HOME » NEWS » District » VATAL NAGARAJ TALK AGAINST BS YEDDYURAPPA MAK

ಯಡಿಯೂರಪ್ಪ ಇರುವುದರಿಂದ ವಿಧಾನಸೌಧ ಹುಚ್ಚರ ಆಸ್ಪತ್ರೆಯಾಗಿದೆ : ವಾಟಾಳ್ ನಾಗರಾಜ್ ಕಿಡಿ

ರೈತರ ವಿಚಾರವಾಗಿ ರಾಜ್ಯ ಸರ್ಕಾರ ಗಮನಹರಿಸುತ್ತಿಲ್ಲ, ಬದಲಾಗಿ ರೈತ ವಿರೋಧಿ ನೀತಿಗಳನ್ನ ಜಾರಿಗೆ ತರುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೊರೋನಾ ಬಂದಾಗಿನಿಂದಲೂ ಸಹ ಈ ಸರ್ಕಾರದಲ್ಲಿ ಯಾವುದೇ ಜನಪರವಾದ ಕೆಲಸಗಳು  ನಡೆಯುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:January 4, 2021, 3:58 PM IST
ಯಡಿಯೂರಪ್ಪ ಇರುವುದರಿಂದ ವಿಧಾನಸೌಧ ಹುಚ್ಚರ ಆಸ್ಪತ್ರೆಯಾಗಿದೆ : ವಾಟಾಳ್ ನಾಗರಾಜ್ ಕಿಡಿ
ವಾಟಾಳ್ ನಾಗರಾಜ್.
  • Share this:
ರಾಮನಗರ: ಯಡಿಯೂರಪ್ಪಗೆ ಬುದ್ಧಿ, ತಲೆ ಎರಡೂ ಇಲ್ಲ. ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಪ್ರಮುಖ ವಾರ್ಡ್‌ನಲ್ಲಿ ಇರಬೇಕಿತ್ತು. ಆದರೆ ದುರಾದೃಷ್ಟವಶಾತ್ ವಿಧಾನಸೌಧದಲ್ಲಿದ್ದಾರೆ. ಅವರಿಂದಲೇ ಈ ವಿಧಾನಸೌಧ ಹುಚ್ಚಾಸ್ಪತ್ರೆಯಂತಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ. ಮರಾಠ ಪ್ರಾಧಿಕಾರ ರಚನೆಯನ್ನು ವಿರೋಧಿಸಿ ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ರಾಮನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ರಾಜ್ಯ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಇದೇ 6 ನೇ ತಾರೀಖು ರಾಜ್ಯಾದ್ಯಂತ ರೈಲು ತಡೆ ಚಳವಳಿಯನ್ನ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಯಡಿಯೂರಪ್ಪನವರು ಅಲಮ್ಮಪ್ರಭುಗಳ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ಮಾಡಲು ಹೊರಟ್ಟಿದ್ದಾರೆ. ಆದರೆ ಅದು ಅಲ್ಲಮ್ಮಪ್ರಭುಗಳ ಅನುಭವ ಮಂಟಪವಲ್ಲ, ಬದಲಾಗಿ ಅದು ಯಡಿಯೂರಪ್ಪನವರ ಅನುಭವ ಮಂಟಪವಾಗುತ್ತದೆ. ಇದು ಕೇವಲ ರಾಜಕೀಯಕ್ಕಾಗಿ ಮಾಡಲು ಹೊರಟ್ಟಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪ ಇದನ್ನೆಲ್ಲ ಬಿಡಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರದ ಈ ಕ್ರಮವನ್ನ ವಿರೋಧಿಸಿ ನಾವು 6 ನೇ ತಾರೀಖು ಬೆಂಗಳೂರಿನ ಬಸವಣ್ಣನ ಪ್ರತಿಮೆಯೆದುರು ಮಲಗಿಕೊಂಡು ಹೋರಾಟ ಮಾಡ್ತೇವೆಂದು ರಾಜ್ಯ ಸರ್ಕಾರಕ್ಕೆ ಹಾಗೂ ಸಿಎಂ ಯಡಿಯೂರಪ್ಪಗೆ ಎಚ್ಚರಿಕೆ ಕೊಟ್ಟರು. ಇನ್ನು ಸಿಎಂ ಬದಲಾವಣೆ ವಿಚಾರಕ್ಕೆ ಮಾತನಾಡಿದ ವಾಟಾಳ್ ನಾಗರಾಜ್ ಯಡಿಯೂರಪ್ಪಗೆ ಬುದ್ಧಿ, ತಲೆ ಎರಡೂ ಇಲ್ಲ. ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಪ್ರಮುಖ ವಾರ್ಡ್‌ನಲ್ಲಿ ಇರಬೇಕಿತ್ತು. ಆದರೆ ಅವರು ವಿಧಾನಸೌಧದಲ್ಲಿದ್ದಾರೆ. ಈ ವಿಧಾನಸೌಧವೇ ಹುಚ್ಚಾಸ್ಪತ್ರೆಯಾಗಿದೆ ಎಂದು ಲೇವಡಿ ಮಾಡಿದರು. ಜೊತೆಗೆ ರಾಜ್ಯ ಸರ್ಕಾರ ಗ್ರಾಮಪಂಚಾಯಿತಿ ನೌಕರರನ್ನ ಅತ್ಯಂತ ಕೀಳಾಗಿ ನೋಡ್ತಿದೆ. ಅವರಿಗೆ ನೀಡುತ್ತಿರುವ ಸಂಬಳವನ್ನ ೧೦ ಸಾವಿರಕ್ಕೆ ಏರಿಕೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸರ್ಕಾರದಲ್ಲಿ ಜನಪರವಾದ ಯಾವುದೇ ಕೆಲಸ ಆಗುತ್ತಿಲ್ಲ:

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಆದರೆ ಅವರಿಂದ ಹಾಗೂ ಸರ್ಕಾರದ ಮಂತ್ರಿಗಳಿಂದ ಜನಪರವಾದ ಯಾವುದೇ ಕೆಲಸಗಳು ಆಗುತ್ತಿಲ್ಲವೆಂದು ವಾಟಾಳ್ ನಾಗರಾಜ್ ಆಕ್ರೋಶವ್ಯಕ್ತಪಡಿಸಿದರು. ಇನ್ನು ಯಡಿಯೂರಪ್ಪ ಸರ್ಕಾರದ ಮಂತ್ರಿಮಂಡಲ ಸಂಪೂರ್ಣವಾಗಿ ಕುಲಗಟ್ಟಿದೆ, ಯಾರು ಸಹ ಸಾಮಾನ್ಯ ಜನರ ಬಗ್ಗೆ ಕಾಳಜಿವಹಿಸುತ್ತಿಲ್ಲ. ಕೇವಲ ರಾಜಕೀಯವಾಗಿ ಆರೋಪ ಪ್ರತ್ಯಾರೋಪಗಳನ್ನ ಮಾಡಿಕೊಂಡು ಕಾಲಕಳೆಯುತ್ತಿದ್ದಾರೆಂದು ಕಿಡಿಕಾರಿದರು.

ಇದನ್ನೂ ಓದಿ: ಮದುವೆ ಮನೆಯಲ್ಲಿ ಕನ್ನಡದ ಕಂಪು; ಕನ್ನಡ ಸಮ್ಮೇಳನದ ರೀತಿಯಲ್ಲಿಯೇ ಕಲ್ಯಾಣ ಸಂಭ್ರಮ

ರೈತರ ವಿಚಾರವಾಗಿ ರಾಜ್ಯ ಸರ್ಕಾರ ಗಮನಹರಿಸುತ್ತಿಲ್ಲ, ಬದಲಾಗಿ ರೈತ ವಿರೋಧಿ ನೀತಿಗಳನ್ನ ಜಾರಿಗೆ ತರುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೊರೋನಾ ಬಂದಾಗಿನಿಂದಲೂ ಸಹ ಈ ಸರ್ಕಾರದಲ್ಲಿ ಯಾವುದೇ ಜನಪರವಾದ ಕೆಲಸಗಳು  ನಡೆಯುತ್ತಿಲ್ಲ. 100 ಕೋಟಿ ವೆಚ್ಚದಲ್ಲಿ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲು ಹೊರಟ್ಟಿದ್ದಾರೆ.
Youtube Video

ಆದರೆ ಅದೇ ಹಣವನ್ನ ರಾಜ್ಯದ ಬಡವರಿಗೆ ಖರ್ಚು ಮಾಡಲಿ. ರಾಜ್ಯದಲ್ಲಿ ಕೊರೋನಾ ಬಂದಾಗಿನಿಂದ ಎಷ್ಟೋ ಜನ ಯುವಕರು ಕೆಲಸ ಕಳೆದುಕೊಂಡಿದ್ದಾರೆ. ಅಂತಹ ಯುವಕರಿಗೆ ಉದ್ಯೋಗ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ವಾಟಾಳ್ ನಾಗರಾಜ್  ಎಚ್ಚರಿಕೆ ನೀಡಿದ್ದಾರೆ.
Published by: MAshok Kumar
First published: January 4, 2021, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories