ಕೇರಳದಲ್ಲಿ ವಿಜಯಯಾತ್ರೆ ಬಳಿಕ ಮಂಗಳೂರಿನ ಮಠಕ್ಕೆ ಯೋಗಿ ಆದಿತ್ಯನಾಥ್ ಭೇಟಿ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಿನ್ನೆ ಮಂಗಳೂರಿನ ಕದ್ರಿಯಲ್ಲಿರುವ ಯೋಗೇಶ್ವರ ಜೋಗಿ ಮಠಕ್ಕೆ ಭೇಟಿ ನೀಡಿದ್ದರು. ನಾಥ ಪಂಥದ ಪ್ರಮುಖ ಮಠವಾಗಿರುವ ಕದ್ರಿಯ ಈ ಮಠಕ್ಕೂ ಯೋಗಿ ಆದಿತ್ಯನಾಥ್​ಗೂ ಇರುವ ನಂಟೇನು, ಭೇಟಿ ಸಂದರ್ಭ ಏನೇನು ಆಯ್ತು? ಇಲ್ಲಿದೆ ಒಂದು ವರದಿ….

ಕದ್ರಿಯ ಯೋಗೇಶ್ವರ ಮಠದಲ್ಲಿ ಯೋಗಿ ಆದಿತ್ಯನಾಥ್

ಕದ್ರಿಯ ಯೋಗೇಶ್ವರ ಮಠದಲ್ಲಿ ಯೋಗಿ ಆದಿತ್ಯನಾಥ್

  • Share this:
ಮಂಗಳೂರು: ಕೇರಳ ರಾಜ್ಯದ ಕಾಸರಗೋಡುವಿನ ತಾಳಿಪಡ್ಪುವುನಲ್ಲಿ ನಡೆದ ಬಿ.ಜೆ.ಪಿ.ಯ ವಿಜಯಯಾತ್ರೆ ಕಾರ್ಯಕ್ರಮದ ಉದ್ಘಾಟನೆಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿನ್ನೆ ಬಂದಿದ್ದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದಿದ್ದ ಅವರು ರಸ್ತೆ ಮಾರ್ಗದ ಮೂಲಕ ಕಾಸರಗೋಡುವಿಗೆ ತೆರೆಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಾಸು ಬರುವ ಸಂದರ್ಭ ನಾಥ ಪಂಥದ ಪ್ರಮುಖ ಮಠವಾಗಿರುವ ಮಂಗಳೂರಿನ ಕದ್ರಿ ಯೋಗಿಶ್ವರ ಮಠಕ್ಕೂ ನಿನ್ನೆ ಅವರು ಭೇಟಿ ಮಾಡಿದರು.

ಕದ್ರಿ ಜೋಗಿ ಮಠಕ್ಕೆ ಭೇಟಿ ನೀಡಿದ ಆದಿತ್ಯನಾಥ್‌ರನ್ನು ಮಠದ ಪ್ರಮುಖರು ಸ್ವಾಗತಿಸಿದರು. ಬಳಿಕ ಗುರುಮಠದ ಉದ್ಘಾಟನೆ ಕಾರ್ಯಕ್ರಮವನ್ನು ಯೋಗಿ ಆದಿತ್ಯನಾಥ್ ನೆರವೇರಿಸಿದರು. ಮಠದಲ್ಲಿನ ಕಾಲ ಬೈರವ ದೇವರಿಗೆ ಪೂಜೆ ಸಲ್ಲಿಸಿದ ಅವರು ಬಳಿಕ ಫಲಾಹಾರ ಸೇವಿಸಿದರು. ಇದೇ ಸಂದರ್ಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಮಮಂದಿರ ನಿಧಿ ಸಂಗ್ರಹ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಂಡರು. ಕದ್ರಿಯ ಈ ಜೋಗಿ ಮಠವು ನಾಥ ಪಂಥದ ಪ್ರಮುಖ ಮಠವಾಗಿದ್ದು, ಆದಿತ್ಯನಾಥ್ ನಾಥ ಪಂತದ ರಾಷ್ಟ್ರೀಯ ಅಧ್ಯಕ್ಷರಾಗಿರೋದ್ರಿಂದ ಕದ್ರಿ ಮಠದ ಪ್ರಮುಖರೊಂದಿಗೂ ಚರ್ಚೆ ನಡೆಸಿದರು.

ಇದನ್ನೂ ಓದಿ: Schools Reopen: ಇಂದಿನಿಂದ 6ರಿಂದ 8ನೇ ತರಗತಿ ಶಾಲೆ ಆರಂಭ; ಬೆಂಗಳೂರು, ಕೇರಳ ಗಡಿಯಲ್ಲಿ ವಿದ್ಯಾಗಮ ಮುಂದುವರಿಕೆ

ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿ ಮಾತ್ರವಲ್ಲದೇ, ದೇಶಾದ್ಯಂತ ಹರಡಿಕೊಂಡಿರುವ ಯೋಗಿ ಮಠಗಳ ಸಂಸ್ಥೆ, ಅಖಿಲ ಭಾರತ ಅವಧೂತ್ ಬೇಷ್‌‌ ಪಂಥ್‌ನ ಅಧ್ಯಕ್ಷರೂ ಹೌದು. ವಿಶೇಷ ಅಂದ್ರೆ ಸಂಸ್ಥೆಯ ಅಧೀನದ ಯೋಗಿ ಮಠಗಳಿಗೆ ಪೀಠಾಧಿಪತಿಯನ್ನು ಆಯ್ಕೆ ಮಾಡುವ ಅಧಿಕಾರ ಈ ಮಹಾಸಭಾಗಿದೆ. ಮಂಗಳೂರಿನ ಕದ್ರಿಯಲ್ಲಿರುವ ಜೋಗಿ ಮಠಕ್ಕೂ 12 ವರ್ಷಕ್ಕೊಮ್ಮೆ ನಡೆಯುವ ಪೀಠಾಧಿಪತಿಯ ಪಟ್ಟಾಭಿಷೇಕ ಮಹೋತ್ಸವ ಕಳೆದ 2016ರ ಮಾರ್ಚ್‌ನಲ್ಲಿ ನಡೆದಿತ್ತು. ಯೋಗಿ ಆದಿತ್ಯನಾಥರ ನೇತೃತ್ವದಲ್ಲೇ ಆಧ್ಯಾತ್ಮಿಕ ಅಧಿವೇಶನ ನಡೆದಿತ್ತು. ಹೀಗಾಗಿ ದೇಶದಲ್ಲಿ ಹರಡಿಕೊಂಡಿರುವ ನೂರಾರು ಮಠಗಳಿಗೆ ಇದೇ ಯೋಗಿ ಆದಿತ್ಯನಾಥ್‌ಜೀ ಮಹಾರಾಜ್ ಪ್ರಮುಖರು.

ಆದಿತ್ಯನಾಥ್‌ಜೀ ಆಗಮನದ ಹಿನ್ನೆಲೆಯಲ್ಲಿ ಮಠದ ಸುತ್ತ ಕೇಸರಿ ಬಂಟಿಂಗ್ಸ್, ಧ್ವಜಗಳಿಂದ ಶೃಂಗರಿಸಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿತ್ತು. ಕಾಸರಗೋಡುವಿಗೆ ಪಕ್ಷ ಬಲವರ್ಧನೆ ಕಾರ್ಯಕ್ರಮಕ್ಕೆ ಬಂದಿದ್ದ ಯೋಗಿ ಆದಿತ್ಯನಾಥ್ ಮಠಕ್ಕೂ ಭೇಟಿ ನೀಡಿರುವುದು ಭಕ್ತರ ಸಂತೋಷಕ್ಕೂ ಕಾರಣವಾಗಿತ್ತು.

ವರದಿ: ಕಿಶನ್ ಕುಮಾರ್
Published by:Vijayasarthy SN
First published: