HOME » NEWS » District » VATAL NAGARAJ TALK AGAINST HINDU MISSIONARYS RESERVATION PROTEST PMTV MAK

ಮಠಾಧಿಪತಿಗಳು ಮಠದಲ್ಲಿರಬೇಕು, ಬೀದಿಗ್ಯಾಕೆ ಇಳಿದಿದ್ದೀರಿ?: ವಾಟಳ್‌ ನಾಗರಾಜ್‌ ಕಿಡಿ

ರಾಜ್ಯದ ಕೆಟ್ಟ ಮುಖ್ಯಮಂತ್ರಿ ಯಡ್ಯೂರಪ್ಪ, ಜಾತೀಯ ರಾಜಕಾರಣ ಬಿಟ್ಟು, ಭಾಷಾ ರಾಜಾಕರಣ ಮಾಡಿ‌. ಜಾತಿ ಬಿಟ್ಟು ಕನ್ನಡನಾಡಿಗಾಗಿ ಭಾಷಾ ಚಳುವಳಿಗೆ ಬನ್ನಿ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

news18-kannada
Updated:February 21, 2021, 6:16 PM IST
ಮಠಾಧಿಪತಿಗಳು ಮಠದಲ್ಲಿರಬೇಕು, ಬೀದಿಗ್ಯಾಕೆ ಇಳಿದಿದ್ದೀರಿ?: ವಾಟಳ್‌ ನಾಗರಾಜ್‌ ಕಿಡಿ
ವಾಟಾಳ್​ ನಾಗರಾಜ್.
  • Share this:
ಮೈಸೂರು: ಮೀಸಲಾತಿಗಾಗಿ ಹಲವು ಮಠಾಧೀಶರಿಂದ ಹೋರಾಟ ಮಾಡುತ್ತಿರುವುದಕ್ಕೆ, ಸ್ವಾಮೀಜಿಗಳ ನಡೆಯನ್ನ ಪ್ರಶ್ನಿಸಿ ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಠಾಧೀಶರ ವಿರುದ್ದ ಇಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿ, ಹೋರಾಟದಲ್ಲಿ ಭಾಗಿಯಾದ ಮಠಾಧೀಶರ ವಿರುದ್ದ ಆಕ್ರೋಶ ಹೊರಹಾಕಿದರು, ಮಠಾಧಿಶರು ಮಠದಲ್ಲಿರಬೇಕು ಅದನ್ನ ಬಿಟ್ಟು ಬೀದಿಗೆ ಬರಬೇಡಿ, ಅದರಲ್ಲು ಬಸವಣ್ಣನ ತತ್ವ ಒಪ್ಪಿದ್ರೆ ಅಂತವರು ಹೋರಾಟವನ್ನೆ ಮಾಡಬಾರದು ಅಂತ ಹೇಳುವ ಮೂಲಕ ವಿವಿಧ ಸಮುದಾಯದ ಸ್ವಾಮೀಗಳಿಗೆ ಟಾಂಗ್ ನೀಡಿದರು. 

ವಿಭೂತಿ, ಕಾವಿ,ಮಠ, ಜಗತ್‌ದ್ಗುರುಗಳು ಇವೇಲ್ಲದಕ್ಕು ಅವರದ್ದೆ ಆದಂತ ಸಿದ್ದಾಂತ ಇದೆ, ಇವೇಲ್ಲ ಇಟ್ಟುಕೊಂಡು ಎತ್ತರದ ಸ್ಥಾನದಲ್ಲಿರುವ ಶ್ರೀಗಳು ಬೀದಿಗೆ ಬಾರಬಾರದು, ಈ ರೀತಿ ನೀವು ಬೀದಿಗೆ ಬಂದು ಹೋರಾಟ ಮಾಡಿದ್ರೆ,  ನಿಮ್ಮ ಜ್ಞಾನದ ಶಕ್ತಿಗೆ ಕುಂದು ಬರಲಿದೆ, ನೀವು ಮಠದಲ್ಲೆ ಇದ್ದುಕೊಂಡು ಧರ್ಮಭೋಧನೆ ಮಾಡಬೇಕು ಎಂದು ಹೋರಾಟದಲ್ಲಿ ಭಾಗಿಯಾದ ಸ್ವಾಮೀಜಿಗಳಿಗೆ ಮನವಿ ಮಾಡಿದರು.

ಸ್ವಾಮೀಜಿಗಳ ಪ್ರತಿಭಟನೆ ಮಾಡೋದಕ್ಕೆ ಮಾಯಾವಿ ಯಡಿಯೂರಪ್ಪ ಕಾರಣ ಅಂತ ಆರೋಪಿಸಿದ ವಾಟಳ್‌ ನಾಗರಾಜ್‌, ನೀವೂ ಮಾಡಿ,ನೀವೂ ಮಾಡಿ ಎಂದು ಜಾತಿ ವಿಷ ಬೀಜ ಬಿತ್ತಿದ್ದಾರೆ. ರಾಜ್ಯದ ಕೆಟ್ಟ ಮುಖ್ಯಮಂತ್ರಿ ಯಡ್ಯೂರಪ್ಪ, ಜಾತೀಯ ರಾಜಕಾರಣ ಬಿಟ್ಟು, ಭಾಷಾ ರಾಜಾಕರಣ ಮಾಡಿ‌. ಜಾತಿ ಬಿಟ್ಟು ಕನ್ನಡನಾಡಿಗಾಗಿ ಭಾಷಾ ಚಳುವಳಿಗೆ ಬನ್ನಿ. ನಮ್ಮ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ, ತೆಲಂಗಾಣ ದಲ್ಲಿ ಭಾಷಾ ರಾಜ್ಯ ಇದೆ. ನಮ್ಮಲ್ಲೂ ಅದೆ ಕನ್ನಡದ ಭಾಷಾ ರಾಜ್ಯ ಮಾಡಬೇಕು, ಎಲ್ಲ‌ ಜಾತಿ ಜನರೇ ಭಾಷೆಗಾಗಿ ಹೋರಾಡಿ, ಮಠಾಧೀಶರೇ ನೀವು ಮಠದಲ್ಲೆ ಇರಿ ಎಂದು ಹೋರಾಟದಲ್ಲಿ ಭಾಗಿಯಾದ ಮಠಾಧಿಶರಿಗೆ ವಾಟಳ್‌ ನಾಗರಾಜ್‌ ಮನವಿ ಮಾಡಿದರು.

ಇದನ್ನೂ ಓದಿ: ಬಿಜೆಪಿ ವಿರುದ್ದ ಸಿದ್ದರಾಮಯ್ಯ ರಾಮಾಸ್ತ್ರ ಹೂಡಲು ಸಿದ್ದತೆ : ಹೇಗಿದೆ ಗೊತ್ತಾ ಸಿದ್ದರಾಮನಹುಂಡಿ ರಾಮ ಮಂದಿರ?

ಇನ್ನು ತಮಿಳುನಾಡಿನಲ್ಲಿ ಕಾವೇರಿ ನೀರಾವರಿ ಯೋಜನೆ ಕಾಮಗಾರಿ ವಿಚಾರವಾಗಿ, ಕೇಂದ್ರದ ಆರ್ಥಿಕ ನೆರವಿನಿಂದ ಹುಂಡಾರು, ವೈಗೈ ನದಿಗಳನ್ನ ಕಾವೇರಿಗೆ ಜೋಡಿಸಲು ಪಳನಿ ಸ್ವಾಮಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಇದು 118 ಕಿಲೋ ಮೀಟರ್​ ಉದ್ದದ ಕಾಲುವೆ ಮೂಲಕ ಗುಂಡಾರು ನದಿಗೆ ಜೋಡಣೆ ಮಾಡುತ್ತಿದ್ದಾರೆ, ಆದರೆ ನಮ್ಮಲ್ಲಿ ಮೇಕೆದಾಟು ಯೋಜನೆ ಮಾಡಿದ್ರೆ ವಿರೋಧ ಮಾಡ್ತಾರೆ. ಆದ್ರೆ ಯಡಿಯೂರಪ್ಪ ಬಿಜೆಪಿ ನಾಯಕರು ಯಾಕೆ ಧ್ವನಿ ಎತ್ತುತ್ತಿಲ್ಲ ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಈ ಯೋಜನೆಗೆ ಪ್ರಧಾನಿ ಅಸ್ತು ಎಂದಿದ್ದಾರೆ.
Youtube Video

ಸಿಎಂ ಪಳನಿಸ್ವಾಮಿ ಒಬ್ಬ 420, ಜಯಲಲಿತಾಗೆ ಕೈಕೊಟ್ಟ ,ಇಂದು ಎಲ್ಲರಿಗೂ ಕೈ ಕೊಡ್ತಿದ್ದಾನೆ.  ಮೋದಿಯ ಏಜೆಂಟ್ ಆಗಿರುವ ಪಳನಿಸ್ವಾಮಿ ಕಾಮಗಾರಿ ಮಾಡ್ತಿದ್ದಾನೆ ಕರ್ನಾಟಕ ರಾಜ್ಯಕ್ಕೆ ಬೆಂಕಿ ಬೀಳ್ತಿದೆ‌. ತಮಿಳುನಾಡು ನೀರಾವರಿ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು, ನಾಳೆ ಇಲ್ಲ ನಾಡಿದ್ದು ತಮಿಳುನಾಡು ಕರ್ನಾಟಕ ಗಡಿಯನ್ನ ಬಂದ್ ಮಾಡ್ತೀವಿ, ಹೊಸೂರು ಕನ್ನಡಿಗರದ್ದು ಅಲ್ಲಿ ಹೋರಾಟ ಮಾಡ್ತೀನಿ‌ ಇಂದಿನಿಂದ ತಮಿಳುನಾಡು, ಪಳನಿಸ್ವಾಮಿ, ಮೋದಿ ವಿರುದ್ದ ಹೋರಾಟ ಆರಂಭ ಎಂದು ಮೋದಿ ಹಾಗೂ ತಮಿಳುನಾಡು ಸಿಎಂ ವಿರುದ್ದ ಆಕ್ರೋಶ ಹೊರಹಾಕಿದರು.
Published by: MAshok Kumar
First published: February 21, 2021, 6:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories