Murder: ಆಸ್ತಿ ಪಾಲು ಕೇಳಿದ್ದಕ್ಕೆ ಅಣ್ಣನ ಮಗನನ್ನೆ ಕೊಂದ ಚಿಕ್ಕಪ್ಪ ; ಕೊಲೆ ಮಾಡಿ ನಾಪತ್ತೆ ದೂರು ಕೊಟ್ಟ ಕಿರಾತಕ ಬಂಧನ

ಕಾಣೆಯಾದ ಯುವಕನ ಕುರಿತು ದೂರು ನೀಡಿದ ಆತನ ಚಿಕ್ಕಪ್ಪನೆ ಕೊಲೆ ಮಾಡಿದ ಪ್ರಕರಣವನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ  ಗ್ರಾಮೀಣ ಠಾಣೆಯ ಪೊಲೀಸರು ಭೇದಿಸಿದ್ದಾರೆ.

ಮೂವರು ಆರೋಪಿಗಳು

ಮೂವರು ಆರೋಪಿಗಳು

  • Share this:
ಚಿಕ್ಕೋಡಿ (ಅಕ್ಟೊಬರ್​. 28): ಆಸ್ತಿಗಾಗಿ ದಾಯಾದಿಗಳ ಕಲಹ ಸಾಮಾನ್ಯ ಆದರೆ, ಆಸ್ತಿ ಕೇಳಿದ ಮಾತ್ರಕ್ಕೆ ಸ್ವಂತ ಅಣ್ಣನ ಮಗನನ್ನೆ ಕ್ರೂರಿ ಚಿಕ್ಕಪ್ಪ ಕೊಂದು ಹಾಕಿ ತಪ್ಪಿಸಿಕೊಳ್ಳಲು ನಾಪತ್ತೆ ದೂರು ದಾಖಲಿಸಿ ಪೊಲೀಸರ ಕೈಗೆ ಸಿಕ್ಕಿದ್ದು ಈ ಕೊಲೆ ಮಾಡಿದ ಕಿರಾತಕರು ಜೈಲು ಪಾಲಾಗಿದ್ದಾರೆ. ಕಾಣೆಯಾದ ಯುವಕನ ಕುರಿತು ದೂರು ನೀಡಿದ ಆತನ ಚಿಕ್ಕಪ್ಪನೆ ಕೊಲೆ ಮಾಡಿದ ಪ್ರಕರಣವನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ  ಗ್ರಾಮೀಣ ಠಾಣೆಯ ಪೊಲೀಸರು ಭೇದಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಬೆನಾಡಿ ಗ್ರಾಮದ ವಿಶಾಲ ಅಲಿಯಾಸ್ ಅಪ್ಪಾಸೋ ಮಹೇಶ್ ಪಾಟೀಲ(25) ಕೊಲೆಯಾದ ಯುವಕ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಚಿಕ್ಕಪ್ಪ ಬೆನಾಡಿ ಗ್ರಾಮದ ಸತೀಶ್ ದಾದಾಸಾಹೇಬ ಪಾಟೀಲ(45), ಅಮೋಲ ಪ್ರಕಾಶ ವಡ್ಡರ(36), ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಹೊನ್ನಳಿ ಗ್ರಾಮದ ದಿಲೀಪ ಪರಶುರಾಮ ವಡ್ಡರ(38), ಬಾಬಾಸಾಹೇಬ ಪಾಂಡುರಂಗ ಕಾಂಬಳೆ(47) ಮತ್ತು ಕರವೀರ ತಾಲೂಕಿನ ಖಬವಡೆ ಗ್ರಾಮದ ವಿಕಾಸ ವಕೀಲ ಪಾಟೀಲ(25) ಬಂಧಿತ ಆರೋಪಿತರು. ಕೊಲೆ ಆರೋಪದಡಿ  ಐವರನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆ ಹಿನ್ನೆಲೆ:

ತಂದೆ-ತಾಯಿಯಿಲ್ಲದ ಕೊಲೆಯಾದ ವಿಶಾಲ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದ. ಸೆಪ್ಟೆಂಬರ್​ 27 ರಂದು ಬೆಳಿಗ್ಗೆ 8.30 ಗಂಟೆಗೆ ವಿಶಾಲ ಮನೆಯಿಂದ ತನ್ನ ಕಾರನ್ನು ತೂಳೆದುಕೂಂಡು ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲವೆಂದು ಆತನ ಚಿಕ್ಕಪ್ಪ ಸತೀಶ್ ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್​ 30ರಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.

ಅಕ್ಟೋಬರ್​ 9 ರಂದು ವಿಶಾಲನ ವಾಹನ ಮಹಾರಾಷ್ಟ್ರದ ಸೊಲ್ಹಾಪುರ ಜಿಲ್ಲೆಯ ಜುನೋನಿ ಗ್ರಾಮದ ಯಮಾಯಿ ಕೆರೆ ಹತ್ತಿರ ಪತ್ತೆಯಾಗಿತ್ತು. ಕೂಡಲೇ ಪಿಎಸ್‍ಐ ಬಿ.ಎಸ್. ತಳವಾರ ಅಲ್ಲಿಗೆ ಧಾವಿಸಿ ತನಿಖೆ ನಡೆಸಿದ್ದರು. ತನಿಖೆ ವೇಳೆ ಚಿಕ್ಕಪ್ಪ ಸತೀಶ್ ಮೇಲೆ ಸಂಶಯ ಗೊಂಡ ಪೊಲೀಸರು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದರು. ಕೆಲ ದಾಖಲೆಗಳನ್ನ ಕಲೆ ಹಾಕಿದ ನಿಪ್ಪಾಣಿ ಪೊಲೀಸರು ಚಿಕ್ಕಪ್ಪ ಸತೀಶ್ ನನ್ನ ರಿಮ್ಯಾಂಡ್ ಗೆ ತೆಗೆದುಕೊಳ್ಳುತ್ತಿದ್ದಂತೆ ಸತ್ಯವನ್ನ ಬಿಚ್ಚಿಟ್ಟಿದ್ದಾನೆ.

ಪೊಲೀಸರ ಮುಂದೆ ಬಾಯಿ ಬಿಟ್ಟಿರುವ ಸತೀಶ್‘ನನ್ನ ಅಣ್ಣನ ಮಗ ವಿಶಾಲ ಕೆಲವು ದಿನಗಳಿಂದ ಆಸ್ತಿ ಪಾಲು ಮಾಡಿ ಕೊಡಬೇಕೆಂದು ಜಗಳಕ್ಕೆ ಇಳಿಯುತ್ತಿದ್ದ, ಮನೆಯಲ್ಲಿ ಈ ವಿಷಯವಾಗಿ ಪದೇ ಪದೇ ನಮ್ಮ ತಾಯಿಯ ಜೋತೆ ಜಗಳ ವಾಡುತ್ತಿದ್ದರಿಂದ ತಾನೆ ನಾಲ್ವರನ್ನು ಸಂಪರ್ಕಿಸಿ ವಿಶಾಲನ ಕೊಲೆ ಮಾಡಲು 6 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

ಸೆಪ್ಟೆಂಬರ್ 27 ರಂದು ಬೆಳಿಗ್ಗೆ 8.30 ಗಂಟೆಗೆ ವಿಶಾಲನ ಕುತ್ತಿಗೆ ಹಿಚುಕಿ ಕೊಲೆ ಮಾಡಿ ಶವವನ್ನು ಅವನದ್ದೆ ಕಾರಿನಲ್ಲಿ ಹೊತ್ತೊಯ್ದು ಕೊಲ್ಹಾಪೂರ ಜಿಲ್ಲೆಯ ಗಗನಬಾವಡಾ ತಾಲ್ಲೂಕಿನ ಅನದೂರ ಗ್ರಾಮದ ಹದ್ದಿನಲ್ಲಿ ಬರುವ ಘಟ್ಟ ಪ್ರದೇಶದಲ್ಲಿ ಎಸೆದಿದ್ದೇವು. ನಂತರ ಅನುಮಾನ ಬಾರದಿರಲಿ ಎಂದು ಕಾರನ್ನು ಸೊಲ್ಲಾಪೂರ ಜಿಲ್ಲೆಯ ಜುನೋನಿ ಗ್ರಾಮದ ಯಮಾಯಿ ಕೆರೆಯ ಹತ್ತಿರ ಬಿಟ್ಟಿರುವುದಾಗಿ ಪ್ರಕರಣದ ಮುಖ್ಯ ಆರೋಪಿ ಸತೀಶ್ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ : ಆರ್​ಆರ್​ನಗರ ಉಪಚುನಾವಣೆ: ಮುನಿರತ್ನ ಪರ ನಾಳೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಪ್ರಚಾರ

ಇನ್ನು ಸತೀಶ್ ನೀಡಿದ ಸುಪಾರಿಯ 6 ಲಕ್ಷ ಹಣದಲ್ಲಿ ನಾಲ್ವರು ಮುಂಬಯಿ ಮೊದಲಾದ ವಿವಿಧೆಡೆ ಸಂಚರಿಸಿ ಮಜಾ ಮಾಡಿದ್ದಾರೆ. ಉಳಿದ ಹಣ 2,83,500 ಅನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಸದ್ಯ ಮೃತನ ತಲೆಬುರುಡೆ ಪತ್ತೆ ಹಚ್ಚಿರುವ ಪೊಲೀಸರು ಆರೋಪಿಗಳನ್ನು ಕಂಬಿ ಹಿಂದೆ ಕಳೆಸಿದ್ದಾರೆ.

ಇನ್ನು ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಬಹುಮಾನ ಘೋಷಿಸಿದ್ದಾರೆ ಒಟ್ಟಿನಲ್ಲಿ ಆಸ್ತಿಯ ಆಸೆಗೆ ಬಿದ್ದು ವಿಶಾಲ ಹಣವಾದ್ರೆ, ಇತ್ತ ಅದೆ ಆಸ್ತಿಯ ಆಸಗೆ ಕೊಲೆ ಮಾಡಿ ಚಿಕ್ಕಪ್ಪ ಸತೀಶ್ ಜೈಲು ಸೇರಿದ್ದಾನೆ.
Published by:G Hareeshkumar
First published: