• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಗದ್ದೆಗಿಳಿದು ನಾಟಿ ಮಾಡಿದ ಕೇಂದ್ರ ಕೃಷಿ ಸಚಿವೆ.. ಮಂಡ್ಯದ ಬೆಲ್ಲಕ್ಕೆ ಮನಸೋತ ಶೋಭಾ ಕರಂದ್ಲಾಜೆ

ಗದ್ದೆಗಿಳಿದು ನಾಟಿ ಮಾಡಿದ ಕೇಂದ್ರ ಕೃಷಿ ಸಚಿವೆ.. ಮಂಡ್ಯದ ಬೆಲ್ಲಕ್ಕೆ ಮನಸೋತ ಶೋಭಾ ಕರಂದ್ಲಾಜೆ

ಮಂಡ್ಯದಲ್ಲಿ ಶೋಭಾ ಕರಂದ್ಲಾಜೆ

ಮಂಡ್ಯದಲ್ಲಿ ಶೋಭಾ ಕರಂದ್ಲಾಜೆ

ರೈತ ಮಹಿಳೆಯರ ಜೊತೆ ಗದ್ದೆಗೆ ಇಳಿದು ನಾಟಿ ಮಾಡಿದ್ರು. ಅಷ್ಟೇ ಅಲ್ಲದೆ ನಾಟಿ ಮಾಡುವ ಯಂತ್ರದ ಮೂಲಕ ಸ್ವತಃ ನಾಟಿ ಮಾಡಿ ಆಧುನಿಕ ತಂತ್ರಜ್ಞಾನದ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದ್ರು. 

  • Share this:

ಮಂಡ್ಯ: ರೈತರೊಂದಿಗೆ ನಾಟಿ ಮಾಡುವ ಮೂಲಕ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಮಂಡ್ಯ ರೈತರಿಗೆ ಆತ್ಮಸ್ಥೈರ್ಯ ತುಂಬಿದ್ರು. ಮಂಡ್ಯದ ಸಾತನೂರು ಗ್ರಾಮಕ್ಕೆ ಆಗಮಿಸಿ ಗದ್ದೆಗೆ ಇಳಿದು ನಾಟಿ ಕಾರ್ಯಕ್ಕೆ ಚಾಲನೆ ನೀಡಿದ್ರು.   ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಸಚಿವೆ ಆದ ಬಳಿಕ ಮೊದಲ ಬಾರಿಗೆ ಮಂಡ್ಯ  ಪ್ರವಾಸವನ್ನ ಕೈಗೊಂಡಿದ್ದರು.  ಬೆಳಗ್ಗೆ  ಸಕ್ಕರೆನಾಡಿಗೆ ಆಗಮಿಸಿದ ಸಚಿವರಿಗೆ ಮದ್ದೂರಿನಲ್ಲಿ ನಿಡಘಟ್ಟ ಬಳಿ ಪಕ್ಷದ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದ್ರು. 

ನಾಟಿ ಮಾಡಿ ಕೃಷಿ ಮಂತ್ರಿ


ಮದ್ದೂರು ಬಳಿಕ ಮಂಡ್ಯ ತಾಲೂಕಿಗೆ ಆಗಮಿಸಿದ ಸಚಿವರು ಹೊನಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ರು. ಈ ಸಂದರ್ಭ ಗ್ರಾಮದ ರೈತ ಮಹಿಳೆಯರ ಜೊತೆ ಗದ್ದೆಗೆ ಇಳಿದು ಸೊಂಟಕ್ಕೆ ಸೀರೆಯನ್ನು ಎತ್ತಿ ಕಟ್ಟಿ ನಾಟಿ ಮಾಡಿದ್ರು. ಅಷ್ಟೇ ಅಲ್ಲದೆ ನಾಟಿ ಮಾಡುವ ಯಂತ್ರದ ಮೂಲಕ ಸ್ವತಃ ನಾಟಿ ಮಾಡಿ ಆಧುನಿಕ ತಂತ್ರಜ್ಞಾನದ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದ್ರು.


ಮಂಡ್ಯ ಬೆಲ್ಲದ ಸವಿ ಸವಿದ ಕೃಷಿ ಮಂತ್ರಿ...


ನಾಟಿ ಬಳಿಕ ತಾಲೂಕಿನ ಸಾತನೂರು ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ಗ್ರಾಮದ ಆಲೆ ಮನೆಗೆ ಎಂಟ್ರಿ ಕೊಟ್ರು. ಬಳಿಕ ಆಲೆ ಮನೆಯ ಕಬ್ಬನ ಗಾಣಕ್ಕೆ ಕಬ್ಬನ್ನ ಹಾಕಿ ಕಬ್ಬು ನುರಿಯುವ ಕಾರ್ಯಕ್ಕೆ ಚಾಲನೆ ನೀಡಿದ್ರು. ಬಳಿಕ ಆಲೆ ಮನೆ ಮಾಲೀಕರ ಬಳಿ ಸಾವಯವ ಬೆಲ್ಲದ ಬಗ್ಗೆ ಮಾಹಿತಿ ಪಡೆದುಕೊಂಡ್ರು. ಅಷ್ಟೆ ಅಲ್ಲದೆ ಆಗತಾನೆ ಸಿದ್ದವಾಗ್ತಿದ್ದ ಸಾವಯವ ಬೆಲ್ಲದ ರುಚಿಯನ್ನ ಸವಿಯುವ ಮೂಲಕ ಮಂಡ್ಯ ಬೆಲ್ಲದ ರುಚಿಯನ್ನ ಶ್ಲಾಘಿಸಿದ್ರು.




ಇನ್ನು ಇದಾದ ಬಳಿಕ ಮಂಡ್ಯ ನಗರದ ಎಸಿ ಮಾದೇಗೌಡ ಸಮುದಾಯ ಭವನದಲ್ಲಿ ಪಕ್ಷದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಕಾರ್ಯಕ್ರಮ ಆರನಭವಾಗ್ತಿದ್ದಂತೆ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ, ಬಿಜೆಪಿ ಮುಖಂಡ ಚಂದಗಾಲು ಶಿವಣ್ಣ ಅವರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಅಂತ ಶಿವಣ್ಣ ಬೆಂಬಲಿಗರು ಕಾರ್ಯಕ್ರಮದಲ್ಲಿ ಗದ್ದಲ ಆರಂಭಿಸಿದ್ರು. ಇದ್ರಿಂದ ರೊಚ್ಚಿಗೆದ್ದ ಜಿಲ್ಲಾಧ್ಯಕ್ಷ ರವಿಕುಮಾರ್ ಬೆಂಬಲಿಗರು ಪ್ರತ್ಯಾರೋಪ ಮಾಡಲು ಮುಂದಾದ್ರು ಹಿಗಾಗಿ ಕಾರ್ಯಕ್ರಮದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಮುಂದೆ ಹೈಡ್ರಾಮವೆ ನಡೆಯಿತು. ಬಳಿಕ ಶಿವಣ್ಣ ಬೆಂಬಲಿಗರನ್ನ ಬಿಜೆಪಿ ಕಾರ್ಯಕರ್ತರೆ ಕಾರ್ಯಕ್ರಮ ದಿಂದ ಹೊರ ಹಾಕಿದ್ರು‌. ಆದ್ರೆ ಇಷ್ಟೆಲ್ಲ ಗದ್ದಲ ನಡಿತಿದ್ರು ಮತ್ತೊಂದು ಕಡೆ ನಮಗೂ ಅದಕ್ಕೂ ಸಂಬಂಧ ಇಲ್ಲ ಎಂಬಂತೆ ಸಚಿವರಿಗೆ ಹಾರ ಹಾಕಿ ಸನ್ಮಾನಿಸಲಾಯ್ತು.




ತಮಿಳುನಾಡಿನ ವಿರುದ್ದ ನೂತನ ಕೃಷಿ ಮಂತ್ರಿ ವಾಗ್ದಾಳಿ 


ಮಂಡ್ಯ ಜಿಲ್ಲೆಗೆ ಆಗಮಿಸಿದ ಪ್ರಾರಂಭದಿಂದಲ್ಲೂ ಕೃಷಿ ಸಚಿವರು ತಮಿಳುನಾಡಿನ ವಿರುದ್ದ ಬೇಸರದ ಮಾತುಗಳನ್ನ ಆಡಿದ್ರು. ಮೇಕೆದಾಟು ಯೋಜನೆ ನಮ್ಮ ರಾಜ್ಯದ ಯೋಜನೆ, ಕಾವೇರಿ ಕೂಡ ನಮ್ಮದು. ಕಾವೇರಿ ನ್ಯಾಯಾಧೀಕರಣದ ಪ್ರಕಾರ ಅವರಿಗೆ ಕೊಡಬೇಕಾದ ನೀರನ್ನ ಕಷ್ಟದ ಕಾಲದಲ್ಲೂ ಹರಿಸಿದ್ದೇವೆ. ಹೀಗಾಗಿ ಮೇಕೆದಾಟು ಯೋಜನೆಯನ್ನ ಪೂರ್ಣಗೊಳಿಸಬೇಕಾಗಿದೆ ಅಂತ ತಿಳಿಸಿದ್ರು.


ಮಂಡ್ಯ ಜಿಲ್ಲೆ ಪ್ರವಾಸಕ್ಕೆ ಆಗಮಿಸಿದ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮಂಡ್ಯದ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದ್ರು. ಈ ಸಂದರ್ಭ ನೂರಾರು ಕಾರ್ಯಕರ್ತರ ಜೊತೆ ಸಚಿವೆ ಶೋಭಾ ಕರಂದ್ಲಾಜೆ ರೋಡ್ ಷೋ ನಡೆಸಿದ್ರು. ಆದ್ರೆ ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ಭೀತಿ ಎದುರಾಗಿದ್ದರಿಂದ ಜಿಲ್ಲೆಯಲ್ಲಿ ಈಗಾಗಲೇ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಹೀಗಿದ್ದರೂ ಕೂಡ ಕೇಂದ್ರ ಸಚಿವರ ರೋಡ್ ಷೋ ನಿಂದ ಕೊರೊನಾ ಮಾರ್ಗ ಸೂಚಿ ಉಲ್ಲಂಘನೆ ಮಾಡಲಾಗಿದೆ.


ಒಟ್ಟಾರೆ ಇಂದು ಮಂಡ್ಯ ಸುತ್ತಿದ ಕೃಷಿ ಮಂತ್ರಿಗಳು ಪಕ್ಷದ ಕಾರ್ಯಕರ್ತರ ಗದ್ದಲದಲ್ಲಿ ಸ್ವಲ್ಪ ಮಟ್ಟಿಗೆ ಇರುಸು ಮುರುಸು ತರಿಸಿದ್ರೂ ಕೂಡ, ನಾಟಿ ಮಾಡಿ ಮಂಡ್ಯ ಬೆಲ್ಲ ಸವಿಯುವುದರ ಮೂಲಕ ತಮ್ಮ ಪ್ರವಾಸ ಮುಗಿಸಿದ್ರು.


ವರದಿ - ಸುನೀಲ್ ಗೌಡ 

First published: