HOME » NEWS » District » UTTARA KANNADA DISTRICT 89 VILLAGE PANCHAYAT TAX REVISION YET TO BE DONE DKK SNVS

ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 89 ಗ್ರಾ.ಪಂ. ತೆರಿಗೆ ಪರಿಷ್ಕರಣೆ ಬಾಕಿ; ಸಾಮಾನ್ಯ ಸಭೆಯಲ್ಲೇ ಕ್ರಮಕ್ಕೆ ಮುಂದು

ಉತ್ತರಕನ್ನಡ ಜಿಲ್ಲೆಯಲ್ಲಿ ಕಾರವಾರ 8, ಅಂಕೋಲಾ 5, ಶಿರ್ಸಿ 12, ದಾಂಡೇಲಿ 3, ಹಳಿಯಾಳ 13, ಮುಂಡಗೋಡ 13, ಕುಮಟಾ 6, ಜೋಯಿಡಾ 1, ಹೊನ್ನಾವರ 4, ಸಿದ್ದಾಪುರ 8, ಯಲ್ಲಾಪುರ 14 ಮತ್ತು ಭಟ್ಕಳ 2 ಸೇರಿದಂತೆ ಒಟ್ಟು 89 ಗ್ರಾ.ಪಂ. ಗಳು ತೆರಿಗೆ ಪರಿಷ್ಕರಣೆಗೆ ಬಾಕಿ ಇವೆ.

news18-kannada
Updated:November 23, 2020, 3:27 PM IST
ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 89 ಗ್ರಾ.ಪಂ. ತೆರಿಗೆ ಪರಿಷ್ಕರಣೆ ಬಾಕಿ; ಸಾಮಾನ್ಯ ಸಭೆಯಲ್ಲೇ ಕ್ರಮಕ್ಕೆ ಮುಂದು
ಕಾರವಾರ ನಗರ
  • Share this:
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಕೃಷಿ ತೆರಿಗೆಗೆ ಒಳಪಟ್ಟಿರದ ಭೂಮಿ ಮತ್ತು ಕಟ್ಟಡಗಳ ಮೇಲಿನ ತೆರಿಗೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಈ ಹಿಂದಿನ ಗ್ರಾಮ ಸಭೆಯ ಬದಲಾಗಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿಯೇ ತೆರಿಗೆ ಪರಿಷ್ಕರಣೆಗೆ ಸೂಚಿಸಲಾಗಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ 89 ಗ್ರಾ.ಪಂ.ಗಳು ತೆರಿಗೆ ಪರಿಷ್ಕರಣೆಗೆ ಬಾಕಿ ಇದೆ. ಗ್ರಾ.ಪಂಗಳಲ್ಲಿನ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಕ್ತಾಯದ ಬಳಿಕ ಎಲ್ಲಾ ಗ್ರಾ.ಪಂಗಳಿಗೂ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಆದರೆ ತೆರಿಗೆ ಪರಿಷ್ಕರಣೆ ನಡೆಸುವುದು ಅನಿವಾರ್ಯವಾಗಿದ್ದು ಚುನಾಯಿತ ಸದಸ್ಯರು ಇಲ್ಲದ ಹಿನ್ನೆಲೆಯಲ್ಲಿ ಗ್ರಾಮ ಸಭೆಯ ಬದಲಾಗಿ ಸಾಮಾನ್ಯ ಸಭೆಯಲ್ಲೇ ಪರಿಷ್ಕರಣೆಗೆ ಮುಂದಾಗಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ವೇಳಾಪಟ್ಟಿಯನ್ನು ಸಿದ್ದಪಡಿಸಿ ಪಂಚತಂತ್ರದಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ಎರಡು ವರ್ಷಕ್ಕೆ ಒಂದು ಬಾರಿಯಂತೆ ತೆರಿಗೆ ಪರಿಷ್ಕರಣೆ ನಡೆಸಲಾಗುತ್ತಿದ್ದು ಜಿಲ್ಲೆಯಲ್ಲಿ ಕಾರವಾರ 8, ಅಂಕೋಲಾ 5, ಶಿರ್ಸಿ 12, ದಾಂಡೇಲಿ 3, ಹಳಿಯಾಳ 13, ಮುಂಡಗೋಡ 13, ಕುಮಟಾ 6, ಜೋಯಿಡಾ 1, ಹೊನ್ನಾವರ 4, ಸಿದ್ದಾಪುರ 8, ಯಲ್ಲಾಪುರ 14 ಮತ್ತು ಭಟ್ಕಳ 2 ಸೇರಿದಂತೆ ಒಟ್ಟು 89 ಗ್ರಾ.ಪಂ. ಗಳು ತೆರಿಗೆ ಪರಿಷ್ಕರಣೆಗೆ ಬಾಕಿ ಇವೆ. ಆಸ್ತಿಗಳ ಮೌಲ್ಯ ಮಾಪನ ಹೊಸ ತೆರಿಗೆ ನೀತಿಯ ಅನುಷ್ಠಾನ, ಸಾಕಷ್ಟು ಆದಾಯದ ಉತ್ಪಾದಕತೆ ಮತ್ತು ಸಂಗ್ರಹಣೆಯನ್ನು ಹೊಂದುವಂತಾಗಲು ಆಸ್ತಿ ತೆರಿಗೆಯು ನಿರೀಕ್ಷಿತವಾಗಿಡುವಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು ತೆರಿಗೆದಾರರಿಗೆ ಸಮಗ್ರ ಮಾಹಿತಿ ನೀಡಿ ತೆರಿಗೆಗೆ ಸಂಬಂಧಿಸಿದ ಗೊಂದಲ ನಿವಾರಿಸಿ ಉತ್ತಮ ಆಸ್ತಿ ತೆರಿಗೆ ಸುದಾರಣೆಗೆ ಕ್ರಮ ವಹಿಸಲಾಗುತ್ತಿದೆ.

ಇದನ್ನೂ ಓದಿ: ಮಸ್ಕಿಯಲ್ಲಿ ಕಾಂಗ್ರೆಸ್​ಗೆ ಅಭ್ಯರ್ಥಿ ಸಿಕ್ಕಿಲ್ಲ ಅಂದ್ರೆ ನಾಚಿಕೆಗೇಡು: ಬಿ.ವೈ. ವಿಜಯೇಂದ್ರ ವ್ಯಂಗ್ಯ

ಈ ತೆರಿಗೆ ಪರಿಷ್ಕರಣೆ ವೇಳೆ ಗ್ರಾಮ ಪಂಚಾಯತಿ ಪ್ರದೇಶದ ಪರಿಮಿತಿಯೊಳಗಿರುವ ಕೃಷಿ ತೆರಿಗೆ ನಿರ್ಧರತೆಗೆ ಒಳಪಟ್ಟಿರದ ಭೂಮಿ ಮತ್ತು ಕಟ್ಟಡಗಳ ಮೇಲೆ ತೆರಿಗೆ ವಿಧಿಸುವುದಾಗಿದೆ. ಅದರಂತೆ ಗ್ರಾಮ ಪಂಚಾಯತಿಗಳು ಕರ್ನಾಟಕ ಪಂಚಾಯತ ರಾಜ್ ಅಧಿನಿಯಮದಂತೆ ತೆರಿಗೆಗೆ ಒಳಪಡುವ ಯಾವುದೇ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ವಿವರಗಳನ್ನು ನಿಗದಿತ ನಮೂನೆಗಳಲ್ಲಿ ಆಸ್ತಿ ವಿವರ, ತೆರಿಗೆ ನಿರ್ಧರಣೆ ಮತ್ತು ಬೇಡಿಕೆ, ವಸೂಲಾತಿ ಹಾಗು ಬಾಕಿ ವಿವರಗಳ ರಿಜಿಸ್ಟರ್‌ಗಳಲ್ಲಿನ ಮಾಹಿತಿಯ ಆಧಾರದ ಮೇಲೆ ಗ್ರಾಮ ಪಂಚಾಯತಿಗಳು ಮಾಸಿಕ ಪ್ರಗತಿ ವರದಿ ನೀಡಲು ಮತ್ತು ಪಂಚತಂತ್ರದಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾ.ಪಂಗಳಲ್ಲಿ ತರಿಗೆ ಪರಿಷ್ಕರಣೆ ಮಾಡಲು ವೇಳಾಪಟ್ಟಿ ನಿಗದಿಪಡಿಸಿ ತೆರಿಗೆ ಪರಿಷ್ಕರಣೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳ ಕುರಿತು ಮಾರ್ಗಸೂಚಿಗಳನ್ನು ಕೂಡ ಹೊರಡಿಸಲಾಗಿದೆ.

ಏನಂತಾರೆ ಅಧಿಕಾರಿಗಳು?

ಸರಕಾರದ ಆದೇಶದಂತೆ ನಮ್ಮ ಜಿಲ್ಲೆಯಲ್ಲಿಯೂ ಗ್ರಾಮ ಸಭೆಗೆ ಬದಲಾಗಿ ಸಾಮಾನ್ಯ ಸಭೆಯಲ್ಲಿಯೇ ತೆರಿಗೆ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ತಿದ್ದುಪಡಿ ಕುರಿತಾಗಿ ಪರಿಷ್ಕೃತ ವೇಳಾಪಟ್ಟಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಜಿಲ್ಲೆಯಲ್ಲಿ ಇನ್ನೂ 89 ಗ್ರಾ.ಪಂ.ಗಳು ತೆರಿಗೆ ಪರಿಷ್ಕರಣೆಗೆ ಬಾಕಿ ಇದ್ದು ತಿದ್ದುಪಡಿಗೆ ಅನುಗುಣವಾಗಿ ಪರಿಷ್ಕರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿನೋದ್ ನಾಯಕ್.

ವರದಿ: ದರ್ಶನ್ ನಾಯ್ಕ್
Published by: Vijayasarthy SN
First published: November 23, 2020, 3:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading