ಬೆಳಗಾವಿ (ಜೂನ್. 29); ದೇಶದಲ್ಲಿ ಕೋವಿಡ್ ಸೋಂಕು ವಿರುದ್ಧ ಹೋರಾಟ ಮಾಡಲು ಎಲ್ಲರಿಗೂ ಉಚಿತ ಲಸಿಕೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದರೇ ಲಸಿಕೆ ಮಾತ್ರ ಎಲ್ಲರಿಗೂ ಸಿಗುತ್ತಿಲ್ಲ. ಬೆಳಗಾವಿಯಲ್ಲಿ ಎರಡು ದಿನ ಲಸಿಕೆ ಅಭಾವ ಉಂಟಾಗಿದ್ದು, ಇಂದು ಲಸಿಕೆ ಪಡೆಯಲು ಜನರಿಂದ ಲಸಿಕಾ ಕೇಂದ್ರದ ಎದುರು ನೂಕನುಗ್ಗಲು ಉಂಟಾಯಿತು. ಬೆಳಗಾವಿ ಮಹಾರಾಷ್ಟ್ರ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ಇದೀಗ ಡೆಲ್ಪಾ ಪ್ಲಸ್ ಸೋಂಕಿನ ಭೀತಿ ಎದುರಾಗಿದೆ. ಅನೇಕರು ಲಸಿಕೆ ಪಡೆಯಲು ಮುಂದಾಗಿದ್ದು, ಇನ್ನೂ ಖಾಸಗಿ ಕಂಪನಿಗಳು ಲಸಿಕೆ ಪಡೆದರೇ ಮಾತ್ರ ಕೆಲಸಕ್ಕೆ ಹಾಜರಾಗಲು ಕಡ್ಡಾಯ ಮಾಡಿದ್ದಾರೆ. ಇದರಿಂದ ಅನೇಕರು ನೂರಾರು ಜನ ಲಸಿಕೆ ಪಡೆಯಲು ಮುಂದಾಗಿದ್ದು, ಆದರೇ ಲಸಿಕೆ ಎಲ್ಲರಿಗೂ ಸಿಗುತ್ತಿಲ್ಲ.
ಕರ್ನಾಟಕಕ್ಕೆ ಸದ್ಯ ಡೆಲ್ಪಾ ಪ್ಲಸ್ ರೂಪಾಂತರಿ ಸೋಂಕಿನ ಭೀತಿ ಎದುರಾಗಿದ್ದು, ಮೂರನೇ ಅಲೆಯನ್ನು ತಡೆಗಟ್ಟಲು ಎಲ್ಲರಿಗೂ ಲಸಿಕೆ ಹಾಕಲು ಸರ್ಕಾರ ಮುಂದಾಗಿದೆ. ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ಲಸಿಕೆ ಪಡೆಯಬೇಕು ಎನ್ನುವುದು ಮುಖ್ಯವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 150 ಕಡೆಗಳಲ್ಲಿ ಕೊರೋನಾ ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ. ಆದರೇ ಶನಿವಾರ, ಭಾನುವಾರು ಎರಡು ದಿನ ಎಲ್ಲಿಯೂ ಸಲಿಕೆ ಸಿಗಲಿಲ್ಲ. ಇದು ಜನರ ನಿರಾಶೆಗೆ ಕಾರಣವಾಗಿದೆ. ಅನೇಕ ಖಾಸಗಿ ಕಂಪೆನಿಗಳು ಲಸಿಕೆ ಪಡೆದ್ರೇ ಮಾತ್ರ ಕೆಲಸಕ್ಕೆ ಹಾಜರು ಮಾಡಿಕೊಳ್ಳಲು ಕಡ್ಡಾಯ ಮಾಡಿದ್ದಾರೆ. ಇದರಿಂದ ಸಹ ಅನೇಕ ಉದ್ಯೋಗಿಗಳು ಲಸಿಕಾ ಕೇಂದ್ರದ ಕಡೆ ಬಂದು ವಾಪಸ್ ಹೋಗಿದ್ದರು.
ಬೆಳಗಾವಿಯಲ್ಲಿ ಇಂದು ಬೆಳಗ್ಗೆಯಿಂದಲೇ ಬಿಮ್ಸ್ ಆಸ್ಪತ್ರೆಯಲ್ಲಿ ನೂರಾರು ಜನ ವಿದ್ಯಾರ್ಥಿಗಳು, ವೃದ್ಧರು ಹಾಗೂ 45 ವರ್ಷ ಮೇಲ್ಪಟ್ಟವರು ಬಂದು ಕಾದು ನಿಂತಿದ್ದರು. ಇಲ್ಲಿನ ಸಿಬ್ಬಂಧಿ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೇ ಆಸ್ಪತ್ರೆಯ ಸಿಬ್ಬಂದಿಗಳು ಜನ ದಟ್ಟಣೆ ನೋಡಿ ಶೆಟರ್ ಹಾಕಿದ್ರು. ಕೇವಲ 20 ಜನರನ್ನು ಒಳಗೆ ಬಿಟ್ಟು ಶೆಟರ್ ಹಾಕಿದ್ದರು. ಹಿರಿಯ ನಾಗರೀಕರಿಗೆ ಪ್ರತ್ಯೇಕ ಸರದಿ ಸಾಲು ಇಲ್ಲದೇ ಸುಡುವ ಬಿಸಿಲಿನಲ್ಲಿ ನಿಂತು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ಅನೇಕರು ಲಸಿಕೆ ತೆಗೆದುಕೊಳ್ಳುವ ಭರದಲ್ಲಿ ನೂಕುನುಗ್ಗಲು ನಡೆಸಿದ್ದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಯಾರು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ; ಪ್ರಿಯಾಂಕ್ ಖರ್ಗೆ
ಬೆಳಗಾವಿ ಜಿಲ್ಲೆಯಲ್ಲಿ 37 ಲಕ್ಷ ಜನರಿಗೆ ಲಸಿಕೆ ಕೊಡುವ ಗುರಿಯನ್ನು ಆರೋಗ್ಯ ಇಲಾಖೆಯನ್ನು ಹೊಂದಿದೆ. ಆದರೇ ಈ ವರೆಗೆ ಕೇವಲ 9 ಲಕ್ಷ ಜನರಿಗೆ ಒಂದು ಡೋಸ್ ಹಾಗೂ 2 ಲಕ್ಷ ಎರಡು ಡೋಸ್ ನೀಡಲಾಗಿದೆ. ಲಸಿಕೆ ನೀಡಲು ಆರಂಭಿಸ ಸಂದರ್ಭದಲ್ಲಿ ಅನೇಕರು ಲಸಿಕೆ ಹಾಕಿಸಿಕೊಳ್ಳಲು ಹಿಂದೆಟು ಹಾಕಿದರು.
ಇದನ್ನೂ ಓದಿ: Siddaramaiah| ಕಾಂಗ್ರೆಸ್ನಲ್ಲಿ ಗೊಂದಲ ಇಲ್ಲ, ಎಲ್ಲವೂ ಮಾಧ್ಯಮ ಸೃಷ್ಟಿ; ಸಿದ್ದರಾಮಯ್ಯ ಸ್ಪಷ್ಟನೆ
ಆದರೆ ಇದೀಗ ಲಸಿಕೆಗಾಗಿ ನೂಕುನುಗ್ಗಲು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಲಸಿಕೆಯನ್ನು ನೀಡಬೇಕು. ಬೇಡಿಕೆಗೆ ಅನುಗುಣವಾಗಿ ಲಸಿಕೆ ಪೂರೈಕೆಯಾದ್ರೆ ಈ ಸಮಸ್ಯೆ ಕಡಿಮೆಯಾಗಲಿದೆ. ಇಲ್ಲವಾದಲ್ಲಿ ಜನರಿಗು ನಿತ್ಯ ಲಸಿಕೆ ಕೇಂದ್ರಗಳ ಮುಂಭಾಗದಲ್ಲಿ ಗಲಾಟೆ ಮಾಡೋದು ಸಾಮಾನ್ಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ