news18-kannada Updated:August 4, 2020, 5:41 PM IST
ಕಡಲ್ಕೊರೆತ.
ಕಾರವಾರ (ಆಗಸ್ಟ್ 04); ಕಳೆದ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಬಂದು ಜನರ ಬದುಕು ಮೂರಾಬಟ್ಟೆ ಮಾಡಿ ಇಂದಿಗೆ ಬರೋಬ್ಬರಿ ಒಂದು ವರ್ಷ. ಕಾಕತಾಳೀಯ ಎಂಬಂತೆ ಬರೋಬ್ಬರಿ ಒಂದು ವರ್ಷ ತುಂಬಿದ ಇದೇ ದಿನಕ್ಕೆ ಜಿಲ್ಲೆಯಲ್ಲಿ ಮತ್ತೆ ಭಾರೀ ಮಳೆ ಆಗುತಿದ್ದು, ಕಡಲ ಅಬ್ಬರಕ್ಕೆ ಬೆಸ್ತರು ಕಂಗಾಲಾಗಿದ್ದಾರೆ. ಮತ್ತೆ ಕಳೆದ ವರ್ಷದ ಪ್ರವಾಹ ಮರುಕಳಿಸುತ್ತಾ? ಎಂಬ ಭಯದಲ್ಲಿ ಇದ್ದಾರೆ.
ಇಂದಿನ ದಿನಾಂಕ ಅಗಸ್ಟ್ 4 ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಕಳೆದ ವರ್ಷ ಇವತ್ತಿನ ದಿನ ಅಕ್ಷರಶಃ ನರಕ ಸದೃಶ್ಯದ ದಿನ. ಎಲ್ಲಿ ನೋಡಿದರೂ ಭಾರೀ ಮಳೆ. ಪ್ರವಾಹ, ಸಮುದ್ರದ ಅಲೆಗಳ ರೌದ್ರ ನರ್ತನ. ಜಿಲ್ಲೆಯ ನದಿಗಳ ಪ್ರವಾಹದಿಂದಾಗಿ ನದಿ ತಟದ ಜನರ ಬದುಕು ಅಯೋಮಯವಾಗಿತ್ತು. ಗಂಜಿ ಕೇಂದ್ರಕ್ಕೆ ಸೇರಲು ಹವಣಿಸುತ್ತಿದ್ದ ಜನ, ಮನೆ ಸದಸ್ಯರ ಮುಂದೇನೆ ನೋಡ ನೋಡುತ್ತಿದಂತೆ ಧರಶಾಹಿಯಾದ ಮನೆಗಳು, ಬದುಕು ಕಟ್ಟಿಕೊಳ್ಳಲು ಹರಸಾಹಸ ಹೀಗೆ ಒಂದೋ ಎರಡೋ ಅಯ್ಯೋ ಆ ಮಳೆ ತಂದಿಟ್ಟ ಸಮಸ್ಯ ಬೆಟ್ಟದಷ್ಟು.
ಇವತ್ತಿಗೆ ಒಂದು ವರ್ಷ ತುಂಬಿದೆ ಈ ಮದ್ಯೆ ಮೂರಾಬಟ್ಟೆ ಆದ ಬದುಕು ಇಂದು ಕೂಡಾ ಹಾಗೆ ಉಳಿದುಕೊಂಡಿದ್ದೆ ಈ ನಡುವೆ ಕೊರೋನಾ ಮಹಾಮಾರಿಗೆ ಗಾಯದ ಮೇಲೆ ಬರೆ ಬಿದ್ದಿದೆ. ಈಗ ಮತ್ತೆ ಇ ದಿನ ಮರುಕಳಿಸುವಂತೆ ಇವತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿದೆ, ಕಡಲ ಅಬ್ಬರಕ್ಕೆ ಕೊರೆತ ಉಂಟಾಗಿ ಮೀನುಗಾರರ ಬದುಕಿನಲ್ಲಿ ಪ್ರಕೃತಿಯ ಆಟ ಮುಂದುವರೆದಿದೆ. ಮತ್ತೆ ಕಳೆದ ವರ್ಷದ ಪ್ರವಾಹ ಬರೊತ್ತಾ ಎನ್ನುವ ಆತಂಕ ಸೃಷ್ಟಿ ಆಗಿದೆ.
ಕಳೆದ ನಾಲ್ಕು ದಿನದ ಹಿಂದೆ ಆಳ ಸಮುದ್ರ ಮೀನುಗಾರಿಕೆ ಆರಂಭವಾಗಿತ್ತು ಹೊಸ ಆಸೆಯೊಂದಿಗೆ ಇದ್ದ ಮೀನುಗಾರರಿಗೆ ಮತ್ತೆ ಪೃಕೃತಿ ಹೊಡೆತ ಕೊಟ್ಟಿದೆ..ಆಳ ಸಮುದ್ರ ಮೀನುಗಾರಿಕೆ ಮತ್ತು ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಲಾಗದೆ ಮೀನುಗಾರಿಕೆ ನಿಷೇದವಾಗಿದೆ..ಮತ್ತೆ ಆರ್ಥಿಕ ಸ್ಥಿತಿ ಚಿಗುರುವ ಸಮಯದಲ್ಲಿಯೇ ಪ್ರಕೃತಿ ಮುನಿಸಿಕೊಂಡಿದೆ..ಹೀಗೆ ಮತ್ತೆ ಪ್ರವಾಹದ ಆತಂಕ ವರ್ಷದ ದಿನವೇ ಕಾಡುತ್ತಿದೆ.
ಇನ್ನು ಕಳೆದ ವರ್ಷ ಇದೆ ದಿನಕ್ಕೆ ಬಹುತೇಕ ಕರಾವಳಿ ತಾಲೂಕುಗಳು ಮುಳುಗಿ ಹೋಗಿದ್ದವು, ಜಿಲ್ಲೆಯ ಕದ್ರಾ ಜಲಾಶಯದಿಂದ ನೀರು ಹರಿಬಿಟ್ಟ ಪರಿಣಾಮ ಕಾಳಿ ನದಿ ತಟದ ಜನರು ಮನೆ ಮಠ ಕಳೆದುಕೊಂಡಿದ್ದರು. ಜಿಲ್ಲೆಯ ಕಾಳಿ, ಅಘನಾಶಿನಿ, ಗಂಗಾವಳಿ ನದಿ ಪ್ರವಾಹದ ಮಟ್ಟವನ್ನ ಮೀರಿ ಹರಿದ್ರಿಂದ ಇಲ್ಲಿನ ಮನೆಗಳಿಗೆ ನೀರು ನುಗ್ಗಿ ಹದಿನೈದಕ್ಕೂ ಹೆಚ್ಚು ದಿನ ಇಲ್ಲಿನ ಜನ ಕಾಳಜಿ ಕೆಂದ್ರದಲ್ಲಿ ಆಸರೆ ಪಡೆದಿದ್ದರು.
ಇದನ್ನೂ ಓದಿ : ಮಾಜಿ ಸಿಎಂ ಸಿದ್ಧರಾಮಯ್ಯರಿಗೆ ಕೊರೋನಾ ಪಾಸಿಟೀವ್ ಪತ್ತೆ; ಮೊಮ್ಮಗ ಧವನ್ ಕ್ವಾರಂಟೈನ್
ಇನ್ನು ಕೆಲವರು ಸಂಭದಿಕರ ಮನೆ ಸೇರಿಕೊಂಡಿದ್ರು..ಮೀನುಗಾರರ ಸ್ಥಿತಿ ಅಂತೂ ಹೇಳತೀರದ್ದಾಗಿತ್ತು, ಈಗ ಮತ್ತೆ ಮಳೆ ಸುರಿಯುತ್ತಿದೆ ಜಿಲ್ಲೆಯಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಭಾರೀ ಗಾಳಿಯೊಂದಿಗೆ ಮಳೆ ಬೀಳಲಿದೆ ಎನ್ನೋದು ಹವಮಾನ ಇಲಾಖೆಯ ಮಾಹಿತಿ ಆಗಿದೆ..ಈಗಾಗಲೆ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಸಮುದ್ರದ ಕಡಲ ಅಬ್ಬರ ಜೋರಾಗಿದ್ದು ಅಲೆಗಳ ರೌದ್ರ ನರ್ತನಕ್ಕೆ ಸಮುದ್ರ ತಟದ ಜನರು ಆತಂಕದಲ್ಲಿದ್ದಾರೆ, ಮೀನುಗಾರಿಕಾ ದೋಣಿಗಳು ಮತ್ತೆ ದಡ ಸೇರಿವೆ, ಮತ್ತೆ ಮಳೆ ನಿರಂತರವಾಗಿದ್ರೆ ಪ್ರವಾಹದ ದಿನ ಮರುಕಳಿಸಲಿದೆ ಎನ್ನೋ ಆತಂಕ ಕ್ಷಣ ಕ್ಷಣಕ್ಕೂ ಕಾಡುತ್ತಿದೆ.
ಒಟ್ಟಾರೆ ಕಳೆದ ವರ್ಷದ ಪ್ರವಾಹದ ದೃಶ್ಯಗಳು ಇಂದಿಗೂ ಕಣ್ಣಿಗೆ ರಾಚುತ್ತಿರುವಾಗ್ಲೆ ಮತ್ತೆ ಇದೆ ದಿನಕ್ಕೆ ಮಳೆ ಅಬ್ಬರ ಹೆಚ್ಚಾಗಿ ಸಾಕಷ್ಟು ಹಾನಿ ಆಗಿದೆ..ಮತ್ತೆ ನಿರಂತರ ಮಳೆ ಆಗುವ ಲಕ್ಷಣ ಇದಿದ್ದು ಜನರ ಆತಂಕ ಇನ್ನಷ್ಟು ಹೆಚ್ಚಿಸಿದೆ. ಪ್ರವಾಹಕ್ಕೆ ಮೂರಾಬಟ್ಟೆ ಆದ ಬದುಕು ಕಟ್ಟಿಕೊಳ್ಳುತ್ತಿರುವಾಗಲೆ ಈಗ ಕೊರೋನಾ ದೊಂದಿಗೆ ಮಳೆ ಕೊಡುತ್ತಿರುವ ಬರೆ ಬದುಕು ಸಾಕಾಗಿಸಿದೆ..
Published by:
MAshok Kumar
First published:
August 4, 2020, 5:39 PM IST