ಚಿಕ್ಕೋಡಿಯಲ್ಲಿ ದುಬಾರಿಯಾದ ಯೂರಿಯಾ ರಸಗೊಬ್ಬರ; ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ

ಚಿಕ್ಕೋಡಿ ರಸಗೊಬ್ಬರ ಅಂಗಡಿಗಲ್ಲಿ ಯೂರಿಯಾ ಇದ್ದರೂ ಸಮರ್ಪಕವಾಗಿ ವಿತರಣೆ ಮಾಡದೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ. ಒಂದು ಚೀಲ ಯೂರಿಯಾ ಬೆಲೆ 250 ರೂಪಾಯಿ ಇದೆ. ಆದರೆ, ಅಂಗಡಿಯಲ್ಲಿ ಮಾತ್ರ 350 ರಿಂದ 400 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.

ಯೂರಿಯಾ ಗೊಬ್ಬರ.

ಯೂರಿಯಾ ಗೊಬ್ಬರ.

  • Share this:
+ಬೆಳಗಾವಿ: ರೈತನ ಬದುಕು ಅಂದ್ರೇನೆ ಹಾಗೆಯೇ ಯಾವಾಗಲೂ ಕಷ್ಟದ ಜೀವನವೆ ಮಳೆ ಬಂದ್ರೆ ಒಂದು ಕಷ್ಟ. ಮಳೆ ಬಾರದೆ ಇದ್ರು ಒಂದು ಕಷ್ಟ.  ಇನ್ನು ಮಳೆ ಚೆನ್ನಾಗಿ ಬಂದು ಒಳ್ಳೆ ಫಸಲು ಬೆಳೆಯುವ ನೀರಕ್ಷೆಯಲ್ಲಿ ಇದ್ದ ರೈತರಿಗೆ ಸರ್ಕಾರ ಸಮರ್ಪಕ ರಸಗೊಬ್ಬರ ವಿತರಣೆ ಮಾಡದೆ ಇನ್ನೋಂದು ಕಷ್ಟ ನೀಡಲು ಮುಂದಾಗಿದೆ. ಹೌದು.. ಕಳೆದ ಎರಡು ವರ್ಷಗಳಿಂದ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಬಂದು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗಿ ಅನ್ನದಾತ ಬೀದಿಗೆ ಬಂದಿದ್ದ. ವರ್ಷ ಕಳೆದು ಎರಡನೆ ವರ್ಷವೂ ಅತಿವೃಷ್ಠಿಯಿಂದಾಗಿ ಹೊಲದಲ್ಲಿ ಬೆಳೆದ ಬೇಳೆಗಳು ನೀರಿನಲ್ಲಿ ನಿಂತು ಕೊಳೆತು ಹೋಗಿವೆ. ಇನ್ನೇನು ಕೊಂಚ ಮಳೆ ಕಡಿಮೆಯಾಗಿ ಹೊಸ ಬೆಳೆ ಬೆಳೆದ ರೈತನಿಗೆ ಒಳ್ಳೆ ಫಸಲು ಕೈ ಸೇರುತ್ತೆ ಅನ್ನುವಷ್ಟರಲ್ಲಿ ಈಗ ಜಿಲ್ಲೆಯಲ್ಲಿ ಯೂರಿಯಾ ಅಭಾವ ಸೃಷ್ಟಿಯಾಗಿದೆ. ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕೋಸ್ಕರ ರೈತರು ಪಡಬಾರದ ಕಷ್ಟವನ್ನು ಪಡುವಂತಾಗಿದೆ.

ರಸಗೊಬ್ಬರ ಅಂಗಡಿಗಲ್ಲಿ ಯೂರಿಯಾ ಇದ್ದರೂ ಸಮರ್ಪಕವಾಗಿ ವಿತರಣೆ ಮಾಡದೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ. ಒಂದು ಚೀಲ ಯೂರಿಯಾ ಬೆಲೆ 250 ರೂಪಾಯಿ ಇದೆ. ಆದರೆ, ಅಂಗಡಿಯಲ್ಲಿ ಮಾತ್ರ 350 ರಿಂದ 400 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಏಕೆ ಹೆಚ್ಚಿಗೆ ಹಣ ಪಡೆಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದರೆ ನಮಗೆ ಇದೆ ಬೆಲೆಗೆ ಬಂದಿದೆ ಬೇಕಾದ್ರೆ ತಗೊಳ್ಳಿ ಇಲ್ಲಾ ಅಂದ್ರೆ ಬಿಡಿ ಎಂದು ಉಡಾಫೆಯಾಗಿ ಮಾತನಾಡುತ್ತಾರೆ ಎಂದು ರೈತರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಒಂದೆಡೆ ಯಾದರೆ ಇನ್ನು ಕೆಲವು ಅಂಗಡಿ ಮಾಲೀಕರು ಯೂರಿಯಾ ಜೋತೆಗೆ ಇನ್ನಿತರ ಕೀಟನಾಶಕಗಳು, ಡಿ.ಎ.ಪಿ. ಹಾಗೂ ಪೊಟ್ಯಾಸಿಯಮ್‌ ನಂತಹ ಗೊಬ್ಬರಗಳನ್ನ ಸೇರಿಸಿ 1200 ರಿಂದ 1500 ಈವರೆಗಿನ ಕಿಟ್ ರೇಡಿ ಮಾಡಿದ್ದಾರೆ. ಯೂರಿಯಾ ಬೇಕು ಅಂದ್ರೆ ಈ ಕಿಟ್ ಗಳನ್ನ ಕಡ್ಡಾಯವಾಗಿ ಖರೀದಿಸಲೆ ಬೇಕು ಎಂದು ರೈತರ ಮೇಲೆ ಒತ್ತಡ ಹಾಕುತ್ತಾರೆ. ಕಿಟ್ ಬೇಡಾ ಅಂದ್ರೆ ನಮ್ಮ ಬಳಿ ಯೂರಿಯಾ ಇಲ್ಲಾ ಎಂದು ನೇರವಾಗೆ ಹೇಳುತ್ತಾರೆ ಎಂಬುದು ರೈತರ ಆರೋಪ.

ಇದನ್ನೂ ಓದಿ : ಬಂಗಾಳ, ಕೇರಳದಿಂದ ದಾಳಿಗೆ ಸಂಚು ರೂಪಿಸುತ್ತಿದ್ದ 9 ಶಂಕಿತ ಅಲ್-ಖೈದಾ ಉಗ್ರರ ಬಂಧನ

"ಮೊದಲೇ ಲಾಕ್​ಡೌನ್, ಅತಿವೃಷ್ಠಿ ಹಾಗೂ ಪ್ರವಾಹದಿಂದಾಗಿ ನಾವು ಈಗಾಗಲೇ ಬೀದಿಗೆ ಬಂದಿದ್ದೇವೆ ಸಾಲ ಶೂಲ ಮಾಡಿ ಹೊಸ ಬೆಳೆಗಳನ್ನ ಬೆಳೆಯುತ್ತಿದ್ದೇವೆ. ಹೀಗೆ 250 ರುಪಾಯಿಗೆ ಸಿಗುವ ಯೂರಿಯಾವನ್ನು ಹೆಚ್ಚಿನ ಬೆಲೆಗೆ ಖರಿದಿ ಮಾಡಿ ಅಂದ್ರೆ ಹೇಗೆ ? ನಮ್ಮ ಕಷ್ಟಗಳನ್ನ ಸರ್ಕಾರ ಕೆಳುತ್ತಿಲ್ಲಾ. ಇನ್ನು ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ ಈಗಾಗಲೇ ಯೂರಿಯಾ ಹಂಚಿಯಾಗಿದೆ ಹೆಚ್ವಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಸುಮ್ಮನೆ ಕೂಡುತ್ತಾರೆ" ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಯಾವೊಬ್ಬ ರೈತನಿಗೂ ಈ ವರ್ಷ ಯೂರಿಯಾ ಗೊಬ್ಬರ ಕಡಿಮೆ ಆಗಲ್ಲ. ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಪೂರೈಸಲಾಗುತ್ತಿದೆ ಎಂದು ಹೇಳುತ್ತಲೇ ಇದೆ. ಆದರೆ, ವಾಸ್ತವವಾಗಿ ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾತ್ರ ಆಗುತ್ತಿಲ್ಲಾ. ಇನ್ನಾದ್ರು ಸರ್ಕಾರ ಎಚ್ಚೆತ್ತುಕೊಂಡು ಎಲ್ಲಾ ಜಿಲ್ಲೆಗಳಲ್ಲೂ ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸುತ್ತಿರುವ ಜನರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ. ರೈತರಿಗೆ ಸಮಯಕ್ಕೆ ಸರಿಯಾಗಿ ಗೊಬ್ಬರ ಸಿಗುವಂತೆ ಮಾಡಲು ಜಿಲ್ಲಾಡಳಿತಗಳಿಗೆ ಸೂಚನೆ ನೀಡಬೇಕಿದೆ ಎಂಬುದೇ ಎಲ್ಲರ ಆಶಯ.
Published by:MAshok Kumar
First published: