HOME » NEWS » District » UTTARA KANNADA POLICE SOLVE A 30 YEAR OLD CRIME USING NEW SOFTWARE IN KARWAR SKTV DKK

Crime News: ಹೊಸಾ ಸಾಫ್ಟ್​ವೇರ್ ಬಳಸಿ 30 ವರ್ಷ ಹಿಂದಿನ ಪ್ರಕರಣಗಳನ್ನು ಬೇಧಿಸಿದ ಉತ್ತರ ಕನ್ನಡ ಪೋಲೀಸ್, ವಾಹ್ ! ಎನ್ನುತ್ತಿದ್ದಾರೆ ಜನ !

ವಿವಿಧ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ಜಾಮೀನು ಪಡೆದ ನಂತರ ವಿಚಾರಣಗೆ ಹಾಜರಾಗದೇ ಹಲವು ಪ್ರಕರಣಗಳ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಹಲವರು ಹೊರ ದೇಶಗಳಲ್ಲಿ ನೆಲೆಸಿದ್ದು, ಕೆಲವರು ಮುಂಬೈ, ಗೋವಾ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯದಲ್ಲಿ ಇದ್ದಿದ್ದರಿಂದ ಹಳೆಯ ಪ್ರಕರಣಗಳ ಆರೋಪಿಗಳನ್ನ ನ್ಯಾಯಾಲಯದ ಮುಂದೆ ಹಾಜರು ಪಡಿಸುವುದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು.

news18-kannada
Updated:May 3, 2021, 7:35 AM IST
Crime News: ಹೊಸಾ ಸಾಫ್ಟ್​ವೇರ್ ಬಳಸಿ 30 ವರ್ಷ ಹಿಂದಿನ ಪ್ರಕರಣಗಳನ್ನು ಬೇಧಿಸಿದ ಉತ್ತರ ಕನ್ನಡ ಪೋಲೀಸ್, ವಾಹ್ ! ಎನ್ನುತ್ತಿದ್ದಾರೆ ಜನ !
ಉತ್ತರ ಕನ್ನಡ ಪೋಲೀಸರ ಕಾರ್ಯಾಚರಣೆ
  • Share this:
ಕಾರವಾರ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದರೂ ತಲೆ ಮರೆಸಿಕೊಂಡು ತಿರುಗುತ್ತಿದ್ದ ಆರೋಪಿಗಳಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಸಿಂಹ ಸ್ವಪ್ನವಾಗಿದ್ದು, ಮೂರು ತಿಂಗಳಲ್ಲಿ ಒಟ್ಟು 45 ಆರೋಪಿಗಳನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಜಿಲ್ಲೆಯಲ್ಲಿ ವಿವಿಧ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ಜಾಮೀನು ಪಡೆದ ನಂತರ ವಿಚಾರಣಗೆ ಹಾಜರಾಗದೇ ಹಲವು ಪ್ರಕರಣಗಳ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ನ್ಯಾಯಾಲಯದಿಂದ ವಾರೆಂಟ್ ಜಾರಿಯಾದರೂ ವಿಚಾರಣೆಗೆ ಹಾಜರಾಗದೇ ಕಳೆದ ಹಲವಾರು ವರ್ಷಗಳಿಂದ ತಲೆ ಮರೆಸಿಕೊಂಡು ಪ್ರಕರಣಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತಿದ್ದರು. ಅದರಲ್ಲೂ ಹಲವು ಆರೋಪಿಗಳು ಜಿಲ್ಲೆಯಲ್ಲಿ ನಡೆದ ಕ್ರೈಂ ಪ್ರಕರಣದಲ್ಲಿ ಭಾಗಿಯಾಗಿ ಜಾಮೀನು ಪಡೆದ ನಂತರ ಹೊರ ದೇಶಗಳಲ್ಲಿ ನೆಲೆಸಿದ್ದು, ಇನ್ನು ಕೆಲವರು ಮುಂಬೈ, ಗೋವಾ, ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯದಲ್ಲಿ ಇದ್ದಿದ್ದರಿಂದ ಹಳೆಯ ಪ್ರಕರಣಗಳಿಗೆ ಸಂಭಂದಿಸಿದ ಆರೋಪಿಗಳನ್ನ ಹಿಡಿದು ನ್ಯಾಯಾಲಯದ ಮುಂದೆ ಹಾಜರು ಪಡಿಸುವುದು ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು.

ಸುಮಾರು 25- 30 ವರ್ಷದ ಹಳೆಯ ಪ್ರಕರಣಗಳಿಗೆ ಸಂಭಂದಿಸಿದ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಕಾರವಾರ ತಾಲೂಕಿನ ಕದ್ರಾ ಜಲಾಶಯ ನಿರ್ಮಾಣ ವೇಳೆ ತಮಿಳು ನಾಡಿನಿಂದ ಹಲವರು ಕೆಲ ಕ್ರೈಂ ಚಟುವಟಿಕೆಗಳಲ್ಲಿ ಪಾಲ್ಗೊಂಡು ಜಿಲ್ಲೆಯಲ್ಲಿ ಪ್ರಕರಣ ದಾಖಲಾದ ನಂತರ ಜಾಮೀನು ಪಡೆದು ನ್ಯಾಯಾಲಯದ ವಿಚಾರಣೆ ಹಾಜರಾಗದೇ ತಮ್ಮೂರಿನತ್ತ ಹೋಗಿ ಅಲ್ಲೇ ವಾಸ್ತವ್ಯ ಹೂಡಿದ್ದರು. ಹಳೆಯ ಪ್ರಕರಣಗಳಲ್ಲಿ ಪಾಲ್ಗೊಂಡ ಆರೋಪಿಗಳನ್ನ ಬಂಧಿಸಿ ನ್ಯಾಯಲಯದ ಮುಂದೆ ಹಾಜರುಪಡಿಸಲೇ ಬೇಕು ಎನ್ನುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭದ್ರಿನಾಥ್ ನೇತೃತ್ವದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಪೊಲೀಸ್ ಐಟಿ ಡೇಟಾ ಅನಾಲಿಸಿಸ್ ಎನ್ನುವ ಹಳೆಯ ಸಾಫ್ಟ್ವೇರ್ ಸಹಾಯದಿಂದ, ನೂತನ ಸಾಫ್ಟ್ವೇರ್ ಅಭಿವೃದ್ಧಿಪಡಿಸಿಕೊಂಡು ಹಳೆಯ ಪ್ರಕರಣಗಳಲ್ಲಿ ವಾರೆಂಟ್ ಜಾರಿಯಾದರೂ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಗಳ ಪಟ್ಟಿಯನ್ನ ಮೊದಲು ಮಾಡಿದ್ದರು. ಎಲ್ಲಾ ಠಾಣೆಗಳಿಗೆ ಆರೋಪಿಗಳ ಪಟ್ಟಿ ಕಳುಹಿಸಿ, ಅವರ ಮಾಹಿತಿಯನ್ನ ಕಲೆ ಹಾಕಿ ಅಧಿಕಾರಿಗಳಿಗೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲೇಬೇಕು ಎಂದು ಟಾರ್ಗೆಟ್ ನೀಡಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಲ್ಲಿ ವಿವಿಧ ಪ್ರಕರಣಗಳಲ್ಲಿ ನಾಪತ್ತೆಯಾಗಿದ್ದ 45 ಆರೋಪಿಗಳನ್ನ ಬಂಧಿಸಿದ್ದಾರೆ.

ಇದನ್ನೂ ಓದಿhttp://https://kannada.news18.com/news/national-international/miscreants-thrash-truck-driver-hijack-vehicle-carrying-over-50-oxygen-cylinders-kvd-557871.html

ಭಟ್ಕಳದಲ್ಲಿ ಸುಮಾರು 30 ವರ್ಷ ಹಳೆದ ಪ್ರಕರಣದಲ್ಲಿ ತಲೆ ಮರೆಸಿಕೊಂಡು ಅಮೇರಿಕಾದ ವೀಸಾ ಸಹ ಪಡೆದಿದ್ದ ಆರೋಪಿಯನ್ನ ವಾಪಸ್ ಊರಿಗೆ ಬಂದ ನಂತರ ಪತ್ತೆ ಮಾಡಿ ಬಂಧಿಸಿ ನ್ಯಾಯಲಯದ ಮುಂದೆ ಹಾಜರುಪಡಿಸಿದ್ದಾರೆ. ಇದಲ್ಲದೇ ಇಂತಹ ಹಲವು ಹಳೆದ ಪ್ರಕರಣಗಳ ಆರೋಪಿಗಳನ್ನ ಬಂಧಿಸಿ ಪೊಲೀಸರು ಕಾನೂನಿನ ಬಿಸಿ ಮುಟ್ಟಿಸಿದ್ದು, ಬಂಧನಕ್ಕೊಳಗಾದ ಆರೋಪಿಗಳು ಜಾಮೀನಿಗಾಗಿ ಅಲೆದಾಡುವಂತಾಗಿದೆ. ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೇ ಕೇಸ್‌ಗಳು ಸಹ ಮುಗಿಸದೇ ಹತ್ತಾರು ವರ್ಷದಿಂದ ನ್ಯಾಯಾಲಯದಲ್ಲಿ ಬಾಕಿಯಾಗಿಯೇ ಉಳಿದಿತ್ತು. ಇದೀಗ ಜಿಲ್ಲಾ ಪೊಲೀಸರ ಕಾರ್ಯದಿಂದ ಹಳೆಯ ಪ್ರಕರಣಗಳ ವಿಚಾರಣೆ ಸಹ ಚುರುಕುಗೊಂಡು ತ್ವರಿತಗತಿಯಲ್ಲಿ ಪ್ರಕರಣ ಮುಗಿಸಲು ಸಹಾಯವಾಗಿದ್ದು, ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
Youtube Video
ಹೊಸ ಸಾಫ್ಟ್ವೇರ್ ಬಳಸಿ ಈಗಾಗಲೇ ಮೂರು ತಿಂಗಳಿನಲ್ಲಿ 45 ಆರೋಪಿಗಳನ್ನ ಹಿಡಿದು ತಂದಿದ್ದೇವೆ. ಸುಮಾರು 30 ವಷ ಹಳೆಯ ಆರೋಪಿಯನ್ನ ಬಂಧಿಸಿದ್ದು ವಿಶೇಷವಾಗಿದೆ. ಸದ್ಯ ಕೋವಿಡ್ ಹಿನ್ನಲೆಯಲ್ಲಿ ಸ್ವಲ್ಪ ತನಿಖೆ ನಿಧಾನಗತಿಯಲ್ಲಿ ಸಾಗಿದ್ದು, ಮುಂದಿನ ದಿನದಲ್ಲಿ ಕೊವೀಡ್ ಕಡಿಮೆಯಾದ ನಂತರ ತನಿಖೆ ಚುರುಕುಗೊಳಿಸಿ ಇನ್ನಷ್ಟು ಹಳೆಯ ಪ್ರಕರಣಗಳಿಗೆ ಬೇಕಾದ ಆರೋಪಿಗಳನ್ನ ಬಂಧಿಸಲಿದ್ದೇವೆ ಎಂದು ತಿಳಿಸಿದ್ದಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು.
Published by: Soumya KN
First published: May 3, 2021, 7:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories