ಕೊರೋನಾ ಮುಕ್ತ ಚಾಮರಾಜನಗರ: ಕೇಂದ್ರ ಆರೋಗ್ಯ ಸಚಿವರಿಂದ ಜಿಲ್ಲಾಡಳಿತಕ್ಕೆ ಶಹಬ್ಬಾಸ್ ಗಿರಿ

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ದೂರವಾಣಿ ಕರೆ ಮಾಡಿ  ಅಭಿನಂದಿಸಿದ ಸಚಿವ ಡಾ.ಹರ್ಷವರ್ಧನ್, ಗಡಿ ಜಿಲ್ಲೆಯನ್ನು  ಹಸಿರುವಲಯವಾಗಿ ಕಾಪಾಡುತ್ತಿರುವುದಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲಾಧಿಕಾರಿ ಡಾ.  ಎಂ.ಆರ್.ರವಿ

ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ

  • Share this:
ಚಾಮರಾಜನಗರ (ಜೂ.5) ಇಡೀ ಕರ್ನಾಟಕದಲ್ಲಿ ಸದ್ಯಕ್ಕೆ ಕೊರೋನಾ ಮುಕ್ತ ಜಿಲ್ಲೆ ಅಂದರೆ ಅದು ಚಾಮರಾಜನಗರ ಜಿಲ್ಲೆ.ಈ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ದೂರವಾಣಿ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಒಂದು ಬದಿಯಲ್ಲಿ ತಮಿಳುನಾಡು, ಇನ್ನೊಂದು ಬದಿಯಲ್ಲಿ ಕೇರಳ,  ಒಂದೆಡೆ ಮೈಸೂರು ಇನ್ನೊಂದೆಡೆ ಮಂಡ್ಯ ಹೀಗೆ ಚಾಮರಾಜನಗರ ಜಿಲ್ಲೆ ಹಾಟ್ ಸ್ಪಾಟ್ ಗಳಿಂದಲೇ ಸುತ್ತುವರೆದಿದೆ. ಆದರೆ ಈವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ಪತ್ತೆಯಾಗಿಲ್ಲ. ಹೀಗೆ ಹಸಿರು ವಲಯದಲ್ಲಿಯೇ ಮುಂದುವರಿಯುವುದು ಅಷ್ಟು ಸುಲಭದ ಮಾತಲ್ಲ.

ರಾಜ್ಯದೆಲ್ಲೆಡೆ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದೆ. ಆದರೆ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಕೊರೋನಾ ಸೋಂಕು ಹರಡದಂತೆ ಹತ್ತಾರು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ  ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ. ಕೊರೋನಾ ಕಟ್ಟಿ ಹಾಕುವಲ್ಲಿ ದೇಶಕ್ಕೆ ಕೇರಳ ಮಾದರಿಯಾದರೆ ರಾಜ್ಯಕ್ಕೆ ಚಾಮರಾಜನಗರ ಮಾದರಿಯಾಗಿದೆ.

ಕೊರೋನಾ ಸಂಕಷ್ಟದ ಜೊತೆ ಗ್ರಹಣದ ಗಂಡಾಂತರ; ಭಾರತಕ್ಕಿದೆ ಶತ್ರು ದೇಶದ ಕಂಟಕ; ಜ್ಯೋತಿಷಿಗಳ ಎಚ್ಚರಿಕೆ

ಎಷ್ಟೆಲ್ಲಾ ಆತಂಕ ಎದುರಾದರೂ ಅದನ್ನೆಲ್ಲಾ ಮೆಟ್ಟಿ ನಿಂತಿದೆ ಚಾಮರಾಜನಗರ. ಈ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾಡಳಿತಕ್ಕೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಶಹಬ್ಬಾಸ್ ಹೇಳಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ದೂರವಾಣಿ ಕರೆ ಮಾಡಿ  ಅಭಿನಂದಿಸಿದ ಸಚಿವ ಡಾ.ಹರ್ಷವರ್ಧನ್, ಗಡಿ ಜಿಲ್ಲೆಯನ್ನು  ಹಸಿರುವಲಯವಾಗಿ ಕಾಪಾಡುತ್ತಿರುವುದಕ್ಕೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾನು ಇಡೀ ರಾಷ್ಟದ ಎಲ್ಲಾ ಕಡೆ  ಗಮನಿಸುತ್ತಿದ್ದೇನೆ. ಒಳ್ಳೆಯ ಕ್ರಮಗಳನ್ನು ಕೈಗೊಂಡಿದ್ದೀರಿ. ಉತ್ತಮವಾಗಿ ಕೆಲಸ ನಿರ್ವಹಿಸುತ್ತೀದ್ದೀರಿ, ಸುತ್ತಲೂ ಹಾಟ್ ಸ್ಪಾಟ್ ಗಳಿದ್ದರೂ  ಸೋಂಕು ಹರಡದಂತೆ ಕ್ರಮ ವಹಿಸಿದ್ದೀರಿ. ಕೀಪ್ ಇಟ್ ಅಪ್ ಎಂದು ಪ್ರಶಂಸಿದ್ದಾರೆ. ಜಿಲ್ಲಾಡಳಿತಕ್ಕೆ ಹಾಗೂ ಚಾಮರಾಜನಗರ ಜಿಲ್ಲೆಯ ಜನತೆಗೆ ಸಚಿವ ಡಾ.ಹರ್ಷವರ್ಧನ್ ಅಭಿನಂದಿಸಿದ್ದಾರೆ.
First published: