• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಶಿಖಾರಿ ಇಲ್ಲದೆ ಮೀನುಗಾರರು ಕಂಗಾಲು; ಉತ್ತರಕನ್ನಡ ಜಿಲ್ಲೆಯನ್ನ ಮತ್ಸ್ಯ ಕ್ಷಾಮ ಪೀಡಿತ ಜಿಲ್ಲೆ ಎಂದು ಘೋಷಿಸಲು ಮನವಿ

ಶಿಖಾರಿ ಇಲ್ಲದೆ ಮೀನುಗಾರರು ಕಂಗಾಲು; ಉತ್ತರಕನ್ನಡ ಜಿಲ್ಲೆಯನ್ನ ಮತ್ಸ್ಯ ಕ್ಷಾಮ ಪೀಡಿತ ಜಿಲ್ಲೆ ಎಂದು ಘೋಷಿಸಲು ಮನವಿ

ಉತ್ತರಕನ್ನಡ ಕರಾವಳಿ ತೀರ.

ಉತ್ತರಕನ್ನಡ ಕರಾವಳಿ ತೀರ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರು ಒಂದಲ್ಲ ಒಂದು ರೀತಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೆಡೆ ಪ್ರಕೃತಿಯ ಮುನಿಸಿಗೆ ಇಡೀ ಮೀನುಗಾರಿಕಾ ಹಂಗಾಮನ್ನೆ ಬಲಿಕೊಟ್ಟ ಮೀನುಗಾರರಿಗೆ ಜೀವನೋಪಾಯಕ್ಕಾಗಿ ಮುಂದೇನು ಗತಿ ಎಂಬಂತಾಗಿದೆ?.

  • Share this:

ಕಾರವಾರ: ಸೆಪ್ಟೆಂಬರ್ ನಿಂದ ನವೇಂಬರ್ ಮೀನುಗಾರಿಕೆಗೆ ಹೇಳಿ ಮಾಡಿಸಿದ ಹಂಗಾಮು ಈ ಹಂಗಾಮಿನಲ್ಲೆ ಮೀನುಗಾರರು ಮೀನಿನ ಬೇಟೆ ಮಾಡಿ ಆರ್ಥಿಕವಾಗಿ ಸಬಲವಾಗಿ ಕೊಂಚ ಚೇತರಿಕೆ ಕಾಣುವ ದಿನ ಆದ್ರೆ ಕಳೆದ ಮೂರು ವರ್ಷದಿಂದ ಈ ಹಂಗಾಮಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರವಾಳಿಯ ಮೀನುಗಾರರು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ಕಳೆದ 2017 ರಿಂದ ಇಂದಿನ ವರೆಗೂ ಈ ಹಂಗಾಮಿನಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದ್ದು ಮೀನಿನ ಬೇಟೆಗೆ ಅನುಕೂಲಕರ ವಾತಾವರಣ ಸಿಗುತ್ತಿಲ್ಲ. ಈ ವರ್ಷ ಪೂರ್ತಿ ಕೊರೋನಾ ಮತ್ತು ಹವಮಾನ ವೈಪರಿತ್ಯಕ್ಕೆ ಮೀನುಗಾರಿಕಾ ಹಂಗಾಮು ಬಲಿಯಾಗಿದೆ. ಕಳೆದ ವರ್ಷವೂ ಕೂಡಾ ಭಿನ್ನವಾಗಿಲ್ಲ ಇದೆ ಸಮಸ್ಯೆಗೆ ತುತ್ತಾದ್ರು ಇಲ್ಲಿನ ಮೀನುಗಾರರು..ಹೀಗೆ ನಿರಂತರವಾಗಿ ಉದ್ಭವಿಸುವ ಚಂಡಮಾರುತಗಳು, ಪ್ರವಾಹ ಮೀನುಗಾರರ ಬಾಳಲ್ಲಿ ಚೆಲ್ಲಾಟ ಆಡಿದೆ. ಪ್ರಕೃತಿಯ ಮುನಿಸಿಗೆ ಇಲ್ಲಿನ ಮೀನುಗಾರರು ಕಂಗಾಲಾಗಿದ್ದು ಕರಾವಳಿಯನ್ನ ಮತ್ಸ್ಯ ಕ್ಷಾಮ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ ಮೀನುಗಾರರ ಸಾಲ ಮನ್ನಾ ಮಾಡಬೇಕೆಂಬ ಆಗ್ರಹ ಈಗ ಜೋರಾಗಿದೆ..


ಹೇಗಿದೆ ಮೀನುಗಾರರ ಆರ್ಥೀಕ ಸ್ಥಿತಿ?:


ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರು ಒಂದಲ್ಲ ಒಂದು ರೀತಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೆಡೆ ಪ್ರಕೃತಿಯ ಮುನಿಸಿಗೆ ಇಡೀ ಮೀನುಗಾರಿಕಾ ಹಂಗಾಮನ್ನೆ ಬಲಿಕೊಟ್ಟ ಮೀನುಗಾರರಿಗೆ ಜೀವನೋಪಾಯಕ್ಕಾಗಿ ಮುಂದೇನು ಗತಿ ಎಂಬಂತಾಗಿದೆ? 2020 ರ ಹಂಗಾಮು ಕೊರೋನಾ ಮಹಾಮಾರಿ ಮೀನುಗಾರರ ಇಡೀ ಬದುಕನ್ನೆ ಕಸಿದುಕೊಂಡಿತು.


ಲಾಕ್ ಡೌನ್ ತೆರವಾದ ಬಳಿಕ ಮೀನು ಬೆಟೆಗೆ ಇಳಿಯಲು ಸಿದ್ಧತೆ ಮಾಡಿಕೊಂಡ್ರೆ ಹೊರ ರಾಜ್ಯದ ಕಾರ್ಮಿಕರ ಕೊರತೆ ಎದುರಾಯಿತು ಹೀಗೆ ಕಾರ್ಮಿಕರ ಕೊರತೆಯಿಂದ ಬೋಟ್ ಮಾಲಿಕರು ತಮ್ಮ ತಮ್ಮ ಬೋಟ್ ಗಳನ್ನ ಮೀನಿನ ಬೇಟೆಗೆ ಇಳಿಸದೆ ಸಾಲದ ಬಡ್ಡಿ ಕಟ್ಟಿ ಕಟ್ಟಿ ಸುಸ್ತಾಗಿ ಹೋಗಿದ್ದಾರೆ..ಆರ್ಥಿಕ ಮೂಲ ಇಲ್ಲದೆ ಕೇವಲ ಬ್ಯಾಂಕ್ ಸಾಲದ ಬಡ್ಡಿ ಕಟ್ಟೊದ್ರಲ್ಲೆ ಜೀವನ ದೂಡುತ್ತಿದ್ದಾರೆ..ಹೀಗೆ ಇಲ್ಲಿನ ಮೀನುಗಾರರು ಸಮಸ್ಯೆ ಸುಳಿಯಲ್ಲಿ ಸಿಲುಕಿ ಹೊರ ಬರಲಾಗದೆ ಒದ್ದಾಟ ನಡೆಸುತ್ತಿದ್ದಾರೆ.


ಇದನ್ನೂ ಓದಿ : ಸಂವಿಧಾನದ ದಿನದಂದೇ ರೈತರ ಹಕ್ಕುಗಳು ತುಳಿತಕ್ಕೆ ಒಳಗಾಗುತ್ತಿರುವುದು ವಿಷಾಧನೀಯ; ಅಮರೀಂದರ್​ ಸಿಂಗ್


ಮತ್ಸ್ಯ ಕ್ಷಾಮ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ:


ಕಳೆದ ಮೂರು ವರ್ಷದಿಂದ ಇಲ್ಲಿನ ಮೀನುಗಾರರು ಉತ್ತಮವಾದ ಮೀನು ಬೇಟೆ ಮಾಡದೆ ಖರ್ಚಿಗೆ ತಕ್ಕಂತೆ ಆದಾಯ ಗಳಿಸಿಲ್ಲ ಹೀಗಾಗಿ ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ..ಇನ್ನು ನಿರಂತರವಾಗಿ ಉಂಟಾದ ಹವಮಾನ ವೈಪರಿತ್ಯ ಮತ್ತು ಸಮುದ್ರದಲ್ಲಿ ಉಂಟಾಗುವ ಭಾರಿ ಗಾಳಿ ಮೀನುಗಾರಿಕಾ ಹಂಗಾಮನ್ನೆ ಕಸಿದುಕೊಂಡಿದೆ..ಎಲ್ಲ ಮುಗಿತು ಇನ್ನೇನು ಮೀನಿನ ಶಿಖಾರಿಗೆ ಹೋಗಿದ್ರೆ ಸಮುದ್ರದಲ್ಲಿ ಮತ್ಸ್ಯ ಕ್ಷಾಮ ಉಂಟಾಗಿದೆ.


ಸಮುದ್ರಲ್ಲಿ ಮೀನುಗಾರರು ಬೀಸಿದ ಬಲೆಗೆ ಮೀನು ಸಿಗುತ್ತಿಲ್ಲ ಹೋಗಿ ಖಾಲಿ ಕೈಯಲ್ಲಿ ವಾಪಸು ಬರುವದಾಗಿದೆ..ಮೀನಿನ ಬೆಟೆಯ ಆಸೆ ಕಂಗಳಿಂದ ಸಮುದ್ರಕ್ಕೆ ಇಳಿದ್ರೆ ಬಾರಿ ನಷ್ಟ ಅನುಭವಿಸಿ ಬರುವುದು ಈಗ ನಿತ್ಯಪಾಠವಾಗಿದೆ..ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನ ಮತ್ಸ್ಯ  ಕ್ಷಾಮ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ ಎಂದು ಮೀನುಗಾರರ ಮುಖಂಡರು ಆಗ್ರಹಿಸುತ್ತಿದ್ದಾರೆ...

Published by:MAshok Kumar
First published: