ಶ್ರೀರಂಗಪಟ್ಟಣದಲ್ಲಿ ಟಿಪ್ಪು ಕಾಲದ ಕಂದಕಕ್ಕೆ ಪ್ರಭಾವಿಗಳ ಕಂಟಕ; ಕೋಟೆಯೊಳಗಿನ ಕಂದಕದಲ್ಲಿ ಅನಧಿಕೃತ ಕುಟೀರ ನಿರ್ಮಾಣ

ಪ್ರಾಚೀನ‌ ಸ್ಮಾರಕ ರಕ್ಷಣೆ ಹೊಣೆ ಹೊತ್ತಿರುವ ಕೇಂದ್ರ ಆರ್ಕಿಯಾಲಜಿ ಇಲಾಖೆ ಅದೇಕೋ ಮೌನವಾಗಿದೆ. ಕೋಟೆ ಕೆಡವಿ ಅನಧಿಕೃತವಾಗಿ ಕುಟೀರ ನಿರ್ಮಿಸುತ್ತಿದ್ದರೂ ಅಧಿಕಾರಿಗಳು ಸುಮ್ಮನಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಪ್ರಭಾವಿಗಳ ವಿರುದ್ದ ಕ್ರಮ ಕೈಗೊಂಡು ಪ್ರಾಚೀ ನ ಸ್ವಾರಕಗಳನ್ನು ಉಳಿಸಿ ರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ.

ಕೋಟೆಯೊಳಗಿನ ಕಂದಕದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಶೆಡ್

ಕೋಟೆಯೊಳಗಿನ ಕಂದಕದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಶೆಡ್

  • Share this:
ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಟಿಪ್ಪು ಕಾಲದ ಕೋಟೆಯ ಕಂದಕಕ್ಕೆ ಇದೀಗ ಕಟಂಕ ಎದುರಾಗಿದೆ. ಪ್ರಭಾವಿಗಳು ಈ ಕೋಟೆ ಮತ್ತು ಕಂದಕದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದಲ್ಲದೆ ಕಂದಕದ ಜಾಗದಲ್ಲಿ ಅನಧಿಕೃತವಾಗಿ ಯಾರ ಅನುಮತಿ ಪಡೆಯದೆ ಶೆಡ್ ನಿರ್ಮಾಣ ಮಾಡಿದ್ದಾರೆ. ಆ ಶೆಡ್​ನಲ್ಲಿ ಪಿಂಡಪ್ರಧಾನ ಪೂಜೆಗೆ ಅನುವು ಮಾಡಿಕೊಟ್ಟು ಬಾಡಿಗೆ ಪಡೆಯುವ ದಂಧೆ‌ ಮಾಡುತ್ತಿದ್ದಾರೆ.

ಹೌದು! ಶ್ರೀರಂಗಪಟ್ಟಣದಲ್ಲಿ ಇದೀಗ ಟಿಪ್ಪು ಕಾಲದ ಕೋಟೆ ಕಂದಕಕ್ಕೆ ಪ್ರಭಾವಿಗಳಿಂದ ಕಂಟಕ ಎದುರಾಗಿದೆ. ಪ್ರಾಚೀನ ಸ್ಮಾರಕವಾಗಿರುವ ಕೋಟೆ ಮತ್ತು ಕಂದಕಗಳ ಜಾಗವನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲದೆ ಆ ಕಂದಕದ ಜಾಗದಲ್ಲಿ ಶೆಡ್ ಮಾದರಿ ಕುಟೀರ ನಿರ್ಮಾಣ ಮಾಡಿ, ಅದರಲ್ಲಿ ಶ್ರಾದ್ಧ ಕಾರ್ಯದ ಪೂಜೆಗಳನ್ನು ಮಾಡಿಸುವ ದಂಧೆ ಮಾಡಿಕೊಂಡು ಹಣ ಸಂಪಾದನೆ ಮಾರ್ಗ ಕಂಡುಕೊಂಡಿದ್ದಾರೆ.

ಪ್ರಾಚ್ಯ ವಸ್ತು ಸ್ಮಾರಕಗಳಿರುವ ಪ್ರದೇಶದಲ್ಲಿ ಯಾವುದೇ ಕಾಮಗಾರಿಯಾಗಲಿ ಅಥವಾ ಬೇರೆ ಯಾವುದೇ ನವೀಕರಣ ಕೆಲಸ ಮಾಡಲು ಕೇಂದ್ರ ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆಯ ಅನುಮತಿ ಅಗತ್ಯ. ಆದರೆ ಪಟ್ಟಣದ ಜಿಬಿ ಹೊಳೆ ಬಳಿಯ ಕೋಟೆಯೊಳಗಿನ‌ ಕಂದಕದಲ್ಲಿ ಕೆಲ ವ್ಯಕ್ತಿಗಳು ಕುಟೀರ ನಿರ್ಮಿಸಿದ್ದಾರೆ. ಪಟ್ಟಣದಲ್ಲಿ ಇದೀಗ ಮನೆ ಕಟ್ಟಲು ಆರ್ಕಿಯಾಲಜಿ ಯಾರಿಗೂ ಅನುಮತಿ ಕೊಡುತ್ತಿಲ್ಲ. ಅಂತಹದರಲ್ಲಿ ಇವರು ಕೋಟೆಯ ಕಂದಕದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು ಪೂಜೆ ದಂಧೆ ನಡೆಸುತ್ತಿದ್ದರೂ ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನು ಓದಿ: ಟಿಪ್ಪು ಹೊಗಳಿದ ವಿಶ್ವನಾಥ್; ಬಿಜೆಪಿಗರು ಈಗಲಾದರೂ ಸತ್ಯ ತಿಳಿದುಕೊಳ್ಳಲಿ ಎಂದ ಗುಂಡೂರಾವ್, ಖಂಡ್ರೆ

ಇನ್ನು ಈ ರೀತಿ‌ ರಂಗನಾಥ ಮತ್ತು ಕರ್ನಲ್ ಬೈಲಿಯ ಜೈಲ್ ಬಳಿ ಇರೋ ಜಿಬಿ ಹೊಳೆ ಬಳಿಯ ಕೋಟೆ ಕಂದಕದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಿಸಲಾಗಿದೆ. ಇಲ್ಲಿನ ಪ್ರಭಾವಿ ವ್ಯಕ್ತಿಗಳು ಕೋಟೆಯನ್ನು ಒಡೆದು ಮೆಟ್ಟಿಲು ನಿರ್ಮಿಸಿದರೆ, ಮತ್ತೊಂದು ಕಡೆ ಕೋಟೆಯ ಕಲ್ಲುಗಳನ್ನು ಈ ಶೆಡ್ ನ ಅಡಿ ಪಾಯಕ್ಕೆ ಬಳಸಿಕೊಂಡಿದ್ದಾರೆ. ಈ ಕುಟೀರದಲ್ಲಿ ಶ್ರಾದ್ದ ಕಾರ್ಯದ ಪೂಜಾ ಕೆಲಸಕ್ಕಾಗಿ ನಿರ್ಮಿಸಿಕೊಂಡು ಹಣ ಮಾಡುವ ಧಂಧೆ ಮಾಡುತ್ತಿದ್ದಾರೆ.  ಕೋಟೆ ಮತ್ತು ಕಂದಕ ಕೇಂದ್ರದ ಆರ್ಕಿಯಾಲಜಿ ಇಲಾಖೆಗೆ ಒಳಪಟ್ಟಿದ್ದರೂ ಈ ಪ್ರಭಾವಿಗಳು ಕಂದಕದ ಜಾಗವನ್ನು ಕ್ರಯಕ್ಕೆ ಪಡೆದಿದ್ದಾ‌ರಂತೆ. ಹಾಗಾಗಿ ನಾವು ನಮ್ಮ ಜಾಗದಲ್ಲಿ ಹಸು ಸಾಕಾಣಿಕೆಗೆ ಕೊಟ್ಟಿಗೆ ನಿರ್ಮಾ ಣ ಮಾಡ್ತಿದ್ದೀವಿ ಅಂತ ಕಥೆ ಹೇಳ್ತಿದ್ದಾರೆ‌. ಇನ್ನು ಈ ಸಂಬಂಧ ಸ್ಥಳೀಯ ಶಾಸಕರನ್ನು ಪ್ರಶ್ನಿಸಿದರೆ ಇದು ನನ್ನ ಗಮನಕ್ಕೂ ಬಂದಿದೆ. ಅದನ್ನು ಕ್ರಯಕ್ಕೆ ಪಡೆದಿರುವ ಬಗ್ಗೆ ತಾಲೂಕು ಆಡಳಿತದಿಂದ ಮಾಹಿತಿ ಪಡೆದು ಅನಧಿಕೃತವಾಗಿದ್ದರೆ ತೆರವುಗೊಳಿಸಲು ತಿಳಿಸುತ್ತೇನೆ. ಕೋಟೆಯ ಸೌಂದರ್ಯ ಹಾಳು ಮಾಡುತ್ತಿರುವುದಕ್ಕೆ ನನ್ನ ವಿರೋಧವಿದೆ ಎಂದಿದ್ದಾರೆ.

ಒಟ್ಟಾರೆ ಟಿಪ್ಪು ಕಾಲದ ಕೋಟೆ ಸೇರಿದಂತೆ ಕಂದಕ ಹಾಗೂ ಇನ್ನಿತರ ಸ್ಮಾರಕ ಗಳು ಪ್ರಾಚೀನ‌ ಕುರುಹುಗಳಾಗಿವೆ.ಇಂತಹ ಪ್ರಾಚೀನ‌ ಸ್ಮಾರಕ ರಕ್ಷಣೆ ಹೊಣೆ ಹೊತ್ತಿರುವ ಕೇಂದ್ರ ಆರ್ಕಿಯಾಲಜಿ ಇಲಾಖೆ ಅದೇಕೋ ಮೌನವಾಗಿದೆ. ಕೋಟೆ ಕೆಡವಿ ಅನಧಿಕೃತವಾಗಿ ಕುಟೀರ ನಿರ್ಮಿಸುತ್ತಿದ್ದರೂ ಅಧಿಕಾರಿಗಳು ಸುಮ್ಮನಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತು ಪ್ರಭಾವಿಗಳ ವಿರುದ್ದ ಕ್ರಮ ಕೈಗೊಂಡು ಪ್ರಾಚೀ ನ ಸ್ವಾರಕಗಳನ್ನು ಉಳಿಸಿ ರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ.
Published by:HR Ramesh
First published: