HOME » NEWS » District » UTTARA KANNADA FARMERS LOST THEIR CROP FROM HEAVY RAIN RH DKK

ರೈತರ ಪಾಲಿಗೆ ಯಮನಾದ ಅಕಾಲಿಕ‌ ಮಳೆ; ಮಲೆನಾಡಿನಲ್ಲಿ ಅಡಿಕೆಗೆ ಕೊಳೆ, ಕರಾವಳಿಯಲ್ಲಿ ಬೆಂಕಿ ರೋಗ

ಒಟ್ಟಿನಲ್ಲಿ ಅಡಿಕೆ ಮತ್ತು ಶುಂಠಿ ಬೆಳೆಯಿಂದಾಗಿ ರೈತರು ಈ  ಭಾರೀ ಸಮಸ್ಯೆ  ಎದುರಿಸಿದ್ದಾರೆ. ಕೊರೋನಾ ನಡುವೆ ಕೃಷಿಕರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಇನ್ನಾದರೂ ಮಳೆರಾಯ ಸ್ವಲ್ಪ ಕೃಪೆ ತೋರಿದಲ್ಲಿ ಅಳಿದುಳಿದ ಬೆಳೆಯಾದರೂ ಉಳಿಯಬಹುದೇನೋ.

news18-kannada
Updated:November 27, 2020, 7:39 PM IST
ರೈತರ ಪಾಲಿಗೆ ಯಮನಾದ ಅಕಾಲಿಕ‌ ಮಳೆ; ಮಲೆನಾಡಿನಲ್ಲಿ ಅಡಿಕೆಗೆ ಕೊಳೆ, ಕರಾವಳಿಯಲ್ಲಿ ಬೆಂಕಿ ರೋಗ
ಅಡಿಕೆ ಬೆಳೆಗೆ ತಗುಲಿರುವ ಕೊಳೆ ರೋಗ.
  • Share this:
ಕಾರವಾರ; ರಾಜ್ಯದಲ್ಲಿ ಈ ಭಾರೀ ಸುರಿದ ಅಕಾಲಿಕ ಮಳೆ ರೈತ ಸಮೂಹವನ್ನು  ತತ್ತರಿಸುವಂತೆ ಮಾಡಿದೆ. ಉತ್ತರಕನ್ನಡ ಜಿಲ್ಲೆಯ  ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಹಿಂಗಾರು ಮಳೆಯ ಹೊಡೆತದಿಂದಾಗಿ ಅಡಿಕೆ ಮತ್ತು ಶುಂಠಿ ಬೆಳೆಗಾರರು ತೊಂದರೆ ಅನುಭವಿಸಿದ್ದಾರೆ. ಇಲ್ಲಿನ ಹಲವು ತಾಲೂಕುಗಳಲ್ಲಿ ಬೆಳೆಗಳಿಗೆ ಕೊಳೆ ರೋಗ ಕಾಣಿಸಿಕೊಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ವರ್ಷದಿಂದ ವರ್ಷಕ್ಕೆ‌ ಉಂಟಾಗುತ್ತಿರುವ ಪ್ರಕೃತಿ ವಿಕೋಪದಿಂದಾಗಿ ರೈತ ಸಮೂಹ ಕಂಗೆಡುವಂತೆ ಆಗಿದೆ. ಕೊರೋನಾ ಮಹಾಮಾರಿಯ ನಡುವೆ ಉತ್ತರಕನ್ನಡ ಜಿಲ್ಲೆಯ ರೈತರು, ಕೃಷಿಕರ ಸಂಕಷ್ಟ‌  ಹೆಚ್ಚಾಗಿದೆ. ಮಲೆನಾಡು ಹಾಗೂ ಬಯಲು ಸೀಮೆ ಭಾಗದಲ್ಲಿ  ಅಡಿಕೆಗೆ ರೋಗ ಬಾಧಿಸುತ್ತಿದೆ. ಬೆಳೆಗಳಿಗೆ ಕೊಳೆ ರೋಗ, ಬ್ಯಾಕ್ಟೀರಿಯಾ ಕಾಟದಿಂದ ಪ್ರತೀ ವರ್ಷ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ಈ ಹಿಂದಿನಿಂದಲೂ ಇಲ್ಲಿನ ಕೃಷಿಕರು   ಸಾಕಷ್ಟು ಪ್ರಮಾಣದಲ್ಲಿ ಬೆಳೆ ಕಳೆದುಕೊಳ್ಳುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಎಡೆಬಿಡದೇ ಸುರಿದ ಹಿಂಗಾರು ಮಳೆ ಮಲೆನಾಡು ತಾಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಫುರ ಹಾಗೂ ಬಯಲುಸೀಮೆಯ ಮುಂಡಗೋಡ ಮತ್ತು ಹಳಿಯಾಳ ರೈತರಿಗೆ ಹೊಡೆತ ನೀಡಿದೆ. ಇಲ್ಲಿ ಅಡಿಕೆ ಮತ್ತು ಶುಂಠಿಗೆ  ಕೊಳೆರೋಗ ಬಂದಿದ್ದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಮಲೆನಾಡಿಗರ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ ಮತ್ತು ಶುಂಠಿ ಬೆಳೆಗೆ ಭಾರೀ ಪ್ರಮಾಣದ ಕೊಳೆರೋಗ ತಗುಲಿಬಿಟ್ಟಿದೆ. ಈ ಬಾರೀ ಹಸಿ ಅಡಿಕೆ‌ ಸಾಕಷ್ಟು ಉದುರಿದ್ದು ಒಂದೆಡೆಯಾದ್ರೆ ಅತ್ತ ಹೊಲ ಗದ್ದೆ ಮತ್ತು ಅಡಿಕೆ  ಗಿಡಗಳ ನಡುವೆ ಸೊಂಟದೆತ್ತರ ಬೆಳೆದು ನಿಂತಿದ್ದ ಶುಂಠಿ ಬೆಳೆಯೂ ಮಣ್ಣಲ್ಲೇ ಕೊಳೆರೋಗದಿಂದ ಕರಗುತ್ತಿದೆ. ಶಿರಸಿಯಲ್ಲಿ 143.2 ಹೆಕ್ಟೇರ್,  ಮುಂಡಗೋಡ 307.1  ಸಿದ್ದಾಪುರ 4-5 ಹೆಕ್ಟೇರ್ ಶುಂಠಿ ಬೆಳೆಯಲಾಗುತ್ತಿದೆ.  ತೋಟಗಾರಿಕೆ ಇಲಾಖೆ ಅಂದಾಜಿನಂತೆ  ಕೊಳೆರೋಗದಿಂದ ಶಿರಸಿಯಲ್ಲಿ 54 ಹೆಕ್ಟೆರ್,  ಹಳಿಯಾಳದಲ್ಲಿ ಮೂರು ಹೆಕ್ಟೇರ್ ಹಾಗೂ ಮುಂಡಗೋಡ ತಾಲೂಕಿನಲ್ಲಿ  57 ಹೆಕ್ಟೇರ್ ನಷ್ಟು ಶುಂಠಿ ಈಗಾಗಲೇ ಹಾನಿಯಾಗಿದೆ ಎಂದು  ಕೃಷಿ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಪೊಲೀಸರಿಗೇ ಆವಾಜ್ ಹಾಕಿದ ರೌಡಿಶೀಟರ್; ಸಾಮೂಹಿಕ ವರ್ಗಾವಣೆಗೆ ಮನವಿ ಮಾಡಿದ ಸಿಬ್ಬಂದಿ

ಒಟ್ಟಿನಲ್ಲಿ ಅಡಿಕೆ ಮತ್ತು ಶುಂಠಿ ಬೆಳೆಯಿಂದಾಗಿ ರೈತರು ಈ  ಭಾರೀ ಸಮಸ್ಯೆ  ಎದುರಿಸಿದ್ದಾರೆ. ಕೊರೋನಾ ನಡುವೆ ಕೃಷಿಕರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಇನ್ನಾದರೂ ಮಳೆರಾಯ ಸ್ವಲ್ಪ ಕೃಪೆ ತೋರಿದಲ್ಲಿ ಅಳಿದುಳಿದ ಬೆಳೆಯಾದರೂ ಉಳಿಯಬಹುದೇನೋ.

ಕರಾವಳಿಯಲ್ಲಿ ಭತ್ತದ ಬೆಳೆ ನಾಶಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನಲ್ಲಿ ಅಡಿಕೆಗೆ ಕೊಳೆ ರೋಗದ ಸಮಸ್ಯೆಯಿಂದ ರೈತರು ಕಂಗಾಲಾಗಿದ್ರೆ, ಕರಾವಳಿಯಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗ ತಗುಲಿ ರೈತರು ಸಮಸ್ಯೆ ಎದುರಿಸುವಂತಾಯಿತು. ಈ‌ಬಾರಿ ಭತ್ತ ಬೆಳೆದ ರೈತ ಅಕಾಲಿಕ ಮಳೆಯಿಂದ ತೊಂದರೆ ಅನುಭವಿಸಿದ್ದಾರೆ, ರೈತರ ಪಾಲಿಗೆ ಅಕಾಲಿಕ ಮಳೆ ಆಘಾತದ ಮೇಲೆ ಆಘಾತ ನೀಡಿದೆ. ಮಲೆನಾಡಿನಲ್ಲಿ ಒಂದು ಸಮಸ್ಯೆ ಆದ್ರೆ ಕರಾವಳಿಯಲ್ಲಿ ಇನ್ನೊಂದು ಸಮಸ್ಯೆ. ಬೆಳೆದೆ ಬೆಳೆ ಸುಖವಾಗಿ ರೈತನ ತುತ್ತಿನ ಚೀಲ ತುಂಬದೆ ನಷ್ಟದಲ್ಲೆ ಕೈ ತೊಳೆಯುವಂತಾಗಿದೆ.
Published by: HR Ramesh
First published: November 27, 2020, 7:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading