಕಾರಿದರು.

ಇನ್ನು, ಅವರ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಬಳ್ಳಾರಿಯ ಗಣಿ ಮಾಲೀಕರು. ಯಡಿಯೂರಪ್ಪನವರ ಸರ್ಕಾರವನ್ನ ಅವರೇ ತಂದಿದ್ದರು. ಹಾಗಾಗಿ ಯಡಿಯೂರಪ್ಪರಿಗೆ ಏನು ಬೇಕಿಲ್ಲ. ಅದಕ್ಕಾಗಿಯೇ ಅಕ್ರಮ ಗಣಿಗಾರಿಕೆಯ ಬಗ್ಗೆ ಲಘುವಾಗಿ ಮಾತನಾಡ್ತಾರೆ ಎಂದು ಟೀಕಿಸಿದರು.

ಶಿವಮೊಗ್ಗದಲ್ಲಿ ಸಂಭವಿಸಿದ ದುರಂತ ಬಹಳ ದೊಡ್ಡದ್ದು. ದುರಂತದಲ್ಲಿ ಸಾವನ್ನಪ್ಪಿರುವ ಕಾರ್ಮಿಕರಿಗೆ 5 ಲಕ್ಷದ ಬದಲಾಗಿ 1 ಕೋಟಿ ರೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ ಅವರು ರಾಜ್ಯದಲ್ಲಿರುವ ಎಲ್ಲಾ ಅಕ್ರಮ ಗಣಿಗಾರಿಕೆಗಳು ಮುಚ್ಚಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದಲ್ಲಿ ಎಂ.ಇ.ಎಸ್ ಸಂಘಟನೆ ಸಂಪೂರ್ಣವಾಗಿ ರದ್ದಾಗಬೇಕು. ಕರ್ನಾಟಕ ಏಕೀಕರಣ ಸಮಿತಿ ಮಾತ್ರ ಇರಬೇಕು. ಮುಂದಿನ 15 ದಿನಗಳ ಒಳಗೆ ರಾಜ್ಯ ಸರ್ಕಾರ ಎಂ.ಇ.ಎಸ್ ರದ್ದು ಮಾಡಬೇಕು. ಈ ವಿಚಾರವಾಗಿ ಇದೇ 30 ನೇ ತಾರೀಖು ರಾಜ್ಯದ ಎಲ್ಲಾ ರೈಲುಗಳು ಬಂದ್ ಮಾಡಲಾಗುತ್ತೆ. ಶಿವಸೇನೆ, ಮರಾಠ ಪ್ರಾಧಿಕಾರದ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿದರು.

ಇದನ್ನೂ ಓದಿ: ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ; ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್​

ಅಕ್ರಮ ಗಣಿಗಾರಿಕೆಗಳು ಮುಚ್ಚಬೇಕು:

ರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳನ್ನ ನಿರ್ದಾಕ್ಷಿಣ್ಯವಾಗಿ ಮುಚ್ಚಬೇಕು. ಈಗಾಗಲೇ ಇಂತಹ ಗಣಿಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಅಮಾಯಕರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಆದರೆ ಅವರ ಕುಟುಂಬಗಳಿಗೆ ಬಿಡಿಗಾಸು ಸಿಕ್ಕಿದೆ ಅಷ್ಟೇ. ಜೊತೆಗೆ ಈ ಗಣಿಗಾರಿಕೆಗಳಿಂದ ಅರಣ್ಯ ಭೂಮಿಯ ಜೊತೆಗೆ ರೈತರ ಕೃಷಿ ಭೂಮಿ ಒತ್ತುವರಿಯಾಗುವ ಜೊತೆಗೆ ನಾಶವಾಗುತ್ತಿದೆ. ಹಾಗಾಗಿ ಈ ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಳನ್ನ ಮುಚ್ಚಬೇಕೆಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.ಮುಂದೆ ಯಾರೇ ಗಣಿಗಾರಿಕೆ ಮಾಡಲು ಮುಂದೆ ಬಂದರೂ ಸಹ ಅಂತಹವರಿಗೆ ಸರ್ಕಾರಗಳು ಅವಕಾಶ ಕೊಡಬಾರದು. ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳ ವಿಚಾರವಾಗಿಯೂ ಸ್ಥಳೀಯ ಜಿಲ್ಲಾಡಳಿತ ಗಮನಹರಿಸಬೇಕು. ಅಕ್ರಮವಿದ್ದರೆ ಕಠಿಣ ಕ್ರಮವಹಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು.

ವರದಿ : ಎ.ಟಿ. ವೆಂಕಟೇಶ್ 
Published by: Vijayasarthy SN
First published: January 25, 2021, 7:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories