HOME » NEWS » District » UTTARA KANNADA DISTRICT ADMINISTRATION USED HIGH TECH DRONE FOR RESCUE OPERATION RHHSN DKK

ನೆರೆ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೈಟೆಕ್ ಡ್ರೋಣ್ ಬಳಕೆಗೆ ಮುಂದಾದ ಉತ್ತರ ಕನ್ನಡ ಜಿಲ್ಲಾಡಳಿತ

ಜನರ ಹಾಗೂ ಪರಿಸರದ ರಕ್ಷಣೆಗಾಗಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಡ್ರೋಣ್ ಬಳಕೆಗೆ ಮುಂದಾಗಿರೋದು ಒಳ್ಳೆಯ ಬೆಳವಣಿಗೆ.  ಪೊಲೀಸರ ಸೇವೆ ಹಾಗೂ ರಕ್ಷಣಾ ಕಾರ್ಯಗಳ ಉದ್ದೇಶದಿಂದ ತಂದಿರುವ ಈ  ಡ್ರೋಣ್​ನಿಂದ ಜಿಲ್ಲೆಯ ಜನರಿಗೆ ಇನ್ನಷ್ಟು ಸಹಾಯವಾಗಬಹುದೆಂಬ ವಿಚಾರ ಖುಷಿಯ ಸಂಗತಿಯಾಗಿದೆ.

news18-kannada
Updated:April 17, 2021, 8:58 PM IST
ನೆರೆ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೈಟೆಕ್ ಡ್ರೋಣ್ ಬಳಕೆಗೆ ಮುಂದಾದ ಉತ್ತರ ಕನ್ನಡ ಜಿಲ್ಲಾಡಳಿತ
ಹೈಟೆಕ್ ತಂತ್ರಜ್ಞಾನದ ಡ್ರೋಣ್
  • Share this:
ಕಾರವಾರ: ಇತ್ತೀಚಿನ ವರ್ಷಗಳಲ್ಲಿ ನೆರೆ ಪ್ರವಾಹ ಕರಾವಳಿ, ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳ ಜನರನ್ನು ಕಾಡುತ್ತಿರುವ ಸಮಸ್ಯೆ.  ಪ್ರಕೃತಿ ವಿಕೋಪ ಸಂಭವಿಸಿದರೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಬಿಡುತ್ತೆ. ಸಮುದ್ರದ ಅಲೆಗಳ ಆರ್ಭಟ, ಭೂಕುಸಿತವಾಗಿ ಜನರ ರಕ್ಷಣೆಯೇ ದೊಡ್ಡ ಸವಾಲಾಗುತ್ತದೆ. ಆದರೆ, ಇನ್ಮುಂದೆ  ಸಂಕಷ್ಟ ಎದುರಾದಲ್ಲಿ ಕೂಡಲೇ ಜನರಿಗೆ ಸ್ಪಂದಿಸಲು ಸಹಾಯವಾಗುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿದೆ.

ಮಳೆಗಾಲದ ವೇಳೆ ಸಂಭವಿಸುವ  ಚಂಡಮಾರುತಕ್ಕೆ ಕಡಲ ತೀರದ ಪ್ರದೇಶದ ಜನರು ಕಂಗಾಲಾಗುತ್ತಾರೆ. ಸೈಕ್ಲೋನ್ ಎಫೆಕ್ಟ್‌ನಿಂದಾಗಿ ಮೀನುಗಾರರನ್ನು ರಕ್ಷಿಸೋದೆ ಸವಾಲು.  ಅಲ್ಲದೇ, ಗುಡ್ಡ ಕುಸಿತ, ಭೂ ಕುಸಿತ, ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಕೂಡ ಸರ್ವೆ ಸಾಮಾನ್ಯ. ಈ ಸಂದರ್ಭದಲ್ಲಿ ಎಲ್ಲಾದರೂ ಜನರು ಸಿಲುಕಿದ್ದಾರೋ, ಪ್ರಾಣಿಗಳು ಸಿಲುಕಿವೆಯೋ ಅಥವಾ ಕಾಡುಗಳ ರಕ್ಷಣೆ ಹೇಗೆ ಸಾಧ್ಯ ಅನ್ನೋ ಸವಾಲುಗಳು ಎದುರಾಗುತ್ತವೆ. ಇದಕ್ಕೆಲ್ಲಾ ಸ್ಪಂದಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ತಂತ್ರಜ್ಞಾನದ ಬಳಕೆಗೆ ಮುಂದಾಗಿದೆ. ಅತ್ಯಾಧುನಿಕವಾಗಿ ಕೆಲಸ ಮಾಡುವ ಡ್ರೋಣ್ ಕ್ಯಾಮೆರಾವನ್ನು ಇನ್ಮುಂದೆ ಪೊಲೀಸ್ ಇಲಾಖೆ ಬಳಸಲಿದೆ.

ಉತ್ತರಕನ್ನಡ ಜಿಲ್ಲಾಡಳಿತ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಫಂಡ್‌ನಿಂದ ಡ್ರೋಣ್ ಖರೀದಿಗಾಗಿ ಪೊಲೀಸ್ ಇಲಾಖೆಗೆ ಫಂಡ್ ನೀಡಿದೆ. ಎರಡು ಡ್ರೋಣ್​ಗಳಲ್ಲಿ ಭಟ್ಕಳ, ಕುಮಟಾ, ಶಿರಸಿ ಯಲ್ಲಾಪುರಗಳಲ್ಲಿದ್ದರೇ, ಇನ್ನೊಂದು ಕಾರವಾರ, ಅಂಕೋಲಾ, ಜೋಯಿಡಾ, ದಾಂಡೇಲಿ ಹಳಿಯಾಳ ತಾಲೂಕಿನಲ್ಲಿ ಇರಲಿದೆ.  ಪೊಲೀಸ್ ಇಲಾಖೆಯ ಸಿವಿಲ್, ಡಿಎಆರ್, ಮತ್ತು ವೈರಲೆಸ್ ವಿಭಾಗದ ಆರು ಸಿಬ್ಬಂದಿಗಳಿಗೆ ಆಪರೇಟಿಂಗ್ ತರಬೇತಿ ನೀಡಲಾಗಿದೆ.

ಇದನ್ನು ಓದಿ: ಅಭಿವೃದ್ಧಿ ಹೆಸರಿನಲ್ಲಿ ಅನ್ಯಾಯ; ಗದಗ ಹೊನ್ನಾಳಿ ಹೆದ್ದಾರಿ ಕಾಮಗಾರಿಯಿಂದ ರೈತರು ಹೈರಾಣು..!

ಅಂದ ಹಾಗೆ, ಈ ಡ್ರೋಣ್​ನ ವಿಶೇಷ ಅಂದ್ರೆ, ಇದು 40-50ಕಿ.ಮೀ ಸ್ಪೀಡ್‌ನಲ್ಲಿ ಚಲಿಸುತ್ತಿದ್ದು, ಸುಮಾರು 3ರಿಂದ 4 ಕಿ.ಮೀ.ವರೆಗೆ ಸಾಗುತ್ತದೆ. ಅಲ್ಲದೇ,  ಸುಮಾರು 1 ಕಿ.ಮೀ. ದೂರದವರೆಗಿನ ವಸ್ತುವಿನ ಚಿತ್ರವನ್ನು ಕೂಡಾ ಈ ಡ್ರೋಣ್ ಸ್ಪಷ್ಟವಾಗಿ ಸೆರೆ ಹಿಡಿಯಲಿದೆ. ಇದರಲ್ಲಿ ಆಟೋ ಪೈಲೆಟ್ ವ್ಯವಸ್ಥೆಯಿದ್ದು, ಒಂದು ವೇಳೆ ಗಾಳಿ ವೇಗ ಜಾಸ್ತಿ ಇದ್ರೆ ಅಥವಾ ಬ್ಯಾಟರಿ ಲೋ ಇದ್ರೆ ಈ ಡ್ರೋಣ್ ಆಪರೇಟರ್ ಬಳಿಯೇ ಬಂದು ಸೇರಿಕೊಳ್ಳುತ್ತದೆ. ಇನ್ನು ಎದುರಲ್ಲಿ ಹಕ್ಕಿಗಳು ಬಂದಲ್ಲಿ ಅದೇ ಅವುಗಳನ್ನು ಡಿಟೆಕ್ಟ್ ಮಾಡಿ ಪಕ್ಕಕ್ಕೆ ಸರಿಯುತ್ತದೆ. ಈ ಆಧುನಿಕ ಡ್ರೋಣ್ ಅನ್ನು ಪೊಲೀಸ್ ಇಲಾಖೆ ಖರೀದಿಸಿದೆ. ಭೌಗೋಳಿಕವಾಗಿ ವಿಸ್ತಾರವಾಗಿರುವ ಉತ್ತರಕನ್ನಡ ಜಿಲ್ಲೆಗೆ ಇದು ಅಗತ್ಯ ಕೂಡ ಆಗಿದೆ.  ನೆರೆ ಬಂದಾಗ, ಕಾಡು ಅಥವಾ ಇತರ ಅನಾಹುತವಾದ ಸಮಯದಲ್ಲಿ ಇತರ ಉಪಯೋಗ ಬಹಳವಾಗಿದ್ದು, ಸಮುದ್ರದಲ್ಲಿ ಯಾರಾದ್ರೂ ಸಿಕ್ಕಿದಲ್ಲಿ ಅವರ ಪರಿಸ್ಥಿತಿ ಪರಿಶೀಲಿಸಲು ಸಾಧ್ಯವಾಗಲಿದೆ. ಹೀಗಾಗಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಲು ಈ ಡ್ರೋಣ್  ಸಹಾಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಒಟ್ಟಿನಲ್ಲಿ ಜನರ ಹಾಗೂ ಪರಿಸರದ ರಕ್ಷಣೆಗಾಗಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಡ್ರೋಣ್ ಬಳಕೆಗೆ ಮುಂದಾಗಿರೋದು ಒಳ್ಳೆಯ ಬೆಳವಣಿಗೆ.  ಪೊಲೀಸರ ಸೇವೆ ಹಾಗೂ ರಕ್ಷಣಾ ಕಾರ್ಯಗಳ ಉದ್ದೇಶದಿಂದ ತಂದಿರುವ ಈ  ಡ್ರೋಣ್​ನಿಂದ ಜಿಲ್ಲೆಯ ಜನರಿಗೆ ಇನ್ನಷ್ಟು ಸಹಾಯವಾಗಬಹುದೆಂಬ ವಿಚಾರ ಖುಷಿಯ ಸಂಗತಿಯಾಗಿದೆ.
Published by: HR Ramesh
First published: April 17, 2021, 8:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories